Asianet Suvarna News Asianet Suvarna News

Health After 30: ಮೂವತ್ತಾಯ್ತಾ? ದೇಹ, ಮನಸ್ಸು ಬದಲಾಗುತ್ತೆ

30 ವರ್ಷವೆಂದರೆ ಇನ್ನೂ ಹುಡುಗಾಟದ ದಿನಗಳು ಎನ್ನುವ ಭಾವನೆ ಹಲವರಿಗಿದೆ. ಹೀಗಾಗಿ, 20ರ ವಯೋಮಾನದ ಜೀವನಶೈಲಿಯನ್ನೇ ಅನುಸರಿಸುತ್ತಾರೆ. ಆದರೆ, ಮೂವತ್ತರ ಬಳಿಕ ದೇಹ ಬದಲಾಗುತ್ತದೆ, ಮನಸ್ಥಿತಿಯೂ ಬದಲಾಗುತ್ತದೆ. ಅದಕ್ಕೆ ತಕ್ಕಂತೆ ಜೀವನಶೈಲಿಯಲ್ಲೂ ಬದಲಾವಣೆ ತಂದುಕೊಳ್ಳುವುದು ಅಗತ್ಯ.
 

There have been some changes in body after 30
Author
First Published Sep 29, 2022, 5:37 PM IST

“ಅರವತ್ತಾದರೆ ಅರಳು ಮರಳುʼ ಎನ್ನುವ ಮಾತು ಜನಜನಿತ. ಅರವತ್ತಾದಾಕ್ಷಣ ಅರಳುಮರಳು ಉಂಟಾಗಬೇಕೆಂದೇನೂ ಇಲ್ಲ. ಜೀವನಶೈಲಿ ಚೆನ್ನಾಗಿದ್ದರೆ ಅರಳುಮರಳು ಸುಲಭಕ್ಕೆ ಉಂಟಾಗುವುದಿಲ್ಲ. ಈಗಂತೂ ವೃದ್ಧಾಪ್ಯದ ವಯೋಮಾನವೂ ಏರಿಕೆಯಾಗುತ್ತಿದೆ. ಅಂದರೆ, ವಿವಿಧ ಕಾರಣಗಳಿಂದ ಮನುಷ್ಯನ ಜೀವಿತಾವಧಿ ಹೆಚ್ಚಾಗಿದೆ. ಆದರೆ, ಆರೋಗ್ಯಕರ ಜೀವನ ಸಾಗಿಸುತ್ತಿದ್ದಾನೆಯೇ ಎಂದು ಕೇಳಿದರೆ ಉತ್ತರ ನಕಾರಾತ್ಮಕವಾಗಿ ದೊರೆಯುತ್ತದೆ. “ನಲ್ವತ್ತು ವರ್ಷದ ಬಳಿಕ ದೇಹ ಮೊದಲಿನಂತೆ ಇರುವುದಿಲ್ಲʼ ಎಂದು ಕೆಲವರು ಹೇಳುವುದನ್ನು ಕೇಳಿರಬಹುದು. ಹೀಗಾಗಿ, 40 ವರ್ಷದ ಗಡಿ ದಾಟಿದಾಕ್ಷಣ ವೃದ್ಧಾಪ್ಯದ ಚಿಹ್ನೆಗಳು ಶುರುವಾಗುತ್ತವೆ ಎನ್ನುವ ಭಾವನೆ ಸಾಮಾನ್ಯವಾಗಿದೆ. ಅಸಲಿಗೆ, 30 ವರ್ಷವಾಗುತ್ತಿರುತ್ತಿರುವಂತೆಯೇ ದೇಹದಲ್ಲಿ ಹಲವು ಬದಲಾವಣೆ ಕಾಣಿಸಿಕೊಳ್ಳುತ್ತದೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿರುವ ಸತ್ಯ. ಮಾನಸಿಕ ಮತ್ತು ದೈಹಿಕ ಬದಲಾವಣೆಗಳು ಈ ಸಮಯದಲ್ಲಿ ಉಂಟಾಗುತ್ತವೆ. ಮಾನಸಿಕವಾಗಿ ವ್ಯಕ್ತಿ ಹೆಚ್ಚು ಪ್ರಬುದ್ಧನಾಗುತ್ತ ಸಾಗುತ್ತಾನೆ. ತನಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದು ಎನ್ನುವುದು ಆತನ ಅರಿವಿಗೆ ಬರುತ್ತದೆ. ಪರಿಣಾಮವಾಗಿ, ವ್ಯಕ್ತಿತ್ವದಲ್ಲಿ ಬದಲಾವಣೆ ಗೋಚರಿಸುತ್ತದೆ. ಈ ಸಮಯದಲ್ಲಿ ಪ್ರತಿಯೊಬ್ಬರೂ ತಮ್ಮ ಬಗ್ಗೆ ತಾವು ಕಾಳಜಿ ವಹಿಸಲು ಆರಂಭಿಸಬೇಕಾಗುತ್ತದೆ.

30 ವರ್ಷವಾದರೆ (30 Age) ನಿರ್ಲಕ್ಷ್ಯ ಹಾಗೂ ಹುಡುಗಾಟದ ದಿನಗಳು ಮುಗಿದವು ಎಂದೇ ಅರ್ಥ. ವಿವಿಧ ರೀತಿಯ ಜವಾಬ್ದಾರಿಗಳು (Responsibility) ಹೆಗಲೇರಿರುತ್ತವೆ. ಇಷ್ಟರೊಳಗೆ ಜೀವನ (Life) ಒಂದು ಹಂತಕ್ಕೆ ಬಂದಿದ್ದರೆ ಉತ್ತಮ, ಇಲ್ಲವಾದಲ್ಲಿ ಗಂಭೀರವಾಗಿ ಚಿಂತನೆ ಮಾಡಿ ಮುಂದಿನ ಹೆಜ್ಜೆ ಇಡಬೇಕಾಗುತ್ತದೆ. ಏಕೆಂದರೆ, 30ರ ಬಳಿಕ ದೇಹದ ಸ್ಥಿತಿಗತಿ ಬದಲಾಗುತ್ತದೆ (Changes in Body). 

•    ಮೆಟಬಾಲಿಸಂ (Metabolism) ನಿಧಾನ
30 ವರ್ಷವಾದರೆ ಸಾಕು, ದೇಹದ ಮೆಟಬಾಲಿಸಂ ಕ್ರಿಯೆ ಅಂದರೆ ಚಯಾಪಚಯ ಕ್ರಿಯೆ ನಿಧಾನಗೊಳ್ಳುತ್ತದೆ. ಇದು ಎಲ್ಲರೂ ಸ್ವಂತ ಆರೋಗ್ಯದ ಬಗ್ಗೆ ಗಮನ ನೀಡುವ ಹಂತ. ಆದರೆ, ಅದಕ್ಕೆ ತಕ್ಕಂತೆ ಈ ವಯಸ್ಸಿನಲ್ಲಿ ಜನ ಸಾಮಾನ್ಯವಾಗಿ ತಮ್ಮ ಜೀವನಶೈಲಿ (Lifestyle) ಹಾಗೂ ಆಹಾರ ಪದ್ಧತಿಯಲ್ಲಿ (Food Style) ಬದಲಾವಣೆ ತಂದುಕೊಳ್ಳುವುದಿಲ್ಲ. ಯೌವನದಲ್ಲಿ ಅಥವಾ 20-30ರವರೆಗೆ ಹೇಗೆ ತಿನ್ನುತ್ತಿದ್ದರೋ ಅದೇ ರೀತಿ ಇರುತ್ತಾರೆ. ಹೀಗಾಗಿ, ದೇಹದಲ್ಲಿ ಕೊಬ್ಬು (Fat) ಶೇಖರಣೆ ಆಗುತ್ತ ಸಾಗುತ್ತದೆ. 30ರ ಬಳಿಕ ಬೇಗ ಬೊಜ್ಜು ಹೆಚ್ಚುವುದು ಇದೇ ಕಾರಣಕ್ಕೆ.

•    ಮೂಳೆಗಳು ದುರ್ಬಲ (Bones become Weak)
30ರ ಬಳಿಕ ಕೆಟ್ಟ ಜೀವನಶೈಲಿಯಿಂದಾಗಿ ಮೂಳೆಗಳು ದುರ್ಬಲಗೊಳ್ಳಲು ಆರಂಭವಾಗುತ್ತವೆ. ಇದು ಪ್ರತಿಯೊಬ್ಬರ ಮೂಳೆಗಳ ಸಾಂದ್ರತೆ (Bones Density) ಕುಗ್ಗಲು ಶುರುವಾಗುವ ವಯಸ್ಸು. ಮುಂದಕ್ಕೆ ಸಾಗಿದಂತೆ ಈ ಸಮಸ್ಯೆ ಹೆಚ್ಚಬಹುದು. ಹೀಗಾಗಿ, 30ರ ಬಳಿಕ ಆಹಾರದಲ್ಲಿ ಕ್ಯಾಲ್ಸಿಯಂ, ವಿಟಮಿನ್‌, ಮಿನರಲ್ಸ್‌ ಇರುವಂತೆ ನೋಡಿಕೊಳ್ಳಿ. ಕೆಫೀನ್‌, ತಂಬಾಕು (Tobaco), ಮದ್ಯಪಾನ (Alcohol Drinking), ಧೂಮಪಾನ (Smoking) ಕಡಿಮೆ ಪ್ರಮಾಣಕ್ಕೆ ಇಳಿಸಿಕೊಳ್ಳಿ.

ಇದನ್ನೂ ಓದಿ: Women Health : ಕೆಲಸದ ಒತ್ತಡದಿಂದ ಹದಗೆಡ್ತಿದೆ ಮಹಿಳೆಯರ ಲೈಂಗಿಕ ಆರೋಗ್ಯ

•    ಜೀವನದ ಪ್ರಮುಖ ಹಂತ 
30 ವರ್ಷವಾಯಿತೆಂದರೆ ಹಲವಾರು ಜವಾಬ್ದಾರಿಗಳು ಆರಂಭವಾಗಿರುತ್ತವೆ. ಅವುಗಳ ಜತೆಗೆ ತಮ್ಮನ್ನು ತಾವು  ನಿಭಾಯಿಸಿಕೊಳ್ಳುವುದನ್ನು, ಆರೋಗ್ಯ (Health) ಮೆಂಟೇನ್‌ ಮಾಡುವುದನ್ನು ಪ್ರತಿಯೊಬ್ಬರೂ ಕಲಿತುಕೊಳ್ಳಬೇಕು. ಬೇರೊಬ್ಬರ ಜವಾಬ್ದಾರಿ ಹೊಂದುವ ಜತೆಗೆ ತಮ್ಮ ಜವಾಬ್ದಾರಿ ತಮಗಿರಬೇಕು. ನಾವು ಚೆನ್ನಾಗಿದ್ದರೆ ಮಾತ್ರ ಅವರೂ ಚೆನ್ನಾಗಿರುತ್ತಾರೆ ಎನ್ನುವ ಅರಿವು ಇರಲಿ. ಎಲ್ಲಕ್ಕಿಂತ ಮುಖ್ಯವಾಗಿ ಆರ್ಥಿಕ (Financial) ಸ್ಥಿತಿಯನ್ನು ಮ್ಯಾನೇಜ್‌ ಮಾಡಬೇಕು. ಮಕ್ಕಳ ಓದು, ಪತ್ನಿ, ಪಾಲಕರ ಆರೋಗ್ಯ, ಅವರ ಅಗತ್ಯಗಳನ್ನು ಪೂರೈಸಬೇಕಾಗುತ್ತದೆ. ಇದು ಉಳಿತಾಯಕ್ಕೆ (Savings) ಮುನ್ನುಡಿ ಬರೆಯುವ ಕಾಲ. ಹೀಗಾಗಿ, ಖರ್ಚು ವೆಚ್ಚ ಕಡಿಮೆ ಮಾಡಿ ಉಳಿತಾಯವನ್ನು ಆರಂಭಿಸಬೇಕಾಗುತ್ತದೆ. 

•    ಸಂಬಂಧಕ್ಕೆ ಆದ್ಯತೆ (Relationship)
20ರ ವಯೋಮಾನದಲ್ಲಿ ಉಂಟಾಗುವ ಪ್ರೀತಿಗಿಂತ ಮೂವರತ್ತರ ಬಳಿಕ ಉಂಟಾಗುವ ಪ್ರೀತಿ ಹೆಚ್ಚು ಪ್ರಬುದ್ಧವಾಗಿರುತ್ತದೆ. ಮೂವತ್ತರ ಬಳಿಕ ಸಂಗಾತಿ ಜತೆಗಿನ ಬಾಂಧವ್ಯ ಇನ್ನಷ್ಟು ಗಟ್ಟಿಯಾಗುತ್ತದೆ.

ಇದನ್ನೂ ಓದಿ: Women Health: ಋತು ಬಂಧದ ವೇಳೆ ಕಾಡುವ ಹಾಟ್ ಫ್ಲಾಶ್‌ಗೆ ಇಲ್ಲಿದೆ ಮನೆ ಮದ್ದು

•    ಜೀವನಶೈಲಿ ಬದಲಾವಣೆ
ಈ ಹಂತದಲ್ಲಿ ಫಾಸ್ಟ್‌, ಜಂಕ್‌ ಫುಡ್‌ (Junk Food) ಸೇವನೆ ಮಾಡಬಾರದು. ಆರೋಗ್ಯಕರ ಆಹಾರ ಸೇವನೆಗೆ ಒತ್ತು ನೀಡಬೇಕು. ತರಕಾರಿ, ಹಣ್ಣು, ಸೊಪ್ಪು, ಪ್ರೊಟೀನ್‌ ಹೆಚ್ಚು ಸೇವಿಸಬೇಕು, ಸಾಕಷ್ಟು ನೀರು ಕುಡಿಯಬೇಕು. ಮಾನಸಿಕ ಒತ್ತಡ (Stress) ನಿಯಂತ್ರಣಕ್ಕೆ ಧ್ಯಾನ, ದೇಹಾರೋಗ್ಯಕ್ಕೆ ವ್ಯಾಯಾಮ (Exercise) ಮಾಡಬೇಕು. 

Follow Us:
Download App:
  • android
  • ios