ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಮಾತು ಸೊಳ್ಳೆಗೆ ಸರಿಯಾಗಿ ಒಪ್ಪುತ್ತದೆ. ಅಷ್ಟಕ್ಕೂ ಸೊಳ್ಳೆಗಳು ನಮಗೇಕೆ ಕಚ್ಚುತ್ತವೆ ಗೊತ್ತೇನು? ಸೊಳ್ಳೆಗಳು ತಮ್ಮ ದೇಹಕ್ಕೆ ನೀರಿನ ಅಗತ್ಯವಾದಾಗ ಮನುಷ್ಯರಿಗೆ ಕಚ್ಚುವ ಅಭ್ಯಾಸ ಬೆಳೆಸಿಕೊಂಡಿವೆಯಂತೆ.

ಗಾತ್ರದಲ್ಲಿ ಚಿಕ್ಕದಾದರೂ ಇಡೀ ಪ್ರಪಂಚವನ್ನು ಅಲ್ಲಾಡಿಸುವ ತಾಕತ್ತು ಹೊಂದಿರುವ ಜೀವಿ ಸೊಳ್ಳೆ (Mosquito). ಈ ಕಿರು (Small) ಜೀವಿ ಮನುಷ್ಯರ ಆರೋಗ್ಯ (Health) ವ್ಯವಸ್ಥೆಯನ್ನೇ ಬುಡಮೇಲು ಮಾಡಬಲ್ಲದು. ಮನುಷ್ಯರ (Human) ರಕ್ತ (Blood) ವೆಂದರೆ ಎಲ್ಲಿದ್ದರೂ ಓಡೋಡಿ ಬರುವ ಸೊಳ್ಳೆಯ ಕಾಟಕ್ಕೆ ಹೈರಾಣಾಗದವರಿಲ್ಲ. ವಿಶ್ವಾದ್ಯಂತ ಲಕ್ಷಾಂತರ (Millions) ಜನ (People) ಸೊಳ್ಳೆಯಿಂದ ಪ್ರಾಣ (Life) ಕಳೆದುಕೊಳ್ಳುತ್ತಾರೆ. ಹೀಗಾಗಿ, “ರೋಗ ಹರಡುವ ಕೀಟಗಳಲ್ಲಿ ಅತ್ಯಂತ ಭಯಾನಕ ಕೀಟ’ ಎಂದೇ ಸೊಳ್ಳೆಯನ್ನು ಗುರುತಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯಂತೂ ಸೊಳ್ಳೆಯ ನಿಯಂತ್ರಣಕ್ಕೆ ನಿರಂತರವಾಗಿ ವಿವಿಧ ರಾಷ್ಟ್ರಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಇರುತ್ತದೆ. ಅಷ್ಟರಮಟ್ಟಿಗೆ ಸೊಳ್ಳೆ ಎನ್ನುವ ಪುಟಾಣಿ ಮನುಷ್ಯರ ಬದುಕಿನ ಮೇಲೆ ತನ್ನ ಪ್ರಭಾವ ಬೀರಿದೆ. 

ಅಷ್ಟಕ್ಕೂ ಸೊಳ್ಳೆಗೆ ಮನುಷ್ಯನ ರಕ್ತವೆಂದರೆ ಪ್ರೀತಿಯೇ ಎನ್ನುವ ಪ್ರಶ್ನೆ ಇಲ್ಲಿ ಮೂಡದೆ ಇರದು. ಸಣ್ಣದೊಂದು ಕಡಿತದಿಂದ ಮಲೇರಿಯಾ(Malaria), ಡೆಂಗ್ಯೂ (Dengue), ಹಳದಿ ಜ್ವರ (Yellow Fever), ಚಿಕೂನ್ ಗುನ್ಯಾ (Chikungunya) ಸೇರಿದಂತೆ ಹಲವಾರು ಮಾರಣಾಂತಿಕ ಕಾಯಿಲೆಗಳನ್ನು ತರಬಲ್ಲ ಸೊಳ್ಳೆಗೆ ನಲುಗದ ದೇಶಗಳಿಲ್ಲ ಎಂದೇ ಹೇಳಬಹುದು. ನಿಮಗೆ ಗೊತ್ತಿರಲಿ, ಮುಕ್ತ ಪ್ರದೇಶದಲ್ಲಿ ಬೆಳೆಯುವ ಹೆಣ್ಣು (Female) ಸೊಳ್ಳೆಗಳು ಮನುಷ್ಯ ಸೇರಿದಂತೆ ಇತರ ಪ್ರಾಣಿಗಳ ರಕ್ತವನ್ನೇ ಹೀರಿ ಬೆಳೆದು ಜೀವಿಸುತ್ತವೆ. ಪ್ರಿನ್ಸ್ ಟನ್ (Princeton) ವಿಶ್ವವಿದ್ಯಾಲಯ(University) ದ ವಿಜ್ಞಾನಿಗಳು ಸೊಳ್ಳೆಗಳ ರಕ್ತ ಹೀರುವ ಪರಿಪಾಠದ ಕುರಿತು ಅಚ್ಚರಿದಾಯಕ ಸಂಗತಿಯೊಂದನ್ನು ಹೇಳಿದ್ದಾರೆ. ಅವರ ಪ್ರಕಾರ, ಲಕ್ಷಾಂತರ ವರ್ಷಗಳ ಮೊದಲು ಸೊಳ್ಳೆಗಳು ಮನುಷ್ಯರ ರಕ್ತ ಹೀರುತ್ತಿರಲಿಲ್ಲ! ಮನುಷ್ಯನಷ್ಟೇ ಅಲ್ಲ, ಯಾವುದೇ ಜೀವಿಗಳ ರಕ್ತ ಹೀರುವ ಅಭ್ಯಾಸ ಸೊಳ್ಳೆಗಳಿಗೆ ಇರಲಿಲ್ಲ. ಆದರೆ, ಕಾಲಾನುಕ್ರಮದಲ್ಲಿ ಸೊಳ್ಳೆಗಳೂ ಬದಲಾಗಿವೆ. ಹವಾಮಾನ, ವಾತಾವರಣದಲ್ಲಾದ ಬದಲಾವಣೆಯಿಂದ ಸೊಳ್ಳೆಗಳು ಮಾನವರ ರಕ್ತ ಹೀರುವುದನ್ನು ಅಭ್ಯಾಸ ಮಾಡಿಕೊಂಡವು. ಹಾಗಿದ್ದಾಗ್ಯೂ ಎಲ್ಲ ಜಾತಿಯ ಸೊಳ್ಳೆಗಳು ಇತರ ಜೀವಿಗಳ ರಕ್ತ ಹೀರುವುದಿಲ್ಲ. ಕೆಲವೇ ಕೆಲವು ಜಾತಿಯ ಸೊಳ್ಳೆಗಳಷ್ಟೇ ರಕ್ತ ಹೀರುವುದನ್ನು ರೂಢಿಸಿಕೊಂಡಿವೆ. 

ಸೊಳ್ಳೆ ಕಾಟದಿಂದ ಮುಕ್ತಿ ಪಡೆಯೋದ ಹೇಗೆ?

ಪ್ರಿನ್ಸ್ ಟನ್ ವಿವಿ ವಿಜ್ಞಾನಿ(Scientists) ಗಳ ಪ್ರಕಾರ, ಚಿಕೂನ್ ಗುನ್ಯಾ, ಡೆಂಗ್ಯು, ಹಳದಿ ಜ್ವರ ಮುಂತಾದ ಮಾರಣಾಂತಿಕ ಜ್ವರಗಳನ್ನು ತರಬಲ್ಲ ಈಡೀಸ್ ಇಜಿಪ್ಟಿ ಸೊಳ್ಳೆಯ ಹಲವು ಪ್ರಭೇದಗಳು ಮನುಷ್ಯರನ್ನು ಹೆಚ್ಚು ಕಡಿಯುತ್ತವೆ. ಲಕ್ಷಾಂತರ ವರ್ಷಗಳ ಹಿಂದೆ ಸೊಳ್ಳೆಗಳಿಗೆ ವಾತಾವರಣದಲ್ಲೇ ಸಾಕಷ್ಟು ನೀರು, ಆಹಾರ ಲಭ್ಯವಾಗುತ್ತಿತ್ತು. ಆದರೆ, ವಾತಾವರಣ ಶುಷ್ಕವಾಗಿ, ನೀರಿಲ್ಲದೆ ಒಣಗಲು ಆರಂಭವಾದಾಗ ಅವು ದಾಹ ತೀರಿಸಿಕೊಳ್ಳಲು ಮನುಷ್ಯರು ಹಾಗೂ ಇತರ ಪ್ರಾಣಿಗಳ ರಕ್ತ ಹೀರಲು ಆರಂಭಿಸಿದವು. 

ಈಗಲೂ ನೀವು ಒಂದು ಅಂಶವನ್ನು ಗಮನಿಸಬಹುದು. ಒಣ (Dry) ಮತ್ತು ಸೆಖೆ (Heat) ಪ್ರದೇಶದಲ್ಲಿ ಸೊಳ್ಳೆಗಳು ಕಚ್ಚುವಷ್ಟು ಬೇರೆಡೆ ಕಚ್ಚುವುದಿಲ್ಲ. ಎಲ್ಲಿ ನೀರು (Water) ಚೆನ್ನಾಗಿರುತ್ತದೆಯೋ ಅಲ್ಲಿ ಸೊಳ್ಳೆಗಳಿಗೆ ಮನುಷ್ಯರ ರಕ್ತ ಹೆಚ್ಚು ಬೇಕಾಗುವುದಿಲ್ಲ. ನೀರಿನ ಕೊರತೆ ಇರುವ ಪ್ರದೇಶಗಳಲ್ಲಿ ಅವುಗಳ ಪ್ರಹಾರ ಹೆಚ್ಚು. ತಮ್ಮ ದೇಹಕ್ಕೆ ಬೇಕಾದ ದ್ರವಾಹಾರ ಪೂರೈಸಿಕೊಳ್ಳುವುದೊಂದೇ ಅವುಗಳ ಗುರಿಯೇ ಹೊರತು ನಿಮ್ಮನ್ನು ಕಚ್ಚುವುದಲ್ಲ.
ರಾತ್ರಿಯ ಸೊಳ್ಳೆಗಳ ನಾದಕ್ಕೆ ನಿದ್ರೆ ಎನ್ನುವುದು ದೂರವಾಗುತ್ತದೆ. ನಿದ್ರೆ ಮಾತ್ರವಲ್ಲ, ಸೊಳ್ಳೆ ಕಡಿತದಿಂದ ಆರೋಗ್ಯವೂ ಅಪಾಯಕ್ಕೆ ಸಿಲುಕುತ್ತದೆ. ಹೀಗಾಗಿ, ಸೊಳ್ಳೆಗಳ ನಿಯಂತ್ರಣಕ್ಕೆ ಮುಂದಾಗುವುದರ ಜತೆಗೆ, ಅವುಗಳಿಂದ ನಮ್ಮನ್ನು ರಕ್ಷಿಸಿಕೊಳ್ಳುವುದು ಸಹ ಮುಖ್ಯ. ಮುಖ್ಯವಾಗಿ, ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು. ರಾತ್ರಿ ಮಲಗುವಾಗ ಸೊಳ್ಳೆ ಪರದೆ(Net)ಯನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು. ಸಂಜೆಯ ಸಮಯದಲ್ಲಿ ಸೊಳ್ಳೆ ಮನೆ ಪ್ರವೇಶಿದಂತೆ ನೋಡಿಕೊಳ್ಳಬೇಕು.

ಉಲ್ಟಾ ಹೊಡೀತು ಚೀನಾದ ಗ್ರೀನ್ ಹೌಸ್ ಎಫೆಕ್ಟ್?