ಎಣ್ಣೆ ಹೊಡೆಯೋರಿಗೆ ಕೊರೋನಾ ಬರಲ್ವಾ?

ಕೈ ಹಚ್ಕೊಳ್ಳೋ ಬದಲು ಆಲ್ಕೊಹಾಲ್ ಅನ್ನು ಹೊಟ್ಟೆಗೆ ಹಾಕಿದ್ರೆ ಕೋವಿಡ್ ವೈರಾಣು ಅಪ್ಪಿ ತಪ್ಪಿ ದೇಹ ಸೇರಿದ್ರೂ ಸತ್ತು ಹೋಗುತ್ತೆ. ಹೊಟ್ಟೆಯಲ್ಲಿ ಯಾವ ವೈರಸ್ಸೂ ಬದುಕಿರಲ್ಲ ಅನ್ನೋ ವಾದವದು. ಇದನ್ನು ನಿಜವೆಂದೇ ಹಲವರು ನಂಬಿದ್ದಾರೆ. ವಿದೇಶಗಳಲ್ಲೆಲ್ಲ ಸೂಪ್‌ಗೆ, ಆಹಾರದ ಜೊತೆಗೆ ಆಲ್ಕೊಹಾಲ್ ಹಾಕಿ ಕುಡಿಯೋದನ್ನು ಶುರು ಮಾಡಿದ್ರಂತೆ.

Will consuming alcohol protect you from corona virus

ಗ್ರೀನ್ ಝೋನ್ ಗಳಲ್ಲಿ ಎಣ್ಣೆ ಮಾರಾಟಕ್ಕೆ ಅವಕಾಶ ಸಿಕ್ಕಿದ್ದೇ ಗಂಟಲು ಕಟ್ಟಿದಂತಿದ್ದ ಮದ್ಯಪ್ರಿಯರ ಮೊಗದಲ್ಲಿ ಮಂದಹಾಸ. ಸರ್ಕಾರ ಹೇಳುವ ಎಲ್ಲಾ ರಿಸ್ಟ್ರಿಕ್ಷನ್‌ಗಳಿಗೂ ಸಂಪೂರ್ಣ ಶರಣಾಗತಿ ತೋರಿ ಬಾರ್ ತೆರೆದದ್ದೇ ಎಣ್ಣೆಗೆ ಮುಗಿ ಬೀಳ್ತಿದ್ದಾರೆ. ಇದರ ನಡುವೆ ಇತ್ತೀಚೆಗೆ ನಂದಿಬೆಟ್ಟದಲ್ಲೊಂದು ವಿಚಿತ್ರ ಪ್ರಕರಣ ನಡೆಯಿತು. ಇಲ್ಲಿ ದಾಸ್ತಾನು ಮಾಡಿಡಲಾಗಿದ್ದ ಮದ್ಯದಲ್ಲೇನೋ ಎಡವಟ್ಟಾಗಿತ್ತು. ಲೆಕ್ಕ ಸರಿ ಬರ್ತಿರಲಿಲ್ಲ. ಮೊದಲಿದ್ದ ಮದ್ಯದ ಬಾಟಲಿಗಳಲ್ಲಿ ಸುಮಾರು ಮಂಗಮಾಯವಾಗಿದ್ದವು. ಇದಕ್ಕೆ ಸರಿಯಾಗಿ 'ಮಂಗವೇ' ಇದನ್ನು ಮಾಯ ಮಾಡಿದ್ದು ಅಂತ ಡೈಲಾಗ್ ಹೊಡೆಯೋ ಮೂಲಕ ಪ್ರಕರಣ ಬರ್ಕಾಸ್ತು ಮಾಡುವ ಕಾರ್ಯವೂ ಆಯಿತೆನ್ನಿ. 

ಲಾಕ್‌ಡೌನ್ ಆಗಿದ್ದೇ ಎಣ್ಣೆ ಸಿಗದೇ ಒಂದಿಷ್ಟು ಜನ ಆತ್ಮಹತ್ಯೆ ಮಾಡಿಕೊಂಡಿದ್ದೂ ಆಯ್ತು. ಎಷ್ಟೋ ಜನ ಮದ್ಯದಂಗಡಿಗೇ ಕನ್ನ ಹಾಕಿದ್ರು. ಈ ಟೈಮ್‌ನಲ್ಲಿ ಎಣ್ಣೆ ಸ್ಟಾಕ್ ಇಟ್ಕೊಂಡವರಿಗೆ ಎಲ್ಲಿಲ್ಲದ ಬೆಲೆ ಬಂತು. ಎಣ್ಣೆಗೆ ಚಿನ್ನದ ರೇಟು ಬಂತು. ಈ ನಡುವೆ ಎಣ್ಣೆ ಮಾರಾಟಕ್ಕೆ ಅವಕಾಶ ಸಿಕ್ಕಿದ್ದೇ ಒಂದು ಗಾಳಿಮಾತು ಬಹಳ ಜನರ ಬಾಯಲ್ಲಿ ಓಡಾಡಿತು. ವಿಚಿತ್ರ ತರ್ಕವೂ ಸೇರಿತ್ತು ಅನ್ನಿ.

ಈಗ ಯಾರು ಎಲ್ಲೇ ಹೊರಗೆ ಹೋದರೂ ಅಥವಾ ಮನೆಯೊಳಗಿದ್ದರೂ ಆಗಾಗ ಆಲ್ಕೋಹಾಲ್ ಅಂಶ ಇರುವ ಸ್ಯಾನಿಟೈಸರ್‌ ಹಚ್ಕೊಂಡು ಕೈ ಉಜ್ಜಿಕೊಳ್ತಿದ್ದಾರೆ. ಹೀಗೆ ಮಾಡಿದರೆ ಕೊರೋನಾದಂಥಾ ವೈರಸ್ ಹತ್ರವೂ ಸುಳಿಯಲ್ಲ ಅನ್ನೋ ಮನೋಭಾವ. ಆದರೆ ವೈದ್ಯರು ಹೇಳುವ ಪ್ರಕಾರ ಇದಕ್ಕಿಂತಲೂ ಸೋಪ್‌ನಲ್ಲಿ ಕೈತೊಳೆಯೋದು ಸೇಫ್. ಇರಲಿ, ಈಗ ವಿಷ್ಯ ಬೇರೆ ಇದೆ. ಆಲ್ಕೊಹಾಲ್ ಬಳಸಿದ್ರೆ ವೈರಸ್ ಬರಲ್ಲ ಅನ್ನೋದಕ್ಕೆ ಪೂರಕವಾಗಿ ವಾದವೊಂದು ಹುಟ್ಟುಕೊಂಡಿದೆ. 

ಕೈ ಹಚ್ಕೊಳ್ಳೋ ಬದಲು ಆಲ್ಕೊಹಾಲ್ ಅನ್ನು ಹೊಟ್ಟೆಗೆ ಹಾಕಿದ್ರೆ ಕೋವಿಡ್ ವೈರಾಣು ಅಪ್ಪಿ ತಪ್ಪಿ ದೇಹ ಸೇರಿದ್ರೂ ಸತ್ತು ಹೋಗುತ್ತೆ. ಹೊಟ್ಟೆಯಲ್ಲಿ ಯಾವ ವೈರಸ್ಸೂ ಬದುಕಿರಲ್ಲ ಅನ್ನೋ ವಾದವದು. ಇದನ್ನು ನಿಜವೆಂದೇ ಹಲವರು ನಂಬಿದ್ದಾರೆ. ವಿದೇಶಗಳಲ್ಲೆಲ್ಲ ಸೂಪ್‌ಗೆ, ಆಹಾರದ ಜೊತೆಗೆ ಆಲ್ಕೊಹಾಲ್ ಹಾಕಿ ಕುಡಿಯೋದನ್ನು ಶುರು ಮಾಡಿದ್ರಂತೆ. 

ರೋಗ ನಿರೋಧಕ ಶಕ್ತಿ ಹೆಚ್ಚಳ ಹೇಗೆ? ಚರಕ ಸಂಹಿತೆಯಲ್ಲಿದೆ ಉತ್ತರ 

ಆದರೆ ಇದೆಲ್ಲ ಸತ್ಯಕ್ಕೆ ದೂರವಾದದ್ದು. ಅದರಲ್ಲೂ ಸ್ಯಾನಿಟೈಸರ್ ಗಳಿಗೆ ಬಳಸುವ ಎಥೆನಾಲ್ ಅನ್ನು ಕುಡಿದರೆ ಬದುಕುಳಿಯೋದೇ ಕಷ್ಟ ಇದೆ. ಇದನ್ನು ಕುಡಿದು ಜೀವ ಕಳೆದುಕೊಂಡವರು ನಮ್ಮ ನಡುವೆ ಇದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಟಣೆಯ ಪ್ರಕಾರ ಮದ್ಯ ಕುಡಿಯೋದರಿಂದ ಖಂಡಿತಾ ಕೊರೋನಾದಿಂದ ದೂರ ಇರಲಾಗಲ್ಲ. ಬದಲಾಗಿ ಇದರಿಂದ ದೇಹ ದುರ್ಬಲವಾಗುತ್ತದೆ, ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಎಣ್ಣೆ ಧೂಮಪಾನಿಗಳಂತೆ ಎಣ್ಣೆ ಹೊಡೆಯೋರಿಗೂ ಕೋವಿಡ್ ಸಖತ್ ಡೇಂಜರ್. ಜೊತೆಗೆ ಕುಡಿತ ಮತ್ತಿನಲ್ಲಿ ಡಿಸ್ಟೆನ್ಸ್ ಮೈಂಟೇನ್ ಮಾಡೋದು ಕಷ್ಟ. ಇಂಥವರು ಹೈಜಿನ್ ಮೈಂಟೇನ್ ಮಾಡಲ್ಲ. ಹೀಗಾಗಿ ಇಂಥವರಲ್ಲಿ ಕೊರೋನಾ ಬರುವ ಸಾಧ್ಯತೆ ಹೆಚ್ಚಿರುತ್ತದೆಯೇ ಹೊರತು ಕಡಿಮೆ ಆಗಲ್ಲ. 

40 ದಿನದ ನಂತರ ಮದ್ಯದಂಗಡಿ ಓಪನ್‌: ಆದ್ರೆ ಎಣ್ಣೆ ಬೆಲೆ ದುಬಾರಿ!

ಇದಲ್ಲದೇ ಕೊರೋನಾ ಬಗ್ಗೆ ಇನ್ನೊಂದಿಷ್ಟು ತಪ್ಪು ಕಲ್ಪನೆಗಳಿವೆ. ಕೆಲವರು ಪೆಪ್ಪರ್ ಅಂದರೆ ಕರಿಮೆಣಸು ರೆಗ್ಯುಲರ್ ಆಗಿ ತಿನ್ನುತ್ತಿದ್ದರೆ ಕೊರೋನಾ ಬರಲ್ಲ ಅಂತ ಕೆಲವರು ನಂಬಿದ್ದಾರೆ. ಕೆಲವು ಕುಡುಕರು ಎಣ್ಣೆಗೆ ಕಾಂಬಿನೇಶನ್ ಆಗಿರುವ ಚಿಪ್ಸ್ ಗೆ ಧಾರಾಳ ಪೆಪ್ಪರ್ ಸ್ಪ್ರೇ ಮಾಡ್ತಿದ್ದಾರಂತೆ. ಎಣ್ಣೆ ಮತ್ತು ಪೆಪ್ಪರ್ ಬಳಸೋ ಕಾರಣ ಕೋವಿಡ್ ಬರೋ ಚಾನ್ಸೇ ಇಲ್ಲ ಅಂತ ಚಾಲೆಂಜ್ ಹಾಕ್ತಿದ್ದಾರಂತೆ. 

Latest Videos
Follow Us:
Download App:
  • android
  • ios