Asianet Suvarna News Asianet Suvarna News

Healthy Lifestyle : ಬೆಳಿಗ್ಗೆ ಬೇಗ ಏಳೋಕಾಗ್ತಿಲ್ಲ ಅನ್ನೋರು ಈ ಟ್ರಿಕ್ಸ್ ಫಾಲೋಮಾಡಿ

ನಾಳೆ ಎಂದವನ ಮನೆ ಹಾಳು ಎನ್ನುವ ಗಾದೆ ಇದೆ. ಅನೇಕರಿಗೆ ಈ ನಾಳೆ ಬರೋದೇ ಇಲ್ಲ. ಬೆಳಿಗ್ಗೆ ಏಳುವ ವಿಷ್ಯದಲ್ಲೂ ಹಾಗೆ. ನಾಳೆ ಏಳ್ತೇನೆ ಎನ್ನುವವರಿಗೆ ಯಾವ ನಾಳೆ ಎಂಬುದು ಗೊತ್ತಿರೋದಿಲ್ಲ. ನೀವೂ ನಾಳೆ ನಾಳೆ ಎನ್ನುವ ಬದಲು ಇವತ್ತು ಬೆಳಿಗ್ಗೆ ಬೇಗ ಏಳಲು ಈ ಟಿಪ್ಸ್ ಪಾಲಿಸಿ.
 

 Tips to get up early morning which make you feel healthy and fit
Author
Bangalore, First Published Aug 16, 2022, 3:30 PM IST

ನಾಳೆ ಬೆಳಿಗ್ಗೆ ಬೇಗ ಏಳ್ಬೇಕು ಹೀಗಂತ ಎಲ್ಲರೂ ಅಂದುಕೊಂಡು ಮಲಗಿರ್ತಾರೆ. ಆದ್ರೆ ಅದೆಷ್ಟು ನಾಳೆಗಳು ಕಳೆದ್ವು ಎಂಬುದು ನೆನಪಿರುವುದಿಲ್ಲ. ರಾತ್ರಿ ನಾಳೆ ಬೇಗ ಏಳ್ಬೇಕು ಎಂದುಕೊಂಡು ಮಲಗೋದು ನಿಜ. ಬೆಳಗಾಗ್ತಿದ್ದಂತೆ ಮಗ್ಗಲು ಬದಲಿಸಿ ಮತ್ತೆ ಮಲಗಬೇಕೆಂಬ ಬಯಕೆಯಾಗುತ್ತದೆ. ಬೆಳಿಗ್ಗೆ ಬೇಗ ಎದ್ರೆ ಎಲ್ಲ ಕೆಲಸ ಸುಲಭವಾಗಿ ಮುಗಿಯುತ್ತದೆ. ಇದ್ರಿಂದ ಒತ್ತಡವಿಲ್ಲದ ಜೀವನ ನಡೆಸಬಹುದು. ವ್ಯಾಯಾಮ, ಯೋಗ, ವಾಕಿಂಗ್ ಹೀಗೆ ನಿಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೆ ಸಮಯ ಸಿಗುತ್ತದೆ. ಇದು ಇಷ್ಟವಿಲ್ಲವೆನ್ನುವವರು ಇಷ್ಟವಾಗುವ ಪುಸ್ತಕ ಕೂಡ ಓದ್ಬಹುದು. ಅದೇ ಬೆಳಿಗ್ಗೆ ತಡವಾದ್ರೆ ಕಥೆ ಮಗಿದಂತೆ. ಎಲ್ಲದಕ್ಕೂ ಆತುರ. ಸರಿಯಾಗಿ ಸ್ನಾನ, ಆಹಾರ ಸೇವನೆಗೂ ಸಮಯ ಸಿಗೋದಿಲ್ಲ. ಎಲ್ಲವನ್ನು ಆತುರಾತುರದಲ್ಲಿ ಮಾಡೋದ್ರಿಂದ ಒತ್ತಡ, ಅನಾರೋಗ್ಯವನ್ನು ಮೈಮೇಲೆ ಎಳೆದುಕೊಳ್ತೇವೆ. ಬೆಳಿಗ್ಗೆ ಏಳುವುದ್ರ ಪ್ರಯೋಜನ ತಿಳಿದಿದ್ದರೂ ಬಹುತೇಕರಿಗೆ ಬೆಳ್ಳಂಬೆಳಿಗ್ಗೆ ಏಳೋದು ಕಷ್ಟದ ಕೆಲಸ. ಬೇಗ ಹಾಸಿಗೆ ಬಿಟ್ಟು ಏಳ್ಬೇಕು, ಆಲಸ್ಯ ಬಿಡ್ಬೇಕು ಅಂದ್ರೆ ಏನು ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.

ಬೆಳಿಗ್ಗೆ (Morning) ಬೇಗ ಏಳ್ಬೇಕೆಂದ್ರೆ ಹೀಗೆ ಮಾಡಿ : 

ಅಲಾರಾಂ (Alarm) ಹಾಸಿಗೆಯಿಂದ ದೂರವಿರಲಿ : ಪ್ರತಿಯೊಬ್ಬರೂ ಬೆಳಿಗ್ಗೆ ಬೇಗ ಏಳ್ಬೇಕೆಂದು ಅಲಾರಾಂ ಇಟ್ಟುಕೊಳ್ತಾರೆ. 5 ಗಂಟೆಯಿಂದಲೇ ಅಲಾರಾಂ ಹೊಡೆದುಕೊಳ್ತಿರುತ್ತದೆ. ಅದನ್ನು ಆಫ್ ಮಾಡಿ ಮತ್ತೆ ಮಲಗ್ತಾರೆ. ತಲೆ ಪಕ್ಕದಲ್ಲಿಯೇ ಅಲಾರಾಂ ಅಥವಾ ಮೊಬೈಲ್ (Mobile) ಇರುವ ಕಾರಣ ನಾವು ಮತ್ತೆ ಮಲಗ್ತೇವೆ. ಅದೇ ಅಲಾರಾಂ ದೂರವಿದ್ರೆ ಅದನ್ನು ಆಫ್ ಮಾಡಲು ನಾವು ಏಳಬೇಕಾಗುತ್ತದೆ. ಹಾಸಿಗೆಯಿಂದ ಎದ್ದರೆ ಕೆಲವರಿಗೆ ನಿದ್ರೆ ಹೋದಂತೆ. ಒಮ್ಮೆ ಹಾಸಿಗೆಯಿಂದ ಮೇಲೆದ್ರೆ ಮತ್ತೆ ಕೆಲವರು ಹಾಸಿಗೆಗೆ ಹೋಗುವುದಿಲ್ಲ. ನೀವೂ ಆ ಸ್ವಭಾವದವರಾಗಿದ್ದರೆ ಹಾಸಿಗೆಯಿಂದ ಅಲಾರಾಂ ದೂರವಿರಲಿ. ಅದು ಬಡಿದುಕೊಳ್ತಿದ್ದಂತೆ ಅದನ್ನು ಬಂದ್ ಮಾಡಲು ನೀವು ಹಾಸಿಗೆ ಬಿಟ್ಟು ಎದ್ದೇ ಏಳ್ತೀರಿ.

ದೇಹದ ಶಕ್ತಿ ಹೆಚ್ಚಿಸುವ ಪೇರಲೆ ಹಲವು ರೋಗಗಳಿಗೆ ದಿವ್ಯೌಷಧಿಯೂ ಹೌದು!

ಬೆಡ್ ರೂಮ್ ನಿಂದ ಹೊರಗೆ ಬರೋದು ಹೇಗೆ? : ಮೊದಲೇ ಹೇಳಿದಂತೆ ಅಲಾರಾಂ ದೂರವಿದೆ ಎಂದ್ರೆ ಕೆಲವರು ಹಾಸಿಗೆ ಬಿಟ್ಟು ಏಳ್ತಾರೆ. ಮತ್ತೆ ಮಲಗಲು ಹೋಗೋದಿಲ್ಲ. ಇನ್ನು ಕೆಲವರು ಕಣ್ಮುಚ್ಚಿಕೊಂಡು ಅಲಾರಾಂ ಇರುವ ಸ್ಥಳಕ್ಕೆ ಹೋಗಿ ಅದನ್ನು ಆಫ್ ಮಾಡಿ ಮತ್ತೆ ಬಂದು ಮಲಗ್ತಾರೆ. ಆ ಸ್ವಭಾವದವರು ನೀವಾಗಿದ್ದರೆ  ಅಲಾರಾಂ ಬಂದ್ ಮಾಡಿದ ತಕ್ಷಣ ಮಲಗುವ ಕೋಣೆಯಿಂದ ಹೊರಗೆ ಬನ್ನಿ. ವಿಶಾಲವಾದ ಜಾಗದಲ್ಲಿ, ತಾಜಾ ಗಾಳಿ ಬೀಸುವ ಜಾಗಕ್ಕೆ ಬನ್ನಿ. ಮನೆಯ ಮುಖ್ಯದ್ವಾರ ತೆಗೆದು ಮನೆಯಿಂದ ಹೊರಗೆ ಕೂಡ ಬರಬಹುದು. ಆ ತಾಜಾ ಗಾಳಿ ನಿಮ್ಮನ್ನು ಪ್ರೆಶ್ ಮಾಡುತ್ತದೆ. ನಿಮ್ಮ ನಿದ್ರೆ ದೂರ ಓಡಲು ಕಾರಣವಾಗುತ್ತದೆ. ಇಷ್ಟು ಮಾಡಿದ್ರೂ ನಿದ್ರೆ ಹೋಗ್ತಿಲ್ಲ ಎನ್ನುವವರು ಮುಖಕ್ಕೆ ಸ್ವಲ್ಪ ತಣ್ಣನೆ ನೀರನ್ನು ಎರಚಿಕೊಳ್ಳಿ. 

ಸಂಜೆ 7 ಗಂಟೆಯ ನಂತರ ಅಪ್ಪಿತಪ್ಪಿಯೂ ಇಂಥಾ ಆಹಾರ ತಿನ್ಬೇಡಿ

ಮೊಬೈಲ್‌ ಸಹವಾಸ ಬೇಡ : ರಾತ್ರಿ ಉತ್ತಮ ನಿದ್ರೆಯಾದ್ರೆ ಬೆಳಿಗ್ಗೆ ನಿದ್ರೆ ಸಮಸ್ಯೆ ಕಾಡುವುದಿಲ್ಲ. ಯಾವುದೇ ಸಾಹಸವಿಲ್ಲದೆ ನೀವು ಬೆಳಿಗ್ಗೆ ಬೇಗ ಎದ್ದಿರುತ್ತೀರಿ. ಅದೇ ರಾತ್ರಿ ಸರಿಯಾಗಿ ನಿದ್ರೆಯಾಗಿಲ್ಲವೆಂದ್ರೆ ಬೆಳಿಗ್ಗೆ ಏಳೋದು ಕಷ್ಟ. ರಾತ್ರಿ ಮಲಗುವ ಮೊದಲು ಟಿವಿ, ಲ್ಯಾಪ್ ಟಾಪ್ ಅಥವಾ ಮೊಬೈಲ್ ಬಳಸಿದ್ದರೆ ನಿಮಗೆ ಸರಿಯಾಗಿ ನಿದ್ರೆ ಬರುವುದಿಲ್ಲ. ಹಾಗಾಗಿ ಮಲಗುವ ಒಂದು ಗಂಟೆ ಮೊದಲು ಯಾವುದೇ ಗೆಜೆಟ್ ಬಳಸಬೇಡಿ. ಬೆಳಿಗ್ಗೆ ಎದ್ದ ತಕ್ಷಣ ಅನೇಕರು ಮೊಬೈಲ್ ನೋಡ್ತಾರೆ. ಇದು ಕೂಡ ಒಳ್ಳೆಯ ಹವ್ಯಾಸವಲ್ಲ. ಕೆಲವೊಮ್ಮೆ ಮೊಬೈಲ್ ನೋಡ್ತಾ ಮತ್ತೆ ಎಲ್ಲೇ ನಿದ್ರೆ ಹೋಗುವವರಿದ್ದಾರೆ. ಹಾಗಾಗಿ ಬೆಳಿಗ್ಗೆ ಮತ್ತು ರಾತ್ರಿ ಎರಡೂ ಸಮಯದಲ್ಲಿ ಮೊಬೈಲ್ ಬಳಕೆ ಮಾಡ್ಬೇಡಿ. 
 

Follow Us:
Download App:
  • android
  • ios