Asianet Suvarna News Asianet Suvarna News

ವರ್ಷದೊಳಗಿನ ಮಗುವಿಗೆ ಜೇನುತುಪ್ಪ ಕೊಡಬಹುದಾ?

ಜೇನುತುಪ್ಪ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಇಷ್ಟಪಡುತ್ತಾರೆ. ಅಲ್ಲದೆ ಆರೋಗ್ಯಕ್ಕೂ ಬಹಳ ಉಪಕಾರಿಯಾಗಿದ್ದು, ಬೆಳಗ್ಗೆ ನೀರಿನೊಂದಿಗೆ ಒಂದು ಸ್ಪೂನ್ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ತೂಕ ಕಡಿಮೆಯಾಗುತ್ತದೆ. ಇದು ದೊಡ್ಡವರಿಗೆ, ಆದರೆ ಮಕ್ಕಳಿಗೆ ಜೇನುತುಪ್ಪ ಯಾವ ವಯಸ್ಸಿನಲ್ಲಿ ಪರಿಚಯಿಸಬೇಕು? ಎಷ್ಟು ಪ್ರಮಾಣದಲ್ಲಿ ಕೊಡಬೇಕು? ಜೇನುತುಪ್ಪ ಹೆಚ್ಚಿನ ಪ್ರಮಾಣದಲ್ಲಿ ಕೊಟ್ಟರೆ ಒಳ್ಳೆಯದೇ? ಎಂಬುದದರ ಬಗ್ಗೆ ಇಲ್ಲಿದೆ ಮಾಹಿತಿ.

Why Babies cant have Honey how it affect on thier health
Author
Bangalore, First Published Jul 14, 2022, 4:54 PM IST

ಶುದ್ಧ ಜೇನುತುಪ್ಪ ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನುತ್ತಾರೆ. ಅದು ನಿಜ. ಆದರೆ ಅತಿಯಾಗಿ ಸೇವಿಸಿದರೂ ಆರೋಗ್ಯ ಕೆಡಿಸುತ್ತದೆ. ಮಿತವಾಗಿ ಬಳಸಿದರೆ ಅದರ ಪ್ರಯೋಜನ ಪಡೆಯಬಹುದು. ಮಕ್ಕಳಿಗೆ ಜೇನುತುಪ್ಪ ಳ್ಳೆಯದೇ, ಆದರೆ ಅದನ್ನು ನೀಡುವ ಪ್ರಮಾಣದ ಮೇಲೆ ನಿಂತಿರುತ್ತದೆ. 6 ತಿಂಗಳ ಒಳಗಿನ ಶಿಶುಗಳಿಗೆ ಜೇನುತುಪ್ಪ ನೀಡುವುದು ಅಪಾಯಕಾರಿ ಎನ್ನಲಾಗುತ್ತದೆ. ಏಕೆ ಇಲ್ಲಿದೆ ಮಾಹಿತಿ.

ಶಿಶುಗಳು ಬಹಳ ಸೂಕ್ಷö್ಮವಾಗಿರುತ್ತಾರೆ. ಹೊರಗಿನ ವಾತಾವರಣಕ್ಕೆ ಹೊಂದುಕೊಳ್ಳಲು ಅವುಗಳಿಗೆ ಸಮಯ ಬೇಕಾಗುತ್ತದೆ. ಅಲ್ಲದೆ ಅವರಿಗೆ ನೀಡುವ ಆಹಾರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಜೇನುತುಪ್ಪ ನೀಡಬೇಕೋ ಬೇಡವೋ ಎಂಬುದು ಹಲವರ ಪ್ರಶ್ನೆ. 12 ತಿಂಗಳೊಳಗಿನ ಶಿಶುಗಳಿಗೆ ಎಂದಿಗೂ ಜೇನುತುಪ್ಪವನ್ನು ನೀಡಬಾರದು. ಏಕೆಂದರೆ ಇದರಲ್ಲಿ ಶಿಶುವಿನಲ್ಲಿ ಆಗತಾನೆ ಬೆಳವಣಿಗೆ ಹಂತದಲ್ಲಿರುವ ಜೀರ್ಣಾಂಗ ವ್ಯವಸ್ಥೆಯನ್ನು ನಿಭಾಯಿಸಲು ಸಾಧ್ಯವಾಗದ ಬ್ಯಾಕ್ಟೀರಿಯಾವನ್ನು ಹೊಂದಿರಬಹುದು. ಈ ಬ್ಯಾಕ್ಟೀರಿಯಾಗಳು ಮಕ್ಕಳು ಮತ್ತು ವಯಸ್ಕರಿಗೆ ಹಾನಿಕಾರಕವಲ್ಲ. ಒಂದು ವೇಳೆ ಶಿಶುವಿಗೆ ನೀಡಿದರೆ ಆ ಬ್ಯಾಕ್ಟೀರಿಯಾಗಳು(Bacteria) ಹೊಟ್ಟೆಯಲ್ಲೇ ಹೆಚ್ಚಾಗಬಹುದು ಮತ್ತು ವಿಷವನ್ನು(Toxin) ಉತ್ಪಾದಿಸಬಹುದು. ಇದು ಶಿಶುವಿನಲ್ಲಿ ಬೊಟುಲಿಸಮ್ ಎಂಬ ಗಂಭೀರ ಕಾಯಿಲೆಗೆ ಕಾರಣವಾಗಬಹುದು. 

ಇದನ್ನೂ ಓದಿ:  ಜೇನುತಪ್ಪು ಅಸಲಿಯೇ, ನಕಲಿಯೇ? 

ನಿಮ್ಮ ಮಗುವಿಗೆ ಒಂದು ವರ್ಷವಾಗಿದ್ದರೂ ಜೇನುತುಪ್ಪ ನೀಡುವುದು ಉತ್ತಮವಲ್ಲ. ಏಕೆಂದರೆ ಅದು ಎಷ್ಟೇ ನೈಸರ್ಗಿಕವಾಗಿದ್ದರೂ ಜೇನುತುಪ್ಪವು ಸಕ್ಕರೆಯೇ ಎಂಬುದು ನೆನಪಿನಲ್ಲಿಡಿ. ಹಾಗಾಗಿ ಸಾಧ್ಯವಾದಷ್ಟು ಕಾಲ ಅದನ್ನು ತಪ್ಪಿಸುವ ಅಥವಾ ನೀಡುವ ಪ್ರಮಾಣವನ್ನು ಮಿತಗೊಳಿಸುವುದರ ಮೂಲಕ ಹಲ್ಲಿನ ಕೊಳೆಯುವಿಕೆಯಂತಹ ಅಪಾಯ ಕಡಿಮೆ ಮಾಡಬಹುದು.

ಜೇನುತುಪ್ಪ ಯಾವಾಗ ಕೊಡಬೇಕು
ಮಗುವಿಗೆ ಒಂದು ವರ್ಷ ಪೂರೈಸಿದ ನಂತರವಷ್ಟೇ ಜೇನುತುಪ್ಪ ಕೊಡಬೇಕು. ಹೀಗೆ ಕೊಡುವಾಗ ಸ್ವಲ್ಪವೇ ಕೊಡುತ್ತ ಕ್ರಮೇಣ ಪ್ರಮಾಣವನ್ನು ಏರಿಸಬೇಕು. ಈ ಸಮಯದಲ್ಲಿ ಮಗುವಿನ ಜೀರ್ಣಾಂಗ ವ್ಯವಸ್ಥೆಯು ಅಭಿವೃದ್ಧಿ ಹೊಂದಿರುತ್ತದೆ ಹಾಗೂ ಜೇನುತುಪ್ಪದಲ್ಲಿರು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಶಕ್ತಿಯನ್ನೂ ಹೊಂದಿರುತ್ತವೆ. 

ಜೇನುತುಪ್ಪ ಸೇವಿಸಿದರೆ ಏನಾಗುತ್ತೆ
ಜೇನುತುಪ್ಪ ಸೇವಿಸಿದರೆ ಶಿಶುವಿಗೆ ಬೊಟುಲಿಸಮ್ ಕಾಣಿಸಿಕೊಳ್ಳುತ್ತದೆ. ಇದು ಕೆಲವು ದಿನಗಳ ನಂತರ ಕಾಣಿಸಿಕೊಳ್ಳಬಹುದು. ಆಲಸ್ಯ, ಮಲಬದ್ಧತೆ(Constipation), ಕಳಪೆ ಹಸಿವು, ಉಸಿರಾಟದ ತೊಂದರೆ, ನುಂಗಲು ತೊಂದರೆ, ದೇಹದ ವೀಕ್‌ನೆಸ್ ಮತ್ತು ದುರ್ಬಲಗೊಂಡ ಸ್ನಾಯುವಿನ ನಿಯಂತ್ರಣ ಇದರ ಲಕ್ಷಣಗಳು. ತೀವ್ರತರವಾದ ಪ್ರಕರಣಗಳು ನಿರ್ಜಲೀಕರಣ ಮತ್ತು ನ್ಯುಮೋನಿಯಾಕ್ಕೆ(Pneumonia) ಕಾರಣವಾಗಬಹುದು. 

ಇದನ್ನೂ ಓದಿ: ತೆಳ್ಳಗಾಗಬೇಕೆಂದು ಜೇನುತುಪ್ಪ, ಬಿಸಿನೀರು ಸೇವಿಸುತ್ತೀರಾ?

ಜೀರ್ಣಶಕ್ತಿ ಹೇಗೆ ಕೆಲಸ ಮಾಡುತ್ತೆ
ಶಿಶುಗಳು ಜೀರ್ಣಾಂಗ ವ್ಯವಸೈಯ ಪರಿಪಕ್ವತೆಯಿಂದಾಗಿ ಕ್ಲೋಸ್ಟಿçಡಿಯಮ್ ಬ್ಯಾಕ್ಟೀರಿಯಾವನ್ನು(Clostridium Bacteria) ನಿಭಾಯಿಸಲು ಸಾಧ್ಯವಿಲ್ಲ. ಮೊದಲ ವರ್ಷದಲ್ಲಿ ಮಗುವಿನ ಜೀರ್ಣಾಂಗ ವ್ಯವಸ್ಥೆಯು ಇನ್ನೂ ಅಭಿವೃದ್ಧಿ ಹೊಂದುತ್ತಿರುತ್ತದೆ. ಹಾಗಾಗಿ ಮಗುವನ್ನು ರಕ್ಷಿಸಲು ಜೇನುತುಪ್ಪವನ್ನು ನೀಡುವುದು ಈ ಸಮಯದಲ್ಲಿ ಒಳ್ಳೆಯದಲ್ಲ. 

ಯಾವ ಆಹಾರ ನೀಡಿದರೆ ಒಳ್ಳೆಯದು
ಶಿಶುವಿಗೆ ವರ್ಷ ಆಗುವವರೆಗೂ ಜೇನುತುಪ್ಪದಿಂದ ದೂರವಿಡಿ. ಇದರ ಬದಲು ಪೌಷ್ಟಿಕಾಂಶಗಳು, ಬಾಳೆಹಣ್ಣು, ಸಿಹಿ ಗೆಣಸಿನಂತಹ ಆಹಾರಗಳನ್ನು ಬೇಯಿಸಿ ಕೊಡುವುದು ಒಳ್ಳೆಯದು. ಇದು ಮಗುವಿನ ಬೆಳವಣಿಗೆ, ಜೀರ್ಣಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ.  

ವರ್ಷದ ನಂತರ ಮಗುವಿಗೆ ಜೇನುತುಪ್ಪ ನೀಡಿದರೆ ಅದರ ಪ್ರಯೋಜನಗಳು
ಎರಡು ವರ್ಷದ ನಂತರದ ಮಕ್ಕಳಿಗೆ ಜೇನುತುಪ್ಪವನ್ನು ಆಹಾರದಲ್ಲಿ ಅಥವಾ ಪಾನಿಯಗಳಲ್ಲಿ ನೀಡುವುದು ಒಳ್ಳೆಯದು. ಇದು ನೈಸರ್ಗಿಕವಾಗಿ ಸಿಹಿಯಾಗಿರುವುದಲ್ಲದೆ, ಮೆಡಿಸಿನ್ ರೂಪದಲ್ಲಿ ಇದನ್ನು ಸೇವಿಸಲಾಗುತ್ತದೆ. ದೇಹಕ್ಕೆ ಚೈತನ್ಯದ ಜೊತೆಗೆ ಶಕ್ತಿಯನ್ನು ಒದಗಿಸುತ್ತದೆ.
ಕೆಮ್ಮು ನಿವಾರಿಸುತ್ತದೆ
ಸಾಮಾನ್ಯವಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕೆಮ್ಮಿಗೆ ಉತ್ತಮ ಚಿಕಿತ್ಸೆ ನೀಡುತ್ತದೆ. ಅಲ್ಲದೆ ಅರೆನಿದ್ರಾವಸ್ಥೆ ಮತ್ತು ನಿದ್ರಾಹೀನತೆಯನ್ನು ಕಡಿಮೆ ಮಾಡುತ್ತದೆ. ಕೆಮ್ಮಿರುವಾಗ ಮೂರು ದಿನಗಳವರೆಗೆ ಒಂದು ಸ್ಪೂನ್‌ನಷ್ಟು ಜೇನುತುಪ್ಪ ನೀಡಬೇಕು ಇದರಿಂದ ಕೆಲ ದಿನಗಳಲ್ಲಿ ಕೆಮ್ಮು ನಿವಾರಣೆಯಾಗುತ್ತದೆ.

Follow Us:
Download App:
  • android
  • ios