Asianet Suvarna News Asianet Suvarna News

ಸಾಮಾನ್ಯ ಶೀತದ ವೈರಸ್‌ಗಳಲ್ಲಿರೋ ಕೋಶಗಳು Corona ವಿರುದ್ಧ ಹೋರಾಡಬಲ್ಲವು!

ಸಾಮಾನ್ಯ ಶೀತಕ್ಕೆ ಕಾರಣವಾಗುವ ವೈರಸ್ನಲ್ಲಿರುವ ಟಿ ಕೋಶಗಳು ಕೊರೋನಾ ವೈರಸ್ ಆಟಕ್ಕೆ ಕಡಿವಾಣ ಹಾಕಬಲ್ಲವು. ಅಚ್ಚರಿ ಎನಿಸಬಹುದು. ಲಂಡನ್ ಕಾಲೇಜಿನ ಅಧ್ಯಯನದಲ್ಲಿ ಇದು ಸಾಬೀತಾಗಿದೆ. 

T cells from common colds can provide protection against COVID 19
Author
Bangalore, First Published Jan 11, 2022, 5:24 PM IST

ಈಗ ಎಲ್ಲೆಲ್ಲೂ ಕೊರೋನಾ (Corona) ವೈರಸ್ (Virus), ಒಮಿಕ್ರಾನ್ (Omicron) ರೂಪಾಂತರಿಯದ್ದೇ ಸುದ್ದಿ. ಎಲ್ಲರಿಗೂ ಈ ಸೋಂಕಿನ ಹೆಚ್ಚಳದ ಕುರಿತು ಚಿಂತೆ. ಮತ್ತೆ ಲಾಕ್ ಡೌನ್ ಆತಂಕ. ಒಟ್ಟಿನಲ್ಲಿ ವೈರಸ್ ದಾಳಿಗೆ ಇಡೀ ಪ್ರಪಂಚ ಚಿಂತಾಕ್ರಾಂತವಾಗಿರುವುದಂತೂ ನಿಜ. ಹೀಗಾಗಿ, ಕೊರೋನಾ ವೈರಸ್ ಮಣಿಸುವ ಯಾವುದಾದರೊಂದು ವಿಧಾನದ ಬಗ್ಗೆ ವಿಜ್ಞಾನಿಗಳು ಸದಾಕಾಲ ಏನಾದರೊಂದು ಪ್ರಯೋಗ ನಡೆಸುತ್ತಲೇ ಇರುತ್ತಾರೆ. ಇದೀಗ, ಲಂಡನ್ (London)ನ ಇಂಪೀರಿಯಲ್ ಕಾಲೇಜಿ(Imperial College)ನ ತಜ್ಞ(Expert)ರ ತಂಡದಿಂದ ಹೊಸ ಅಧ್ಯಯನ(Study)ವೊಂದು ಬೆಳಕಿಗೆ ಬಂದಿದೆ. 

ಸಾಮಾನ್ಯವಾಗಿ ವರ್ಷಕ್ಕೊಮ್ಮೆಯಾದರೂ ಎಲ್ಲರೂ ನೆಗಡಿ(Common Cold)ಗೆ ತುತ್ತಾಗುತ್ತಾರೆ. ಶೀತ, ತಲೆಭಾರ, ತಲೆನೋವು, ಕಫ ಕಟ್ಟಿಕೊಂಡು ಮೂಗು, ಗಂಟಲಿನಲ್ಲಿ ಹಿಂಸೆಯಾಗುವುದು, ಕೆಮ್ಮು ಎಲ್ಲವೂ ಇದರ ಭಾಗ. ಕೊರೋನಾ ವೈರಸ್ ಬರುವುದಕ್ಕೂ ಮುನ್ನವೇ ಶೀತದ ಸಮಸ್ಯೆ ಇದ್ದೇ ಇದೆ. ಈಗ ಈ ಶೀತಕ್ಕೆ ಕಾರಣವಾಗುವ ವೈರಸ್ ನಲ್ಲಿರುವ ಕೋಶಗಳು ಅಧ್ಯಯನದ ಕೇಂದ್ರಬಿಂದುವಾಗಿವೆ. 

ಸಾಮಾನ್ಯ ಶೀತವನ್ನುಂಟು ಮಾಡುವ ವೈರಸ್ ನ ಟಿ ಕೋಶ(T Cells)ಗಳನ್ನು ಅಧಿಕ ಮಟ್ಟದಲ್ಲಿ ಹೊಂದಿರುವ ಜನರಿಗೆ ಕೊರೋನಾ ವೈರಸ್ ಬಾಧಿಸುವ ಸಾಧ್ಯತೆ ಕಡಿಮೆ ಎಂದು ಇಂಪೀರಿಯಲ್ ಕಾಲೇಜಿನ ತಜ್ಞರು ಹೇಳಿದ್ದಾರೆ. ಇದರಿಂದ ಭವಿಷ್ಯದಲ್ಲಿ ಕೋವಿಡ್ ಲಸಿಕೆಯ ಹೊಸ ಮಾದರಿಗೆ ಕಾರಣವಾಗುವ ಎಲ್ಲ ಸಾಧ್ಯತೆಗಳೂ ಇವೆ ಎಂದು ಹೇಳಲಾಗಿದೆ. 

ಟಿ ಕೋಶಗಳು ಹೆಚ್ಚು ಪ್ರಮಾಣದಲ್ಲಿರುವ ವ್ಯಕ್ತಿಗೆ ಕೊರೋನಾ ವೈರಸ್ ದಾಳಿ ಇಡುವ ಸಾಧ್ಯತೆ ಕಡಿಮೆ. ಇಟ್ಟರೂ ಗಂಭೀರವಾದ ಪರಿಣಾಮ ಉಂಟಾಗುವುದಿಲ್ಲ. ಟಿ ಕೋಶಗಳು ಸಾರ್ಸ್-ಕೋವ್-2 ವೈರಸ್ ಮೇಲೆ ಬೀರುವ ಪ್ರಭಾವದ ಕುರಿತು ಈ ತಜ್ಞರು ಅಧ್ಯಯನ ನಡೆಸಿದ್ದಾರೆ. 

Kids Health: ಮಕ್ಕಳಿಗೆ 2 ವರ್ಷ ತುಂಬುವ ಮೊದಲು ಸಕ್ಕರೆಯನ್ನು ಕೊಡಲೇಬೇಡಿ

ಇಂಪೀರಿಯಲ್ ಕಾಲೇಜಿನ ಹೆಲ್ತ ರಿಸರ್ಚ್ ರೆಸ್ಪಿರೇಟರಿ ಇನ್ಫೆಕ್ಷನ್ ನ್ಯಾಷನಲ್ ಇನ್ ಸ್ಟಿಟ್ಯೂಟ್ ನಿರ್ದೇಶಕರಾಗಿರುವ ಭಾರತೀಯ ಮೂಲದ ಪ್ರೊಫೆಸರ್ ಅಜಿತ್ ಲಾಲ್ವಾನಿ (Ajit Lalvani) ಪ್ರಕಾರ, ಸಾರ್ಸ್-ಕೊವ್-2 ವೈರಸ್ ವಿರುದ್ಧ ಸಾಮಾನ್ಯ ನೆಗಡಿಗೆ ಕಾರಣವಾಗುವ ಕೊರೋನಾವೈರಸ್ ಗಳು (ಇವನ್ನೂ ಸಹ ಕೊರೋನಾ ವೈರಸ್ ಎಂದೇ ಹೇಳಲಾಗುತ್ತದೆ.) ರಕ್ಷಣಾತ್ಮಕ(Protective)ವಾಗಿ ಕಾರ್ಯ ನಿರ್ವಹಿಸುತ್ತವೆ.

Junk Foodನಿಂದ ದೂರ ಇರೋಕೆ ಈ ಟಿಪ್ಸ್ ಫಾಲೋ ಮಾಡಿ..

ಟಿ ಕೋಶಗಳ ಮಹಿಮೆ
ಲಸಿಕೆ ಪಡೆದ ಪ್ರತಿಕಾಯಗಳಲ್ಲಿ ಪ್ರಬಲ ಪ್ರೊಟೀನ್ (Spike Protien) ಭಾಗ ರೋಗನಿರೋಧಕ ಶಕ್ತಿಯ ಬಲವಾದ ಒತ್ತಡದಲ್ಲಿರುತ್ತದೆ. ಇದರಿಂದ ಲಸಿಕೆಯ ರಕ್ಷಣೆಯನ್ನೂ ಮೀರಿದ ರೂಪಾಂತರಿ (Mutant) ವೈರಸ್ ಗಳು ಸೃಷ್ಟಿಯಾಗುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ, ಟಿ ಕೋಶಗಳಿಗೆ ಸಿಲುಕಿದ ಅಂತರ್ಗತವಾದ ಪ್ರೊಟೀನ್ ರೂಪಾಂತರವಾಗುವ ಸಾಧ್ಯತೆ ಬಹಳ ಕಡಿಮೆ. ಪರಿಣಾಮವಾಗಿ, ಒಮಿಕ್ರಾನ್ ಸೇರಿದಂತೆ ಎಲ್ಲ ರೀತಿಯ ಸಾರ್ಸ್-ಕೋವ್-2 ವೈರಸ್ ಗಳ ವಿರುದ್ಧ ಸಂರಕ್ಷಣೆ ಒದಗಿಸುತ್ತವೆ ಎನ್ನುವುದು ಅಜಿತ್ ಲಾಲ್ವಾನಿ ಅಭಿಪ್ರಾಯ. 

ಕೋವಿಡ್ ಸೋಂಕು ದೃಢಪಟ್ಟವರ ಮೇಲೆ ಈ ಕುರಿತು ಅಧ್ಯಯನ ನಡೆಸಲಾಗಿತ್ತು. ಏಳು ದಿನಗಳ ಬಳಿಕ ಸೋಂಕು ಹೆಚ್ಚಳವಾಗಿದೆಯೇ ಎಂದು ಪರೀಕ್ಷಿಸಿದಾಗ ಅಚ್ಚರಿಯ ಫಲಿತಾಂಶ ಕಂಡುಬಂತು. ಕೊರೋನಾಕ್ಕೂ ಮುನ್ನವೇ ಸಾಮಾನ್ಯ ಶೀತಕ್ಕೆ ಕಾರಣವಾಗುವ ವೈರಸ್ ಹೊಂದಿದ್ದವರು  ಹೆಚ್ಚು ಸುರಕ್ಷಿತವಾಗಿದ್ದರು.
ಕೊರೋನಾ ಪಾಸಿಟಿವ್ ಬಂದವರೆಲ್ಲರಿಗೂ ಹೆಚ್ಚು ಸಮಸ್ಯೆಯಾಗದೆ ಇರುವುದು ನಮ್ಮೆಲ್ಲರ ಗಮನಕ್ಕೂ ಬಂದಿರುತ್ತದೆ. ಇದಕ್ಕೂ ಟಿ ಕೋಶಗಳ ಮಹಿಮೆಯೇ ಕಾರಣವಿದ್ದಿರಬಹುದು. “ನೇಚರ್ ಕಮ್ಯೂನಿಕೇಷನ್ಸ್’ (Nature Communications) ಎನ್ನುವ ನಿಯತಕಾಲಿಕದಲ್ಲಿ ಈ ಅಧ್ಯಯನದ ಕುರಿತು ಲೇಖನ ಪ್ರಕಟವಾಗಿದೆ.  

Follow Us:
Download App:
  • android
  • ios