ಆರೋಗ್ಯವಂತ, ಸದೃಢ ದೇಹ ನಮ್ಮದಾಗಬೇಕೆಂಬುದು ಎಲ್ಲರ ಬಯಕೆ. ಹೀಗೆ ನಾವು ಆರೋಗ್ಯವಂತರಾಗಿರಬೇಕು ಎಂದರೆ ಡಯಟ್‌ ಮಾಡಬೇಕಾಗುತ್ತದೆ. ಬರೀ ದೇಹವನ್ನು ದಂಡಿಸಿದರೆ ಸಾಲದು ಅದಕ್ಕೆ ತಕ್ಕಂತೆ ಪ್ರೊಟೀನ್‌ಯುಕ್ತ ಆಹಾರ ಸೇವಿಸಬೇಕು. ಹಾಗಾಗಿಯೇ ನಟಿ ಮಣಿಯರು, ಫಿಟ್‌ನೆಸ್‌ ಬಗ್ಗೆ ಕಾಳಜಿ ಇರುವವರು ಡಯಟ್‌ನಲ್ಲಿ ಪ್ರೊಟೀನ್‌ಯುಕ್ತ ಆಹಾರವನ್ನೇ ಸೇವಿಸುತ್ತಾರೆ. ಇದರಿಂದ ತೂಕವೂ ಇಳಿಯುತ್ತದೆ, ದೇಹವೂ ಆರೋಗ್ಯವಂತವಾಗಿರುತ್ತದೆ. ಆದರೆ ಹೀಗೆ ಡಯಟ್‌ ಮಾಡುತ್ತಿರುವವರು ಹೆಚ್ಚು ಪ್ರೊಟೀನ್‌ ಸೇವಿಸಿದರೆ ಕ್ಯಾನ್ಸರ್‌ ಸೇರಿದಂತೆ ಅನೇಕ ಕಾಯಿಲೆಗಳು ಬರುವ ಅಪಾಯವೂ ಹೆಚ್ಚುತ್ತದೆ ಎಂದು ಸಮೀಕ್ಷೆಯೊಂದು ಎಚ್ಚರಿಸಿದೆ.

ಬ್ಯೂಟಿ ಹೆಚ್ಚಿಸುವ ಹೆಲ್ದೀ ಡಯಟ್

ಹೈ ಪೊಟೀನ್‌ ಅದರಲ್ಲೂ ಮಾಂಸವನ್ನು ಹೆಚ್ಚು ಸೇವಿಸುತ್ತಾ ಡಯಟ್‌ ಮಾಡುತ್ತಿದ್ದಲ್ಲಿ ಅಂಥವರಿಗೆ ಕ್ಯಾನ್ಸರ್‌ ಬರುವ ಅಪಾಯ 4 ಪಟ್ಟು ಹೆಚ್ಚಿರುತ್ತದೆ ಎಂದು ಸಮೀಕ್ಷೆ ಹೇಳಿದೆ. ಡಯಟ್‌ನಲ್ಲಿ ಮಿತವಾದ ಪ್ರೊಟೀನ್‌ ಸೇವಿಸಿದರೂ ಕ್ಯಾನ್ಸರ್‌ ಬರಬಹುದು ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ. ಸಮೀಕ್ಷೆಯಲ್ಲಿ 50 ವರ್ಷ ದಾಟಿದ 6,138 ಜನರು ಪಾಲ್ಗೊಂಡಿದ್ದರು. ಸೆಲ್‌ ಮೆಟಾಬೋಲಿಸಮ್‌ ನಿಯತಕಾಲಿಕೆಯಲ್ಲಿ ಇದು ಪ್ರಕಟವಾಗಿದೆ.

ಹಾಗಾದರೆ ದಿನಕ್ಕೆ ಎಷ್ಟುಪ್ರೊಟೀನ್‌ ಸೇವಿಸಬೇಕು ಎಂಬ ಪ್ರಶ್ನೆ ಎದುರಾಗಬಹುದು. ಅದಕ್ಕೆ ಉತ್ತರ ಹೀಗಿದೆ; ಒಬ್ಬ ವ್ಯಕ್ತಿಯು ತಮ್ಮ ಒಂದು ಕೆ.ಜಿ ದೇಹದ ತೂಕಕ್ಕೆ ಗರಿಷ್ಠ 0.8 ಗ್ರಾಂ ಪ್ರೊಟೀನ್‌ ಸೇವಿಸಬೇಕಷ್ಟೆ. ಉದಾಹರಣೆಗೆ ನೀವು 50 ಕೆ.ಜಿ ಇದ್ದರೆ ದಿನಕ್ಕೆ 40ಗ್ರಾಂ ಒಳಗೆ ಪ್ರೊಟೀನ್‌ ಸೇವಿಸಬೇಕು.

ಆರೋಗ್ಯಕ್ಕೆ ಮೆಂತೆ ಒಳ್ಳೆಯದು

ಈ ಚಾರ್ಟ್ ಫಾಲೋ ಮಾಡಿದ್ರೆ ಆರೋಗ್ಯ ಕಟ್ಟಿಟ್ಟ ಬುತ್ತಿ
- ಬೆಳಗ್ಗೆ ಬೇಗ ಏಳೋಣ. ಯಾವ ಕಾರಣಕ್ಕೂ ಅಲರಾಂ ಸ್ನೂಜ್ ಮೋಡ್‌ಗೆ ಹೋಗದಿರಲಿ.
- ಮರುದಿನ ಬೆಳಗ್ಗೆ ಬೇಗ ಏಳೋದರ ಜೊತೆಗೆ ಒಂದು ದೊಡ್ಡ ಲೋಟದಲ್ಲಿ ಬಿಸಿನೀರನ್ನು ನಿಂಬೆ ರಸದೊಂದಿಗೆ ಕುಡಿಯಿರಿ, ಕಷ್ಟವಾದರೆ ಸ್ವಲ್ಪ ಜೇನುತುಪ್ಪ ಹಾಕಿ ಕೊಳ್ಳಿ.
- ಮೂರನೇ ದಿನ, ಮೇಲೆ ಹೇಳಿದ ಎರಡು ಟಿಪ್ಸ್ ಫಾಲೋ ಮಾಡೋದರ ಜೊತೆ ಅರ್ಧ ಗಂಟೆ ನಮಗೆ ತಿಳಿದ ಯೋಗ, ಧ್ಯಾನ ಮಾಡಿ.
- 4ನೇ ಇಷ್ಟನ್ನು ಮಾಡಿ ಮನೆಯಲ್ಲೇ ಉಪಹಾರ ಸೇವಿಸಿ ಕೆಲಸಕ್ಕೆ ಹೋಗೋದನ್ನು ರೂಢಿಸಿಕೊಳ್ಳಬೇಕು.
- ದಿನಕ್ಕೆ ಎರಡು ಯಾವುದೇ ಸೀಸನಲ್ ಹಣ್ಣನ್ನು ತಿನ್ನೋದು ಐದನೇ ದಿನದ ರೆಸೊಲ್ಯೂಶನ್ ಆಗಲಿ.
- ದಿನಕ್ಕೆ ಏಳರಿಂದ ಎಂಟು ಗಂಟೆ ನಿದ್ದೆ ಮಾಡೇ ಮಾಡ್ತೀನಿ, ಅದಕ್ಕೆ ತಕ್ಕ ಹಾಗೆ ಕೆಲಸಗಳನ್ನು ವಿಂಗಡಿಸುತ್ತೇನೆ ಅನ್ನೋದು ಆರನೇ ದಿನದ ಮಾಡಲೇ ಬೇಕಾದ ಕೆಲಸ.
- ಊಟದ ಜೊತೆಗೆ ಒಂದು ಬೌಲ್ ತುಂಬ ಹಸಿ ತರಕಾರಿ ತಿಂದೇ ತಿನ್ನುತ್ತೀನಿ ಅನ್ನೋದು ಏಳನೇ ದಿನ ಮಾಡಬೇಕಾದ್ದು.
- ಮರುದಿನ ಇವತ್ತು ಕರಿದ ತಿಂಡಿಗಳಿಗೆ ಗುಡ್ ಬೈ ಹೇಳ್ತೀನಿ ಅನ್ನಿ.
- ಬೆಳಗ್ಗೆ ಅಥವಾ ಸಂಜೆ ಸೂರ್ಯನ ಬಿಸಿಲಿಗೆ ಮೈ ಒಡ್ಡುತ್ತೇನೆ ಅನ್ನೋದು ಒಂಬತ್ತನೇ ದಿನ ಪಾಲಿಸಬೇಕಾದ್ದು.
- ನಿದ್ದೆ ಮಾಡೋದಕ್ಕಿಂತ ಎರಡು ಗಂಟೆ ಮೊದಲು ಊಟ ಮಾಡ್ತೀನಿ ಅನ್ನೋದು ಹತ್ತನೇ ದಿನ ರೆಸೊಲ್ಯೂಶನ್ ಆಗಲಿ.