Asianet Suvarna News Asianet Suvarna News

ಸಿಂಪಲ್ ವಿಧಾನಗಳ ಮೂಲಕ ಮನೆಯಲ್ಲೇ ಶಕ್ತಿ ವೃದ್ಧಿಸಿ ಸದೃಢರಾಗಿರಿ..! ಇಲ್ಲಿವೆ ಟಿಪ್ಸ್

ದೈಹಿಕ ಮತ್ತು ಮಾನಸಿಕ ಆರೋಗ್ಯ ಬಹಳ ಮುಖ್ಯ. ಹಾಗೆಯೇ ಉತ್ತಮ ಸ್ಟಾಮಿನಾವೂ ಇರಬೇಕು. ಮನೆಯಲ್ಲಿದ್ದು ಅನ್‌ಲಾಕ್ ಸಮಯದಲ್ಲಿ ನಮ್ಮ ಮೊದಲಿನ ಚುಟವಟಿಕೆ, ಚುರುಕುತನವನ್ನು ಮತ್ತೆ ಕಂಡುಕೊಳ್ಳುವುದು ಸಲುಭವಲ್ಲ. ಅದಕ್ಕಾಗಿ ಇಲ್ಲಿವೆ ಕೆಲವು ಸಲಹೆ

tips to boost your stamina naturally staying at home
Author
Bangalore, First Published Aug 12, 2020, 12:34 PM IST

ಲಾಕ್‌ಡೌನ್ ಜನರನ್ನು ಮನೆಯೊಳಗೆ ಬಂಧಿಯಾಗಿಸಿದೆ. ಒಂದಷ್ಟೂ ಚಟುವಟಿಕೆ ಇಲ್ಲದೆ ಮನೆಯಲ್ಲೇ ಕುಳಿತುಕೊಳ್ಳವಂತೆ ಮಾಡಿದೆ. ಈ ಜೀವನ ಶೈಲಿಯಲ್ಲಿ ಚಟುವಟಿಕೆ ಕಮ್ಮಿಯಾಗಿದೆ. ನಮ್ಮ ಶಕ್ತಿಯೂ ಕಡಿಮೆಯಾಗುತ್ತಿದೆ.

ದೈಹಿಕ ಮತ್ತು ಮಾನಸಿಕ ಆರೋಗ್ಯ ಬಹಳ ಮುಖ್ಯ. ಹಾಗೆಯೇ ಉತ್ತಮ ಸ್ಟಾಮಿನಾವೂ ಇರಬೇಕು. ಮನೆಯಲ್ಲಿದ್ದು ಅನ್‌ಲಾಕ್ ಸಮಯದಲ್ಲಿ ನಮ್ಮ ಮೊದಲಿನ ಚುಟವಟಿಕೆ, ಚುರುಕುತನವನ್ನು ಮತ್ತೆ ಕಂಡುಕೊಳ್ಳುವುದು ಸಲುಭವಲ್ಲ. ಅದಕ್ಕಾಗಿ ಇಲ್ಲಿವೆ ಕೆಲವು ಸಲಹೆ

ಆರೋಗ್ಯಕರ ಡಯೆಟ್

ಮನೆಯಲ್ಲೇ ಆಹಾರ ತಯಾರಿಸಿ ಆರೋಗ್ಯಕರವಾಗಿ ಉಣ್ಣುವ ಸಮಯವಿದು. ಆರೋಗ್ಯಕರ ಮತ್ತು ಶುಚಿ ರುಚಿ ಆಹಾರ ಸೇವಿಸಿ. ಆಹಾರವನ್ನು ವ್ಯಾಲೆನ್ಸ್ ಮಾಡಿಕೊಳ್ಳಿ. ಆದಷ್ಟು ಪೌಷ್ಟಿಕಾಂಶಯುಕ್ತ ಆಹಾರವನ್ನು ಆರಿಸಿ. ಈ ನಿಟ್ಟಿನಲ್ಲಿ ಡ್ರೈ ಫ್ರೂಟ್ಸ್ ಹೆಚ್ಚು ಸಹಕಾರಿ.

tips to boost your stamina naturally staying at home

ನಿಮ್ಮ ಶಕ್ತಿ ವರ್ಧಿಸುವ ಆಹಾರ ಸೇವಿಸಿ

ಎನರ್ಜಿ ಬೂಸ್ಟಿಂಗ್ ಡ್ರಿಂಕ್ಸ್ ಬದಲು,  ಅದನ್ನೇ ಆಹಾರ ರೂಪದಲ್ಲಿ ಸೇವಿಸಿ. ಕೃತಕ ಎನರ್ಜಿ ಡ್ರಿಂಕ್ಸ್‌ಗಳನ್ನು ಅವಾಯ್ಡ್ ಮಾಡಿ. ಆಯುರ್ವೇದಿಕ ಹರ್ಬ್, ಅಶ್ವಗಂಧ, ತುಳಸಿಯಂತಹ ಗಿಡ ಮೂಲಿಕೆಯನ್ನು ಸೇರಿಸಿಕೊಳ್ಳಿ.

tips to boost your stamina naturally staying at homeಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ

ಏನೇ ಆಹಾರ ಸೇವಿಸುವಾಗ ಸಮಯಕ್ಕೆ ಸರಿಯಾಗಿ ಸೇವಿಸುವುದು ಅಗತ್ಯ. ನೀವು ಸೇವಿಸುವ ಆಹಾರ ಹಾಗೂ ಸಮಯ ಎರಡೂ ಅತೀ ಮುಖ್ಯ. ಇದು ನಿಮ್ಮ ಎನರ್ಜಿ ಲೆವೆಲ್ ಹೆಚ್ಚಿಸುತ್ತದೆ. ನೀವೀಗಾಗಲೇ ಯಾವುದಾದರೂ ಡಯಟ್ ಪ್ಲಾನ್‌ನಲ್ಲಿದ್ದರೆ ಅದನ್ನು ಮುಂದುವರಿಸಿ, ಅಥವಾ ನಿಧಾನವಾಗಿ ನಿಮ್ಮ ಹಿಂದಿನ ಆಹಾರ ಶೈಲಿಗೆ ಬದಲಾಗಿ.

ನಿಧಾನವಾಗಿ ಅಭ್ಯಾಸ ಮಾಡಿಕೊಳ್ಳಿ

ಯಾವುದೇ ಬದಲಾವಣೆಯಾದರೂ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ಆರಂಭದಲ್ಲಿ ಕಷ್ಟವಾಗಬಹುದು. ಶಕ್ತಿ ಹೀನ, ಸುಸ್ತು, ಡಲ್ ಎಂದನಿಸಬಹುದು. ಆದರೆ ಇಷಕ್ಕೇ ಅಭ್ಯಾಸ ನಿಲ್ಲಿಸಬೇಡಿ. ಹೊಸ ಅಭ್ಯಾಸ ಹೊಂದಿಕೊಳ್ಳಲು ಸಮಯ ಬೇಕು. ಸವಾಕಾಶ ಮಾಡಿಕೊಳ್ಳಿ.

ಯೋಗ, ಮೆಡಿಟೇಷನ್ ಮಾಡಿ

ಇವೆರಡೂ ನಿಮಗೆ ಹೆಚ್ಚಿನ ನೆಮ್ಮದಿಯನ್ನು ಕೊಡುತ್ತದೆ. ಇದರಿಂದ ನಿಮಗೆ ರಿಲಾಕ್ಸ್ ಆಗಲು ಸಾಧ್ಯ. ಯೋಗ, ಮಡಿಟೇಷನ್‌ನಿಂದ ಸ್ಟ್ರೆಸ್, ಮನಸಿನ ಗೊಂದಲ ಕಡಿಮೆಯಾಗುತ್ತದೆ.

tips to boost your stamina naturally staying at home

ಸರಿಯಾಗಿ ನಿದ್ದೆ ಮಾಡಿ

ಸರಿಯಾಗಿ ನಿದ್ದೆ ಮಾಡಿ. ಮಲಗುವ ಮತ್ತು ಏಳುವ ಸಮಯ ಒಂದೇ ರೀತಿ ಇರಲಿ. ಬೇಕಾಬಿಟ್ಟಿ ಮಲಗಿ ಏಳುವ ಅಭ್ಯಾಸ ದೇಹಕ್ಕೆ ಒಳ್ಳೆಯದಲ್ಲ.

ವ್ಯಾಯಾಮ

ವ್ಯಾಯಾಮದಿಂದ ದೈಹಿಕ ಫಿಟ್‌ನೆಸ್‌ ಜೊತೆಗೆ ಮಾನಸಿಕ ನೆಮ್ಮದಿಯೂ ಸಿಗುತ್ತದೆ. ದೈಹಿಕವಾಗಿ ಚಟುವಟಿಕಯಿಂದಿರುವುದು ಒತ್ತಡವನ್ನು ಕಡಿಮೆ ಮಾಡುತ್ತದೆ. ನಿಧಾನವಾಗಿ ವ್ಯಾಯಾಮ ಅಭ್ಯಾಸ ಮಾಡಿ

ಟೀ, ಕಾಫಿ ಕಡಿಮೆ ಮಾಡಿ

ಟೀ, ಕಾಫಿ, ಸಿಗರೇಟ್ ಬೇಕೇ ಬೇಕೆನ್ನುವನ್ನು ಕಂಟ್ರೋಲ್ ಮಾಡಿ. ದಿನಕ್ಕೆ ಎರಡೇ ಸಲ ಟೀ ಅಥವಾ ಕಾಫಿ ಕುಡಿಯಿರಿ. ಇದಕ್ಕೆ ಬದಲಾಗಿ ಬಿಸಿನೀರು ಅಥವಾ ಇತರ ಅರೋಗ್ಯಕರ ಪೇಯಾಯ್ಕೆ ಮಾಡಿಕೊಳ್ಳಬಹುದು.

tips to boost your stamina naturally staying at home

Follow Us:
Download App:
  • android
  • ios