Asianet Suvarna News Asianet Suvarna News

ಕಲಘಟಗಿಯಲ್ಲಿ 9KM ಉದ್ದದ ಬೃಹತ್ ತ್ರಿವರ್ಣ ಧ್ವಜ ಜಾಥಾ: ಸಾಗರದಂತೆ ಸೇರಿದ ಜನ

ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಸಂತೋಷ ಲಾಡ್ ನೇತೃತ್ವದಲ್ಲಿ 9 ಕಿ.ಮೀ ಉದ್ದದ ಬೃಹತ ತ್ರಿವರ್ಣ ಧ್ವಜ ಜಾಥಾ ಮಾಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ.

9KM Long Tricolor Flag Procession in Kalaghatagi: People united like an ocean akb
Author
Kalaghatgi, First Published Aug 15, 2022, 2:30 PM IST

ಧಾರವಾಡ: ದೇಶದಾದ್ಯಂತ 75ನೇ ಸ್ವಾತಂತ್ರ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಸ್ವಾತಂತ್ರ್ಯ ದಿನದ ಅಂಗವಾಗಿ ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಸಂತೋಷ ಲಾಡ್ ನೇತೃತ್ವದಲ್ಲಿ 9 ಕಿ.ಮೀ ಉದ್ದದ ಬೃಹತ ತ್ರಿವರ್ಣ ಧ್ವಜ ಜಾಥಾ ಮಾಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ಸ್ವಾತಂತ್ರ್ಯ ಭಾರತದ 75 ನೇ ವರ್ಷದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕಲಘಟಗಿ ಹೊರವಲಯದ ದಾಸ್ತಿಕೊಪ್ಪ‌ ಬ್ರಿಡ್ಜ್ ನಿಂದ ಬೆಳಗ್ಗೆ 11  ಗಂಟೆಗೆ ಆರಂಭಗೊಂಡ ಈ ಗಿನ್ನಿಸ್ ದಾಖಲೆಯ ಬೃಹತ ತಿರಂಗಾ ಧ್ವಜ ಜಾಥಾ, ಕಲಘಟಗಿ ಪಟ್ಟಣದ ಮೂಲಕ ಗಳಗಿನಗಟ್ಟಿ ಕ್ರಾಸ್‌ವರೆಗೆ ನಡೆಯಿತು. ಈ ಧ್ವಜ ಯಾತ್ರೆದಲ್ಲಿ ಲಕ್ಷಾಂತರ ಜನರು ಭಾಗಿಯಾಗಿದ್ದರು.

ಇನ್ನೂ ತ್ರಿವರ್ಣ ಯಾತ್ರೆಗೆ ಬಳಸಿದ ರಾಷ್ಟ್ರಧ್ವಜ 9 ಕಿ.ಮೀ ಉದ್ದ ಹಾಗೂ 9 ಅಡಿ ಅಗಲವಿದ್ದು, ಬೆಂಗಳೂರಿನಲ್ಲಿ 200 ಕಾರ್ಮಿಕರು ನಿರಂತರವಾಗಿ ಒಂದು ತಿಂಗಳಿಂದ ಈ ಧ್ವಜ ತಯಾರಿಸಿದ್ದಾರೆ. ಇಂತಹ ಐತಿಹಾಸಿಕ ತ್ರಿವರ್ಣ ಧ್ವಜಯಾತ್ರೆ ಉದ್ದಕ್ಕೂ ಭಾರತ ಮಾತಾ ಕೀ ಜೈ ಎಂಬ  ಜಯ ಘೋಷಣೆಗಳು ಮೊಳಗಿದವು. ಹತ್ತು ಕಿಲೋಮೀಟರ್ ಉದ್ದ ರಸ್ತೆಯ ಇಕ್ಕೆಲಗಳಲ್ಲಿ ಜನ ಸಾಗರವೇ ಹರಿದು‌ ಬಂದಿತ್ತು. ಬಾರಿ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಹುಬ್ಬಳ್ಳಿ ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಮೂರು ಗಂಟೆಗಳ ಕಾಲ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿತ್ತು. 

 India@75: ಕೊಳಲಲ್ಲಿ ದಿಲ್ ದಿಯಾ ಹೈ ಜಾನ್ ಭಿ ದೇಂಗೆ ನುಡಿಸಿದ ಐಟಿಬಿ ...

ತಿರಂಗಾ ಜಾಥಾ ಕಲಘಟಗಿ ಪಟ್ಟಣ ಪ್ರವೇಶಿಸುತ್ತಿದ್ದಂತೆ. ಧ್ವಜ ಜಾಥಾದ ಮುಂಭಾಗದಲ್ಲಿ ತೆರೆದ ವಾಹನದಲ್ಲಿ ರಾಷ್ಟ್ರ ಧ್ವಜ ಹಿಡಿದು‌ ಕೂತಿದ್ದ ಸಂತೋಷ ಲಾಡ್‌  ಜನರತ್ತ ಕೈ ಬೀಸುತ್ತಿದ್ದಂತೆ ಕೇಕೆ ಸಿಳ್ಳೆಗಳ ಝೇಂಕಾರ್ ಮೊಳಗಿತು. ಕಲಘಟಗಿ ಪಟ್ಟಣದ ಎಪಿಎಂಸಿ‌ ಮೈದಾನದಲ್ಲಿ ಬೃಹತ್‌ ಸಮಾವೇಶ ಆಯೋಜಿಸಲಾಗಿತ್ತು. 100ಕ್ಕೂ ಹೆಚ್ಚು ಕಲಾ‌ತಂಡಗಳು ಭಾಗವಹಿಸಿ ತಿರಂಗಾ ಯಾತ್ರೆಯ ಮೆರುಗು ಹೆಚ್ಚಿಸಿದರು. 12 ಸಾವಿರ ಮಹಿಳೆಯರು ತ್ರಿವರ್ಣ ಧ್ವಜ ಮೆರವಣಿಗೆ ಮುಂದೆ ಪೂರ್ಣ ಕುಂಭ ಹಿಡಿದು ಭಾರತ ಮಾತೆ ಗೆ ಸ್ವಾಗತ ಕೋರಿದ್ದ ಮತ್ತೊಂದು ವಿಶೇಷವಾಗಿತ್ತು.

ಸ್ವಾತಂತ್ರದ ಕತೆ ಹೇಳುತ್ತಿದೆ ಮೊದಲ ಧ್ವಜ: ತ್ರಿವರ್ಣದಲ್ಲಿ ಕಂಗೊಳಿಸಿದ ...

 

Follow Us:
Download App:
  • android
  • ios