ಪರೀಕ್ಷೆಗೆ ಹೇಗೆ ಓದ್ಕೋಬೇಕು ಅನ್ನುವ ಟಿಪ್ಸ್ ಅನ್ನು ನಿಮಗೆ ತಂದೆ ತಾಯಿ, ಟೀಚರ್ಸ್‌ಗಳಿಂದ ಹಿಡಿದು ಎಲ್ಲರೂ ಕೊಟ್ಟಿರ್ತಾರೆ. ಅದಕ್ಕೆ ತಕ್ಕಂತೆ ನೀವು ಪ್ರಿಪೇರ್ ಕೂಡ ಆಗಿರ್ತೀರಿ ಅಂತಿಟ್ಕೊಳ್ಳಿ. ನಿಮ್ಮ ಪೂರ್ವಸಿದ್ಧತೆಯಲ್ಲಿ ಏನೂ ಕೊರತೆ ಆಗಿರೋಲ್ಲ. ಆದ್ರೂ ಕೆಲವೊಮ್ಮೆ ಕೆಲವು ಮಕ್ಕಳಿಗೆ, ಸಂಪೂರ್ಣ ಓದ್ಕೊಂಡಉ ಹೋಗಿದ್ರೂ ಹೈ ಸ್ಕೋರ್‌ ಮಾಡೋಕೆ ಆಗೋಲ್ಲ. ಅದಕ್ಕೆ ಕಾರಣ ಏನಂತ ಕೇಳಿದ್ರೆ, ಎಕ್ಸಾಮ್‌ ಹಾಲ್‌ನಲ್ಲಿ ಯಾವುದಾದರೂ ಅನ್‌ ಎಕ್ಸ್‌ಪೆಕ್ಟೆಡ್‌ ಪ್ರಾಬ್ಲಮ್‌ ಎದುರಾಯ್ತು ಅಂತ ಹೇಳಿರ್ತಾರೆ. ಅಂತ ಸಮಸ್ಯೆಗಳು ನಮನಿಮಗೂ ಎದುರಾಗಬಹುದು. ಅದಕ್ಕೂ ನೀವು ಮಾನಸಿಕವಾಗಿ ಸಿದ್ದರಾಗಿರಬೇಕು. ಅವು ಯಾವುದು ಮತ್ತು ಎದುರಿಸೋದು ಹೇಗೆ?

- ಹಿಂದಿನ ದಿನ ಪೂರ್ತಿ ನಿದ್ದೆಗೆಟ್ಟು ಓದಿರುತ್ತೀರಿ. ಮುಂಜಾನೆ ಮಿಂದು, ಊಟ ಮಾಡಿ, ಫ್ರೆಶ್ ಅಗಿಯೇ ಎಕ್ಸಾಂ ಬರೆಯಲು ಹೋಗಿರುತ್ತೀರಿ. ಬೆಳಗ್ಗೆ ಹತ್ತು ಗಂಟೆ ಹೊತ್ತಿಗೆ ನಿಮ್ಮ ಮೂಡ್‌ ಸರಿಯಾಗಿಯೇ ಇರುತ್ತೆ. ಆದ್ರೆ, ಬಿಸಿಲು ಏರ್ತಾ ಹೋದ ಹಾಗೆ, ಸುಮಾರು ೧೧ ಗಂಟೆ ಹೊತ್ತಿಗೆ, ನಿಮ್ಮ ತಲೆ ನೋಯಲು ಆರಂಭವಾಗುತ್ತೆ. ಇದು ರಾತ್ರಿ ನಿದ್ರೆಗೆಟ್ಟ ಪರಿಣಾಮ, ತಲೆ ನೋಯೋದರಿಂದ ಬರೆಯೋದರ ಕಡೆ ಪೂರ್ತಿ ಗಮನ ಹರಿಸೋಕೆ ಆಗೊಲ್ಲ. ಓದಿರೋ ವಿಷಯಗಳೂ ಕಲಸು ಮೇಲೋಗರ ಆಗಿರುತ್ವೆ. ಇದಕ್ಕೆ ಪರಿಹಾರ- ನೀವು ಸಿಲೆಬಸ್ ಮುಗಿಸಿರಿ ಅಥವಾ ಬಿಡಿ, ಪರೀಕ್ಷೆ ಹಿಂದಿನ ರಾತ್ರಿ ಚೆನ್ನಾಗಿ ನಿದ್ದೆ ಮಾಡಿ.

- ಪ್ರಶ್ನೆ ಪತ್ರಿಕೆಯನ್ನು ಸರಿಯಾಗಿ ಒಮ್ಮೆ ಪೂರ್ತಿಯಾಗಿ ಓದಿ ನೋಡಿ. ಇದನ್ನು ಶಿಕ್ಷಕರೂ ನಿಮಗೆ ಹೇಳಿರುತ್ತಾರೆ. ಇದರಿಂದ ನಿಮಗೆ ಆಗೋ ಉಪಯೋಗ ಏನು ಗೊತ್ತಾ? ಈ ಪ್ರಶ್ನೆಗಳಲ್ಲಿ ತಾನು ಯಾವುದು ಓದಿದ್ದೀನಿ, ಯಾವುದು ಉತ್ತರಿಸಲು ಸುಲಭ ಅಂತ ನಿಮಗೆ ಗೊತ್ತಾಗಿಬಿಡುತ್ತೆ. ಯಾವುದು ಸುಲಭ ಹಾಗೂ ಪೂರ್ತಿಯಾಗಿ ನಿಮಗೆ ಗೊತ್ತಿದೆಯೋ ಅಂಥದನ್ನು ಮೊದಲು ಬರೆದು ಮುಗಿಸಿ ಬಿಡುವುದು ಸುಲಭ. ಕಷ್ಟ ಅನ್ನಿಸಿದ ಪ್ರಶ್ನೆಗಳನ್ನು ನಂತರ ಉತ್ತರಿಸಲು ಇಟ್ಟುಕೊಳ್ಳಿ.

 

ಖುಷ್ ಖುಷಿಯಾಗಿ ಪರೀಕ್ಷೆ ಅಟೆಂಡ್ ಮಾಡೋದು ಹೇಗೆ? ಇಲ್ಲಿವೆ ಟಿಪ್ಸ್.

 

- ಸಮಯದ ಕೊರತೆ ಅನ್ನಿಸುವುದು ಸಾಮಾನ್ಯ. ಇದು ಉಂಟಾಗುವುದು ನೀವು ಪ್ರಶ್ನೆಗಳಿಗೆ ಸರಿಯಾದ ಸಮಯದ ವಿತರಣೆ ಮಾಡಿಲ್ಲದೆ ಇರುವುದರಿಂದ. ಅಬ್ಜೆಕ್ಟಿವ್‌ ಪ್ರಶ್ನೆಗಳಿಗೆ ನೀವು ಹೆಚ್ಚು ಸಮಯ ವಿನಿಯೋಗಿಸುವಂತೆಯೇ ಇಲ್ಲ. ಕ್ಷಣಾರ್ಧದಲ್ಲಿ ಇವುಗಳಿಗೆ ಉತ್ತರಿಸಿ ಮುಂದೆ ಹೋಗಬೇಕು. ವಿವರಣಾತ್ಮಕವಾಗಿ ಬರೆಯಬೇಕಾದ, ಎಸ್ಸೇ ಟೈಪ್‌ ಕ್ವೆಶ್ಚನ್‌ಗಳಿಗೆ ಹೆಚ್ಚಿನ ಸಮಯ ಬೇಕು. ಹೀಗೆ ಸಮಯ ನಿಗದಿ ಮೊದಲು ಮಾಡಿಟ್ಟುಕೊಂಡರೆ, ಕೊನೆಯ ಕ್ಷಣದಲ್ಲಿ ಗಡಿಬಿಡಿಯಾಗುವುದು, ಪ್ರಶ್ನೆಗಳು ಬಿಟ್ಟುಹೋಗುವುದು ತಪ್ಪುತ್ತದೆ.

- ಸಾಕಷ್ಟು ನೀರು ಕುಡಿಯಬೇಕು ನಿಜ; ಆದರೆ ಪರೀಕ್ಷೆ ಆರಂಭಕ್ಕೆ ಮೊದಲು ತುಂಬಾ ನೀರು ಕುಡಿದರೆ ಕೆಳಹೊಟ್ಟೆಯ ಒತ್ತಡ ಹೆಚ್ಚಾಗಿ, ವಾಶ್‌ರೂಂಗೆ ಹೋಗಬೇಕಾದೀತು. ಅದಕ್ಕೆ ಅವಕಾಶ ಸಿಗದಿದ್ದರೆ ಹೊಟ್ಟೆಯ ಸಂಕಟ ಒತ್ತಿಟ್ಟುಕೊಂಡು ಉತ್ತರ ಬರೆಯುವುದು ಕಷ್ಟಕರ.

 

ಎಕ್ಸಾಂ ಟೈಮ್‌ನಲ್ಲಿ ವೈರಲ್‌ ಆಗ್ತಿರೋ ಪ್ರಿನ್ಸಿಪಾಲ್‌ ಪತ್ರದಲ್ಲೇನಿದೆ! 

 

- ಕೆಲವೊಮ್ಮೆ ಸ್ಕ್ವಾಡ್‌ ನಿಮ್ಮ ಪರೀಕ್ಷೆ ಹಾಲ್‌ಗೆ ಭೇಟಿ ಕೊಡಬಹುದು. ನಿಮ್ಮಲ್ಲಿ ಅನುಮಾನ ಬಂದವರನ್ನು ತಪಾಸಣೆಗೆ ಒಳಪಡಿಸಬಹುದು. ನಿಮ್ಮ ತಪ್ಪು ಏನೂ ಇಲ್ಲದಿದ್ದರೂ, ಸುಮ್ಮನೇ ಅನುಮಾನಕ್ಕೆ ತುತ್ತಾಗಿ ಅವರ ತಪಾಸಣೆಗೆ ಒಳಗಾಗಬೇಕಾದೀತು. ಅಂಥ ಸಂದರ್ಭದಲ್ಲಿ ನರ್ವಸ್ ಆಗಬೇಡಿ. ಅವರ ಪ್ರಶ್ನೆಗಳಿಗೆ ಕೂಲ್‌ ಆಗಿ ಉತ್ತರ ಕೊಡಿ. ಉದ್ವೇಗ ಇಲ್ಲದೆ ಅವರಿಗೆ ಸಹಕರಿಸಿ. ಅವರು ಹೋದ ಮೇಲೆ ಎಲ್ಲ ಮರೆತು ಆರಾಮಾಗಿ ಉತ್ತರ ಬರೆಯಲು ಕೂರಿ. ಅಕ್ಕಪಕ್ಕದವರು ನಿಮ್ಮನ್ನೇ ನೋಡುತ್ತಿದ್ದಾರೆ ಎನ್ನುವ ಭಾವನೆ ಬಿಟ್ಟುಬಿಡಿ. ಅವರಿಗೆ ಅವರ ಪೇಪರ್‌ ಬರೆಯುವ ಕಷ್ಟವೇ ಸಾಕಷ್ಟಿದೆ, ನಿಮ್ಮನ್ನೇಕೆ ನೋಡುತ್ತಾರೆ?

- ನೀವು ಕಾಪಿ ಮಾಡಲ್ಲ ಅಂತ ಗೊತ್ತು. ಆದರೆ ನಿಮ್ಮ ಪಕ್ಕದವರು ನಿಮ್ಮ ಉತ್ತರವನ್ನು ನೋಡಿ ಕಾಪಿ ಮಾಡಲು ಯತ್ನಿಸಬಹುದು. ಅಂಥವರಿಗೆ ಸಹಕಾರ ಕೊಡಬೇಡಿ. ಸಿಕ್ಕಿಬಿದ್ದರೆ ಆತನ ಜೊತೆಗೆ ನೀವೂ ಕಷ್ಟ ಅನುಭವಿಸುತ್ತೀರಿ. ಸುಮ್ಮನೇ ನಿಮ್ಮ ಪಾಡಿಗೆ ಉತ್ತರ ಬರೆಯಿರಿ. ಆತನ ಅಥವಾ ಆಕೆಯ ಸನ್ನೆಗಳಿಗೆ ಸ್ಪಂದಿಸಲೂ ಮುಂದಾಗಬೇಡಿ. ಪರೀಕ್ಷೆಯ ನಂತರ ಅವರು ಮಾತನಾಡಿಸಲು ಬಂದರೆ ಉತ್ತರಿಸಲೂ ಬೇಡಿ.