ಬಾಳೆಹಣ್ಣಿನಲ್ಲಿ ಪೊಟಾಷಿಯಂ, ನಾರಿನಂಶ, ವಿಟಮಿನ್‌ ಸಿ, ವಿಟಮಿನ್‌ ಬಿ6 ಇವೆಲ್ಲ ಇವೆ. ಸಾಕಷ್ಟು ಸಕ್ಕರೆ ಅಂಶವಿದ್ದರೂ ನಾರಿನಂಶ ಇರುವುದರಿಂದ ಅದು ಹತೋಟಿಯಲ್ಲಿರುತ್ತೆ. ಇವೆಲ್ಲದರಿಂದಾಗಿ ದಿನಕ್ಕೆರಡು ಬಾಳೆಹಣ್ಣು ತಿನ್ನೋದು ನಿಮ್ಮ ಬಾಡಿಗೆ ಒಳ್ಳೇದು. ಇದರ ಸೇವನೆಯಿಂದ ಆರೋಗ್ಯಕ್ಕೆ ಯಾವ್ಯಾವ ಲಾಭಗಳಿವೆ, ಯಾವ್ಯಾವ ರಿಸ್ಕ್‌ ದೂರವಾಗುತ್ತೆ ಅಂತ ತಿಳಿಯೋಣ.

ಊಟಕ್ಕೆ ಮುನ್ನ ಎಲೆಗೆ ಸುತ್ತುಕಟ್ಟುವುದೇಕೆ?

ಪೊಟಾಶಿಯಂನ ನಿಧಿ

ನಮ್ಮ ದೇಹಕ್ಕೆ ಸಾಕಷ್ಟು ಪೊಟಾಶಿಯಂ ಬೇಕು. ಇದು ನಮ್ಮ ದೇಹದ ಜೀವಕೋಶಗಳು ಚುರುಕಾಗಿ ಕಾರ್ಯ ನಿರ್ವಹಿಸಲು ಶಕ್ತಿಯನ್ನು ಸೃಷ್ಟಿಸಿಕೊಡುತ್ತೆ. ಆರೋಗ್ಯವಂತ ಮನುಷ್ಯನಲ್ಲಿ 3500 ಮಿಲಿಗ್ರಾಂಮಷ್ಟು ಪೊಟಾಶಿಯಂ ದಿನವೂ ಉತ್ಪತ್ತಿಯಾಗಬೇಕು. ಎರಡು ಬಾಳೆಹಣ್ಣಿನಿಂದ ನಿಮಗೆ 900 ಮಿಲಿಗ್ರಾಂನಷ್ಟು ಪೊಟಾಶಿಯಂ ದೊರೆಯುತ್ತೆ. ನಾಲ್ಕು ಬಾಳೆಹಣ್ಣು ತಿಂದರೂ ಪರವಾಗಿಲ್ಲ. ಇದರ ಜೊತೆಗೆ ಟೊಮ್ಯಾಟೋ, ಆಲೂಗಡ್ಡೆ ಸೇವಿಸುವುದು ಇನ್ನಷ್ಟು ಪೊಟಾಶಿಯಮ್ಮನ್ನೂ ಇತರ ಪೋಷಕಾಂಶಗಳನ್ನೂ ಕೊಡುತ್ತೆ.

ಬ್ಲಡ್‌ಪ್ರೆಶರ್‌ ಕಂಟ್ರೋಲ್‌ನಲ್ಲಿಡುತ್ತೆ

ನಿಮ್ಮ ಕಿಡ್ನಿಗಳು ನಿಮ್ಮ ದೇಹದಲ್ಲಿರುವ ದ್ರವಾಂಶವನ್ನು ಸದಾ ಕಾಲ ಹತೋಟಿಯಲ್ಲಿಡಬೇಕು. ಈ ದ್ರವಾಂಶದ ಏರಿಳಿತ, ನಿಮ್ಮ ಹೃದಯದ ರಕ್ತದೊತ್ತಡದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಅದಕ್ಕೆ ಸಾಕಷ್ಟು ಸೋಡಿಯ ಹಾಗೂ ಪೊಟಾಶಿಯಂ ಬೇಕು. ಈ ಪೊಟಾಶಿಯಂ ನಾನಾ ಮೂಲಗಳಿಂದ ದೇಹಕ್ಕೆ ಸಿಗಬೇಕು. ಮೂತ್ರ ತುಂಬಿ ಕಾಲು ಊದಿಕೊಳ್ಳುವವರನ್ನು ಗಮನಿಸಿದ್ದೀರಾ? ಇವರ ಈ ಸಮಸ್ಯೆ ದೂರವಾಗಲು ಡಾಕ್ಟರ್‌ ಪೊಟಾಶಿಯಂ ರಿಚ್‌ ಔಷಧಗಳನ್ನು ಕೊಡುತ್ತಾರೆ. ಇದು ರಕ್ತದ ಒತ್ತಡದ ನಿಯಂತ್ರಣದಲ್ಲಿ ಸಹಾಯ ಮಾಡುತ್ತದೆ. ಇದಕ್ಕೆ ಅಗತ್ಯವಾದ ಪೊಟಾಶಿಯಂ ಬಾಳೆಹಣ್ಣಿನಲ್ಲಿದೆ.

ಬಾಳೆಲೆ ಊಟ ಬಂಗಾರದ ತಟ್ಟೆಗಿಂತ ಬೆಸ್ಟ್; ನಿಜ್ವಾಗ್ಲೂ !

ಕ್ಯಾನ್ಸರ್‌ ರಿಸ್ಕ್‌ ನಿವಾರಣೆ

ಬಾಳೆಹಣ್ಣಿನಲ್ಲಿರುವ ಸಾಕಷ್ಟು ಖನಿಜಾಂಶ, ವಿಟಮಿನ್‌ಗಳು ನಿಮ್ಮ ದೇಹವನ್ನು ಆರೋಗ್ಯವಾಗಿಡುತ್ತವೆ. ಸಾಮಾನ್ಯವಾಗಿ ಮಿನರಲ್‌ ರಿಚ್‌ ಫುಡ್‌ಗಳು ಅಂತ ನಾವು ಸೇವಿಸುವಂಥವು, ಕೆಮಿಕಲ್‌ ಪ್ರಿಸರ್ವೇಟಿವ್‌ ಬಳಸಿರುತ್ತವೆ. ಜೊತೆಗೆ ಬಹಳ ಪ್ರಮಾಣದಲ್ಲಿ ಉಪ್ಪು ಅಥವಾ ಸಕ್ಕರೆಯನ್ನೂ ಬೆರೆಸಿರುತ್ತಾರೆ. ಇವು ಹಾನಿಕರ. ಬಾಳೆಹಣ್ಣು ಸೇವಿಸುವ ಮೂಲಕ ಈ ಆಹಾರಗಳನ್ನು ಕೈಬಿಡಬಹುದು. ಇದರಲ್ಲಿರುವ ವಿಟಮಿನ್‌ ಸಿ, ಜೀವ ಪ್ರತಿರೋಧಕಗಳು ಕ್ಯಾನ್ಸರ್‌ ಸೆಲ್‌ಗಳ ಬೆಳವಣಿಗೆಯನ್ನು ತಡೆಗಟ್ಟುತ್ತವೆ.

ಹೃದಯದ ಆರೋಗ್ಯಕ್ಕೆ ಪೂರಕ

ಅಧ್ಯಯನಗಳ ಪ್ರಕಾರ ದಿನಕ್ಕೆ ಸುಮಾರು 1000 ಮಿಲಿಗ್ರಾಂ ಪೊಟಾಶಿಯಂ ಪಡೆಯುವ ವ್ಯಕ್ತಿಗಳಿಗೆ, ದಿನಕ್ಕೆ ಸುಮಾರು 4000 ಮಿಲಿಗ್ರಾಂ ಸೇವಿಸುವ ವ್ಯಕ್ತಿಗಳಿಗಿಂತ ಹೃದಯಾಘಾತದ ರಿಸ್ಕ್‌ ಅಧಿಕವಂತೆ. ಬಾಳೆಹಣ್ಣು ಪೊಟಾಶಿಯಂ ರಿಚ್‌. ಅದರ ಜೊತೆಗೆ ಹೃದಯದ ಆರೋಗ್ಯ ಕಾಪಾಡುವ ಇನ್ನಿತರ ಖನಿಜಾಂಶಗಳೂ ಇದರಲ್ಲಿ ಇವೆ.

ಮಲಗೋ ಮುನ್ನ ಬಾಳೆಹಣ್ಣು ತಿಂದ್ರೆ ಬರುತ್ತೆ ಈ ರೋಗ?

ಹೊಟ್ಟೆಯ ಆರೋಗ್ಯ

ಅಜೀರ್ಣ ಆಗಿದ್ದರೆ, ಹೊಟ್ಟೆ ಕಟ್ಟಿಕೊಂಡಿದ್ದರೆ ಬಾಳೆಹಣ್ಣು ತಿಂದು ಹೊಟ್ಟೆಯನ್ನು ನಿರಾಳವಾಗಿಸಿಕೊಳ್ಳುವುದು ನಿಮಗೆ ಗೊತ್ತಿದ್ದದ್ದೇ. ಬಾಳೆಹಣ್ಣಿನಲ್ಲಿ ಇರುವ ಫೈಬರ್‌ ಅಂಶ, ಆಹಾರ ಸಲೀಸಾಗಿ ನಿಮ್ಮ ಜೀರ್ಣಾಂಗ ವ್ಯೂಹದಲ್ಲಿ ಸಂಚರಿಸಿ ಜೀರ್ಣವಾಗುವಂತೆ ಮಾಡುತ್ತದೆ. ಬಾಳೆಹಣ್ಣಿನಲ್ಲಿರುವುದು ಪೆಕ್ಟಿನ್‌ ಎಂಬ ಫೈಬರ್‌. ಇದು ಕಾರ್ಬೊಹೈಡ್ರೇಟ್‌ಗಳನ್ನು ಒಡೆದು ಗ್ಲುಕೋಸ್‌ ಆಗಿಸುವ ಮತ್ತು ಕೊಲೆಸ್ಟರಾಲ್‌ನ್ನು ಸರಿಯಾಗಿ ನಿಯಂತ್ರಣದಲ್ಲಿಡುವ ಕೆಲಸ ಮಾಡುತ್ತದೆ.

ಎಚ್ಚರಿಕೆಯೂ ಇರಲಿ

ಆದರೆ, ಶುಗರ್‌ ಕಾಯಿಲೆ ಇರುವವರು ಹಾಗೂ ಹೃದಯ ಸಂಬಂಧಿ ಸಮಸ್ಯೆಗಳಿಗೆ ನಿಯಮಿತವಾಗಿ ಔಷಧ ತೆಗೆದುಕೊಳ್ಳುವವರು ಬಾಳೆಹಣ್ಣು ಸೇವಿಸುವ ಮುನ್ನ ಎಚ್ಚರ ಇರಬೇಕು. ಇವರು ದಿನಕ್ಕೊಂದೇ ಬಾಳೆಹಣ್ಣು ಸೇವಿಸಿದರೆ ಸಾಕು. ಹಾಗೆಯೇ ಆರೋಗ್ಯವಂತರು ಕೂಡ, ದಿನಕ್ಕೆ ಹತ್ತು ಹದಿನೈದಕ್ಕಿಂತ ಅಧಿಕ ಬಾಳೆಹಣ್ಣು ತಿನ್ನುವುದೂ ಒಳ್ಳೆಯದಲ್ಲ. ಯಾಕೆಂದರೆ ಅತಿ ಪೊಟಾಶಿಯಂ ಕೂಡ ನಮ್ಮ ದೇಹಕ್ಕೆ ಹಾನಿಕರ.