Asianet Suvarna News Asianet Suvarna News

ಮೆದುಳನ್ನು ಮಂಕಾಗಿಸಿ ಬದುಕನ್ನು ಬೀದಿಗೆ ತರುವ Online Gambling

ಆರಂಭದಲ್ಲಿ ಮನರಂಜನೆ ಎನಿಸುವ ಜೂಜಾಟ ನಂತ್ರ ಚಟವಾಗುತ್ತದೆ. ಮನುಷ್ಯನನ್ನು ಬೀದಿಗೆ ತಂದು ನಿಲ್ಲಿಸಬಲ್ಲ ಈ ಜೂಜಾಟ ವ್ಯಸನ  ಕಣ್ಣಿಗೆ ಕಾಣುವುದಿಲ್ಲ. ಆದ್ರೆ ಒಳಗಿಂದಲೇ ಮನುಷ್ಯನ ಮೆದುಳನ್ನು ತಿನ್ನುತ್ತದೆ.
 

What Happens In The Brain When Gambling Becomes An Addiction
Author
Bangalore, First Published Feb 21, 2022, 12:39 PM IST

ಕೊರೊನಾ (Corona ) ನಮ್ಮ ಜೀವನ (Life) ಶೈಲಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿದೆ. ಕೊರೊನಾ ಆರಂಭದಲ್ಲಿ ಜನರು ಮನೆಯಲ್ಲಿ ಬಂಧಿಯಾಗಿದ್ದರು. ಇದ್ರಿಂದಾಗಿ ಮನೆಯಲ್ಲಿಯೇ ಮನರಂಜನೆ (Entertainment) ಹುಡುಕಾಟ ಶುರುವಾಗಿತ್ತು. ಆಗ ಜನರು ಆರಿಸಿಕೊಂಡಿದ್ದು ಆನ್ಲೈನ್ ಜೂಜಾಟ (Online gambling) . ಆನ್ಲೈನ್ ಜೂಜಾಟ ಮನರಂಜನೆಯನ್ನು ನೀಡ್ತಿದೆ ನಿಜ, ಆದ್ರೆ  ಇದು ಅನೇಕ ಕಣ್ಣಿಗೆ ಕಾಣದ ಸಮಸ್ಯೆಯನ್ನು ಹುಟ್ಟು ಹಾಕಿದೆ. ಜೂಜಾಟದ ವ್ಯಸನವು ಮಾನಸಿಕ ಆರೋಗ್ಯ ಮತ್ತು ಸಂಬಂಧಗಳ ಮೇಲೆ ಪರಿಣಾಮ ಬೀರ್ತಿದೆ. ಹಾಗೆಯೇ ದಿವಾಳಿತನ ಮತ್ತು ಅಪರಾಧಕ್ಕೆ ಕಾರಣವಾಗುತ್ತಿದೆ. ಆಲ್ಕೋಹಾಲ್ ಮತ್ತು ಮಾದಕ ವ್ಯಸನದಲ್ಲಿ ರೋಗಲಕ್ಷಣಗಳು ದೈಹಿಕವಾಗಿ ಗೋಚರಿಸುತ್ತವೆ. ಆದ್ರೆ ಜೂಜಿನ ವ್ಯಸನ ನಿಮಗೆ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಇಂದು ನಾವು ಜೂಜಿನ ವ್ಯಸನದ ಲಕ್ಷಣ ಹಾಗೂ ಅದ್ರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡ್ತೇವೆ.

ದೊಡ್ಡ ಸಮಸ್ಯೆಯಾದ ಜೂಜು : ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಅಂದಾಜಿನ ಪ್ರಕಾರ 2016 ರ ಹೊತ್ತಿಗೆ  ಪ್ರಪಂಚದಾದ್ಯಂತ ಜೂಜುಕೋರರಿಂದ 400 ಅರಬ್ ಡಾಲರ್ ನಷ್ಟವಾಗದೆಯಂತೆ. ಮತ್ತೊಂದು ಸಮೀಕ್ಷೆಯು ಏಷ್ಯಾದಲ್ಲಿ ಜೂಜಿನ ಸಮಸ್ಯೆ ದರ ಹೆಚ್ಚಿದೆ ಎಂದು ಹೇಳಿದೆ. ನಂತ್ರದ ಸ್ಥಾನದಲ್ಲಿ ಆಸ್ಟ್ರೇಲಿಯಾ ಮತ್ತು ಉತ್ತರ ಅಮೆರಿಕಾ ದೇಶಗಳಿವೆ. ಈ ಸಮಯದಲ್ಲಿ ಯುರೋಪಿನಲ್ಲಿ ಜೂಜಾಟದ ಪ್ರಮಾಣ ಕಡಿಮೆಯಾಗಿತ್ತು. ಸಂಶೋಧನೆಯಲ್ಲಿ ಜೂಜಿನ ವ್ಯಸನದ ಬಗ್ಗೆ ಹಾಗೂ ಅದನ್ನು ಹೇಗೆ ತಡೆಗಟ್ಟುವುದು ಮತ್ತು ಚಿಕಿತ್ಸೆ ನೀಡುವುದು ಹೇಗೆ ಎಂಬುದನ್ನು ಹೇಳಲಾಗಿದೆ. 

ವಯಸ್ಸು ಹೆಚ್ಚುತ್ತಿದ್ದಂತೆ ಕಡಿಮೆಯಾಗುತ್ತೆ ಬೆಟ್ಟಿಂಗ್ ಚಟ ? : ಸಂಶೋಧನೆ ಪ್ರಕಾರ ಆರೋಗ್ಯವಂತ ವ್ಯಕ್ತಿಗಳಲ್ಲಿ 17 ರಿಂದ 27 ವರ್ಷ ವಯಸ್ಸಿನ ಜನರಲ್ಲಿ ಬೆಟ್ಟಿಂಗ್ ಹೆಚ್ಚು ಸಾಮಾನ್ಯವಾಗಿದೆ. ವಯಸ್ಸಾದಂತೆ ಜನರು ಬೆಟ್ಟಿಂಗ್ ನಲ್ಲಿ ಆಸಕ್ತಿ ಕಳೆದುಕೊಳ್ತಾರೆ. ವಯಸ್ಸು ಹೆಚ್ಚಾಗ್ತಿದ್ದಂತೆ ಜನರು ಬೆಟ್ಟಿಂಗ್ ಕಟ್ಟುವುದನ್ನು ಕಡಿಮೆ ಮಾಡ್ತಾರೆ ಎಂದು ಸಂಶೋಧನೆ ಹೇಳಿದೆ. ಜೂಜಿನ ವ್ಯಸನದ ಸಮಸ್ಯೆಗಳಿರುವ ಜೂಜುಕೋರರು, ಕ್ರಮೇಣ ತಮ್ಮ ಬೆಟ್ಟಿಂಗ್ ಮೊತ್ತವನ್ನು ಹೆಚ್ಚಿಸುತ್ತ ಹೋಗ್ತಾರೆ. ಆದ್ರೆ ಅಂತಿಮವಾಗಿ ದಿವಾಳಿಯಾಗುತ್ತಾರೆ ಎಂದು ಮತ್ತೊಂದು ಅಧ್ಯಯನ ಹೇಳಿದೆ. ಆಲ್ಕೋಹಾಲ್ ಮತ್ತು ನಿಕೋಟಿನ್ ಬಳಸುವವರು ಹೆಚ್ಚೆಚ್ಚು ಬೆಟ್ಟಿಂಗ್ ವ್ಯಸನಕ್ಕೆ ಬಲಿಯಾಗ್ತಿದ್ದಾರೆ.

Rice Based Snacks: ಅನ್ನ ತಿನ್ನೋಕೆ ಬೇಜಾರಾ ? ರೈಸ್ ಸ್ನ್ಯಾಕ್ಸ್ ಮಾಡಿ

ಜೂಜಿನ ಪರಿಣಾಮ ನೋಡಿದಾಗ ಜೂಜುಕೋರ ಮೆದುಳು ಸಕ್ರಿಯಗೊಳ್ಳುತ್ತದೆ.  ಆರೋಗ್ಯವಂತ ಜನರಿಗಿಂತ ಜೂಜುಕೋರರರಲ್ಲಿ ಹೆಚ್ಚಿನ  ಮಟ್ಟದ ಡೋಪಮೈನ್ ಬಿಡುಗಡೆಯಾಗುತ್ತದೆ. ಡೋಪಮೈನ್ ಬಿಡುಗಡೆಯು ಉತ್ಸಾಹದ ಮಟ್ಟವನ್ನು ಹೆಚ್ಚಿಸುವ ಮೂಲಕ, ಅಪಾಯಕಾರಿ ನಿರ್ಧಾರಗಳನ್ನು  ತೆಗೆದುಕೊಳ್ಳಲು ಜೂಜುಕೋರರನ್ನು ಪ್ರೇರೇಪಿಸುತ್ತದೆ.  

ಪ್ರಸ್ತುತ, ಅಮೇರಿಕನ್ ಸೈಕಿಯಾಟ್ರಿಕ್ ಅಸೋಸಿಯೇಷನ್ ಪ್ರಕಟಿದಸಿದ ವರದಿ ಪ್ರಕಾರ, ಡಯಾಗ್ನೋಸ್ಟಿಕ್ ಮತ್ತು ಸ್ಟ್ಯಾಟಿಸ್ಟಿಕಲ್ ಮ್ಯಾನ್ಯುಯಲ್ ಆಫ್ ಮೆಂಟಲ್ ಡಿಸಾರ್ಡರ್ಸ್ (DSM-5) ಅನ್ನು ಬಳಸಿಕೊಂಡು ಜೂಜಿನ ಅಸ್ವಸ್ಥತೆಯನ್ನು ಕಂಡುಹಿಡಿಯಲಾಗುತ್ತಿದೆ. ಜೂಜಿನ ಅಸ್ವಸ್ಥತೆಯ ಚಿಕಿತ್ಸೆ ಮತ್ತು ನಿವಾರಣೆ ಮಾರ್ಗಸೂಚಿಗಳನ್ನು ಯುಕೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಹೆಲ್ತ್ ಅಂಡ್ ಕೇರ್ ಎಕ್ಸಲೆನ್ಸ್ ನಿಂದ ಅಭಿವೃದ್ಧಿಪಡಿಸಲಾಗುತ್ತಿದೆ. 2024 ರಲ್ಲಿ ಇದು ಬಿಡುಗಡೆಯಾಗುವ ನಿರೀಕ್ಷೆಯಿದೆ. ಪ್ರಸ್ತುತ ಜನರ ಆಲೋಚನೆಯನ್ನು ಬದಲಿಸುವ ಮೂಲಕ ಚಿಕಿತ್ಸೆ ನೀಡಲಾಗ್ತಿದೆ. 

Inspiring woman: ಇದು ಸೀರೆಯುಟ್ಟವಳ ಸಿಕ್ಸ್ ಪ್ಯಾಕ್ ಕಥೆ!

ಜೂಜು ವ್ಯಸನಕ್ಕೆ ಚಿಕಿತ್ಸೆ : ಸೆಲೆಕ್ಟಿವ್ ಸಿರೊಟೋನಿನ್ ರಿಅಪ್ಟೇಕ್ ಇನ್ಹಿಬಿಟರ್ಸ್ (SSRIs) ನಂತಹ ಕೆಲವು ಔಷಧಿಗಳು ಖಿನ್ನತೆಯನ್ನು ದೂರ ಮಾಡುತ್ತವೆ. ಇವು ಜೂಜಿನ ವ್ಯಸನದ ಲಕ್ಷಣಗಳನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಎಲ್ಲಾ ಮಾನಸಿಕ ಆರೋಗ್ಯ ಸಮಸ್ಯೆಗಳಂತೆ, ಸಹಾಯ ಮತ್ತು ಚಿಕಿತ್ಸೆಯನ್ನು ತ್ವರಿತವಾಗಿ ಪಡೆದಲ್ಲಿ ಮಾತ್ರ ಈ ವ್ಯಸನದಿಂದ ಬೇಗ ಹೊರ ಬರಲು ಸಾಧ್ಯವಾಗುತ್ತದೆ.
ಕುಟುಂಬದೊಂದಿಗೆ ಸಮಯ ಕಳೆಯುವುದು ಮತ್ತು ಪ್ರತಿ ನಿತ್ಯ ನಿಯಮಿತ ವಾಕಿಂಗ್, ವ್ಯಾಯಾಮಗಳು ವ್ಯಸನದಿಂದ ನಿಮ್ಮನ್ನು ದೂರವಿಡುತ್ತದೆ. ಇದಲ್ಲದೆ ಜನರ ಜೊತೆ ಬೆರೆಯುವುದು,ಸಂತೋಷ,ಸಮಾರಂಭಗಳಲ್ಲಿ ಪಾಲ್ಗೊಳ್ಳುವಿಕೆ ಕೂಡ ಜೂಜಾಟ ವ್ಯಸನದಿಂದ ನಿಮ್ಮನ್ನು ದೂರವಿಡುತ್ತದೆ.

Follow Us:
Download App:
  • android
  • ios