Asianet Suvarna News Asianet Suvarna News

Baby Care: ಮಕ್ಕಳಿಗೆ ಜ್ವರ ಬಂದಿಲ್ಲ, ತಲೆ ಬಿಸಿಯಾದ್ರೆ ಏನ್ಮಾಡ್ಬೇಕು?

ಅನೇಕ ಬಾರಿ ಮಕ್ಕಳ ತಲೆ ಮಾತ್ರ ಬಿಸಿಯಾಗಿರುತ್ತದೆ. ಅವರ ದೇಹ ತಣ್ಣಗಿರುತ್ತದೆ. ಇದು ಪಾಲಕರ ಟೆನ್ಷನ್ ಹೆಚ್ಚಿಸುತ್ತದೆ. ಇದಕ್ಕೆ ಹೆಚ್ಚು ಆತಂಕಪಟ್ಟುಕೊಳ್ಳಬೇಕಾಗಿಲ್ಲ. ಕೆಲ ಟಿಪ್ಸ್ ಫಾಲೋ ಮಾಡಿದ್ರೆ ಸಾಕು. 
 

What You Should Do When Baby Head Warm But Body Temperature Is Normal
Author
First Published Sep 30, 2022, 3:16 PM IST

ಮಕ್ಕಳ ಆರೋಗ್ಯದ ಬಗ್ಗೆ ಪಾಲಕರು ಹೆಚ್ಚು ಗಮನ ನೀಡ್ತಾರೆ. ಮಕ್ಕಳ ದೇಹದಲ್ಲಿ ಸ್ವಲ್ಪ ಬದಲಾವಣೆ ಕಂಡ್ರೂ ಆಸ್ಪತ್ರೆಗೆ ಕರೆದುಕೊಂಡು ಬರೋರಿದ್ದಾರೆ. ಮತ್ತೆ ಕೆಲವರು ಮನೆ ಮದ್ದುಗಳ ಪ್ರಯೋಗ ಮಾಡ್ತಾರೆ. ಸಾಮಾನ್ಯವಾಗಿ ಸಣ್ಣ ಮಕ್ಕಳ ತಲೆ ಬಿಸಿಯಾಗೋದನ್ನು ನೀವು ಗಮನಿಸಿರಬಹುದು. ಥರ್ಮಾಮೀಟರ್ ನಲ್ಲಿ ನೋಡಿದ್ರೆ ಜ್ವರ ಇರೋದಿಲ್ಲ. ಆದ್ರೆ ತಲೆ ಮಾತ್ರ ಬಿಸಿಯಾಗಿರುತ್ತದೆ. ಪಾಲಕರು ಈ ಸಂದರ್ಭದಲ್ಲಿ ಆತಂಕಕ್ಕೊಳಗಾಗ್ತಾರೆ. ಮಕ್ಕಳ ತಲೆ ಬಿಸಿಯಾಗಿದೆ ಅಂತಾ ಟೆನ್ಷನ್ ಮಾಡಿಕೊಳ್ಳಬೇಕಾಗಿಲ್ಲ. ಆದ್ರೆ ಅದಕ್ಕೆ ಪಾಲಕರು ಟೆನ್ಷನ್ ಮಾಡಿಕೊಳ್ಳಬೇಕಾಗಿಲ್ಲ. ಮಕ್ಕಳ ತಲೆ ಬಿಸಿಯಾಗಲು ಅನೇಕ ಕಾರಣವಿದೆ.

ಮಗು (Child) ವಿರುವ ಕೊಠಡಿ ಬಿಸಿಯಾಗಿದ್ದರೆ ಮಗುವಿನ ತಲೆ ಬಿಸಿಯಾಗುವ ಸಾಧ್ಯತೆಯಿದೆ. ಶುಷ್ಕ (Dry) ವಾತಾವರಣದಲ್ಲಿ ಈ ಸಮಸ್ಯೆ ಮಕ್ಕಳಿಗೆ ಕಾಡುತ್ತದೆ. ಮಕ್ಕಳಿಗೆ ಹವಾಮಾನಕ್ಕೆ ತಕ್ಕಂತೆ ಬಟ್ಟೆ ಹಾಕ್ಬೇಕು. ಇಲ್ಲವೆಂದ್ರೆ ಅವರ ತಲೆ ಬಿಸಿಯಾಗುವ ಸಾಧ್ಯತೆ ಇರುತ್ತದೆ. ಅಂದ್ರೆ ಚಳಿಗಾಲ (winter) ದಲ್ಲಿ ಮಗುವಿಗೆ ಟೋಪಿ ಹಾಕಿದಾಗ ದೇಹದ ಉಳಿದ ಭಾಗಗಳಿಗಿಂತ ತಲೆ ಭಾಗ ಹೆಚ್ಚು ಬಿಸಿಯಾಗಿರುತ್ತದೆ.  

ಇದ್ರ ಜೊತೆಗೆ ಹವಾಮಾನವು ಬಿಸಿಯಾಗಿದ್ದಾಗ ಅಥವಾ ಮಕ್ಕಳ ತಲೆ ಮೇಲೆ ಸೂರ್ಯನ ಕಿರಣ ಬಿದ್ದಾಗ ಮಕ್ಕಳ ತಲೆ ಬಿಸಿಯಾಗುತ್ತದೆ. ಅಂದ್ರೆ ಮಗುವಿಗೆ ಜ್ವರ ಬಂದಿದೆ ಎಂದಲ್ಲ. ಮಗು ಬೆನ್ನಿನ ಮೇಲೆ ಅನೇಕ ಸಮಯ ಮಲಗಿದ್ದರೂ ತಲೆ ಬೆಚ್ಚಗಾಗುತ್ತದೆ.  ಮಕ್ಕಳಿಗೆ ಹಲ್ಲು ಬರುವಾಗ ಕೂಡ ಸಾಮಾನ್ಯಕ್ಕಿಂತ ದೇಹದ ಬಿಸಿ ಹೆಚ್ಚಾಗುತ್ತದೆ. ಮಕ್ಕಳ ದೇಹ ತಣ್ಣಗಿದ್ದು, ತಲೆ ಬೆಚ್ಚಗಿದೆ ಎಂದ್ರೆ ನೀವು ಕೆಲ ಉಪಾಯಗಳನ್ನು ಮಾಡಬಹುದು.

ಕಪ್ಪು ಬೆಳ್ಳುಳ್ಳಿ ಬಗ್ಗೆ ನೀವು ಕೇಳಿದ್ದೀರಾ? ಆರೋಗ್ಯಕ್ಕೆಷ್ಟು ಒಳ್ಳೇದು ಅಂತ ನಾವು ಹೇಳ್ತೀವಿ ಕೇಳಿ

ಮಕ್ಕಳ ಬಟ್ಟೆ ಮೇಲಿರಲಿ ಗಮನ : ಹವಾಮಾನ ನೋಡಿಕೊಂಡು ಮಕ್ಕಳಿಗೆ ಬಟ್ಟೆಯನ್ನು ಹಾಕಬೇಕು. ಹವಾಮಾನ ಬಿಸಿ ಅಥವಾ ಶುಷ್ಕವಾಗಿದ್ದರೆ ನೀವು ಮಕ್ಕಳ ದೇಹ ತಂಪಾಗುವ ಬಟ್ಟೆ ಹಾಕಬೇಕು. ಹವಾಮಾನ 23 ° Cಗಿಂತ ಹೆಚ್ಚಿದ್ದರೆ ಅದು ಮಕ್ಕಳಿಗೆ ಬಿಸಿ ವಾತಾವರಣ ಎನ್ನಬಹುದು. ಬಿಸಿ ವಾತಾವರಣದಲ್ಲಿ ಟೋಪಿ ಹಾಕಬೇಡಿ. ಕಾಟನ್ ಬಟ್ಟೆ ಹಾಕಿ, ಸಡಿಲ ಡೈಪರ್ ಹಾಕಿ. 

ಕೋಣೆ ಉಷ್ಣಾಂಶ (Room Temperature) ಚೆಕ್ ಮಾಡಿ : ಮಕ್ಕಳು ಯಾವ ಕೋಣೆಯಲ್ಲಿರ್ತಾರೆ ಅದು ಕೂಡ ಅವರ ತಲೆ ಬಿಸಿಗೆ ಕಾರಣವಾಗಬಹುದು. ಹಾಗಾಗಿ ಮಕ್ಕಳಿರುವ ಕೋಣೆ ಉಷ್ಣತೆಯನ್ನು ಗಮನಿಸಿ. ಕೋಣೆಯ ಉಷ್ಣಾಂಶ 18 ರಿಂದ 21 ° Cಯಷ್ಟಿರಬೇಕು. ಸುತ್ತಲಿನ ಹವಾಮಾನಕ್ಕೆ ತಕ್ಕಂತೆ ಮಕ್ಕಳ ದೇಹ ಹೊಂದಿಕೊಳ್ಳುವುದಿಲ್ಲ. ಮಕ್ಕಳಿಗೆ ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಮಕ್ಕಳ ತಲೆ ಬಿಸಿಯಾಗ್ತಿದ್ದರೆ, ಕೋಣೆ ಉಷ್ಣತೆ ಕಾಪಾಡಲು ನೀವು ಎಸಿ ಬಳಸಬಹುದು. ಎಸಿ ಸಾಧ್ಯವಿಲ್ಲ ಎನ್ನುವವರು ಕಿಟಕಿ ಬಾಗಿಲುಗಳನ್ನು ತೆರೆದು ಸರಿಯಾಗಿ ಗಾಳಿ ಬರುವಂತೆ ನೋಡಿಕೊಳ್ಳಬೇಕು. 

ಬೇಸಿಗೆಯಲ್ಲಿ (Summer) ಮಾಡಿ ಈ ಕೆಲಸ : ಬೇಸಿಗೆಯಲ್ಲಿ ಮಕ್ಕಳ ತಲೆ ಬಿಸಿ ಹೆಚ್ಚಾಗಿ ಕಾಡುತ್ತದೆ. ನೀವು ಬೇಸಿಗೆ ಸಮಯದಲ್ಲಿ ಮನೆಯಿಂದ ಹೊರಗೆ ಹೋಗುವ ಸಮಯವನ್ನು ಬದಲಿಸಿ. ಅಂದ್ರೆ ಮಧ್ಯಾಹ್ನ ಹೊರಗೆ ಹೋಗುವ ಬದಲು ಬೆಳಿಗ್ಗೆ ಅಥವಾ ಸಂಜೆ ಹೊರಗೆ ಹೋಗಿ. ಹಾಗೆ ಮಕ್ಕಳ ದೇಹ ನಿರ್ಜಲಕೊಳ್ಳದಂತೆ ನೋಡಿಕೊಳ್ಳಿ. ಮಕ್ಕಳಿಗೆ ಆಗಾಗ ಸ್ತನಪಾನ ಮಾಡಿಸ್ತಿದ್ದರೆ ಅವರ ದೇಹ ಹೈಡ್ರೀಕರಣಗೊಂಡಿರುತ್ತದೆ. ಇದ್ರಿಂದ ಅವರ ತಲೆ ಬಿಸಿಯಾಗುವುದಿಲ್ಲ. 

ಈ ಸಂದರ್ಭದಲ್ಲಿ ವೈದ್ಯರ ಬಳಿ ಹೋಗಿ : ಒಂದ್ವೇಳೆ ಮೇಲೆ ಹೇಳಿದ ಯಾವುದೂ ಪ್ರಯೋಜನಕ್ಕೆ ಬರಲಿಲ್ಲ ಎಂದಾಗ ಅಥವಾ ಔಷಧಿ ಸೇವಿಸಿದ ತಕ್ಷಣ ಮಕ್ಕಳ ತಲೆ ಬಿಸಿಯಾದ್ರೆ ನೀವು ವೈದ್ಯರನ್ನು ಭೇಟಿ ಮಾಡಿ.

Period panties ಧರಿಸಿದ್ರೆ ಸಾಕು, ಮುಟ್ಟಿನ ದಿನಗಳಲ್ಲೂ ಆರಾಮವಾಗಿರ್ಬೋದು

ಮನೆ ಮದ್ದೇನು? (Home Remedy) : ತಲೆ ಬಿಸಿಯಾದ ಮಗುವಿಗೆ ನೆಗಡಿ (Cold), ಕೆಮ್ಮು (Cough) ಇಲ್ಲವೆಂದ್ರೆ ನೀವು ಮಜ್ಜಿಗೆ ನೀಡಬಹುದು. ಹಾಗೆ ತೆಂಗಿನ ಎಣ್ಣೆ ಹಾಕಿ ಮಸಾಜ್ ಮಾಡಬಹುದು.

Follow Us:
Download App:
  • android
  • ios