Asianet Suvarna News Asianet Suvarna News

ವ್ಯಾಕ್ಸಿಂಗ್‌ಗೂ ಮುನ್ನ ಈ ವಿಷಯ ನಿಮಗೆ ತಿಳಿದಿರಲಿ!

ಯಾವುದೇ ಫಂಕ್ಷನ್‌ಗೆ ಹೋಗುವ ಮೊದಲು ಸುಂದರವಾಗಿ ಕಾಣಬೇಕೆಂದರೆ ಅದಕ್ಕೂ ಮೊದಲು ಬ್ಯೂಟಿ ಪಾರ್ಲರ್‌ಗೆ ಹೋಗುವ ಚಾಳಿ ಸಾಮಾನ್ಯವಾಗಿ ಹೆಣ್ಣು ಮಕ್ಕಳಲ್ಲಿ ಕಂಡುಬರುತ್ತದೆ. ಕೈ, ಕಾಲು, ಆರ್ಮ್ಪಿಟ್ಸ, ಮುಖ ಹೀಗೆ ಅನಗತ್ಯ ಕೂದಲನ್ನು ತೆಗೆದುಹಾಕಲು ವ್ಯಾಕ್ಸಿಂಗ್ ಸಾಮಾನ್ಯ ವಿಧಾನ. ವ್ಯಾಕ್ಸಿಂಗ್‌ಗೆ ಒಳಪಡಿಸುವ ಮುನ್ನ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ.

Things to understand before Waxing
Author
Bangalore, First Published Aug 17, 2022, 3:07 PM IST

ವ್ಯಾಕ್ಸ್ ಎಂದರೆ ಸಕ್ಕರೆ ಪಾಕವನ್ನು ಬಿಸಿ ಮಾಡಿ ಚರ್ಮಕ್ಕೆ ಹಚ್ಚಿ ಅನಗತ್ಯ ಕೂದಲನ್ನು ತೆಗೆಯುವ ವಿಧಾನವಾಗಿದೆ. ಹೀಗೆ ವ್ಯಾಕ್ಸ್ ಮಾಡಿಸಿದ ನಂತರ ಕಾಡುವ, ಅಸ್ವಸ್ಥತೆ ಉಂಟುಮಾಡುವ ಕಿರಿಕಿರಿ ಮತ್ತು ದದ್ದುಗಳು ಕಾಣಿಸಿಕೊಳ್ಳುತ್ತವೆ. ಇದನ್ನು ತಡೆಗಟ್ಟಲು, ಕೂದಲು ತೆಗೆಯುವ ಮೊದಲು ಚರ್ಮವನ್ನು ಹೇಗೆ ಇಟ್ಟುಕೊಳ್ಳಬೇಕೆಂಬುದು ತಿಳಿದಿರಬೇಕು. ಅಷ್ಟೇ ಅಲ್ಲದೆ ವ್ಯಾಕ್ಸ್ ಮಾಡಿಸಿದ ನಂತರ ಚರ್ಮಕ್ಕೆ ಏನು ಹಚ್ಚಬೇಕು ಎಂಬುದು ಗೊತ್ತಿರಬೇಕು. ವ್ಯಾಕ್ಸ್ ನಂತರ ತ್ವಚೆಯ ಆರೈಕೆಯ ವಿಧಾನಗಳೊಂದಿಗೆ ದದ್ದುಗಳು ಮತ್ತು ಚರ್ಮದ ಕೆಂಪು ತೇಪೆಗಳ ಅಪಾಯವನ್ನು ಕಡಿಮೆ ಮಾಡಬಹುದು. ಸಾಮಾನ್ಯವಾಗಿ ವ್ಯಾಕ್ಸ್ ಮಾಡಿದ ನಂತರ ಉರಿಯೂತ, ರ‍್ಯಾಶಸ್, ಕಿರಿಕಿರಿ ಸಂಭವಿಸುತ್ತದೆ. ಇದನ್ನು ತಡೆಯಲು ನೈಸರ್ಗಿಕ ಪದಾರ್ಥಗಳನ್ನು ಮಾಡಿದಲ್ಲಿ ಬಹಳ ಒಳ್ಳೆಯದು. ಅಲೋವೆರಾ, ಮನುಕಾ ಜೇನು, ಟೀ ಟ್ರೀ ಎಣ್ಣೆ, ಸೌತೆಕಾಯಿ ಪೇಸ್ಟ್ ಮಾಸ್ಕ್ ಹೀಗೆ ಹಲವು ಬಗೆಯ ಮನೆಮದ್ದು ಮಾಡಿದಲ್ಲಿ ಕೆಂಪಾಗುವುದು, ಊತ, ರ‍್ಯಾಶಸ್‌ನಂತಹ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಇದು ಕೇವಲ ಸಮಸ್ಯೆ ಪರಿಹರಿಸುವುದಲ್ಲದೆ ಚರ್ಮದ ಹಲವು ಸಮಸ್ಯೆಗಳನ್ನು ಗುಣಪಡಿಸುತ್ತದೆ.

ಅಪ್ಪರ್ ಲಿಪ್ಸ್ ಹೇರ್ ರಿಮೂವ್ ಮಾಡಲು ವ್ಯಾಕ್ಸಿಂಗ್ - ಥ್ರೆಡ್ಡಿಂಗ್ ಯಾವುದು ಬೆಸ್ಟ್?

ವ್ಯಾಕ್ಸ್ ಚರ್ಮದ ಮೇಲೆ ಹೇಗೆ ಪರಿಣಮಿಸುತ್ತದೆ
ಚರ್ಮದ ಕಿರುಚೀಲಗಳಿಂದ ಕೂದಲನ್ನು ಸಂಪೂರ್ಣವಾಗಿ ತೆಗೆದುಹಾಕಲು ವ್ಯಾಕ್ಸಿಂಗ್ ಒಂದು ಮಾರ್ಗವಾಗಿದೆ. ಅನೇಕ ಮಹಿಳೆಯರು ಮತ್ತು ಪುರುಷರು ದೇಹದ ಅನಗತ್ಯ ಕೂದಲನ್ನು ತೊಡೆದುಹಾಕಲು ವ್ಯಾಕ್ಸ್ ಅನ್ನು ಆಯ್ಕೆ ಮಾಡುತ್ತಾರೆ. ಏಕೆಂದರೆ ಸಾಮಾನ್ಯವಾಗಿ ಕೂದಲು ಮತ್ತೆ ಬೆಳೆಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಕಾಲುಗಳು, ಎದೆ ಮತ್ತು ಬೆನ್ನಿನಂತಹ ದೇಹದ ದೊಡ್ಡ ಭಾಗಗಳಿಂದ ಕೂದಲನ್ನು ತೆಗೆದುಹಾಕಲು ಇದು ಪರಿಣಾಮಕಾರಿ ವಿಧಾನವಾಗಿದೆ. ಕಂಕುಳಿನ ಕೂದಲು, ತುಟಿಯ ಮೇಲ್ಭಾಗ, ಹುಬ್ಬುಗಳ ಸುತ್ತ ಮತ್ತು ಜನನಾಂಗಗಳ ಸುತ್ತಲಿನ ಸಣ್ಣ ಭಾಗಗಳಿಂದ ಕೂದಲನ್ನು ತೆಗೆದುಹಾಕಲು ವ್ಯಾಕ್ಸ್ ಮಾಡಿಸಲಾಗುತ್ತದೆ.
ವ್ಯಾಕ್ಸ್ ಮಾಡಿಸುವುದರಿಂದ ಕೆಲ ತೊಂದರೆಗಳೂ ಆಗಬಹುದು. ವ್ಯಾಕ್ಸ್ ಮಾಡಿದಾಗ ಕೂದಲು ಕಿರುಚೀಲಗಳಿಂದ ಎಳೆದಾಗ ನೋವು ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ, ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಡರ್ಮಟಾಲಜಿಯು ಅಧ್ಯಯನ ಒಂದು ನಡೆಸಿದೆ. ಇದರ ಪ್ರಕಾರ ವ್ಯಾಕ್ಸಿಂಗ್ ಮೂಲಕ ರೋಮರಹಣವು ಕೆಲವೊಮ್ಮೆ ಫಾಲಿಕ್ಯುಲೈಟಿಸ್‌ಗೆ ಕಾರಣವಾಗಬಹುದು. ಸೂಕ್ಷö್ಮ ಪ್ರದೇಶದಲ್ಲಿ ತುರಿಕೆ ಕೆಂಪು ಊತಗಳು ಏಕಾಏಕಿ ಉಂಟಾಗುತ್ತದೆ. ಚರ್ಮ ಮತ್ತು ಬ್ಯಾಕ್ಟೀರಿಯಾದ ಸೋಂಕುಗಳಿಗೆ ರಂಧ್ರಗಳು ತೆರೆಯುತ್ತದೆ. ವ್ಯಾಕ್ಸಿಂಗ್ ನಂತರ ಜನನಾಂಗದ ಬ್ಯಾಕ್ಟೀರಿಯಾದ ಸೋಂಕುಗಳು ತುಂಬಾ ಸಾಮಾನ್ಯವಾಗಿದೆ ಎಂದು ತಿಳಿದುಬಂದಿದೆ.
ವ್ಯಾಕ್ಸಿAಗ್‌ನಿAದ ಉಂಟಾಗುವ ಕಿರಿಕಿರಿ, ದದ್ದು, ಉಬ್ಬುಗಳು ಕಾಣಿಸಿಕೊಳ್ಳುತ್ತವೆ ಎಂದು ಪುರುಷರು ಮತ್ತು ಮಹಿಳೆಯರು ವರದಿ ಮಾಡುತ್ತಾರೆ. ಆದರೆ ವ್ಯಾಕ್ಸಿಂಗ್ ನಂತರ ತ್ವಚೆಯನ್ನು ಹೇಗೆ ಆರೈಕೆ ಮಾಡಲಾಗುತ್ತದೆ ಎಂಬುದು ಬಹಳ ಮುಖ್ಯ. ಚರ್ಮದ ನಡುವಿನ ಘರ್ಷಣೆ ಹೆಚ್ಚಾದಲ್ಲಿ ಕಿರಿಕಿರಿಯೂ ಹೆಚ್ಚಾಗುತ್ತದೆ. ಹಾಗಾಗಿ ಆರ್ಮ್ಪಿಟ್, ಪೃಷ್ಠ, ತೊಡೆಯ ಒಳಭಾಗವನ್ನು ವ್ಯಾಕ್ಸಿಂಗ್ ಮಾಡುವುದರಿಂದ ಚರ್ಮದ ಉಬ್ಬುವಿಕೆ, ಸೋಂಕುಗಳಿಗೆ ಕಾರಣವಾಗಬಹುದು. ಕೆಲವರಿಗೆ ಹಚ್ಚಿದ ಮೇಣವು ತುಂಬಾ ಬಿಸಿ ಇದ್ದರೆ ಸುಟ್ಟ ಗಾಯಗಳಂತಾಗುತ್ತದೆ. ಇದಕ್ಕೆ ಕಾರಣ ಕೋಶಕದಲ್ಲಿ ಕೂದಲು ಚರ್ಮದ ಮೇಲ್ಮೆöÊನಲ್ಲಿ ಸಿಕ್ಕಿಹಾಕಿಕೊಂಡಿದ್ದರೆ ಮತ್ತೆ ಬೆಳೆಯುವುದರಿಂದ ಚರ್ಮ ಉಬ್ಬುವುದು ಮತ್ತು ಸೋಂಕುಗಳಿಗೆ ಕಾರಣವಾಗಬಹುದು.

ವ್ಯಾಕ್ಸ್ ಮಾಡುವ ಮುನ್ನ ಚರ್ಮ ಹೀಗಿರಲಿ
ವ್ಯಾಕ್ಸಿಂಗ್ ಮಾಡುವಾಗ ನೋವಾಗುವುದರಿಂದ ಚರ್ಮಕ್ಕೆ ಆಘಾತವಾಗಬಹುದು. ಹಾಗಾಗಿ ಇದಕ್ಕೆ ಪೂರ್ವ ತಯಾರಿ ಅತ್ಯವಶ್ಯಕ. ವ್ಯಾಕ್ಸ್ ಮಾಡುವ ಪ್ರದೇಶ ಅಂದರೆ ಆ ಜಾಗದ ಚರ್ಮವು ಮೃದುವಾಗಿರಬೇಕು. ಇದರಿಂದ ವ್ಯಾಕ್ಸಿಂಗ್ ಸಂದರ್ಭದಲ್ಲಿ ಆಗುವ ನೋವನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದು. ಅಷ್ಟೇ ಅಲ್ಲದೆ ದದ್ದುಗಳು, ಉರಿಯಾಗುವುದು, ಗುಳ್ಳೆಗಳಾಗುವುದನ್ನು ತಡೆಯುತ್ತದೆ. ಹೆಚ್ಚಿನ ಬ್ಯೂಟಿ ಸಲೂನ್‌ಗಳು ಚರ್ಮವನ್ನು ತಯಾರಿಸಲು ಕೆಲ ಟಿಪ್ಸ್ಗಳನ್ನು ಹೇಳುತ್ತಾರೆ.
1 ನಿಮ್ಮ ಕೂದಲು ಸುಮಾರು 1/4 ರಿಂದ 1/2 ಇಂಚು ಬೆಳೆಯಲು ಬಿಡಿ
2 ವ್ಯಾಕ್ಸಿಂಗ್ ಮಾಡುವ ಮೊದಲು 2 ವಾರ ಕ್ಷೌರ ಮಾಡಬೇಡಿ 
3 ನಿಮ್ಮ ಮೇಣದ ಸೆಷನ್‌ಗೆ ಒಂದು ದಿನ ಅಥವಾ ಎರಡು ದಿನಗಳ ಮೊದಲು ನಿಮ್ಮ ಚರ್ಮವನ್ನು ನಿಧಾನವಾಗಿ ಎಕ್ಸ್ಫೋಲಿಯೇಟ್ ಮಾಡಿ. ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಮತ್ತು ಚರ್ಮದಿಂದ ಕೂದಲನ್ನು ಮೇಲೆತ್ತಲು ಸಹಾಯವಾಗುತ್ತದೆ.
4 ನಿಮ್ಮ ಮೇಣದ ಕೂದಲು ತೆಗೆಯುವ ದಿನದಂದು ಎಫ್ಫೋಲಿಯೇಟ್ ಮಾಡಬೇಡಿ. 
5 ಚರ್ಮವನ್ನು ಎಫ್ಫೋಲಿಯೇಟ್ ಮಾಡಿದ ನಂತರ ಉತ್ತಮ ನೈಸರ್ಗಿಕ ಮಾಯಿಶ್ಚರೈಸರ್ ಅನ್ನು ಅನ್ವಯಿಸಿ ಚರ್ಮವನ್ನು ಮೃದುಗೊಳಿಸಲು ಮತ್ತು ಕೂದಲು ತೆಗೆಯುವಿಕೆಯನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ. 

ಡ್ರೈ ಶೇವಿಂಗ್ ಮಾಡಿ ಕೊಳ್ಳೋರು ನೀವಾದ್ರೆ, ಈ ವಿಷಯ ಗಮನದಲ್ಲಿ ಇರಲಿ!

ನೈಸರ್ಗಿಕ ಎಕ್ಸಫೋಲಿಯೇಟರ್
ವ್ಯಾಕ್ಸಿಂಗ್ ನಂತರ ಚರ್ಮದ ಕಿರಿಕಿರಿ ಮತ್ತು ಅಸಹ್ಯವಾದ ದದ್ದುಗಳನ್ನು ತಡೆಯಲು, ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಮತ್ತು ಚರ್ಮವನ್ನು ಮೃದುಗೊಳಿಸಲು ನೈಸರ್ಗಿಕವಾಗಿ ಎಕ್ಸ್ಫೋಲಿಯೇಟರ್ ಬಳಸಬೇಕು. ಇದನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು. ಅದು ಹೇಗೆ ಇಲ್ಲಿದೆ. 
1. 3 ಟೇಬಲ್ ಸ್ಪೂನ್ ಆಲಿವ್ ಎಣ್ಣೆ ಅಥವಾ ಸಿಹಿ ಬಾದಾಮಿ ಎಣ್ಣೆ ಹಾಗೂ 1/4 ಕಪ್ ಸಕ್ಕರೆ ಒಟ್ಟಿಗೆ ಮಿಶ್ರಣ ಮಾಡಿ. 
2. ಎಫ್ಫೋಲಿಯೇಟ್ ಮಾಡಲು ಬಯಸುವ ಪ್ರದೇಶವನ್ನು ಬೆಚ್ಚಗಿನ ನೀರಿನಿಂದ ತೊಳೆದು ಒಣಗಿಸಬೇಕು.
3. ಮಿಶ್ರಣವನ್ನು ನಿಧಾನವಾಗಿ ಉಜ್ಜಿಕೊಳ್ಳಿ. ವೃತ್ತಾಕಾರದ ಚಲನೆಯನ್ನು ಬಳಸಿಕೊಂಡು ಸುಮಾರು ೫ ನಿಮಿಷ ಬಿಡಬೇಕು. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಮತ್ತು ವ್ಯಾಕ್ಸಿಂಗ್‌ಗೆ ಸಿದ್ಧವಾಗಲು ಚರ್ಮವನ್ನು ತೇವಗೊಳಿಸಲು ಸಹಾಯ ಮಾಡುತ್ತದೆ. 
4. ವ್ಯಾಕ್ಸಿಂಗ್ ದಿನದಂದು ಎಫ್ಫೋಲಿಯೇಟ್ ಮಾಡಬೇಡಿ. ಏಕೆಂದರೆ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ.

ವ್ಯಾಕ್ಸಿಂಗ್‌ಗೆ ಸಮಯ ನಿಗದಿಪಡಿಸಿಕೊಳ್ಳಿ
ಯಾವಾಗ ಬೇಕೆಂದಲ್ಲಿ ಅವಾಗ ವ್ಯಾಕ್ಸಿಂಗ್ ಮಾಡಿಕೊಳ್ಳುವುದು ಒಳ್ಳೆಯದಲ್ಲ. ಅದಕ್ಕೂ ಸಮಯ ಸಂದರ್ಭಗಳನ್ನು ನೋಡಿಕೊಂಡು ಮಾಡಿಸಬೇಕಾಗುತ್ತದೆ. ಚರ್ಮದ ದದ್ದುಗಳ ಮತ್ತು ಕಿರಿಕಿರಿಯನ್ನು ತಡೆಯಲು ಚರ್ಮವನ್ನು ತಯಾರಿಸಿಕೊಳ್ಳಬೇಕು. ತುಟಿಯ ಮೇಲ್ಭಾಗ, ಕಾಲು, ತೋಳು, ತೊಡೆಯ ಒಳಗೆ ಹೀಗೆ ಮಹಿಳೆಯರು ಎಚ್ಚರಿಕೆ ವಹಿಸುವುದು ಅವಶ್ಯಕ. ೨೦೧೪ರ ಅಧ್ಯಯನದ ಪ್ರಕಾರ ಮಹಿಳೆಯರು ಋತುಚಕ್ರದ ಸಮಯದಲ್ಲಿ ನೋವಿನ ಗ್ರಹಿಕೆ ಮತ್ತು ಆತಂಕದ ಮಟ್ಟಗಳು ಹೆಚ್ಚಾಗುತ್ತದೆ ಎಂದು ವರದಿ ಮಾಡಿದೆ. ಋತುಚಕ್ರದ ಮೊದಲು ಅಥವಾ ನಂತರ ವ್ಯಾಕ್ಸ್ ಮಾಡಿಸಿಕೊಳ್ಳುವುದು ಒಳ್ಳೆಯದು. ಏಕೆಂದರೆ ವ್ಯಾಕ್ಸಿಂಗ್ ವಿಧಾನವು ಚರ್ಮದ ಸ್ಥಿತಿಯನ್ನು ಉಲ್ಬಣಗೊಳಿಸಬಹುದು ಮತ್ತು ಗಂಭೀರವಾದ ಸೋಂಕನ್ನು ಉಂಟುಮಾಡಬಹುದು.

Follow Us:
Download App:
  • android
  • ios