Asianet Suvarna News Asianet Suvarna News

ಚಿನ್ನದಂತೆ ಹೊಳೆಯುವ ಇದರಲ್ಲಿ ಅಡಗಿದೆ ಲೈಂಗಿಕ ಆರೋಗ್ಯ!

ಸ್ವರ್ಣ ಭಸ್ಮ. ಇದ್ರ ಹೆಸರನ್ನು ಅನೇಕರು ಕೇಳಿರ್ತಾರೆ. ಆದ್ರೆ ಪ್ರಯೋಜನದ ಬಗ್ಗೆ ಅಷ್ಟಾಗಿ ತಿಳಿದಿರೋದಿಲ್ಲ. ನಾವಿಂದು ಅದ್ರ ಪ್ರಯೋಜನದ ಜೊತೆ ಬೆಲೆ ಹಾಗೂ ಬಳಕೆಯನ್ನು ನಿಮಗೆ ತಿಳಿಸ್ತೇವೆ.
 

Swarna Bhasma health Benefits as Ayurveda medicine
Author
First Published Sep 13, 2022, 1:12 PM IST

ಬಂಗಾರ ಯಾರಿಗೆ ಇಷ್ಟವಿಲ್ಲ ಹೇಳಿ? ಬಂಗಾರವನ್ನು ಬಹುತೇಕ ಎಲ್ಲರೂ ಖರೀದಿಸಲು ಇಷ್ಟಪಡ್ತಾರೆ. ಕೆಲವರು ಬಂಗಾರವನ್ನು ತುರ್ತು ಸಂದರ್ಭಕ್ಕೆ ಬೇಕು ಎನ್ನುವ ಕಾರಣಕ್ಕೂ ಸಂಗ್ರಹಿಸ್ತಾರೆ. ಅದೇನೇ ಇರಲಿ, ಬಂಗಾರದಂತೆ ಕಾಣುವ ವಸ್ತುವೊಂದನ್ನು ನೀವು ಸೇವನೆ ಮಾಡಿದ್ರೆ ಆರೋಗ್ಯಕ್ಕೆ ಬಹಳ ಒಳ್ಳೆಯದು. 10ಕ್ಕೂ ಹೆಚ್ಚು ಖಾಯಿಲೆಗಳಿಗೆ ಅದು ಮದ್ದಾಗಿ ಕೆಲಸ ಮಾಡುತ್ತದೆ. ಅದು ಯಾವುದು, ಅದನ್ನು ಸೇವನೆ ಮಾಡಿದ್ರೆ ಏನೆಲ್ಲ ಪ್ರಯೋಜನವಿದೆ ಹಾಗೆ ಅದನ್ನು ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡ್ಬೇಕು ಎಂಬುದನ್ನು ನಾವಿಂದು ನಿಮಗೆ ಹೇಳ್ತೇವೆ.

ಬಂಗಾರ (Gold) ದಂತ ಬಣ್ಣ ಹೊಂದಿರುವ ವಸ್ತು ಬೇರೆ ಯಾವುದೂ ಅಲ್ಲ ಸ್ವರ್ಣ ಭಸ್ಮ (Swarna Bhasma). ಮೊದಲನೇಯದಾಗಿ ಈ ಸ್ವರ್ಣ ಭಸ್ಮ ಎಂದರೇನು ಎಂಬುದನ್ನು ತಿಳಿಯೋಣ. ಸ್ವರ್ಣ ಭಸ್ಮವನ್ನು ಶುದ್ಧ ಚಿನ್ನದಿಂದ ತಯಾರಿಸಲಾಗುತ್ತದೆ. ಶುದ್ಧ ಚಿನ್ನವನ್ನು ನಿಂಬೆ ರಸದಲ್ಲಿ ಅದ್ದಿ ಇಡಲಾಗುತ್ತದೆ. ನಿಂಬೆ ರಸವನ್ನು ಸೇರಿಸುವ ಮೊದಲು ಚಿನ್ನಕ್ಕೆ ರಸಸಿಂಧೂರ್ (Mercurial Compound) ಪೇಸ್ಟ್ ಹಚ್ಚಲಾಗುತ್ತದೆ. ಮೊದಲು ಇದನ್ನು ಗಾಳಿಯಾಡದ ಡಬ್ಬದಲ್ಲಿ ಇಟ್ಟು, ನಂತ್ರ ಸಂಸ್ಕರಣೆ ಶುರು ಮಾಡುತ್ತಾರೆ. 

ಸ್ವರ್ಣ ಭಸ್ಮವನ್ನು ಹಾಲಿನೊಂದಿಗೆ, ಜೇನುತುಪ್ಪದೊಂದಿಗೆ, ತುಪ್ಪದೊಂದಿಗೆ ಅಥವಾ ಚ್ಯವನಪ್ರಾಶದ ಜೊತೆ ತಿನ್ನಬಹುದು.  ಇದನ್ನು ಬೆಳಗಿನ ಉಪಾಹಾರದ ಜೊತೆ ಅಥವಾ ರಾತ್ರಿ ಮಲಗುವ ಮೊದಲು ಸೇವಿಸುವುದು ಪ್ರಯೋಜನಕಾರಿ. ಒಂದು ಗ್ರಾಂ ಸ್ವರ್ಣ ಭಸ್ಮದ ಬೆಲೆ 12 ಸಾವಿರ ರೂಪಾಯಿವರೆಗಿದೆ. ಅದನ್ನು ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡ್ಬೇಕು. ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಿದ್ರೆ ಕೆಲವೊಂದು ಹಾನಿಯನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಅದರ ಬಳಕೆ ಮುನ್ನ ವೈದ್ಯರ ಸಲಹೆ ಪಡೆಯಬೇಕು. 

ಅನಾನಸ್‌ ತಿನ್ನೋ ಮೊದ್ಲು ಉಪ್ಪು ನೀರಿನಲ್ಲಿ ನೆನೆಸಿಡ್ಬೇಕು ಅನ್ನೋದ್ಯಾಕೆ ?

ಸ್ವರ್ಣ ಭಸ್ಮದಿಂದ ಅನೇಕ ಪ್ರಯೋಜನಗಳಿವೆ. ಆಯುರ್ವೇದದಲ್ಲಿ ಇದ್ರ ಬಗ್ಗೆ ಸಾಕಷ್ಟು ಸಂಗತಿಗಳನ್ನು ಹೇಳಲಾಗಿದೆ. ರಕ್ತವನ್ನು ಶುದ್ಧೀಕರಿಸುವುದು ಸ್ವರ್ಣ ಭಸ್ಮದ ಮುಖ್ಯ ಕಾರ್ಯವಾಗಿದೆ. ರಕ್ತ ಶುದ್ಧವಾಗಿರುವುದು ಬಹಳ ಮುಖ್ಯ. ರಕ್ತ ಶುದ್ಧವಾಗಿದ್ದರೆ ಅರ್ಥಕ್ಕಿಂತ ಹೆಚ್ಚು ಖಾಯಿಲೆ ಕಡಿಮೆಯಾದಂತೆ.  

ಸ್ವರ್ಣ ಭಸ್ಮದ ಪ್ರಯೋಜನಗಳು : 
ಕ್ಯಾನ್ಸರ್ ಗೆ ಸ್ವರ್ಣ ಭಸ್ಮ ಮದ್ದು :
ನಮ್ಮ ದೇಹ ಕ್ಯಾನ್ಸರ್ ನಿಂದ ದೂರವಿರಬೇಕು ಎಂದಾದ್ರೆ ಸ್ವರ್ಣ ಭಸ್ಮ ಸೇವನೆ ಮಾಡ್ಬೇಕು. ಸ್ವರ್ಣ ಭಸ್ಮ ಕ್ಯಾನ್ಸರ್ ವಿರುದ್ಧ ನಮ್ಮ ದೇಹವನ್ನು ರಕ್ಷಿಸುತ್ತದೆ ಎಂದು ಅನೇಕ ಸಂಶೋಧನೆಗಳಿಂದ ಬಹಿರಂಗವಾಗಿದೆ.  

ಲೈಂಗಿಕ ರೋಗ (Sexual Disease) ನಿವಾರಕ ಸ್ವರ್ಣ ಭಸ್ಮ :  ಸ್ವರ್ಣ ಭಸ್ಮವನ್ನು ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ಬಯಸುವವರು ಸ್ವರ್ಣ ಭಸ್ಮ ಬಳಸಬೇಕು.

ಹೃದಯದ ಆರೋಗ್ಯ (Heart Health) : ಸ್ವರ್ಣ ಭಸ್ಮ ಹೃದ್ರೋಗಗಳಿಂದ ನಮ್ಮನ್ನು ದೂರವಿಡುತ್ತದೆ. ದೀರ್ಘಕಾಲದ ಅಸ್ವಸ್ಥತೆ, ನಿದ್ರಾಹೀನತೆ, ಹೃದಯ ಸಂಬಂಧ ಸಮಸ್ಯೆಗಳಿದ್ದರೆ ಅದನ್ನು ಗುಣಪಡಿಸಲು ಸ್ವರ್ಣ ಭಸ್ಮ ಬಳಕೆ ಮಾಡ್ಬೇಕು.  

ಒತ್ತಡಕ್ಕೆ (Stress) ಸ್ವರ್ಣ ಭಸ್ಮ : ಇತ್ತೀಚಿನ ದಿನಗಳಲ್ಲಿ ಒತ್ತಡಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚಾಗ್ತಿದೆ. ಇದ್ರಿಂದ ಜನರು ಅನೇಕ ಖಾಯಿಲೆಗಳನ್ನು ಎದುರಿಸುತ್ತಿದ್ದಾರೆ. ಒತ್ತಡ ದೂರವಾಗಿ,ಮನಸ್ಸು ಶಾಂತವಾಗ್ಬೇಕೆಂದ್ರೆ ಸ್ವರ್ಣ ಭಸ್ಮವನ್ನು ಬಳಸಬೇಕು. ಸ್ವರ್ಣ ಭಸ್ಮ  ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಸ್ವರ್ಣ ಭಸ್ಮವನ್ನು ಸೇವಿಸುವುದರಿಂದ ಮೆದುಳಿನಲ್ಲಿ ಕ್ಯಾಟೆಕೊಲಮೈನ್ಸ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದು ಒತ್ತಡದಿಂದ ರಕ್ಷಿಸುತ್ತದೆ.

ನೆನಪಿನ ಶಕ್ತಿ ಹೆಚ್ಚಳ (Memory Power Enhancement) : ಸ್ವರ್ಣ ಭಸ್ಮ ಬಳಕೆಯಿಂದ ಸ್ಮರಣ ಶಕ್ತಿ ಉತ್ತಮವಾಗುತ್ತದೆ. ಮೆದುಳು ಚುರುಕಾಗುತ್ತದೆ. ಮೆದುಳು ಹಾಗೂ ಮನಸ್ಸಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಇದ್ರಲ್ಲಿ ಮದ್ದಿದೆ.

ನೆಲದ ಮೇಲೆ ಚಕ್ಕಳ ಬಕ್ಕಳ ಹಾಕಿ ಕುಳಿತು ಊಟ ಮಾಡಿದ್ರೆ ಬೇಗ ತೂಕ ಇಳಿಯುತ್ತೆ

ಚರ್ಮಕ್ಕೆ ಒಳ್ಳೆಯದು (Skin Care) : ಪೆಮ್ಫಿಗಸ್ ಚರ್ಮದ ಕಾಯಿಲೆಗೆ  ಸ್ವರ್ಣ ಭಸ್ಮವನ್ನು ಬಳಸಬಹುದು. ಇದು ಉರಿಯೂತ ಕಡಿಮೆ ಮಾಡುವ ಶಕ್ತಿ ಹೊಂದಿದೆ. ಸ್ವರ್ಣ ಭಸ್ಮವನ್ನು ಕುಂಕುಮದೊಂದಿಗೆ ಬಳಸಿದರೆ ಹೆಚ್ಚಿನ ಲಾಭಗಳಿವೆ.

ರಕ್ತಹೀನತೆ ತಡೆಯುತ್ತೆ ಸ್ವರ್ಣ ಭಸ್ಮ : ರಕ್ತಹೀನತೆ ಸಮಸ್ಯೆಯಿಂದ ಬಳಲುವವರು ಸ್ವರ್ಣ ಭಸ್ಮವನ್ನು ಬಳಸಬೇಕು. ಮುಖ್ಯವಾಗಿ ಗರ್ಭಿಣಿಯರಿಗೆ ರಕ್ತ ಹೀನತೆ ಹೆಚ್ಚಾಗಿ ಕಾಡುತ್ತದೆ. ಅಂಥವರು ಸ್ವರ್ಣ ಭಸ್ಮ ಸೇವನೆ ಮಾಡ್ಬೇಕೆಂದು ತಜ್ಞರು ಹೇಳಿದ್ದಾರೆ.
 

Follow Us:
Download App:
  • android
  • ios