Asianet Suvarna News Asianet Suvarna News

Yoga Mat History: ಯೋಗ ಮ್ಯಾಟ್ ಬಳಕೆ ಶುರು ಮಾಡಿದ್ದು ಯಾರು ?

ಅನೇಕರು ಪ್ರತಿ ದಿನ ಯೋಗ ಮಾಡ್ತಾರೆ. ಯೋಗ ಮಾಡಲು ರಬ್ಬರ್ ಮ್ಯಾಟ್ ಬಳಸ್ತಾರೆ. ಮಾರುಕಟ್ಟೆಯಲ್ಲಿ ಬೇರೆ ಬೇರೆ ಬಗೆಯ ಮ್ಯಾಟ್ ಲಭ್ಯವಿದೆ. ಆದ್ರೆ ಒಮ್ಮೆಯಾದ್ರೂ ಯೋಗ ಮ್ಯಾಟ್ ಯಾರು ಶುರು ಮಾಡಿದ್ದು ಎನ್ನುವ ಬಗ್ಗೆ ಆಲೋಚನೆ ಮಾಡಿದ್ದೀರಾ?  
 

Who Invented Yoga Mats Know Its History and signficiance
Author
Bangalore, First Published Jun 20, 2022, 2:56 PM IST

ಪ್ರತಿ ವರ್ಷ ಜೂನ್ (June) 21 ರಂದು ಅಂತರಾಷ್ಟ್ರೀಯ ಯೋಗ ದಿನ (International Yoga Day) ವನ್ನು ಆಚರಿಸಲಾಗುತ್ತದೆ. ಯೋಗ  ದೇಹ ಮತ್ತು ಮನಸ್ಸಿನ ಆರೋಗ್ಯ (Health)ಕ್ಕೆ ಪ್ರಯೋಜನಕಾರಿ. ಯೋಗವನ್ನು ಪ್ರಪಂಚದಾದ್ಯಂತ ಹರಡಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಯೋಗ ಮಾಡುವಾಗ ಕೆಲ ಸೌಲಭ್ಯಗಳ ಅಗತ್ಯತೆಯಿರಿತ್ತದೆ. ಅದ್ರಲ್ಲಿ ಯೋಗ ಮ್ಯಾಟ್ (Mat) ಕೂಡ ಒಂದು.  ಪ್ರಾಚೀನ ಕಾಲದಲ್ಲಿ, ಸನ್ಯಾಸಿಗಳು ಮತ್ತು ಸಂತರು ಯೋಗ ಮ್ಯಾಟ್‌ ಬಳಸುತ್ತಿರಲಿಲ್ಲ. ಆದರೆ ಈಗ ಯೋಗಾಭ್ಯಾಸ ಮಾಡುವವರು ಯೋಗ ಮ್ಯಾಟ್ ಹೊಂದುವುದು ಅನಿವಾರ್ಯವಾಗಿದೆ. ಆದರೆ ಯೋಗ ಮ್ಯಾಟ್‌ ಹೇಗೆ ಬಂತು ಎಂಬ ಇತಿಹಾಸ ನಿಮಗೆ ಗೊತ್ತಾ? ಇದು ಯೋಗ ಮ್ಯಾಟ್ ಬಗ್ಗೆ ನಾವು ಹೇಳ್ತೇವೆ.   

ಯೋಗ ಮ್ಯಾಟ್ ಎಂದರೇನು ? : ನಿಯಮಿತವಾಗಿ ಯೋಗ  ಮಾಡುವವರಿಗೆ ಯೋಗ ಮ್ಯಾಟ್ ಅಗತ್ಯವಿದೆ. ಜಾರದಂತೆ ಹಾಗೂ ಬಿದ್ದು ಗಾಯವಾಗದಂತೆ ನಮ್ಮನ್ನು ಮ್ಯಾಟ್ ರಕ್ಷಿಸುತ್ತದೆ.  ದೀರ್ಘಕಾಲದವರೆಗೆ ಸಮತೋಲನದಲ್ಲಿರಲು ಯೋಗ ಮ್ಯಾಟ್‌ಗಳು ಸಹ ಸೂಕ್ತ. ಯೋಗ ಮ್ಯಾಟ್ ಗಳನ್ನು ರಬ್ಬರ್, ಹತ್ತಿ ಬಟ್ಟೆಯಿಂದ ತಯಾರಿಸಲಾಗುತ್ತದೆ. ಅದು ತೆಳು ಹಾಗೂ ದಪ್ಪ ಎರಡೂ ರೂಪದಲ್ಲಿ ಲಭ್ಯವಿದೆ.

YOGA DAY: ಅಷ್ಟಾಂಗ ಯೋಗಕ್ಕೆ ವೈಜ್ಞಾನಿಕ ಚೌಕಟ್ಟು ಸೃಷ್ಟಿಸಿದ ಕೀರ್ತಿ ಮೈಸೂರಿನದು  

ಯೋಗ ಮ್ಯಾಟ್ಸ್ ಇತಿಹಾಸ : ಋಷಿಗಳ ಕಾಲದಲ್ಲೇ ಯೋಗ ಆರಂಭವಾಗಿತ್ತು. ಸಾಧುಗಳು ಮತ್ತು ಸಂತರು ಬೆಟ್ಟಗಳು, ಹಿಮಾಲಯ,  ಕಾಡುಗಳು ಮತ್ತು ಗುಹೆ ಸೇರಿದಂತೆ ಅನೇಕ ಕಡೆ ಯೋಗ ಮಾಡುತ್ತಿದ್ದರು. ಆದರೆ ಆ ಸಮಯದಲ್ಲಿ ಯೋಗ ಮ್ಯಾಟ್ಸ್ ಇರಲಿಲ್ಲ. ಮೈದಾನದಲ್ಲಿಯೇ ಯೋಗ ಮಾಡುತ್ತಿದ್ದರು. 1970 ರ ದಶಕದಲ್ಲಿ  ಜನರು ಯೋಗ ಮಾಡಲು ರಗ್ಗು ಅಥವಾ ಚಾಪೆಗಳನ್ನು ಬಳಸುತ್ತಿದ್ದರು. ಇದ್ರ ಜೊತೆ ಜನರು ಯೋಗ ಮಾಡಲು ನೆಲದ ಮೇಲೆ ಕಾರ್ಪೆಟ್ ಹಾಸುತ್ತಿದ್ದರು. ನಂತ್ರ ರಬ್ಬರ್ ಮ್ಯಾಟ್ ಬಂತು. ಆದ್ರೆ ಯೋಗಕ್ಕೆ ಈ ಮ್ಯಾಟ್ ಅಗತ್ಯವಿದೆ ಎಂಬುದನ್ನು ಯಾರು ಕಂಡು ಹಿಡಿದ್ರು ಗೊತ್ತಾ?  

ಯೋಗ ಮ್ಯಾಟ್‌ ಹಿನ್ನೆಲೆ :  ಮೊಟ್ಟ ಮೊದಲ ಬಾರಿಗೆ ಯೋಗ ಮ್ಯಾಟ್‌ನ ಅಗತ್ಯವನ್ನು ಯೋಗ ಗುರು ಬಿ.ಕೆ.ಎಸ್. ಅಯ್ಯಂಗಾರ್ ಅವರು ಅರಿತುಕೊಂಡರು. ಈ ಹಿಂದೆ ಇವರು ಕೂಡ ಇತರರಂತೆ ನೆಲದ ಮೇಲೆ ಕಂಬಳಿ ಹಾಸಿಕೊಂಡು ಯೋಗ ಮಾಡುತ್ತಿದ್ದರು. ಆದರೆ 1960 ರಲ್ಲಿ ಯೋಗ ಗುರು ಬಿ.ಕೆ.ಎಸ್. ಅಯ್ಯಂಗಾರ್ ಯೋಗ ತರಗತಿಗಳನ್ನು ತೆಗೆದುಕೊಳ್ಳಲು ಯುರೋಪ್ ದೇಶಗಳಿಗೆ ಹೋಗ್ತಿದ್ದರು. ಈ ವೇಳೆ ಅಲ್ಲಿನ ವಿದ್ಯಾರ್ಥಿಗಳು ನೆಲೆದ ಮೇಲೆ ಯೋಗ ಮಾಡಲು ಕಷ್ಟಪಡ್ತಿದ್ದರು. ಬರಿಗಾಲಿನಲ್ಲಿ, ನೆಲದ ಮೇಲೆ ಅವರಿಗೆ ಯೋಗ ಮಾಡಲು ಸಾಧ್ಯವಾಗ್ತಿರಲಿಲ್ಲ. ಭಾರತದಲ್ಲಿ ಯೋಗ ಮಾಡುವಾಗ ಈ ಸಮಸ್ಯೆ ಕಾಡ್ತಿರಲಿಲ್ಲ. ಏಕೆಂದರೆ ಇಲ್ಲಿನ ನೆಲ ಅಷ್ಟಾಗಿ ಜಾರುತ್ತಿರಲಿಲ್ಲ. ಆದರೆ ಹೊರ ದೇಶಗಳ ವಿವಿಧ ರೀತಿಯ ನೆಲದ ಮೇಲೆ ಯೋಗ ಮಾಡುವುದು ಕಷ್ಟವಾಗಿತ್ತು. ಒಮ್ಮೆ ಯೋಗ ಗುರುಗಳು ಜರ್ಮನಿಯಲ್ಲಿ ಯೋಗ ಮಾಡುವ ವೇಳೆ ಜಾರಿ ಬೀಳ್ತಿದ್ದರು. ಆದ್ರೆ ಕಾರ್ಪೆಟ್ ಕೆಳಗೆ ಹಾಕಿದ್ದ ರಬ್ಬರ್ ಮ್ಯಾಟ್ ಅವರನ್ನು ರಕ್ಷಿಸಿತ್ತು.  ಆ ನಂತ್ರವೇ ಅವರು ರಬ್ಬರ್ ಮ್ಯಾಟ್ ಬಳಸಲು ಶುರು ಮಾಡಿದ್ರು.  

ಜರ್ಮನಿಯಲ್ಲಿ ಸಿದ್ಧವಾಯ್ತು ಮೊದಲ ಯೋಗ ಮ್ಯಾಟ್ : ಈ ರಬ್ಬರ್ ಮ್ಯಾಟ್ ಮೊದಲು ಹಸಿರು ಬಣ್ಣದ್ದಾಗಿತ್ತು.  ಜಾರದಂತೆ ಅದು ರಕ್ಷಣೆ ನೀಡ್ತಿದ್ದ ಕಾರಣ ಅದನ್ನು ಸ್ಟಿಕ್ಕಿ ಮ್ಯಾಟ್ ಎಂದು ಕರೆಯುತ್ತಿದ್ದರು. ಯುಕೆ ವಿದ್ಯಾರ್ಥಿಗಳು ರಬ್ಬರ್ ಮ್ಯಾಟ್‌ಗಳನ್ನು ಜರ್ಮನಿಯಿಂದ ಮೊದಲು ಖರೀದಿಸಿದ್ದರು. 

Yoga Day: ಗರ್ಭಿಣಿ ಈ ತಿಂಗಳಲ್ಲಿ ಯೋಗಾಭ್ಯಾಸ ಶುರು ಮಾಡಿದ್ರೆ ಆರೋಗ್ಯಕ್ಕೊಳ್ಳೆಯದು

ವಿದೇಶದಲ್ಲಿ ರಬ್ಬರ್ ಮ್ಯಾಟ್ : ಆಗ ಜರ್ಮನಿಯು ಯೋಗ ಮ್ಯಾಟ್‌ಗಳ ಪ್ರಮುಖ ಉತ್ಪಾದಕ ದೇಶವಾಗಿತ್ತು. ಯುಕೆ, ಯುರೋಪ್ ಮತ್ತು ಅಮೆರಿಕದಂತಹ ದೇಶಗಳಲ್ಲಿ ಯೋಗ ಮ್ಯಾಟ್‌ಗಳ ಬಳಕೆ ಪ್ರಾರಂಭವಾಗ್ತಿದ್ದಂತೆ ಬೇಡಿಕೆ ಹೆಚ್ಚಾಗಿತ್ತು. ಆದ್ರೆ ಭಾರತದಲ್ಲಿ ಮ್ಯಾಟ್ ಬಳಸ್ತಿರಲಿಲ್ಲ. ಆದರೆ ವಿದೇಶಿ ವಿದ್ಯಾರ್ಥಿಗಳು ಯೋಗ ಕಲಿಯಲು ಭಾರತಕ್ಕೆ ಬಂದಾಗ ಪುಣೆಯಲ್ಲಿಯೇ ಚಾಪೆ ಬಿಟ್ಟಿದ್ದರು. ಭಾರತದಲ್ಲಿ ಈ ಚಾಪೆಗಳನ್ನು ಸಂರಕ್ಷಿಸಲಾಗಿದೆ. ಕಳೆದ 20 ವರ್ಷಗಳಿಂದ ಹೆಚ್ಚಿನ ಮ್ಯಾಟ್ಸ್ ಅನ್ನು ಜರ್ಮನಿ, ಯುಎಸ್ಎ ಮತ್ತು ಚೀನಾದಲ್ಲಿ ತಯಾರಿಸಲಾಗುತ್ತದೆ.  ಮ್ಯಾಟ್‌ಗಳ ಅಗತ್ಯ ಹೆಚ್ಚಾದಂತೆ, ನೈಕ್ ಮತ್ತು ರೀಬಾಕ್‌ನಂತಹ ಕಂಪನಿಗಳು ಮ್ಯಾಟ್ ತಯಾರಿ ಶುರು ಮಾಡಿವೆ. ಭಾರತ, ಯೋಗ ಗುರು ಎನಿಸಿಕೊಂಡಿದೆ. ಯೋಗ ಮ್ಯಾಟ್‌ಗಳ ಅಗತ್ಯವನ್ನು ಬಿ.ಕೆ.ಎಸ್. ಅಯ್ಯಂಗಾರ್ ಅವರು ಮನಗಂಡು ಅದರ ಬಳಕೆ ಶುರು ಮಾಡಿದ್ದಾರೆ. ಇಷ್ಟಾದ್ರೂ ಭಾರತದಲ್ಲಿ ಇನ್ನೂ ಯೋಗ ಮ್ಯಾಟ್‌ಗಳನ್ನು ತಯಾರಿಸಲಾಗಿಲ್ಲ. ಮೊದಲ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚೀನಾದಿಂದ ಯೋಗ ಮ್ಯಾಟ್‌ಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಭಾರತ 92 ಲಕ್ಷ ರೂಪಾಯಿ ಖರ್ಚು ಮಾಡಿದೆ.

Who Invented Yoga Mats Know Its History and signficiance

 

Follow Us:
Download App:
  • android
  • ios