ಇಯರ್ ವ್ಯಾಕ್ಸ್‌‌ನಿಂದ ಕಿವಿ ಕೇಳ್ತಿಲ್ವಾ? ತಮಟೆಗೆ ಪೆಟ್ಟಾಗದಂತೆ ಕ್ಲೀನ್ ಮಾಡಿಕೊಳ್ಳಲು ಇಲ್ಲಿವೆ ಟಿಪ್ಸ್

ಕಿವಿ ಸರಿಯಾಗಿ ಕೇಳ್ತಿಲ್ಲ..ಬಡ್ ಬ್ಲಾಕ್ ಮಾಡಿದೆ ಅಂತಾ ನೀವು ಕಿವಿಗೆ ಪಿನ್ ಹಾಕಿ ಕ್ಲೀನ್ ಮಾಡೋಕೆ ಹೋಗ್ತಿದ್ರೆ ಎಚ್ಚರ. ಒಂದು ಮಾಡೋಕೆ ಹೋಗಿ ಇನ್ನೊಂದು ಆಗ್ಬಹುದು. ಕಿವಿಯನ್ನು ಕ್ಲೀನ್ ಮಾಡೋ ಸರಳ ವಿಧಾನ ಇಲ್ಲಿದೆ. 
 

What Is The Best Way To Cleaning Your Ears removing wax without affecting ear drum roo

ನಮ್ಮ ದೇಹದ ಸೂಕ್ಷ್ಮ ಅಂಗಗಳಲ್ಲಿ ಕಿವಿ ಕೂಡ ಸೇರಿದೆ. ಕಿವಿ ಸರಿಯಾಗಿ ಕಾರ್ಯನಿರ್ವಹಿಸದೆ ಹೋದಲ್ಲಿ ಕಿವಿ ಕೇಳಿಸೋದಿಲ್ಲ. ಕಿವಿಯು ಕೇವಲ ಶ್ರವಣಕ್ಕಾಗಿ ಮಾತ್ರವಲ್ಲದೇ ನಮ್ಮ ದೇಹದ ಉಳಿದ ಅಂಗಗಳ ಸಮತೋಲನಕ್ಕೆ ಸಹಕಾರಿ. ಕಿವಿಯಲ್ಲಿ ದ್ರವವಿರುತ್ತದೆ. ದ್ರವ, ಅತ್ಯಂತ ಸೂಕ್ಷ್ಮವಾದ ಸಂವೇದಕಗಳನ್ನು ಒಳಗೊಂಡಿರುತ್ತದೆ. ನಾವು ತಲೆ ಅಲ್ಲಾಡಿಸಿದಾಗ ಈ ಸಂವೇದಕ ಕೂಡ ಅಲುಗಾಡುತ್ತದೆ. ಈ ಸಂವೇದಕಗಳು ಮೆದುಳು ಮತ್ತು ದೇಹದ ಮಧ್ಯೆ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ಇದೇ ಕಾರಣಕ್ಕೆ ಕಿವಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಕಿವಿ ಸ್ವಚ್ಛತೆ ಬಗ್ಗೆಯೂ ಗಮನ ಹರಿಸಬೇಕು. 

ಎಲ್ಲರಿಗೂ ಆಗಾಗ ಕಿವಿ (Ear) ಯಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ. ಕಿವಿಯಲ್ಲಿ ಇಯರ್ ವ್ಯಾಕ್ಸ್ (Wax) ಇರುತ್ತದೆ. ಇದು ಕಿವಿ ಭಾರವಾದ ಅನುಭವ ನೀಡುವುದಲ್ಲದೆ ಕಿವಿಯನ್ನು ಅದು ಬ್ಲಾಕ್ ಮಾಡುವ ಕಾರಣ ಕಿವಿ ಸರಿಯಾಗಿ ಕೇಳೋದಿಲ್ಲ. ಕೆಲವರಿಗೆ ಇದ್ರಿಂದ ತಲೆ ನೋವು, ಹಲ್ಲು ನೋವು ಕೂಡ ಕಾಣಿಸಿಕೊಳ್ಳುತ್ತದೆ.  ಜನರು ಕಿವಿಯಲ್ಲಿ ವ್ಯಾಕ್ಸ್ ಇದೆ ಎಂಬ ಕಾರಣಕ್ಕೆ ಇಲ್ಲವೆ ಕಿವಿ ತುರಿಕೆ (Itching) ಕಾಣಿಸಿಕೊಂಡಾಗ ಕಂಡ ಕಂಡ ವಸ್ತುವನ್ನು ಕಿವಿಗೆ ಹಾಕಿ ಅದನ್ನು ತೆಗೆಯುವ ಪ್ರಯತ್ನ ನಡೆಸುತ್ತಾರೆ. ಸೀರೆ ಪಿನ್, ಮಾರುಕಟ್ಟೆಯಲ್ಲಿ ಸಿಗುವ ಕಬ್ಬಿಣದ ಇಯರ್ ಕ್ಲೀನ್ ಪಿನ್ ಹಾಕುವವರಿದ್ದಾರೆ. ಮತ್ತೆ ಕೆಲವರು ಬಡ್ಸ್, ಪೇಪರ್ ರೋಲ್ ಕೂಡ ಕಿವಿಯೊಳಗೆ ಹಾಕ್ತಾರೆ. ಕಿವಿಯಲ್ಲಿ ತುರಿಕೆ ಕಾಣಿಸಿಕೊಳ್ತಿದೆ ಎಂದಾಗ ಎಣ್ಣೆಯನ್ನು ಕಿವಿಗೆ ಹಾಕುವ ಜನರಿದ್ದಾರೆ. ಬರೀ ತೆಂಗಿನ ಎಣ್ಣೆ ಮಾತ್ರವಲ್ಲ ಮನೆ ಮದ್ದಿನ ಹೆಸರಿನಲ್ಲಿ ಬೇರೆ ಬೇರೆ ರಸವನ್ನು ಕೆಲವರು ಕಿವಿಗೆ ಹಾಕ್ತಾರೆ. ವೈದ್ಯರ ಪ್ರಕಾರ ಈ ಎಲ್ಲವೂ ತಪ್ಪು ವಿಧಾನವಾಗಿದೆ.

WEIGHT LOSS TIPS: ಒಂದೇ ವಾರದಲ್ಲಿ ತೂಕ ಇಳಿಸಿಕೊಳ್ಳೋಕೆ ಈ ಮಸಾಲೆ ತಿನ್ನಿ

ನೀವು ಯಾವುದೇ ಹೊರಗಿನ ವಸ್ತುವನ್ನು ಕಿವಿಗೆ ಹಾಕಿದಾಗ ಕಿವಿಯಲ್ಲಿ ಸೋಂಕು (Ear Infection) ಕಾಣಿಸಿಕೊಳ್ಳುತ್ತದೆ. ಕಿವಿಗೆ ಗಾಯವಾಗಿ ವಿಪರೀತ ನೋವಾಗುವುದಿದೆ. ಕಿವಿ ಪೊರೆ ಹರಿದು ಶಾಶ್ವತ ಕಿವುಡರಾಗುವ ಅಪಾಯವೂ ಇದೆ. ಶಿಲೀಂದ್ರದ ಸೋಂಕು, ಬ್ಯಾಕ್ಟೀರಿಯಾ ಸೋಂಕು ಮುಂದೆ ದೊಡ್ಡ ಅಪಾಯಕ್ಕೆ ಕಾರಣವಾಗುತ್ತದೆ. ಕಿವಿಯ ದ್ರವ ಹೊರಗೆ ಬರುವ, ರಶಿಗೆಯಾಗಿ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ತಜ್ಞರ ಪ್ರಕಾರ, ಕಿವಿ ಸ್ವಚ್ಛಗೊಳಿಸಲು ಯಾವುದೇ ವಸ್ತುವನ್ನು ಕಿವಿಗೆ ಹಾಕಬಾರದು.

ಕಿವಿ ಸ್ವಚ್ಛತೆ ಹೇಗೆ? (How to Clean Ears): ಕಿವಿಯಲ್ಲಿ ಇಯರ್ ವ್ಯಾಕ್ಸ್ (Ear Wax) ಕಾಣಿಸಿಕೊಂಡಿದೆ ಎಂದ್ರೆ ಅದನ್ನು ಹಾಗೆಯೇ ಬಿಡುವುದು ಉತ್ತಮ. ಸಣ್ಣ ಪ್ರಮಾಣದಲ್ಲಿರುವ ವ್ಯಾಕ್ಸ್ ಯಾವುದೇ ಸಮಸ್ಯೆ ತರುವುದಿಲ್ಲ. ಒಂದ್ವೇಳೆ ಇದು ವಿಪರೀತವಾಗಿದ್ದು, ನೋವು ಹೆಚ್ಚಾಗಿದೆ ಎಂದಾದಲ್ಲಿ ನೀವು ಮನೆ ಮದ್ದನ್ನು ಬಳಸಿ. ಒಂದು ಸ್ವಚ್ಛವಾದ ಕಾಟನ್ ಬಟ್ಟೆಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಅದ್ದಿ. ನಂತ್ರ ಅದನ್ನು ನಿಮ್ಮ ಕೈ ಬೆರಳಿನ ಸಹಾಯದಿಂದ ಸ್ವಲ್ಪ ಒಳಗೆ ಹಾಕಿ. ನೀವು ಕಿವಿಯ ಆಳದವರೆಗೆ ಇದನ್ನು ಹಾಕಬೇಕಾಗಿಲ್ಲ. ಹೀಗೆ ಮಾಡಿದಾಗ ವ್ಯಾಕ್ಸ್ ನಿಧಾನವಾಗಿ ಮೇಲೆ ಬರುತ್ತದೆ. ಅದನ್ನು ಬೆರಳಿನ ಸಹಾಯದಿಂದ ತೆಗೆಯಬೇಕು.

ಎಲ್ಲವನ್ನೂ ಇಂಟರ್ನೆಟ್‌ನಲ್ಲಿ ಸರ್ಚ್‌‌ ಮಾಡ್ತೀರಾ? ನಿಮಗೂ ಈ ರೋಗ ಕಾಡ್ಬಹುದು..

ನೀವು ಕಿವಿ ಬಡ್ಸ್ (Ear Buds) ಕ್ಲೀನ್ ಮಾಡುವ ಇಯರ್ ಡ್ರಾಪ್ ಬಳಸಬಹುದು. ನಿಮಗೆ ಎಲ್ಲ ಔಷಧಿ ಅಂಗಡಿಯಲ್ಲಿ ಇಯರ್ ಡ್ರಾಪ್ನಿ (Ear Drop) ಮಗೆ ಸಿಗುತ್ತದೆ. ಅಲ್ಲಿನ ಸೂಚನೆಯಂತೆ ನೀವು ಇಯರ್ ಡ್ರಾಪನ್ನು ಕಿವಿಗೆ ಹಾಕಬೇಕು. ಅದು ಕೂಡ ಇಯರ್ ವ್ಯಾಕ್ಸನ್ನು ಮೃದುಗೊಳಿಸುವುದಲ್ಲದೆ ಅದು ಮೇಲಕ್ಕೆ ಬರಲು ಸಹಾಯ ಮಾಡುತ್ತದೆ. ಕಿವಿಗೆ ಪಿನ್ ಸೇರಿದಂತೆ ಮತ್ತ್ಯಾವುದೇ ವಸ್ತು ಹಾಕಿ ಗಟ್ಟಿಯಾಗಿರುವ ಇಯರ್ ವ್ಯಾಕ್ಸ್ ತೆಗೆಯಬೇಡಿ ಎನ್ನುತ್ತಾರೆ ತಜ್ಞರು. 

Latest Videos
Follow Us:
Download App:
  • android
  • ios