ಬೆಳಗ್ಗೆ ಬೇಗ ಏಳೋಣ ಅಂದ್ರೂ ಆಲಸ್ಯಾನೇ ಬಿಡ್ತಿಲ್ವಾ ? ಈ ಸಿಂಪಲ್ ಟ್ರಿಕ್ಸ್ ಯೂಸ್ ಮಾಡಿ
ಬೆಳಗ್ಗೆ (Morning) ಬೇಗ ಎದ್ರೆ ಆರೋಗ್ಯಕ್ಕೆ (Health0 ಹಲವು ರೀತಿಯಲ್ಲಿ ಪ್ರಯೋಜನವಿದೆ ಅನ್ನೋದು ತುಂಬಾ ಮಂದಿಗೆ ಗೊತ್ತಿದೆ. ಆದ್ರೆ ಬೆಳಗ್ಗೆ ಏಳೋಕೆ ಮಾತ್ರ ಎಲ್ಲರಿಗೂ ಸೋಮಾರಿತನ (Lazy). ನಿಮ್ಗೂ ಬೆಳಗ್ಗೆ ಬೇಗ ಎದ್ದು ಫ್ರೆಶ್ ಆಗಿರೋಕೆ ಆಸೆ, ಆದ್ರೆ ಏಳೋಕೆ ಆಗ್ತಿಲ್ವಾ..ನಮ್ಮಲ್ಲಿದೆ ಅರ್ಲಿ ಮಾರ್ನಿಂಗ್ ಏಳೋಕೆ ಕೆಲವೊಂದು ಸಿಂಪಲ್ ಟಿಪ್ಸ್.
ನಗರಗಳಲ್ಲಿ ಎಷ್ಟೋ ಮಂದಿಗೆ ಬೆಳಗ್ಗೆ (Morning) ಆಗೋದು ಮಧ್ಯಾಹ್ನನಾನೇ. ವರ್ಕ್ ಫ್ರಂ ಹೋಮ್, ರಾತ್ರಿ ಪಾಳಿಯ ಕೆಲಸ ಈ ಹಲವು ಕಾರಣಗಳಿಂದಾಗಿ ಹೆಚ್ಚಿನವರು ಬೆಳಗ್ಗೆ ಬೇಗ ಏಳೋ ಕಷ್ಟ ತೆಗೆದುಕೊಳ್ಳುವುದಿಲ್ಲ. ಬೇಗ ಎದ್ದು ಮಾಡೋದಾದ್ರೂ ಏನಿದೆ ಅಂತ ಹೊತ್ತು ಮೀರಿದ ಮೇಲೆ ಎದ್ದು ಬಿಡ್ತಾರೆ. ಆದ್ರೆ ಬೆಳಗ್ಗೆ ಬೇಗ ಏಳೋದ್ರಿಂದ ಆರೋಗ್ಯಕ್ಕೆ (Health) ಸಿಗೋ ಪ್ರಯೋಜನಗಳು ಹಲವಾರು. ಬೆಳ್ಳಂಬೆಳಗ್ಗೆ ಎದ್ದರೆ ದಿನವಿಡೀ ಫ್ರೆಶ್ ಆಗಿರಲು ಸಾಧ್ಯವಾಗುತ್ತದೆ. ಮಾತ್ರವಲ್ಲ ಇಡೀ ದಿನ ಸಂಪೂರ್ಣವಾಗಿ ಚಟುವಟಿಕೆಯಿಂದ ಇರಬಹುದು. ಕೆಲವೊಬ್ಬರಿಗೆ ಬೆಳಗ್ಗೆ ಏಳೋದು ಒಳ್ಳೆಯದು ಅಂತ ಗೊತ್ತಿದ್ರೂ ಏಳೋಕೆ ಮಾತ್ರ ತುಂಬಾ ಕಷ್ಟವಾಗುತ್ತದೆ. ಎಷ್ಟು ಬಾರಿ ಏಳೋಣ ಅನಿಸಿದ್ರೂ ಬೆಳಗ್ಗೆ ಏಳೋಕೆ ಮಾತ್ರ ಆಗೋದೆ ಇಲ್ಲ. ಹೀಗಿದ್ದಾಗ ಏನ್ಮಾಡ್ಬೋದು. ಕಷ್ಟ ಆದ್ರೂ ಇಷ್ಟಪಷ್ಟು ಬೆಳಗ್ಗೆ ಏಳೋದು ಹೇಗೆ. ಇಲ್ಲಿದೆ ಕೆಲವೊಂದು ಟಿಪ್ಸ್.
ಬೆಳಗ್ಗೆ ಬೇಗ ಏಳುವುದು ಕಷ್ಟ, ಆದರೆ ಅಸಾಧ್ಯವೇನಲ್ಲ. ಇದಕ್ಕಾಗಿ ನಿಮ್ಮ ದಿನಚರಿಯಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಳ್ಳಿ. ಬೆಳಗ್ಗೆ 6 ಗಂಟೆಗೆ ಏಳುವ ಪ್ಲಾನ್ ಇದ್ದರೆ ಅಲಾರಂನ್ನು 5 ಗಂಟೆಗೆ ಹೊಂದಿಸಿ. ಅಲಾರಂನ್ನು (Alaram) ಮತ್ತೆ ಮತ್ತೆ ಸ್ನೂಜ್ ಮಾಡುವ ಅಭ್ಯಾಸವನ್ನು ಬಿಟ್ಟು ಬಿಡಿ. ಅದಲ್ಲದೆ ಬೆಳಗ್ಗೆ ಬೇಗ ಏಳಲು ಇನ್ನೇನು ಮಾಡಬಹುದು. ಇಲ್ಲಿದೆ ಕೆಲವು ಸಿಂಪಲ್ ಟಿಪ್ಸ್.
ಬೆಳಗ್ಗೆ ವಾಕ್ ಮಾಡಿ ಬಂದ ಕೂಡ್ಲೇ ಸುಸ್ತಾಗಿದ್ಯಾ? ಹಾಗಿದ್ರೆ ಇಂಥಾ ಫುಡ್ ತಿಂದು ನೋಡಿ
1. ಮುಂಚಿತವಾಗಿ ಎಚ್ಚರಗೊಳ್ಳುವ ಪ್ರಯೋಜನಗಳನ್ನು ಪರಿಗಣಿಸಿ
ನಿಮಗೆ ಬೇಗ ಏಳಬೇಕು ಎಂದು ಅನಿಸಿದರೆ ಮುಖ್ಯವಾಗಿ ನಿಮಗೆ ಅದರಿಂದ ಸಿಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದಿರಬೇಕು. ಬೆಳಗ್ಗೆ ಬೇಗ ಏಳುವುದರಿಂದ ದಿನವಿಡೀ ಎನರ್ಜಿಟಿಕ್ (Energetic) ಆಗಿರಬಹುದು, ಕಡಿಮೆ ಒತ್ತಡದ (Pressure) ಸಮಸ್ಯೆಯನ್ನು ಅನುಭವಿಸಬಹುದು ಎಂದು ನೀವು ತಿಳಿದರೆ, ಅಲಾರಂ ಆಫ್ ಮಾಡುವ ಗೋಜಿಗೇ ಹೋಗುವುದಿಲ್ಲ.
2. ಬೆಳಗ್ಗೆ ಬೇಗ ಏಳಲು ನಿರ್ಧಿಷ್ಟ ಕಾರಣಗಳಿರಲಿ
ಬೆಳಗ್ಗೆದ್ದು ವ್ಯಾಯಾಮ, ಯೋಗ (Yoga) ಮಾಡುವ ಅಭ್ಯಾಸ ರೂಢಿಸಿಕೊಳ್ಳಿ. ಇದರಿಂದ ಅನಿವಾರ್ಯವಾಗಿ ನೀವು ಬೆಳಗ್ಗೆ ಬೇಗ ಏಳುತ್ತೀರಿ. ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತೀರಿ. ಆದರೆ ನಿಮಗೆ ಬೇಗನೇ ಏಳಲು ಕಾರಣಗಳೇ ಇಲ್ಲವಾದಲ್ಲಿ, ನೀವು ಏಳುವ ಕಷ್ಟ ತೆಗೆದುಕೊಳ್ಳುವುದಿಲ್ಲ. ಇನ್ನೂ ಸ್ಪಲ್ಪ ಹೊತ್ತು ಮಲಗಬಹುದಲ್ವಾ ಅಂದುಕೊಳ್ಳುತ್ತೀರಿ.
3. ಮನಸ್ಥಿತಿಯನ್ನು ಬದಲಾಯಿಸಲು ಪ್ರಯತ್ನ ಮಾಡಿ
ಬೇಗ ಏಳುವುದು ಮೊದಲಿಗೆ ಸ್ವಾಭಾವಿಕ ಅನಿಸುವುದಿಲ್ಲ. ಹೀಗಾಗಿ ಮೊದಲಿಗೆ ಈ ಅಡಚಣೆಯಿಂದ ಹೊರಬರುವುದು ಮುಖ್ಯ. ಬೆಳಗ್ಗೆ ತಡವಾಗಿ ಏಳುವ ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಿ. ಇದರಿಂದ ರಾತ್ರಿ ನೀವು ಬೇಗ ಮಲಗುವ ಅಭ್ಯಾಸನ್ನು (Habit) ರೂಢಿ ಮಾಡಿಕೊಳ್ಳುತ್ತೀರಿ. ಇದರಿಂದ ಸಹಜವಾಗಿಯೇ ನೀವು ಬೆಳಗ್ಗೆ ಬೇಗ ಏಳಲು ಸಾಧ್ಯವಾಗುತ್ತದೆ.
ಬೆಳಗ್ಗೆ ಅಥವಾ ರಾತ್ರಿ, ಸ್ನಾನ ಮಾಡೋಕೆ ಸರಿಯಾದ ಸಮಯ ಯಾವುದು ?
4. ರಾತ್ರಿಯ ದಿನಚರಿಯನ್ನು ಸಿದ್ಧಪಡಿಸಿ
ರಾತ್ರಿಯ ದಿನಚರಿ ಒತ್ತಡದಿಂದ ಕೂಡಿದ್ದರೆ ಬೆಳಗ್ಗೆ ಬೇಗ ಏಳಲು ಕಷ್ಟವಾಗುತ್ತದೆ. ಹಾಗಾಗಿ ರಾತ್ರಿಯ ದಿನಚರಿ ಒತ್ತಡ ರಹಿತವಾಗಿರುವಂತೆ ನೋಡಿಕೊಳ್ಳಿ. ರಾತ್ರಿ ಹೆಚ್ಚು ಮೊಬೈಲ್ ನೋಡುತ್ತಾ, ಲ್ಯಾಪ್ ಟಾಪ್ ನಲ್ಲಿ ಮೂವಿ ವೀಕ್ಷಿಸುತ್ತಾ ಕುಳಿತುಕೊಳ್ಳಬೇಡಿ. ಇದರಿಂದ ಕಣ್ಣಿಗೆ (Eyes) ಸ್ಟ್ರೆಸ್ ಆಗುತ್ತದೆ. ನಿದ್ದೆ ಸರಿಯಾಗಿ ಆಗುವುದಿಲ್ಲ. ಹೀಗಾಗಿ ಬೆಳಗ್ಗೆ ಬೇಗ ಏಳಲು ಸಾಧ್ಯವಾಗುವುದಿಲ್ಲ. ಒಟ್ನಲ್ಲಿ ಮನಸ್ಸು ಮಾಡಿದ್ರೆ ಬೆಳಗ್ಗೆ ಬೇಗ ಏಳೋದು ಕಷ್ಟಾನೇ ಅಲ್ಲ. ಜೊತೆಗೆ ಬೆಳಗ್ಗೆ ಬೇಗ ಏಳುವ ಅಭ್ಯಾಸ ರೂಢಿಸಿಕೊಳ್ಳೋದ್ರಿಂದ ನೀವು ಹಲವು ಆರೋಗ್ಯ ಸಮಸ್ಯೆಗಳಿಂದಾನೂ ಮುಕ್ತಿ ಪಡೆಯಬಹುದು.