ದೀರ್ಘಾಯಸ್ಸನ್ನು ಪ್ರತಿಯೊಬ್ಬರೂ ಬಯಸ್ತಾರೆ. ಆರೋಗ್ಯಕರ ಜೀವನಕ್ಕಾಗಿ ಸಾಕಷ್ಟು ಕಸರತ್ತು ಮಾಡ್ತಾರೆ. ಆದ್ರೆ ಕೆಲವರು ದೇಹದಲ್ಲಿ ಶಕ್ತಿ ಇರೋದಿಲ್ಲ. ಒಂದಿಲ್ಲೊಂದು ಅನಾರೋಗ್ಯ ಅವರನ್ನು ಕಾಡುತ್ತದೆ. ನಾವು ಎಷ್ಟು ಆರೋಗ್ಯವಾಗಿದ್ದೇವೆ ಎಂಬುದನ್ನು ನಾವೇ ಪರೀಕ್ಷೆ ಮಾಡಿಕೊಳ್ಳಬಹುದು. 

ನಾಲ್ಕು ಮೆಟ್ಟಿಲು ಹತ್ತಿರ್ತೇವೆ ಉಸಿರು ಮೇಲೆ – ಕೆಳಗೆ ಆಗ್ತಿರುತ್ತೆ, ವ್ಯಾಯಾಮ (Exercise) ಮಾಡಲು ಶುರು ಮಾಡಿ ಐದು ನಿಮಿಷ ಆಗಿರೊಲ್ಲ ಆಗ್ಲೆ ಸುಸ್ತಾಗಿರುತ್ತೆ, ಮೈ ತುಂಬಾ ಬೆವರು ಬಂದಿರುತ್ತೆ, ಸ್ವಲ್ಪ ದೂರ ನಡೆದ್ರೆ ಸಾಕು ಅಲ್ಲೆ ಕುಳಿತುಕೊಳ್ಳೋಣ ಅನ್ನಿಸುತ್ತೆ. ಇದೆಲ್ಲ ನಮ್ಮ ದೇಹಕ್ಕೆ ತ್ರಾಣವಿಲ್ಲ ಎಂಬುದರ ಸಂಕೇತ. ಹಾಗೆ ನಮ್ಮ ದೇಹ ಆರೋಗ್ಯವಾಗಿಲ್ಲ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ. ಈ ಬಗ್ಗೆ ಹಲವು ಸಂಶೋಧನೆಗಳೂ ನಡೆದಿವೆ. ನಾವು ಬಹುದಿನ ಬದುಕಬೇಕೆಂದ್ರೆ ನಮಗೆ ಶಕ್ತಿ ಹಾಗೂ ಆರೋಗ್ಯ ಅತ್ಯಗತ್ಯ. ಇತ್ತೀಚಿಗೆ ನಡೆದ ಸಂಶೋಧನೆಯೊಂದರಲ್ಲಿ ಒಂದು ಕಾಲಿನ ಮೇಲೆ 10 ಸೆಕೆಂಡುಗಳ ಕಾಲ ಸಮತೋಲನ ಸಾಧಿಸಲು ಸಾಧ್ಯವಾಗದ ಜನರು ಅಕಾಲಿಕ ಮರಣದ ಅಪಾಯವನ್ನು ಹೊಂದಿರುತ್ತಾರೆ ಎಂಬುದು ಬಹಿರಂಗವಾಗಿದೆ.

 50 ರಿಂದ 75 ವರ್ಷ ವಯಸ್ಸಿನ 2,000 ಜನರ ಮೇಲೆ ನಡೆಸಿದ ಸಂಶೋಧನೆಯ ಪ್ರಕಾರ, ಒಂದು ಕಾಲಿನ ಮೇಲೆ 10 ಸೆಕೆಂಡುಗಳ ಕಾಲ ನಿಲ್ಲಲು ಸಾಧ್ಯವಾಗದವರು ಅಕಾಲಿಕವಾಗಿ ಮರಣಹೊಂದುವ ಸಾಧ್ಯತೆ ಶೇಕಡಾ 84 ರಷ್ಟು ಹೆಚ್ಚು ಎಂದು ಕಂಡುಬಂದಿದೆ. ಮನೆಯಲ್ಲಿಯೇ ನೀವು ನಾಲ್ಕು ಪರೀಕ್ಷೆಗಳನ್ನು ಮಾಡಿಕೊಳ್ಳುವ ಮೂಲಕ ನಿಮ್ಮ ದೀರ್ಘಾಯಸ್ಸಿನ ಬಗ್ಗೆ ಊಹಿಸಬಹುದು.

ಒಂದು ಕಾಲಿನ ಮೇಲೆ ನಿಲ್ಲುವುದು : ಒಂದು ಕಾಲನ್ನು ಮಡಚಿ, ಒಂದೇ ಕಾಲಿನ ಮೇಲೆ ನಿಂತುಕೊಳ್ಳಿ. ಎಷ್ಟು ಸಮಯದವರೆಗೆ ನೀವು ಒಂದೇ ಕಾಲಿನಲ್ಲಿ ನಿಲ್ಲಬಲ್ಲಿರಿ ಎಂದು ಪರೀಕ್ಷೆ ಮಾಡಿ. ಸಂಶೋಧನೆ ಪ್ರಕಾರ, 10 ಸೆಕೆಂಡುಗಳ ಕಾಲ ನಿಲ್ಲಲು ಸಾಧ್ಯವಾಗದ ಜನರು, ಹೆಚ್ಚು ಸಮಯ ನಿಲ್ಲುವ ಜನರಿಗೆ ಹೋಲಿಕೆ ಮಾಡಿದ್ರೆ ಬೇಗ ಸಾವನ್ನಪ್ಪುತ್ತಾರೆ ಎನ್ನಲಾಗಿದೆ.

ಪುಶ್ಅಪ್ ಮಾಡಿ ನೋಡಿ : ಪುಶ್‌ಅಪ್‌ಗಳನ್ನು (Push Up) ಮಾಡುವುದು ಎಲ್ಲರಿಗೂ ಸುಲಭವಲ್ಲ. ಆದರೆ 10 ಪುಶ್‌ಅಪ್‌ಗಳನ್ನು ಮಾಡಲು ಸಾಧ್ಯವಾಗದ ಜನರಿಗೆ ಹೃದಯಾಘಾತ ಅಥವಾ ಪಾರ್ಶ್ವವಾಯು ಅಪಾಯ ಹೆಚ್ಚು ಎಂದು ತಜ್ಞರು ಹೇಳಿದ್ದಾರೆ. ಹಾರ್ವರ್ಡ್ ಅಧ್ಯಯನವು (Harvard Study) ಸರಾಸರಿ 40 ವರ್ಷ ವಯಸ್ಸಿನ ಮತ್ತು ಹೃದ್ರೋಗವನ್ನು ಹೊಂದಿರದ 1,104 ಆರೋಗ್ಯವಂತರ ಡೇಟಾವನ್ನು ವಿಶ್ಲೇಷಿಸಿದೆ. ಪ್ರತಿಯೊಬ್ಬ ವ್ಯಕ್ತಿಯು ಒಂದು ನಿಮಿಷದಲ್ಲಿ ಸಾಧ್ಯವಾದಷ್ಟು ಪುಷ್ಅಪ್ ಗಳನ್ನು ಮಾಡಿದರು. ಹೆಚ್ಚು ಪುಶ್ ಅಪ್ ಮಾಡಿದವರಿಗೆ ಹೃದ್ರೋಗ (Heart Disease) ಬರುವ ಸಾಧ್ಯತೆ ಕಡಿಮೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ನೀವೂ ಮನೆಯಲ್ಲಿ ನಿಮ್ಮ ಆರೋಗ್ಯ, ಆಯಸ್ಸು ಪರೀಕ್ಷಿಸಿಕೊಳ್ಳಲು ಪುಶ್ ಅಪ್ ಮಾಡಿನೋಡಿ. 

Explained: ಮಗುವಿನ ಆರೋಗ್ಯ ವೃದ್ಧಿಸುತ್ತೆ ಈ ಕೇಸರಿ

ಮೆಟ್ಟಿಲು ಹತ್ತುವುದು : ನೀವು ಎಷ್ಟು ಮೆಟ್ಟಿಲನ್ನು ಆರಾಮವಾಗಿ ಹತ್ತುತ್ತೀರಿ ಎಂಬುದು ಕೂಡ ನೀವು ಎಷ್ಟು ಕಾಲ ಬದುಕುತ್ತೀರಿ ಎಂಬುದನ್ನು ಸೂಚಿಸುತ್ತದೆ. ಸ್ಪೇನ್‌ನ ಸಂಶೋಧಕರು 12,000 ಕ್ಕೂ ಹೆಚ್ಚು ಜನರನ್ನು ಟ್ರೆಡ್‌ಮಿಲ್‌ಗಳಲ್ಲಿ ಓಡಿಸುವ ಮೂಲಕ ಸಾಮರ್ಥ್ಯ ಪತ್ತೆಗೆ ಪ್ರಯತ್ನಿಸಿದ್ದಾರೆ. ಈ ಸಂಶೋಧನೆಯು 5 ವರ್ಷಗಳ ಕಾಲ ನಡೆಯಿತು. ಈ ಸಮಯದಲ್ಲಿ ಅಧ್ಯಯನದಲ್ಲಿ ಪಾಲ್ಗೊಂಡಿದ್ದವರ ಹೃದಯದ ಆರೋಗ್ಯ ಪರೀಕ್ಷೆ ಮಾಡಲಾಯಿತು. ಆರೋಗ್ಯವಂತ ಜನರಿಗಿಂತ ಅನಾರೋಗ್ಯಕರ ಜನರಲ್ಲಿ ಸಾವಿನ ಪ್ರಮಾಣ ಮೂರು ಪಟ್ಟು ಹೆಚ್ಚು ಎಂದು ಸಂಶೋಧನೆಯಿಂದ ಬಹಿರಂಗವಾಯ್ತು. ನಿಮ್ಮ ಹೃದಯದ ಆರೋಗ್ಯವನ್ನು ಪರೀಕ್ಷಿಸಲು ನೀವು ಬಯಸಿದರೆ, ಮೂರು ಮಹಡಿಗಳವರೆಗೆ ನಿಲ್ಲದೆ ಮೆಟ್ಟಿಲುಗಳನ್ನು ಹತ್ತಿ ಎಂದು ಈ ಸಂಶೋಧನೆಯಲ್ಲಿ ಹೇಳಲಾಗಿದೆ. ಹಾಗೆ ಮಾಡುವಲ್ಲಿ ನೀವು ಯಶಸ್ವಿಯಾದರೆ ನಿಮ್ಮ ಹಾರ್ಟ್ ಗಟ್ಟಿಯಿದೆ ಎಂದರ್ಥ. 

ಕೆಲ ತರಕಾರಿ, ಹಣ್ಣಿ ಬೀಜವನ್ನು ಅಪ್ಪಿತಪ್ಪಿಯೂ ತಿನ್ನಬಾರದು!

ನಡೆಯುವ ವೇಗ : ಫ್ರೆಂಚ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಅಂಡ್ ಮೆಡಿಕಲ್ ರಿಸರ್ಚ್‌ನ ಸಂಶೋಧಕರು ಐದು ವರ್ಷಗಳಲ್ಲಿ 65 ವರ್ಷಕ್ಕಿಂತ ಮೇಲ್ಪಟ್ಟ 3200 ಜನರ ವಾಕಿಂಗ್ ವೇಗವನ್ನು ವಿಶ್ಲೇಷಿಸಿದ್ದಾರೆ. ಸಂಶೋಧನೆಯ ಸಮಯದಲ್ಲಿ ಜನರಿಗೆ 6 ಮೀಟರ್ ಉದ್ದದ ಕಾರಿಡಾರ್‌ನಲ್ಲಿ ನಡೆಯಲು ಹೇಳಲಾಗಿದೆ. ಅಂತಿಮವಾಗಿ, ವೇಗವಾಗಿ ನಡೆದವರಿಗೆ ಹೋಲಿಸಿದರೆ ನಿಧಾನವಾಗಿ ನಡೆಯುವವರಿಗೆ ಸಾವಿನ ಅಪಾಯ ಶೇಕಡಾ 44 ರಷ್ಟು ಹೆಚ್ಚಿದೆ ಎಂದು ಸಂಶೋಧಕರು ಹೇಳಿದ್ದಾರೆ.