ಸ್ವಾತಂತ್ರ್ಯದ ರಾತ್ರಿ ಮಣಿಪಾಲ ಕಂಡ ರೀತಿ: ಡ್ರೋಣ್‌ನಲ್ಲಿ ಸುಂದರ ದೃಶ್ಯ ಸೆರೆ
ರಾಜ್ಯದ ಉಡುಪಿ ಜಿಲ್ಲೆಯ ಮಣಿಪಾಲ ಸಿಟಿ ಸ್ವಾತಂತ್ರ್ಯೋತ್ಸವ ದಿನದಂದು ಕಂಗೊಳಿಸುತ್ತಿರುವ ದೃಶ್ಯದ ಮನ ಮೋಹಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಣ್ಮನ ಸೆಳೆಯುತ್ತಿದೆ.
ಉಡುಪಿ: ಈ ಬಾರಿಯ ಸ್ವಾತಂತ್ರ ದಿನಾಚರಣೆ ಇದುವರೆಗಿನ ಸ್ವಾತಂತ್ರ ದಿನದ ಆಚರಣೆಗಳಿಗಿಂತ ತುಂಬಾ ವಿಭಿನ್ನವಾಗಿತ್ತು. ಸ್ವಾತಂತ್ರದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ಬಹು ಸಂಭ್ರಮ ಸಡಗರದಿಂದ ಆಚರಿಸಲಾಗಿತ್ತು. ಹರ್ ಘರ್ ತಿರಂಗಾ ಎಂದು ಕರೆ ನೀಡಿದ ಪ್ರಧಾನಿಯವರ ಆಶಯದಂತೆ ಈ ಬಾರಿ ದೇಶದ ಪ್ರತಿ ಮನೆಯ ಮೇಲೆ ರಾಷ್ಟ್ರಧ್ವಜ ಹಾರಿಸಲ್ಪಟ್ಟಿದ್ದವು. ಅಲ್ಲದೇ ದೇಶದ ಬಹುತೇಕ ನಗರಗಳಲ್ಲಿ ಪ್ರಮುಖ ಕಟ್ಟಡಗಳನ್ನು ತ್ರಿವರ್ಣ ಧ್ವಜದ ಬಣ್ಣಗಳಿಂದ ಅಲಂಕರಿಸಲಾಗಿತ್ತು. ಅದೇ ರೀತಿ ರಾಜ್ಯದ ಉಡುಪಿ ಜಿಲ್ಲೆಯ ಮಣಿಪಾಲ ಸಿಟಿ ಸ್ವಾತಂತ್ರ್ಯೋತ್ಸವ ದಿನದಂದು ಕಂಗೊಳಿಸುತ್ತಿರುವ ದೃಶ್ಯದ ಮನ ಮೋಹಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಣ್ಮನ ಸೆಳೆಯುತ್ತಿದೆ.
ಉಡುಪಿ ಜಿಲ್ಲೆಯ ಪ್ರಮುಖ ನಗರವಾಗಿರುವ ಮಣಿಪಾಲ ಒಂದು ರೀತಿ ಹಲವು ಶಿಕ್ಷಣ ಸಂಸ್ಥೆಗಳಿಂದಾಗಿ ಶಿಕ್ಷಣ ಕಾಶಿ ಎನಿಸಿದೆ. ದೇಶ ವಿದೇಶಗಳ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯಲು ಆಗಮಿಸುತ್ತಿದ್ದು, ಒಂದು ರೀತಿಯ ಮಿನಿ ಫಾರಿನ್ ಎನಿಸಿರುವ ಮಣಿಪಾಲ ಕಡಲ ಸಮೀಪ ಇರುವ ಗಗನಚುಂಬಿ ಕಟ್ಟಡಗಳನ್ನು ಹೊಂದಿರುವ ಪುಟ್ಟ ನಗರಿ. ಇಂತಹ ನಗರಿ ಸ್ವಾತಂತ್ರ್ಯದ ದಿನದಂದು ಸಂಪೂರ್ಣ ತ್ರಿವರ್ಣಮಯವಾಗಿ ಕಂಗೊಳಿಸಿದೆ. ಗಗನಚುಂಬಿ ಕಟ್ಟಡಗಳ ಮೇಲೆ ಒಂದು ಕಡೆ ರಾಷ್ಟ್ರಧ್ವಜ ಹಾರುತ್ತಿದ್ದರೆ, ಮತ್ತೊಂದೆಡೆ ದೊಡ್ಡ ದೊಡ್ಡ ಕಟ್ಟಡಗಳು ತ್ರಿವರ್ಣದಿಂದ ಹೊಳೆಯುತ್ತಿವೆ. ರಸ್ತೆಯಲ್ಲಿ ಸಂಚರಿಸುವ ವಾಹನಗಳು ಬೆಳಕು ಒಂದು ಕಡೆಯಾದರೆ ಮತ್ತೊಂದೆಡೆ ಕಟ್ಟಡಗಳ ಅಲಂಕಾರ ಈ ಎಲ್ಲ ಕಣ್ಮನ ಸೆಳೆಯುವ ದೃಶ್ಯವನ್ನು ಡ್ರೋಣ್ ಕ್ಯಾಮರಾ ಸೆರೆ ಹಿಡಿದಿದ್ದು ಮನಮೋಹಕವಾಗಿದೆ.
ಉಡುಪಿ ಶಾಸಕ ರಘುಪತಿ ಭಟ್ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉಡುಪಿಯ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ ಸಮೂಹ ಸಂಸ್ಥೆಗಳು, ಪೋರ್ಚುನ್ ಕಟ್ಟಡ ಹೀಗೆ ಮಣಿಪಾಲದ ಸುಂದರ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದೆ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ.
ಗರ್ಭಗುಡಿಯಲ್ಲಿ ತ್ರಿವರ್ಣ ರಂಗು, ವೈದ್ಯನಾಥನ ಸನ್ನಿಧಿಯಲ್ಲಿ ಅಮೃತ ಮಹೋತ್ಸವ!
ಅಮೃತ ಮಹೋತ್ಸವದ ಭಾಗವಾಗಿ ಜನರ ಹೃದಯದಲ್ಲಿ ದೇಶಭಕ್ತಿಯ ಭಾವನೆಯನ್ನು ಮೂಡಿಸುವ ಮತ್ತು ತ್ರಿವರ್ಣ ಧ್ವಜದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ಈ ವರ್ಷ ಹರ್ ಘರ್ ತಿರಂಗಾ ಅಭಿಯಾನಕ್ಕೆ ಕಳೆದ ತಿಂಗಳೇ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಪ್ರತಿ ಮನೆ ಮನೆಯಲ್ಲೂ ರಾಷ್ಟ್ರಧ್ವಜ ಹಾರಾಡಿದೆ. ಜೊತೆಗೆ ಆಗಸ್ಟ್ 2 ಮತ್ತು ಆಗಸ್ಟ್ 15 ರ ನಡುವೆ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ 'ತಿರಂಗಾ' ವನ್ನು ತಮ್ಮ ಪ್ರೊಫೈಲ್ ಚಿತ್ರವಾಗಿ ಬಳಸಬೇಕೆಂದು ಪ್ರಧಾನಿ ದೇಶದ ನಾಗರಿಕರಿಗೆ ಕರೆ ನೀಡಿದ್ದರು. ಅದೇ ರೀತಿ ದೇಶದ ಬಹುತೇಕ ನಾಗರಿಕರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪ್ರೊಫೈಲ್ ಫೋಟೋಗಳಲ್ಲಿ ತ್ರಿವರ್ಣಧ್ವಜ ಬಳಸಿದ್ದರು.
ಕಲಘಟಗಿಯಲ್ಲಿ 9KM ಉದ್ದದ ಬೃಹತ್ ತ್ರಿವರ್ಣ ಧ್ವಜ ಜಾಥಾ: ಸಾಗರದಂತೆ ಸೇರಿದ ಜನ
ಅಲ್ಲದೇ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶದ ನಾಗರಿಕರು ತಮ್ಮದೇ ರೀತಿಯಲ್ಲಿ ಸಂಭ್ರಮ ಸಡಗರದಿಂದ ಆಚರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅಲ್ಲದೇ ಚಿತ್ರ ತಾರೆಯರು ಸಾಮಾಜದ ಗಣ್ಯರು ತಮ್ಮ ಮನೆಯಲ್ಲೇ ಧ್ವಜಗಳನ್ನು ಹಾರಿಸಿ ನಮನ ಸಲ್ಲಿಸಿದ್ದಾರೆ. ಕೆಲವು ಹೊಟೇಲ್‌ಗಳಲ್ಲಿ ತಯಾರಿಸಿದ ತಿನಿಸಿಗೆ ತ್ರಿವರ್ಣದ ರಂಗು ನೀಡಲಾಗಿತ್ತು. ರಾಜ್ಯದ ವಿವಿಧ ಪ್ರವಾಸಿ ತಾಣಗಳನ್ನು ಹಾಗೂ ಜಲಾಶಯಗಳನ್ನು ತ್ರಿವರ್ಣದಿಂದ ಕಂಗೊಳಿಸುವಂತೆ ಮಾಡಲಾಗಿತ್ತು. ಅಷ್ಟೇ ಅಲ್ಲದೇ ವಿವಿಧ ದೇವಾಲಯಗಳಲ್ಲಿ ದೇವರನ್ನು ತ್ರಿವರ್ಣದ ಹೂಗಳಿಂದ ಅಲಂಕರಿಸಲಾಗಿತ್ತು.