ರಾತ್ರಿ ವೈಫೈ ರೂಟರ್ ಆಫ್ ಮಾಡಲ್ವಾ? ಮಾಡದಿದ್ದರೆ ಈಗಲೇ ಶುರು ಮಾಡಿ

ನಮ್ಮ ಕೆಲಸವನ್ನು ಸರಳಗೊಳಿಸಿರುವ ಎಲೆಕ್ಟ್ರಿಕ್ ಸಾಧನಗಳು ನಮ್ಮ ಆರೋಗ್ಯ ಹಾಳು ಮಾಡ್ತಿವೆ. ಇದ್ರಲ್ಲಿ ಮೊಬೈಲ್, ವೈಫೈ ಎಲ್ಲ ಸೇರಿದೆ. ಅಗತ್ಯವಿದ್ದಾಗ ಬಳಕೆ ಅನಿವಾರ್ಯ. ಅಗತ್ಯವಿಲ್ಲದ ಸಮಯದಲ್ಲೂ ಇದನ್ನು ಬಳಸಿ ಆರೋಗ್ಯ ಹಾಳುಮಾಡಿಕೊಳ್ಳೋದು ಏಕೆ ಅಂತಾ?
 

Wifi Router Off At Night For Better Sleep How Electromagnetic Radiation Impact Health How To Stay Safe roo

ಈ ಹಿಂದೆ ಸಂಬಂಧಿಕರು, ಸ್ನೇಹಿತರ ಮನೆಗೆ ಹೋದಾಗ, ತಿಂಡಿ ಬೇಕಾ, ಕುಡಿಯೋಕೆ ಏನು ತೆಗೆದುಕೊಳ್ತೀರಿ ಅಂತಾ ಕೇಳ್ತಾ ಇದ್ರು. ಈಗ ಕಾಲ ಬದಲಾಗಿದೆ. ಇವೆಲ್ಲವನ್ನು ಕೇಳುವ ಮುನ್ನ ಮನೆಗೆ ಬಂದ ಗೆಸ್ಟ್, ನಿಮ್ಮ ವೈಫೈ ಪಾಸ್ವರ್ಡ್ ಏನು ಅಂತಾ ಕೇಳ್ತಾರೆ. ವೈಫೈ ಇಲ್ಲ ಅಂದ್ರೆ ಅದು ಮುಜುಗರದ ಸಂಗತಿ ಎನ್ನುವಂತಾಗಿದೆ.

ವೈಫೈ (Wifi) ಸೌಲಭ್ಯ ನೀಡುವ ಕಂಪನಿಗಳು ಈಗ ಹಳ್ಳಿ ಹಳ್ಳಿಗೆ ತಮ್ಮ ಸಂಪರ್ಕ ನೀಡ್ತಿವೆ. ಹಾಗಾಗಿ ವರ್ಕ್ ಫ್ರಂ ಹೋಮ್ (Work From Home) ಮಾಡೋರ ಕೆಲಸ ಕೂಡ ಸುಲಭವಾಗಿದೆ. ಆರಾಮವಾಗಿ ಮನೆಯಲ್ಲೇ ವೈಫೈ ಸೌಲಭ್ಯ ಸಿಗೋ ಕಾರಣ ಸಿಗ್ನಲ್ ಹುಡುಕಿಕೊಂಡು ಬೆಟ್ಟ ಹತ್ತಬೇಕಾಗಿಲ್ಲ. ಮನೆಯಲ್ಲಿ ಒಂದು ರೂಟರ್ ಇದ್ರೆ ಅನೇಕರು ಮೊಬೈಲ್ ಇಂಟರ್ನೆಟ್ (Internet) ಬಳಕೆ ಮಾಡಬಹುದಾಗಿದ್ದರಿಂದ ಬಹುತೇಕರು ಇದನ್ನೇ ಗುಡ್ ಚಾಯ್ಸ್ ಎನ್ನುತ್ತಾರೆ. ಇಡೀ ದಿನ ಮೊಬೈಲ್ ಕೈನಲ್ಲಿ ಹಿಡಿದಿರೋರು, ಮಧ್ಯರಾತ್ರಿಯಾದ್ರೂ ಗೇಮ್ಸ್, ಯುಟ್ಯೂಬ್ಸ್, ರೀಲ್ಸ್ ಅಂತಾ ಇರೋರು ವೈಫೈ ಎಲ್ಲಿ ಆಫ್ ಮಾಡ್ತಾರೆ? ಕೆಲವರು ಇದ್ಯಾವುದನ್ನೂ ನೋಡದೆ ಬೇಗ ಮಲಗಿದ್ರೂ ವೈಫೈ ಸ್ವಿಚ್ ಆಫ್ ಮಾಡುವ ಗೋಜಿಗೆ ಹೋಗೋದಿಲ್ಲ. ಯಾಕೆಂದ್ರೆ ಬೆಳಿಗ್ಗೆ ಮತ್ತೆ ಅದನ್ನು ಆನ್ ಮಾಡೋದು ಪ್ರತ್ಯೇಕ ಕೆಲಸವಾಗುತ್ತೆ. ನೀವೂ  ರಾತ್ರಿ ಪೂರ್ತಿ ವೈಪೈ ಆನ್ ಇಡೋರೇ ಆಗಿದ್ರೆ ಇನ್ಮುಂದೆ ಈ ತಪ್ಪು ಮಾಡ್ಬೇಡಿ.

ದಿನಕ್ಕೊಂದು ಈ ಕೆಂಪು ಹಣ್ಣು ತಿಂದ್ರೆ ಸಾಕು ಡಯಾಬಿಟಿಸ್ ಬೇಗಕಡಿಮೆಯಾಗುತ್ತೆ 

ವೈಪೈ ಸೌಲಭ್ಯದಿಂದ ಉಂಟಾಗುತ್ತೆ ಈ ತೊಂದರೆ : ಸಾಮಾನ್ಯವಾಗಿ ಎಲ್ಲರಿಗೂ ಇಂಟರ್ನೆಟ್ ನಿಂದ ಉಂಟಾಗುವ ದುಷ್ಪರಿಣಾಮದ ಬಗ್ಗೆ ತಿಳಿದಿರುತ್ತದೆ. ಆದರೂ ಅನೇಕ ಮಂದಿ ಅವಶ್ಯಕತೆ ಇಲ್ಲದೇ ಇರುವಾಗ ಅದನ್ನು ಆಫ್ ಮಾಡಬೇಕು ಎನ್ನುವುದರ ಕುರಿತು ವಿಚಾರ ಮಾಡೋದಿಲ್ಲ. ರಾತ್ರಿ ಮಲಗುವ ಸಮಯದಲ್ಲಿ ಕೂಡ ವೈಪೈ ರೂಟರ್ ಆನ್ ಆಗಿಯೇ ಇರುತ್ತದೆ. ಕೆಲವೇ ಕೆಲವು ಮಂದಿ ಮಾತ್ರ ಕೆಲಸವಿಲ್ಲದ ಸಮಯದಲ್ಲಿ ವೈಪೈ ಆಫ್ ಮಾಡುತ್ತಾರೆ. ಹೀಗೆ ರಾತ್ರಿ ಮಲಗುವ ಸಮಯದಲ್ಲೂ ಇಂಟರ್ನೆಟ್ ಬಳಸುವುದು ಆರೋಗ್ಯಕ್ಕೆ ಹಾನಿಕರವಾಗಿದೆ.

ವೈಫೈ ಗೆ ವ್ಲಾನ್ ಎಂದು ಕೂಡ ಹೇಳಲಾಗುತ್ತೆ. ಈ ವೈರ್ಲೆಸ್ ಕನೆಕ್ಷನ್ ಮೂಲಕ ಲ್ಯಾಪ್ ಟಾಪ್, ಕಂಪ್ಯೂಟರ್, ಫೋನ್ ಗಳಿಗೆ ಇಂಟರ್ನೆಟ್ ಪಡೆದುಕೊಳ್ಳಬಹುದು. ಇಲೆಕ್ಟ್ರೋಮೆಗ್ನೆಟಿಕ್ ಫ್ರಿಕ್ವೆನ್ಸಿಯಿಂದ ಬರುವ ವೈಫೈ ನೆಟ್ ವರ್ಕ್ ಅನ್ನು ದೀರ್ಘಕಾಲದ ತನಕ ಬಳಸಿದರೆ ಅಥವಾ ಅದರ ಸಂಪರ್ಕದಲ್ಲಿದ್ದರೆ ಅದರಿಂದ ಆರೋಗ್ಯ ಹಾಳಾಗುತ್ತದೆ ಮತ್ತು ಇದರಿಂದ ನಿದ್ರೆಯೂ ಸರಿಯಾಗಿ ಆಗೋದಿಲ್ಲ. ಇದರಿಂದ ಹೊರಸೂಸುವ ತರಂಗಾಂತರಗಳು ನಮ್ಮ ಮೆದುಳಿನ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.

ತೂಕ ಹೆಚ್ಚಳಕ್ಕೆ ಕಾರಣ ಆಗೋದು ಇದೇ ಆಹಾರ, ನೀವೂ ತಿನ್ತಿದ್ದೀರಾ ಚೆಕ್ ಮಾಡ್ಕೊಳ್ಳಿ

ರಾತ್ರಿಯ ಸಮಯದಲ್ಲಿ ವೈಪೈ ರೂಟರ್ ಆಪ್ ಮಾಡಿ : ಪ್ರಸ್ತುತ ಬಹಳ ಮಂದಿ ಮೆದುಳು, ಕಣ್ಣಿನ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಹೆಚ್ಚಿನ ಇಂಟರ್ನೆಟ್ ಬಳಕೆಯಿಂದ ಇಂತಹ ಅನೇಕ ಆರೋಗ್ಯ ಸಮಸ್ಯೆಗಳು ತಲೆದೋರುತ್ತವೆ. ವೈಫೈ ನಿಂದ ಹೊರಸೂಸುವ ಇಲೆಕ್ಟ್ರೋಮೆಗ್ನೆಟಿಕ್ ರೇಡಿಯೇಶನ್ ಅನೇಕ ಬಗೆಯ ರೋಗಗಳನ್ನು ಹುಟ್ಟುಹಾಕುತ್ತದೆ. ಇಷ್ಟೇ ಅಲ್ಲದೇ ಈಗ ಅನೇಕ ಬಗೆಯ ಆನ್ ಲೈನ್ ಹ್ಯಾಕಿಂಗ್ ಗಳು ಕೂಡ ನಡೆಯುತ್ತಿವೆ. ಈಗಾಗಲೇ ಕೆಲವು ಮಂದಿ ಇದರ ಮೂಲಕ ತಮ್ಮ ಹಣ ಕಳೆದುಕೊಂಡಿದ್ದಾರೆ. ರಾತ್ರಿಯ ಸಮಯದಲ್ಲಿ ವೈಪೈ ಆಫ್ ಮಾಡೋದ್ರಿಂದ ನಮ್ಮ ಡಿಜಿಟಲ್ ಉಪಕರಣಗಳನ್ನು ಸೇಫ್ ಆಗಿಯೂ ಇಟ್ಟುಕೊಳ್ಳಬಹುದು. ಹಾಗಾಗಿ ವೈಪೈ ರೂಟರ್ ಅನ್ನು ರಾತ್ರಿಯ ಸಮಯದಲ್ಲಿ ಆಫ್ ಮಾಡುವುದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು ಹಾಗೂ ಇದರಿಂದ ನಾವು ರಾತ್ರಿಯ ಸಮಯದಲ್ಲಾಗುವ ಎಷ್ಟೋ ಅನಾಹುತಗಳನ್ನು ಕೂಡ ತಪ್ಪಿಸಬಹುದು.
 

Latest Videos
Follow Us:
Download App:
  • android
  • ios