userpic
user icon
0 Min read

ಈ ಭಂಗಿಯಲ್ಲಿ ದೈಹಿಕ ಸಂಬಂಧ ಬೆಳೆಸಿದರೆ ಮಹಿಳೆಯರಿಗೆ ಬರುತ್ತಂತೆ ಕ್ಯಾನ್ಸರ್

Women cancer risk intimacy positions lifestyle study
Uterine Cancer

Synopsis

ಗರ್ಭಕೋಶದ ಕ್ಯಾನ್ಸರ್ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದೆ. ಸಾವಿರಾರು ಮಹಿಳೆಯರು ಈ ಕ್ಯಾನ್ಸರ್ ಗೆ ಬಲಿ ಆಗ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ ಏನು ಎಂಬುದನ್ನು ಸಂಶೋಧನೆಯೊಂದು ಹೇಳಿದೆ. 
 

ದೈಹಿಕ ಸಂಬಂಧಕ್ಕೆ  ಸಂಬಂಧಿಸಿದಂತೆ ಸಂಶೋಧನೆ (Research)ಯಲ್ಲಿ ಆಘಾತಕಾರಿ ವಿಷ್ಯವೊಂದು ಬಹಿರಂಗವಾಗಿದೆ. ಲೈಂಗಿಕ ಭಂಗಿಯೊಂದು ಮಹಿಳೆಯರ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆ ದೃಢಪಡಿಸಿದೆ. ಆ ಭಂಗಿಯಿಂದ ಶೇಕಡಾ 99ರಷ್ಟು ಮಹಿಳೆಯರಿಗೆ ಗರ್ಭಾಶಯ ಕ್ಯಾನ್ಸರ್ (Uterine cancer) ಅಪಾಯ ಉಂಟಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. 

10 ಸಾವಿರ ಮಹಿಳೆಯರ ಮೇಲೆ ಸಂಶೋಧನೆ : ಅಮೆರಿಕಾ ಮತ್ತು ಯುರೋಪ್ ನಲ್ಲಿ 10 ಸಾವಿರ ಮಹಿಳೆಯರ ಮೇಲೆ ಸಂಶೋಧನೆ ನಡೆದಿದೆ. ಇದ್ರಿಂದ ಬಂದ ಫಲಿತಾಂಶ ಆಘಾತಕಾರಿಯಾಗಿದೆ. ಈ ಭಂಗಿಯಲ್ಲಿ ಲೈಂಗಿಕ ಸಂಬಂಧ ಬೆಳೆಸುತ್ತಿದ್ದ ಮಹಿಳೆಯರಿಗೆ ಕ್ಯಾನ್ಸರ್ ಅಪಾಯ ಶೇಕಡಾ 99 ರಷ್ಟಿದೆ ಎಂಬುದು ಸಂಶೋಧನೆಯಿಂದ ಗೊತ್ತಾಗಿದೆ. ಹೆಚ್ ಪಿವಿ ವೈರಸ್ ಇದಕ್ಕೆ ಕಾರಣ ಎಂಬುದು ಪತ್ತೆಯಾಗಿದೆ. 

ಐವಿಎಫ್‌ಗೂ AI ಎಂಟ್ರಿ, ಗಂಡು ಮಗುವಿಗೆ ಜನ್ಮ ನೀಡಿದ 40ರ ಮಹಿಳೆ!

ಯಾವ ಲೈಂಗಿಕ ಭಂಗಿಯಿಂದ ಕಾಡುತ್ತೆ ಗರ್ಭಕೋಶದ ಕ್ಯಾನ್ಸರ್ ? : ಇತ್ತೀಚಿನ ದಿನಗಳಲ್ಲಿ ಗರ್ಭಾಶಯದ ಕ್ಯಾನ್ಸರ್ ಸಂಖ್ಯೆ ಹೆಚ್ಚಾಗಿದೆ. ಅನೇಕ ಮಹಿಳೆಯರು ತಮ್ಮ ಮಧ್ಯ ವಯಸ್ಸಿನಲ್ಲಿ ಗರ್ಭಾಶಯದ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾರೆ. ಕೊನೆ ಹಂತದಲ್ಲಿ ಇದು ಪತ್ತೆಯಾಗ್ತಿರುವ ಕಾರಣ, ಕ್ಯಾನ್ಸರ್ ಗೆದ್ದು ಬರುವವರ ಸಂಖ್ಯೆ ಕೂಡ ಕಡಿಮೆಯಾಗ್ತಿದೆ.  ಈ ಕ್ಯಾನ್ಸರ್ ಗೆ ಮಹಿಳೆಯರು ಬೆಳೆಸುವ ಶಾರೀರಿಕ ಸಂಬಂಧದ ಭಂಗಿ ಕೂಡ ಕಾರಣ ಎಂಬುದು ಈಗ ಪತ್ತೆಯಾಗಿದೆ. ಸಂಶೋಧಕರು, ಮಶಿನರಿ ಭಂಗಿ ಅಪಾಯಕಾರಿ ಎಂದಿದ್ದಾರೆ.  ಮಶಿನರಿ ಭಂಗಿಯಲ್ಲಿ ಸಂಬಂಧ ಬೆಳೆಸಿದ್ರೆ ಗರ್ಭಕೋಶದ ಕ್ಯಾನ್ಸರ್ ಬರುವ ಅಪಾಯ ಹೆಚ್ಚಿರುತ್ತದೆ ಎಂದು ಸಂಶೋದಕರು ಹೇಳಿದ್ದಾರೆ.  ಜರ್ನಲ್ ಆಫ್ ವುಮೆನ್ಸ್ ಹೆಲ್ತ್ ರಿಸರ್ಚ್ ನಲ್ಲಿ ಈ ವರದಿ ಪ್ರಕಟಗೊಂಡಿದೆ. 

ಕ್ಯಾನ್ಸರ್ ಅಪಾಯ ಹೆಚ್ಚಾಗಲು ಕಾರಣ ಏನು? : ಈ ಭಂಗಿಯಿಂದ ಗರ್ಭಾಶಯದ ಮೇಲೆ ಒತ್ತಡ ಬೀಳುತ್ತದೆ. ಅಲ್ಲಿ ಗಾಯವಾಗುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗುವುದಿಲ್ಲ. ಗಾಯದಲ್ಲಿ ನಿಧಾನವಾಗಿ ಕ್ಯಾನ್ಸರ್ ಕೋಶ ಬೆಳೆಯುವ ಅಪಾಯ ಹೆಚ್ಚಾಗುತ್ತದೆ. ಒಂದ್ವೇಳೆ ಪುರುಷ ಸಂಗಾತಿ ಹೆಚ್ ಪಿವಿ ವೈರಸ್ ನಿಂದ ಬಳಲುತ್ತಿದ್ದರೆ, ಈ ಭಂಗಿಯಿಂದಾಗಿ ವೈರಸ್ ಗರ್ಭಾಶಯವನ್ನು ಬಹುಬೇಗ ತಲುಪುತ್ತದೆ. ಹೆಚ್ ಪಿವಿ ಕ್ಯಾನ್ಸರ್ ಗೆ ಮುಖ್ಯ ಕಾರಣವಾಗಿದೆ. 

ಗಂಡಸರಿಗೂ ಬಂದಿದೆ ಗರ್ಭನಿರೋಧಕ ಗುಳಿಗೆ! ರಿಸರ್ಚ್

ಗರ್ಭಾಶಯದ ಕ್ಯಾನ್ಸರ್ ಲಕ್ಷಣ : ಗರ್ಭಾಶಯದ ಕ್ಯಾನ್ಸರ್ ನಿಂದ ಬಳಲುವ ಮಹಿಳೆಯರಿಗೆ ಪಿರಿಯಡ್ಸ್ ನಂತ್ರವೂ ರಕ್ತಸ್ರಾವವಾಗುತ್ತದೆ. ಸಂಬಂಧ ಬೆಳೆಸಿದ ನಂತ್ರ ಬ್ಲೀಡಿಂಗ್ ಕಾಣಿಸಿಕೊಳ್ಳುತ್ತದೆ. ಹೊಟ್ಟೆ ಕೆಳ ಭಾಗದಲ್ಲಿ ನಿರಂತರ ನೋವು. ಸಂಬಂಧ ಬೆಳೆಸುವ ವೇಳೆ ಖಾಸಗಿ ಅಂಗದಲ್ಲಿ ವಿಪರೀತ ನೋವು. ಯೋನಿಯಿಂದ ಬಿಳಿ, ಹಳದಿ ಬಣ್ಣದ  ಅಸಮಾನ್ಯ ಸ್ರಾವ ಹಾಗೂ ಕೆಟ್ಟ ವಾಸನೆ ಗರ್ಭಾಶಯ ಕ್ಯಾನ್ಸರ್ ನ ಮುಖ್ಯ ಲಕ್ಷಣಗಳಾಗಿವೆ.

ಗರ್ಭಾಶಯ ಕ್ಯಾನ್ಸರ್ ನಿಂದ ರಕ್ಷಣೆ ಹೇಗೆ ? : ಮೇಲಿನ ಯಾವುದೇ ಲಕ್ಷಣ ಕಂಡು ಬಂದ್ರೂ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಸುರಕ್ಷತೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ನಿಯಮಿತವಾಗಿ ಎಸ್ ಟಿಡಿ ಪರೀಕ್ಷೆ ಮಾಡಿಸಿ. ಹಾಗೆಯೇ ಮಿಶನರಿ ಭಂಗಿ ನಿಲ್ಲಿಸಿ. ಪ್ಯಾಪ್ ಸ್ಮಿಯರ್ ಪರೀಕ್ಷೆಯನ್ನು ಮೂರು ವರ್ಷಕ್ಕೊಮ್ಮೆ ತಪ್ಪದೆ ಮಾಡಿಸಿ. ಹೆಚ್ ಪಿವಿ ವ್ಯಾಕ್ಸಿನ್ ತೆಗೆದುಕೊಳ್ಳಿ. ಇದು 9 ರೀತಿಯ ಹೆಚ್ ಪಿವಿ ವೈರಸ್ ನಿಂದ ನಿಮ್ಮನ್ನು ರಕ್ಷಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ. ಈ ಸಂಶೋಧನೆ ಮಹಿಳೆಯರಿಗೆ ಗಂಭೀರ ಎಚ್ಚರಿಕೆಯನ್ನು ನೀಡಿದೆ. ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಸುರಕ್ಷಿತ ಲೈಂಗಿಕ ಸಂಬಂಧ ಬಹಳ ಮುಖ್ಯ ಎಂದಿದ್ದಾರೆ. 

Latest Videos