Asianet Suvarna News Asianet Suvarna News

World Television Day: ಬೋರಾಗುತ್ತೆ ಅಂತ ಬೇಕಾಬಿಟ್ಟಿ ಟಿವಿ ನೋಡಿದ್ರೆ ಆಗೋಲ್ಲ !

ಪ್ರತಿ ವರ್ಷ ನವೆಂಬರ್ 21ರಂದು ವಿಶ್ವ ದೂರದರ್ಶನ ದಿನ (World Television Day)ವನ್ನು ಆಚರಿಸಲಾಗುತ್ತದೆ. ಟಿವಿ ನೋಡುವುದು ಹೆಚ್ಚಿನವರ ಪಾಲಿಗೆ ಸಮಯ ಕಳೆಯುವ ನೆಚ್ಚಿನ ಹವ್ಯಾಸವಾಗಿದೆ. ಆದ್ರೆ ಇದರಿಂದ ಆರೋಗ್ಯ ಸಮಸ್ಯೆಯೂ ಕಾಡುತ್ತೆ ಅನ್ನೋದು ನಿಮಗೆ ಗೊತ್ತಿದೆಯಾ ?

World Television Day: Side Effects Of Watching Tv Continuosly Vin
Author
First Published Nov 21, 2022, 3:52 PM IST

ಪ್ರತಿ ವರ್ಷ ನವೆಂಬರ್ 21ರಂದು ವಿಶ್ವ ದೂರದರ್ಶನ ದಿನ (World Television Day)ವನ್ನು ಆಚರಿಸಲಾಗುತ್ತದೆ. ಈ ದಿನದ ಉದ್ದೇಶವು ನಮ್ಮ ಜೀವನದಲ್ಲಿ ದೂರದರ್ಶನದ ಮಹತ್ವ ಮತ್ತು ಪ್ರಭಾವವನ್ನು ಗುರುತಿಸುವುದಾಗಿದೆ. ದೂರದರ್ಶನ ವೀಕ್ಷಣೆಯು ಮನರಂಜನೆಯು ಅತ್ಯಂತ ಜನಪ್ರಿಯ ಮೂಲವಾಗಿದೆ. UN ಜನರಲ್ ಅಸೆಂಬ್ಲಿಯು 1996 ರಲ್ಲಿ ನವೆಂಬರ್ 21 ಮತ್ತು 22ರಂದು ಮೊದಲ ವಿಶ್ವ ದೂರದರ್ಶನ ವೇದಿಕೆಯನ್ನು ನಡೆಸಿತು. ದೂರದರ್ಶನದ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಚರ್ಚಿಸಲು ಪ್ರಮುಖ ಮಾಧ್ಯಮ ವ್ಯಕ್ತಿಗಳು ಎರಡು ದಿನಗಳ ಶೃಂಗಸಭೆಗಾಗಿ ಭೇಟಿಯಾದರು. ಆ ಸಮಯದಲ್ಲಿ ದೂರದರ್ಶನವನ್ನು ಸಾರ್ವಜನಿಕ ಅಭಿಪ್ರಾಯವನ್ನು ತಿಳಿಸುವ, ಚಾನೆಲಿಂಗ್ ಮಾಡುವ ಮತ್ತು ಪರಿಣಾಮ (Effect) ಬೀರುವ ಪ್ರಮುಖ ಸಾಧನವೆಂದು ಒಪ್ಪಿಕೊಳ್ಳಲಾಯಿತು. ಹೀಗಾಗಿ ನವೆಂಬರ್ 21ರಂದು ವರ್ಲ್ಡ್ ಟೆಲಿವಿಷನ್ ಡೇ ಆಚರಿಸಲಾಯಿತು.

ಪರದೆಯ ಗಾತ್ರಗಳು ಬದಲಾಗಿದ್ದರೂ, ಜನರು ದೂರದರ್ಶನವನ್ನು ವೀಕ್ಷಿಸುವುದನ್ನು ಬಿಟ್ಟಿಲ್ಲ. ಕಣ್ಣಿನಿಂದ ಸಾಕಷ್ಟು ದೂರದಲ್ಲಿರುವ ಕಾರಣ ಕಣ್ಣಿಗೆ (Eyes), ಕಿವಿಗೆ(Ears), ದೇಹಕ್ಕೆ ಯಾವುದೇ ಆರೋಗ್ಯ ಸಮಸ್ಯೆಗೆ (Health problem) ಕಾರಣವಾಗುವುದಿಲ್ಲ ಅನ್ನೋ ಕಾರಣಕ್ಕೆ ಹೆಚ್ಚಿನವರು ಟಿವಿಯನ್ನು ನೋಡಲು ಇಷ್ಟಪಡುತ್ತಾರೆ. ಕೈಯಲ್ಲೇ ಹಿಡಿದು ನೋಡುವ ಮೊಬೈಲ್‌, ಟ್ಯಾಬ್ಲೆಟ್‌ಗಿಂತ ಟಿವಿ ಹೆಚ್ಚು ಸುರಕ್ಷಿತವೆಂದೇ ಎಲ್ಲರು ಭಾವಿಸುತ್ತಾರೆ. ಆದರೆ ನಿರಂತರವಾಗಿ ಟಿವಿ ನೋಡುವುದರಿಂದಲೂ ಆರೋಗ್ಯಕ್ಕೆಷ್ಟು ತೊಂದ್ರೆಯಿದೆ ಅನ್ನೋದು ನಿಮ್ಗೆ ಗೊತ್ತಿದ್ಯಾ ? ಅಂಥಾ ಆರೋಗ್ಯ ಸಮಸ್ಯೆಗಳ ಬಗ್ಗೆ ತಜ್ಞರು ಮಾಹಿತಿ ನೀಡಿದ್ದಾರೆ.

ಬಿಡದೇ Web Series ನೋಡ್ತಿದ್ದೀರಾ? ಎಚ್ಚರ!

1. ದೈಹಿಕ ನಿಷ್ಕ್ರಿಯತೆ: ಟಿವಿಯನ್ನು ಯಾವಾಗಲೂ ನಿರ್ಧಿಷ್ಟವಾಗಿ ಒಂದು ಸ್ಥಳದಲ್ಲಿ ಇಡಲಾಗುತ್ತದೆ. ಅದರ ಮುಂದೆ ಸೋಫಾ ಅಥವಾ ಚೇರ್‌ನಲ್ಲಿ ಕುಳಿತು ಟಿವಿ ನೋಡುತ್ತಾರೆ. ಮೊಬೈಲ್‌ನಲ್ಲಾದರೆ ಎದ್ದು ಓಡಾಡಿಕೊಂಡು ಯಾವುದೇ ವೀಡಿಯೋ ನೋಡಬಹುದು. ಆದರೆ ಟಿವಿಯ ವಿಷಯಕ್ಕೆ ಬಂದಾಗ ಹಾಗೆ ಮಾಡಲಾಗುವುದಿಲ್ಲ. ಹೀಗಾಗಿ ಗಂಟೆಗಟ್ಟಲೆ ಟಿವಿಯ ಮುಂದೆ ಕುಳಿತುಕೊಂಡೇ ಕಾರ್ಯಕ್ರಮಗಳನ್ನು ವೀಕ್ಷಿಸಬೇಕಾಗುತ್ತದೆ. ಇದು ದೇಹಕ್ಕೆ (Body) ಜಡತ್ವವನ್ನು ತರುತ್ತದೆ. ದೈಹಿಕ ನಿಷ್ಕ್ರಿಯತೆ ಹಲವು ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. 

2. ಜಡ ಜೀವನಶೈಲಿ: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ ಜಡ ಜೀವನಶೈಲಿಯು (LIfestyle) ಸ್ಥೂಲಕಾಯತೆ, ಹೃದ್ರೋಗ, ಮಧುಮೇಹ ಮತ್ತು ಖಿನ್ನತೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಯನ್ನು ನೀಡಬಹುದು ಎಂದು ತಿಳಿದುಬಂದಿದೆ. ಇಂಟರ್ನ್ಯಾಷನಲ್ ಜರ್ನಲ್ ಆಫ್ ಎನ್ವಿರಾನ್ಮೆಂಟಲ್ ರಿಸರ್ಚ್ ಅಂಡ್ ಪಬ್ಲಿಕ್ ಹೆಲ್ತ್‌ನಲ್ಲಿ ಏಪ್ರಿಲ್ 2020 ರಂದು ಪ್ರಕಟವಾದ ಅಧ್ಯಯನವು ಸಕ್ರಿಯ ಕುಳಿತುಕೊಳ್ಳುವಿಕೆ ಅಥವಾ ನಿಷ್ಕ್ರಿಯ ಕುಳಿತುಕೊಳ್ಳುವಿಕೆಯು 25 ಪ್ರತಿಶತದಷ್ಟು ಹೆಚ್ಚಿನ ಬಾಡಿ ಮಾಸ್ ಇಂಡೆಕ್ಸ್ (BMI) ಮತ್ತು ಯುವ ವಯಸ್ಕರಲ್ಲಿ ದೇಹದ ಕೊಬ್ಬಿನ ಶೇಕಡಾವಾರು ಮತ್ತು ಒಟ್ಟಾರೆ ಮೆಟಾಬಾಲಿಕ್ ಸಿಂಡ್ರೋಮ್‌ಗೆ ಸಂಬಂಧಿಸಿದೆ.

ಕತ್ತಲಲ್ಲಿ ಟಿವಿ ನೋಡೋ ಅಭ್ಯಾಸವಿದ್ಯಾ ? ಆರೋಗ್ಯಕ್ಕೆಷ್ಟು ಅಪಾಯವಿದೆ ತಿಳ್ಕೊಳ್ಳಿ

3. ಕಳಪೆ ಆಹಾರ ಸೇವನೆ: ಕೆಲವೊಬ್ಬರು ಟಿವಿ ನೋಡುತ್ತಾ ಅಲ್ಲೇ ಊಟ, ತಿಂಡಿ, ಕುರುಕಲು ಸೇವನೆ ಎಲ್ಲವನ್ನೂ ಮುಗಿಸಿಬಿಡುತ್ತಾರೆ. ಟಿವಿ ನೋಡುತ್ತಾ ತಿನ್ನವುದು ಅತ್ಯಂತ ಕೆಟ್ಟ ಅಭ್ಯಾಸವೆಂದು (Bad habit) ಅಧ್ಯಯನಗಳು ಹಲವು ವರ್ಷಗಳ ಹಿಂದೆಯೇ ಸಾಬೀತುಪಡಿಸಿದೆ. ಇದು ಅತಿಯಾದ ತಿನ್ನುವಿಕೆ, ಜಗಿಯದೇ ನುಂಗದಿರುವುದು, ತಿನ್ನೋ ಆಹಾರದ ಮೇಲೆ ಗಮನವಿಲ್ಲದಿರುವುದು ಮೊದಲಾದ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ. 

4. ಸಾಮಾಜಿಕ ಪ್ರತ್ಯೇಕತೆ: ನಿರಂತರವಾಗಿ ದೂರದರ್ಶನ ವೀಕ್ಷಿಸುವವರು ಜನರೊಂದಿಗೆ ಕಡಿಮೆ ಮಾತುಕತೆ ನಡೆಸುತ್ತಾರೆ. ಅವರು ಹೆಚ್ಚು ಸೀರಿಯಲ್‌, ಮೂವಿ, ನ್ಯೂಸ್ ವೀಕ್ಷಣೆಗೆ ಅಡಿಕ್ಟ್ ಆಗಿರುತ್ತಾರೆ. ಹೀಗಾಗಿ ದೂರದರ್ಶನ ವೀಕ್ಷಣೆ ಇವರ ಪಾಲಿಗೆ ಜನರೊಂದಿಗಿನ ಒಡನಾಟಕ್ಕೆ ಬದಲಿಯಾಗಿ ಪರಿಣಮಿಸುತ್ತದೆ, ಡಿಸೆಂಬರ್ 2017ರಂದು ಜರ್ನಲ್ ಆಫ್ ಬಿಹೇವಿಯರಲ್ ಅಡಿಕ್ಷನ್ಸ್‌ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ. ಸಾಮಾಜಿಕ ಪ್ರತ್ಯೇಕತೆ (Social isolation), ಅತಿಯಾದ ಟಿವಿ ವೀಕ್ಷಣೆಯು ಕಳಪೆ ಮಾನಸಿಕ ಆರೋಗ್ಯಕ್ಕೆ (Mental health) ಸಂಬಂಧಿಸಿದೆ. ಅದಕ್ಕಿಂತ ಹೆಚ್ಚಾಗಿ, COVID-19 ಸಮಯದಲ್ಲಿ ಬಂದಿದ್ದ 'ಮನೆಯಲ್ಲಿಯೇ ಇರಿ' ಆದೇಶಗಳು ಟಿವಿ ವೀಕ್ಷಣೆಯಲ್ಲಿ ಜನರು ಹೆಚ್ಚು ತೊಡಗಿಸಿಕೊಳ್ಳಲು ಕಾರಣವಾಗಿದೆ ಎಂದು ಹೇಳಲಾಗ್ತಿದೆ.

Follow Us:
Download App:
  • android
  • ios