ನೀವು ಈ ಕೆಳಗಿನ ಜನ್ಮರಾಶಿಯವರು ಆಗಿದ್ದರೆ ನಿಮ್ಮ ಆರೋಗ್ಯದ ಬಗ್ಗೆ ಎಕ್ಸ್‌ಟ್ರಾ ಕೇರ್‌ಫುಲ್ ಆಗಿರಿ. ಕೊರೊನಾದ ಬಗ್ಗೆ ಇನ್ನಷ್ಟು ಜಾಗ್ರತೆ.
ಕೊರೊನಾ ವೈರಸ್ ಎಲ್ಲ ಕಡೆ ರಾರಾಜಿಸುತ್ತಿದೆ, ಹಾವಳಿ ಎಬ್ಬಿಸುತ್ತಿದೆ. ಈ ವಾರ ಕೆಲವು ರಾಶಿಗಳಲ್ಲಿ ಜನಿಸಿದವರಿಗೆ ನಿಜಕ್ಕೂ ಕಷ್ಟದಾಯಕವಾಗಲಿದೆ. ಈ ವಾರ ದಾಟಿಬಿಟ್ಟರೆ. ಮತ್ತೆಲ್ಲ ಕ್ಷೇಮವಾಗಲಿದೆ. ಅಂಥ ರಾಶಿಗಳ್ಯಾವುದು, ತಿಳಿಯೋಣ ಬನ್ನಿ.
ವೃಷಭ ರಾಶಿ
ಈ ವಾರ ನಿಮಗೆ ಆರೋಗ್ಯದ ದೃಷ್ಟಿಯಿಂದ ಮಿಶ್ರ ಫಲಿತಾಂಶಗಳು ಸಿಗಲಿದೆ. ನಿಮ್ಮ ಆರೋಗ್ಯ ಸ್ಥಿತಿ ಕುಸಿಯಬಹುದು, ಆದರೆ ಯಾವುದೇ ದೊಡ್ಡ ಸಮಸ್ಯೆಗಳು ಉದ್ಭವಿಸದ ಕಾರಣ ಆತಂಕಪಡುವ ಅಗತ್ಯವಿಲ್ಲ. ಕಾಲಕಾಲಕ್ಕೆ ತಜ್ಞ ವೈದ್ಯರನ್ನು ಭೇಟಿ ಮಾಡಲು ನಿಮಗೆ ಸೂಚಿಸಲಾಗಿದೆ. ಈ ಸಮಯದಲ್ಲಿ ನೀವು ಮಾನಸಿಕವಾಗಿ ಸದೃಢರಾಗುತ್ತೀರಿ. ಆಗಲೇಬೇಕು. ಯಾಕೆಂದರೆ ನೀವು ಕೊರೊನಾ ನಿಮ್ಮ ಬಂಧುಗಳಲ್ಲೇ ಉಂಟುಮಾಡುವ ಅನಾಹುತವನ್ನು ಕಣ್ಣಾರೆ ಕಾಣಬೇಕಾಗಬಹುದು. ಮಹಾಲಿಂಗೇಶ್ವರನ ಆರಾಧನೆಯಿಂದ ಬಾಧೆಗಳು ನಾಶವಾಗಲಿವೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಆರೋಗ್ಯದ ದೃಷ್ಟಿಯಿಂದ ಈ ವರ್ಷ ಉತ್ತಮವಾಗಿದ್ದರೂ, ಈ ಒಂದು ವಾರ ತುಂಬಾನೇ ಕಷ್ಟದಾಯಕವಾಗಲಿದೆ. ಇದ್ದಕ್ಕಿದ್ದಂತೆ ಕೆಲವು ರೋಗಗಳು ಉದ್ಭವಿಸಬಹುದು. ಅದು ನ್ಯುಮೋನಿಯಾ, ಕೊರೊನಾದಂಥ ಶೀತಕಾರಿ ರೋಗಗಳಿರಬಹುದು, ಪಿತ್ಥ ಸಂಬಂಧಿತ ಇರಬಹುದು. ಇದು ದೈಹಿಕವಾಗಿ ಮತ್ತು ಮಾನಸಿಕವಾಗಿ ನಿಮ್ಮನ್ನು ತೊಂದರೆಗೊಳಿಸುತ್ತವೆ. ನಿಮ್ಮ ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಮತ್ತು ಈ ಅವಧಿಯಲ್ಲಿ ಹೊರಗೆ ತಿನ್ನುವುದನ್ನು ತಪ್ಪಿಸಬೇಕು. ರಾಘವೇಂದ್ರ ಶ್ರೀಗಳನ್ನು ಆರಾಧಿಸಿ.
ಯಾವ ದೇವರಿಗೆ ಯಾವ ಹೂವಿನ ಅರ್ಚನೆ ಅಚ್ಚುಮೆಚ್ಚು? ಅರ್ಚಿಸಿದರೆ ಹೆಚ್ಚು ಪ್ರಿಯ? ...
ಸಿಂಹ ರಾಶಿ
ಸಿಂಹ ರಾಶಿಯವರು ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಬರಬಾರದು ಎಂದಿದ್ದರೆ ಅವರು ಉತ್ತಮ ಆಹಾರ ಮತ್ತು ಪಾನೀಯಗಳನ್ನು ಸೇವಿಸಬೇಕು ಮತ್ತು ವ್ಯಾಯಾಮದ ಕಡೆ ಹೆಚ್ಚು ಗಮನಹರಿಸಬೇಕು. ಅಲ್ಲದೆ ನೀವು ಸಣ್ಣ ಆರೋಗ್ಯ ಸಮಸ್ಯೆ ಉಂಟಾದರೂ ಅದನ್ನು ನಿರ್ಲಕ್ಷಿಸಬೇಡಿ. ರೋಗವು ಗಂಭೀರ ಸ್ವರೂಪವನ್ನು ಪಡೆಯುವುದನ್ನು ತಪ್ಪಿಸಲು ಉತ್ತಮ ಕಾಳಜಿವಹಿಸಿ, ಕೂಡಲೇ ಸೂಕ್ತ ಚಿಕಿತ್ಸೆ ಪಡೆಯಿರಿ. ನೀವು ಖಂಡಿತವಾಗಿಯೂ ನಿರ್ಲಕ್ಷ್ಯದಿಂದ ದೂರವಿರಬೇಕು. ಈ ಅವಧಿಯಲ್ಲಿ ನೀವು ಟೈಫಾಯಿಡ್ ಅಥವಾ ಯಾವುದೇ ಚರ್ಮರೋಗಕ್ಕೆ ತುತ್ತಾಗಬಹುದು. ಸುಬ್ರಹ್ಮಣ್ಯ ಸ್ವಾಮಿಯು ನಿಮ್ಮನ್ನು ಕಾಪಾಡುತ್ತಾನೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಯಾವುದೇ ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿದ್ದರೆ ಈಗ ತುಂಬಾ ಎಚ್ಚರವಾಗಿರಬೇಕು. ನೀವು ಮಾನಸಿಕವಾಗಿ ಸದೃಢರಾಗಿರುತ್ತೀರಿ ಮತ್ತು ಪ್ರತಿಯೊಂದು ಕಾರ್ಯವನ್ನು ಪೂರ್ಣ ಜವಾಬ್ದಾರಿಯಿಂದ ಪೂರ್ಣಗೊಳಿಸುತ್ತೀರಿ. ನಿಮ್ಮ ದೈಹಿಕ ಶಕ್ತಿಯ ಮಟ್ಟ ಉತ್ತಮವಾಗಿರಿಸುವುದರ ಮೂಲಕ ಎಲ್ಲಾ ಕೆಲಸಗಳನ್ನು ವೇಗವಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಯೋಗ ಮತ್ತು ಧ್ಯಾನದ ಬಗ್ಗೆ ನಿಮ್ಮ ಆಸಕ್ತಿಯನ್ನು ಬಳಸಿಕೊಂಡು ಮಾಡಲು ಆರಂಭಿಸಿ. ಶ್ರೀ ಆಂಜನೇಯನ ಧ್ಯಾನ ಮಾಡುವುದು ಮರೆಯಬೇಡಿ.
ಕೊರೋನಾ ಸಂಕಷ್ಟದಲ್ಲಿ ಶಂಖ ಊದುತ್ತೀರಾ? ಶ್ವಾಸಕೋಶ ಆರೋಗ್ಯವಾಗಿದೆ ಎಂದರ್ಥ! ...
ಮಕರ ರಾಶಿ
ಮಕರ ರಾಶಿಯವರಿಗೆ ಆರೋಗ್ಯದ ದೃಷ್ಟಿಯಿಂದ ಈ ವಾರ ಸ್ವಲ್ಪ ಕೆಟ್ಟದಾಗಿಯೇ ಇದೆ. ನೀವು ದೀರ್ಘಕಾಲದಿಂದ ಹೋರಾಡುತ್ತಿದ್ದ ಕಾಯಿಲೆಗಳು ನಿಮಗೆ ಈಗ ತೊಂದರೆ ತಂದೊಡ್ಡಬಹುದು. ತುಂಬಾ ಶ್ರಮವಹಿಸಬೇಕಾಗಬಹುದು, ನೀವು ದೈಹಿಕವಾಗಿ ದುರ್ಬಲವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಕೆಲಸದ ಜೊತೆಗೆ ವಿಶ್ರಾಂತಿ ಪಡೆಯಲು ನೀವು ಹೆಚ್ಚು ಗಮನ ಹರಿಸಬೇಕು. ಈ ವಾರದ ನಂತರದ ಸಮಯವು ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದಿತ್ಯ ಕವಚವನ್ನು ಪಠಿಸುವುದರಿಂದ ಅಪಾಯದಿಂದ ಪಾರಾಗಬಹುದು.
ಹಂಪಿಯ ಅಂಜನಾದ್ರಿಯೇ ಆಂಜನೇಯ ಜನ್ಮಸ್ಥಳ; ಹನುಮನ ಜನ್ಮಸ್ಥಳ ಮತ್ತು ವಾದಗಳು! ...
ಮೀನ ರಾಶಿ
ಆರೋಗ್ಯದ ದೃಷ್ಟಿಯಿಂದ ಈ ವಾರ ನಿಮಗೆ ಉತ್ತಮವಾಗಿಲ್ಲ. ನಿಮ್ಮ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ. ಉತ್ತರಾರ್ಧ ಸಮಸ್ಯೆಗಳಿಂದ ತುಂಬಿರುತ್ತದೆ. ಈ ಅವಧಿಯಲ್ಲಿ ಹೆಚ್ಚುತ್ತಿರುವ ಒತ್ತಡದಿಂದ ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ನಿಮಗೆ ಕಣ್ಣು, ಹೊಟ್ಟೆ ಅಥವಾ ನಿದ್ರಾಹೀನತೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ ಆ ರೋಗವು ಗಂಭೀರ ಸ್ವರೂಪವನ್ನು ಪಡೆದುಕೊಳ್ಳುವುದರಿಂದ ನಿರ್ಲಕ್ಷ್ಯ ವಹಿಸದಿರುವುದು ಉತ್ತಮ. ಹಾಗೇ ನರಸಿಂಹ ಸ್ವಾಮಿ ಶ್ಲೋಕವನ್ನು ಪಠಿಸಿ.
