Chewing Gum and Coronavirus!: ಈ ಚ್ಯೂಯಿಂಗಮ್‌ನಿಂದ ಕೊರೋನಾ ಹರಡೋ ಸ್ಪೀಡ್‌ಗೆ ಬ್ರೇಕ್

ಕೊರೋನಾವೈರಸ್(Coronavirus) ಒಂದಷ್ಟು ಸಮಯಕ್ಕೆ ಸ್ಲೋಡೌನ್ ಆದರೂ ಭೀತಿ ಇನ್ನೂ ಮುಗಿದಿಲ್ಲ. ಕೊರೋನಾ ಮ್ಯೂಟೇಷನ್‌ಗಳು, ವಿಧಗಳು ವಿಶ್ವದ ಹಲವು ದೇಶಗಳಲ್ಲಿ ವರದಿಯಾಗ್ತಿವೆ. ಈ ನಡುವೆ ಅಧ್ಯಯನವೊಂದು(Study) ಅಚ್ಚರಿಯ ವರದಿ ಬಿಡುಗಡೆಮಾಡಿದೆ. ಹೌದು. ಕೊರೋನಾಗೆ ಬ್ರೇಕ್ ಕೊಡುತ್ತಾ ಈ ಚ್ಯೂಯಿಂಗಮ್(Chewing Gum) ?

This Experimental Chewing Gum May Slow Down Coronavirus Transmission Says Study dpl

ದಕ್ಷಿಣ ಆಫ್ರಿಕಾ(South Africa) ಹಾಗೂ ಇತರ ರಾಷ್ಟ್ರಗಳಲ್ಲಿ ಹರಡುತ್ತಿರುವಂತಹ ಕೊರೋನಾ ವೈರಸ್‌ನ ಅತ್ಯಂತ ಅಪಾಯಕಾರಿ ವಿಧ ಒಮಿಕ್ರೋನ್(Omicron) ಕುರಿತು ಈಗಾಗಲೇ ಜಗತ್ತಿನಾದ್ಯಂತ ರಾಷ್ಟ್ರಗಳು ಭಾರೀ ಆತಂಕಕ್ಕೆ ಒಳಗಾಗಿವೆ. ಈ ಕುರಿತು ಸಾಂಕ್ರಾಮಿಕ ರೋಗ ಶಾಸ್ತ್ರಜ್ಞರು ಎಚ್ಚರಿಕೆ ಕೊಟ್ಟ ಮೇಲೆ ಜನರಲ್ಲಿ ಈ ಬಗ್ಗೆ ಇನ್ನಷ್ಟು ಭಯ ಮೂಡಿದೆ. ಈ ಹೊಸ ಕೊರೋನಾ ವಿಧದಿಂದಾಗಿ ಕೊರೋನಾವನ್ನು ತಡೆಯಲೇಬೇಕಾದ ಅನಿವಾರ್ಯತೆ ಮತ್ತಷ್ಟು ಹೆಚ್ಚಾಗಿದೆ. ಅದೇ ರೀತಿ ಕೊರೋನಾವನ್ನು ಆದಷ್ಟು ಬೇಗನೆ ತೊಡೆದುಹಾಕುವ ಅಗತ್ಯ ಎದುರಾಗಿದೆ.

ಕೊರೋನಾ ವಿರುದ್ಧ ತಜ್ಞರು ಬಹಳಷ್ಟು ಪ್ರಯೋಗಗಳನ್ನು ಮಾಡುತ್ತಿದ್ದು ಅಮೆರಿಕದ ಪೆನ್ಸಿಲ್‌ವಾನಿಯಾ ವಿಶ್ವವಿದ್ಯಾಲಯವು(University of Pennsylvania) ಕೊರೋನಾ ವಿರುದ್ದದ ಪ್ರಯೋಗಗಳಲ್ಲಿ ತೊಡಗಿದ್ದರು. ಇದೀಗ ಪೆನ್ಸಿಲ್‌ವಾನಿಯಾ ವಿಶ್ವವಿದ್ಯಾಲಯವು ಪ್ರಾಯೋಗಿಕ ಚ್ಯುಯಿಂಗಮ್‌ ಒಂದನ್ನು ಅಭಿವೃದ್ಧಿಪಡಿಸಿದ್ದು ಇದು ಜೊಲ್ಲುರಸದ ಮೂಲಕ ಕೊರೋನಾ ವೈರಸ್ ಹರಡುವುದನ್ನು ಕಡಿಮೆ ಮಾಡಲಿದೆ ಎನ್ನಲಾಗಿದೆ. ಈ ವಿಶೇಷ ಚ್ಯುಯಿಂಗಮ್(Chewing Gum) ಅಗಿಯುವಾಗ ಬಾಯಲ್ಲಿ ಜೊಲ್ಲುರಸದಲ್ಲಿ ನಿಲ್ಲುವ ಕೊರೋನಾ ವೈರಸ್ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ವೈರಸ್ ಹರಡುವ ವೇಗಕ್ಕೆ ತಡೆ ಒಡ್ಡುತ್ತದೆ ಎನ್ನಲಾಗಿದೆ. ಹೀಗಾಗಿ ಕೊರೋನಾ ಇರುವ ಜನರು ಮಾತಾಡುವಾಗ, ಕೆಮ್ಮುವಾಗ ಅಥವಾ ಉಸಿರಾಡುವಾಗ ಕೊರೋನಾ ಹರಡುವಿಕೆ ಕಡಿಮೆಯಾಗಿರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಕೊರೋನಾವೈರಸ್ (Coronavirus)ತಗುಲಿದವರು ಇದ್ದಾಗ ಮುಖ್ಯವಾಗಿ ಒಳಾಂಗಣದಲ್ಲಿ ಕೊರೋನಾವೈರಸ್ ಹನಿಗಳು, ಏರೋಸೊಲ್ಸ್‌ಗಳ ಮೂಲಕ ಹರಡುತ್ತದೆ. ಕೊರೋನಾ ಹರಡುವುದನ್ನು ತಡೆಯಲು ನಿಯಂತ್ರಿಸಲು, ಹೆಚ್ಚಾಗಿ ಭೌತಿಕ ಅಂತರ ಕಾಪಾಡಬೇಕಾಗುತ್ತದೆ. ಈ ಮೂಲಕ ಒಳಾಂಗಣ ಏರೋಸಾಲ್‌ಗಳ ಸಾಂದ್ರತೆಯನ್ನು ಕಡಿಮೆ ಮಾಡಲು ಕ್ರಮಗಳನ್ನು ಸೂಚಿಸಲಾಗಿದೆ.

ಚ್ಯುಯಿಂಗಮ್ ಹೇಗೆ ವೈರಸ್ ಹರಡುವಿಕೆ ಕಡಿಮೆ ಮಾಡುತ್ತದೆ ?

ಸಂಶೋಧಕರ ಪ್ರಕಾರ ಅವರು ಅಭಿವೃದ್ಧಿಪಡಿಸಿದ ಚ್ಯುಯಿಂಗಮ್ ಅಗಿಯುತ್ತಿದ್ದರೆ ಅದು ರಿಲೀಸ್ ಮಾಡುವ ಪ್ರೊಟೀನ್ ಕೊರೋನಾವೈರಸ್‌ನ್ನು ಟ್ರಾಪ್ ಮಾಡುತ್ತದೆ. ಇದು ಕೊರೊನಾವೈರಸ್ ಭರಿತ ಹನಿಗಳ ಮೂಲಕ ಕೊರೋನಾ ಹರಡುವುದನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಈ ಚ್ಯುಯಿಂಗಮ್ ಮುಖ್ಯವಾಗಿ ವ್ಯಾಕ್ಸಿನೇಷನ್‌ ಕಾರ್ಯಕ್ರಮಕ್ಕೆ ನೆರವಾಗುವುದರ ಜೊತೆಗೆ ಲಸಿಕೆಗಳ ಕೊರತೆ ಇರುವ ರಾಷ್ಟ್ರಗಳಲ್ಲಿ ಬಹಳಷ್ಟು ಪ್ರಯೋಜನಕಾರಿಯಾಗಲಿದೆ ಎಂದಿದ್ದಾರೆ.

This Experimental Chewing Gum May Slow Down Coronavirus Transmission Says Study dpl

ಈ ಅಧ್ಯಯನವನ್ನು ಮೊಲೆಕ್ಯುಲರ್ ಥೆರಪಿ ಎಂಬ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ವೈರಸ್-ಟ್ರ್ಯಾಪಿಂಗ್ ಪ್ರೊಟೀನ್‌ಗಳಿರುವ ಚೂಯಿಂಗ್ ಗಮ್ ರೋಗಿಗಳನ್ನು ಮೌಖಿಕ ವೈರಸ್ ಮರು-ಸೋಂಕುಗಳಿಂದ ರಕ್ಷಿಸಲು ಸಾಮಾನ್ಯ ಕೈಗೆಟುಕುವ ತಂತ್ರವಾಗಿದೆ. ಇದು ಇತರರಿಗೆ ಕೊರೋನಾ ಹರಡುವುದನ್ನು ಕಡಿಮೆ ಮಾಡುತ್ತದೆ ಎಂದು ಇದರಲ್ಲಿ ಬರೆಯಲಾಗಿದೆ

ಚ್ಯುಯಿಂಗಮ್‌ನಲ್ಲಿ ಏನಿದೆ ?

ಚ್ಯುಯಿಂಗಮ್ ಮೇಲ್ಮೈ ACE2 ಅಂಶವನ್ನು ಪ್ರೊಟೀನ್ ಪ್ರತಿಯನ್ನು ಹೊಂದಿದ್ದು, ಇದು ಕೊರೊನಾವೈರಸ್ ಜೀವಕೋಶಗಳಿಗೆ ಸೋಂಕು ಇನ್‌ಫಟಕ್ಟ್ ಆಗಲು ಬಳಸುವ ಸ್ಪೈಕ್ ಪ್ರೋಟೀನ್ ಆಗಿದೆ. ಪ್ರಯೋಗಗಳ ಸಮಯದಲ್ಲಿ ಗಮ್‌ನಲ್ಲಿರುವ ACE2 ಗ್ರಾಹಕಗಳಿಗೆ ವೈರಸ್ ಕಣಗಳು ಲಗತ್ತಿಸಲಾಗಿದೆ. ಚ್ಯುಯಿಂಗಮ್ ಅಗಿದರೆ ವೈರಲ್ ಲೋಡ್ ಶೇಕಡಾ 95ಕ್ಕಿಂತ ಹೆಚ್ಚು ಕಡಿಮೆಯಾಗಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

This Experimental Chewing Gum May Slow Down Coronavirus Transmission Says Study dpl

ದೃಢಪಡಿಸಿದ COVID-19 ನೊಂದಿಗೆ ಆಸ್ಪತ್ರೆಗೆ ದಾಖಲಾದ ರೋಗಿಗಳ ಜೊಲ್ಲುರಸ ಮತ್ತು ಸ್ವ್ಯಾಬ್ ಮಾದರಿಗಳನ್ನು ಬಳಸಿಕೊಂಡು ಸಂಶೋಧಕರು ಪರೀಕ್ಷಾ ಟ್ಯೂಬ್‌ಗಳಲ್ಲಿ ಚೂಯಿಂಗ್ ಗಮ್ ಅನ್ನು ಪರೀಕ್ಷಿಸಿದ್ದಾರೆ. ಗಮ್ ಇನ್ನೂ ಬಳಕೆಗೆ ಲಭ್ಯವಿಲ್ಲವಾದರೂ, ಗಮ್ US ಔಷಧ ನಿಯಂತ್ರಕರ ಅವಶ್ಯಕತೆಗಳನ್ನು ಪೂರೈಸುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.

ಮತ್ತಷ್ಟು ರಾಷ್ಟ್ರಗಳಿಗೆ ಹರಡಿದ ವೈರಸ್:

ಜಗತ್ತಿನ ನಿದ್ದೆಗೆಡಿಸಿರುವ ಕೋವಿಡ್‌ನ ಹೊಸ ರೂಪಾಂತರಿ ‘ಒಮಿಕ್ರೋನ್‌’ (Omicron) ತಣ್ಣಗೆ ಇನ್ನಷ್ಟುದೇಶಗಳಿವೆ ವ್ಯಾಪಿಸಿರುವುದು ಖಚಿತಪಟ್ಟಿದೆ. ಹೀಗಾಗಿ ಡೆಲ್ಟಾಗಿಂತಾ (Delta) ವೇಗಿ, ಲಸಿಕೆಯ ಕುಣಿಕೆಯನ್ನೂ ತಪ್ಪಿಸಬಲ್ಲದು ಎಂಬ ಕುಖ್ಯಾತಿ ಹೊಂದಿರುವ ಈ ವೈರಸ್‌ ಜಗತ್ತಿನ ಕಣ್ಣಿಗೆ ಮತ್ತಷ್ಟುಭಯಂಕರವಾಗಿ ಕಾಣಿಸಿಕೊಂಡಿದೆ. ಭಾನುವಾರ ಆಸ್ಪ್ರೇಲಿಯಾ (Australia) ಮತ್ತು ನೆದರ್‌ಲೆಂಡ್‌ (Netherlands) ದೇಶಗಳು, ತಮ್ಮ ದೇಶದಲ್ಲೂ ಒಮಿಕ್ರೋನ್‌ ವೈರಸ್‌ ಪತ್ತೆಯಾಗಿದೆ ಎಂದು ಘೋಷಿಸಿಕೊಂಡಿವೆ. ಆಸ್ಪ್ರೇಲಿಯಾದಲ್ಲಿ 2 ಮತ್ತು ನೆದರ್‌ಲೆಂಡ್‌ನಲ್ಲಿ 13 ಪ್ರಕರಣಗ ಖಚಿತಪಟ್ಟಿವೆ. ಹೀಗಾಗಿ ವೈರಸ್‌ ಪ್ರವೇಶ ಖಚಿಪಟ್ಟದೇಶಗಳ ಸಂಖ್ಯೆ 11ಕ್ಕೆ ಏರಿದೆ.

"

Latest Videos
Follow Us:
Download App:
  • android
  • ios