MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಡ್ರೈ ಶೇವಿಂಗ್ ಮಾಡಿ ಕೊಳ್ಳೋರು ನೀವಾದ್ರೆ, ಈ ವಿಷಯ ಗಮನದಲ್ಲಿ ಇರಲಿ!

ಡ್ರೈ ಶೇವಿಂಗ್ ಮಾಡಿ ಕೊಳ್ಳೋರು ನೀವಾದ್ರೆ, ಈ ವಿಷಯ ಗಮನದಲ್ಲಿ ಇರಲಿ!

ಕೈ ಕಾಲಿನಲ್ಲಿ ಕೂದಲು ಬೆಳೆದಿದ್ದರೆ ಅದನ್ನು ಯಾರೂ ಇಷ್ಟ ಪಡೋದಿಲ್ಲ. ಯಾವಾಗಲೂ ಕ್ಲೀನ್ ಶೇವ್ (clean shave) ಮಾಡಿರಲು ಪ್ರತಿ ಮಹಿಳೆಯರೂ ಇಷ್ಟಪಡುತ್ತಾರೆ. ಪೂರ್ತಿ ಶೇವ್ ಮಾಡಿದ್ದರೆ ಮಾತ್ರ ಹೈಜಿನ್ ಆಗಿ ಕಾಣೋದು, ಜೊತೆಗೆ ಸ್ಟೈಲಿಶ್ ಆಗಿ ಕಾಣೋದು. ಹಾಗಂತ ಅವಸರದಲ್ಲಿ ಡ್ರೈ ಶೇವ್ ಮಾಡೋದ್ರಿಂದ ಚರ್ಮದ ಮೇಲೆ ಪರಿಣಾಮ ಬೀರುತ್ತೆ ಅನ್ನೋದು ಗೊತ್ತಾ?

2 Min read
Author : Suvarna News
| Updated : Jun 22 2022, 07:54 PM IST
Share this Photo Gallery
  • FB
  • TW
  • Linkdin
  • Whatsapp
18

ಅನಗತ್ಯ ಚರ್ಮದ ಕೂದಲನ್ನು ತೆಗೆದುಹಾಕಲು ಅನೇಕ ಜನರು ಡ್ರೈ ಶೇವಿಂಗ್ (Dry Shaving)ಮಾಡಲು ಬಯಸುತ್ತಾರೆ. ಕೂದಲನ್ನು ತೆಗೆದು ಹಾಕಲು ಡ್ರೈ ಶೇವಿಂಗ್ ಅಗ್ಗದ ಮತ್ತು ಸುಲಭ ಮಾರ್ಗ ಅನ್ನೋದು ಎಲ್ಲರ ನಂಬಿಕೆ. ಆದರೆ, ಡ್ರೈ ಶೇವಿಂಗ್ ಮಾಡೋದ್ರಿಂದ ಕೆಲವೊಂದು ಅಡ್ಡಪರಿಣಾಮಗಳು ಚರ್ಮದ ಮೇಲೆಯೂ ಉಂಟಾಗಬಹುದು, ಇದರ ಬಗ್ಗೆ ನೀವು ತಿಳ್ಕೊಳ್ಳೋದು ಮುಖ್ಯ.

28

ದೇಹದಿಂದ ಅನಗತ್ಯ ಕೂದಲನ್ನು (Unwanted Hair) ತೆಗೆದುಹಾಕಲು ಜನರು ಅನೇಕ ಮಾರ್ಗಗಳನ್ನು ಪ್ರಯತ್ನಿಸುತ್ತಾರೆ. ಇದಕ್ಕಾಗಿ, ಮಾರ್ಕೆಟ್ ನಲ್ಲಿ ಬೇರೆ ಬೇರೆ ಉತ್ಪನ್ನಗಳು ಸಿಗುತ್ತವೆ. ಪಾರ್ಲರ್ ಗಳಲ್ಲಿ ವ್ಯಾಕ್ಸಿಂಗ್ (Waxing) ನಿಂದ ಹಿಡಿದು ಎಪಿಲೇಟರ್ ಮತ್ತು ಲೇಸರ್ ಲೈಟ್ ಚಿಕಿತ್ಸೆಯವರೆಗೆ, ಅನಗತ್ಯ ಕೂದಲನ್ನು ತೆಗೆದುಹಾಕಲು ಅನೇಕ ರೀತಿಯ ಪ್ರಾಡಕ್ಟ್ ಗಳು ಲಭ್ಯವಿದೆ. 

38

ಕೂದಲನ್ನು ತೆಗೆಯಲು ಅಗ್ಗದ ಮಾರ್ಗವೆಂದರೆ ಶೇವಿಂಗ್, ಇದನ್ನು ಸಾಮಾನ್ಯವಾಗಿ ಹೆಚ್ಚಿನ ಮಹಿಳೆಯರು ಟ್ರೈ ಮಾಡುತ್ತಾರೆ. ಅನೇಕ ಜನರು ಆಗಾಗ್ಗೆ ಡ್ರೈ ಶೇವಿಂಗ್ ಅನ್ನು ಮಾಡುತ್ತಾರೆ, ಈ ಕಾರಣದಿಂದಾಗಿ ಚರ್ಮದ ಮೇಲೆ ದದ್ದುಗಳು, ಮೊಡವೆಗಳಂತಹ (Pimple) ಸಮಸ್ಯೆಗಳನ್ನು ಸಹ ಕಾಣಬಹುದು.

48

ಅವಸರದ ಕಾರಣದಿಂದ ಅಥವಾ ವಸ್ತುಗಳು ಲಭ್ಯವಿಲ್ಲದ ಕಾರಣ, ಜನರು ಆಗಾಗ್ಗೆ ರೇಜರ್ ಸಹಾಯದಿಂದ ಅನಗತ್ಯ ಚರ್ಮದ ಕೂದಲನ್ನು ತೆಗೆಯುತ್ತಾರೆ, ಆದರೆ ಡ್ರೈ ಶೇವಿಂಗ್ ನಿಂದ ಅನೇಕ ಅಡ್ಡಪರಿಣಾಮಗಳು ಉಂಟಾಗಬಹುದು. ಡ್ರೈ ಶೇವಿಂಗ್ ನ ಅಡ್ಡಪರಿಣಾಮಗಳು ಯಾವುವು ಎಂದು ತಿಳಿಯೋಣ.
 

58
ಚರ್ಮದ ಮೇಲೆ ಕಿರಿಕಿರಿ ಮತ್ತು ತುರಿಕೆ

ಚರ್ಮದ ಮೇಲೆ ಕಿರಿಕಿರಿ ಮತ್ತು ತುರಿಕೆ

 ಕೆಲವರು ಚರ್ಮದ ಮೇಲೆ ಶೇವಿಂಗ್ ಕ್ರೀಮ್ ಅಥವಾ ಸಾಬೂನ್ ಹಚ್ಚದೆ ಡ್ರೈ ಶೇವಿಂಗ್ ಮಾಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಚರ್ಮದ ಮೇಲೆ ಕಿರಿಕಿರಿ (Skin Irritation)  ಮತ್ತು ತುರಿಕೆಯ ಅಪಾಯ ಉಂಟಾಗುತ್ತದೆ, ಆದ್ದರಿಂದ ಡ್ರೈ ಶೇವಿಂಗ್ ಮಾಡುವಾಗ ಶೇವಿಂಗ್ ಕ್ರೀಮ್ ಬಳಸಿ. ಅಲ್ಲದೆ, ಶೇವಿಂಗ್ ಮಾಡಿದ ನಂತರ ಚರ್ಮದ ಮೇಲೆ ಮಾಯಿಶ್ಚರೈಸರ್ ಹಚ್ಚಲು ಮರೆಯಬೇಡಿ.

68
ಡ್ರೈನೆಸ್ ಮತ್ತು ಕೆಂಪಗಾಗುವ ಸಾಧ್ಯತೆ

ಡ್ರೈನೆಸ್ ಮತ್ತು ಕೆಂಪಗಾಗುವ ಸಾಧ್ಯತೆ

ಡ್ರೈ ಶೇವಿಂಗ್ (Dry Shaving) ಮಾಡುವುದರಿಂದ, ಚರ್ಮವು ಶುಷ್ಕ ಮತ್ತು ನಿರ್ಜೀವವಾಗಿ ಕಾಣಲು ಪ್ರಾರಂಭಿಸುತ್ತದೆ, ಇದರಿಂದಾಗಿ ನಿಮ್ಮ ಚರ್ಮದ ಮೇಲೆ ಡ್ರೈ ನೆಸ್ ಅಥವಾ ಕೆಂಪಾಗುವಿಕೆ ಕಾಣಬಹುದು. 

78

ಪ್ರತಿ ಬಾರಿ ನೀವು  ಶೇವಿಂಗ್ ಮಾಡುವ ಮೊದಲು, ಚರ್ಮದ ಮೇಲೆ ಕ್ರೀಮ್, ಸಾಬೂನು ಅಥವಾ ಜೆಲ್ ಬಳಸಿ, ಇದು ಲ್ಯೂಬ್ರಿಕೆಂಟ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ಇದು ಚರ್ಮದ ಮಾಯಿಶ್ಚರೈಸರ್ (Moisturiser) ಹಾಗೆಯೇ ಉಳಿಸುತ್ತದೆ ಮತ್ತು ಡ್ರೈನೆಸ್ ಸಹ ಹೋಗುತ್ತದೆ.

88
ಚರ್ಮದಿಂದ ಬ್ಲೀಡಿಂಗ್

ಚರ್ಮದಿಂದ ಬ್ಲೀಡಿಂಗ್

 ಡ್ರೈ ಶೇವಿಂಗ್ ಕೂಡ ಚರ್ಮದ ಮೇಲೆ ಗೀರುಗಳನ್ನು ಉಂಟುಮಾಡುವ ಸಾಧ್ಯತೆಯಿದೆ. ಡ್ರೈನೆಸ್ ಕಾರಣದಿಂದಾಗಿ, ರೇಜರ್ ಸಂಪರ್ಕಕ್ಕೆ ಬಂದ ತಕ್ಷಣ ಚರ್ಮವು ಗೀಚಲ್ಪಡುತ್ತದೆ ಮತ್ತು ಬ್ಲೀಡಿಂಗ್ ಪ್ರಾರಂಭವಾಗಬಹುದು. ಆದ್ದರಿಂದ ಶೇವಿಂಗ್ ಮಾಡುವಾಗ ಕ್ರೀಮ್ ಬಳಸಲು ಮರೆಯಬೇಡಿ. ಅಲ್ಲದೆ, ಶೇವಿಂಗ್ ಮಾಡಿದ ನಂತರವೂ ಚರ್ಮವನ್ನು ಮಾಯಿಶ್ಚರೈಸ್ (Moisturizer) ಮಾಡಲು ಲೋಷನ್ ಅಥವಾ ಎಣ್ಣೆ ಹಚ್ಚಿ. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ಕರಿದ ಎಣ್ಣೆ ಮರಳಿ ಬಳಸದಂತೆ ಏಮ್ಸ್ ವೈದ್ಯೆ ಎಚ್ಚರಿಕೆ, ಫಾಸ್ಟ್ ಫುಡ್ ಮಳಿಗೆಗಳಲ್ಲಿನ ಪರೀಕ್ಷೆಯ ಶಾಕಿಂಗ್ ಸತ್ಯ!
Recommended image2
52 ವಯಸ್ಸಲ್ಲೂ ನಿಂತಿಲ್ಲ ಉತ್ಸಾಹ: ಪ್ರತಿ ಬೆಳಿಗ್ಗೆ ಈ ಡ್ರಿಂಕ್ಸ್​ ಕುಡಿದು ಫಿಟ್​ ಆಗಿರಿ ಎಂದ Maliaka Arora!
Recommended image3
ಪಾದಗಳ ಅತಿಯಾದ ಉರಿಯಿಂದ ಬಳಲುತ್ತಿದ್ದೀರಾ? ಇಲ್ಲಿವೆ ನೋಡಿ ಹಳ್ಳಿ ಶೈಲಿಯ ಸೂಪರ್ ಮನೆಮದ್ದುಗಳು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved