Asianet Suvarna News Asianet Suvarna News

Blackheads ನಿವಾರಣೆಗೆ ಸುಲಭ ಮನೆಮದ್ಧುಗಳು..

ಬ್ಲ್ಯಾಕ್ ಹೆಡ್ಸ್ ಸಮಸ್ಯೆ ಗಂಡು ಹೆಣ್ಣೆನ್ನದೆ ಎಲ್ಲರನ್ನೂ ಕಾಡುತ್ತದೆ.. ಬಹುತೇಕರಿಗೆ ಅದನ್ನು ಕೈಲಿ ಹಿಸುಕಿ ತೆಗೆವ ಅಭ್ಯಾಸವಿರುತ್ತದೆ. ಆದರೆ ಇದರಿಂದ ಕೈಯಲ್ಲಿರುವ ಬ್ಯಾಕ್ಟೀರಿಯಾಗಳಿಂದ ಇದು ಇನ್ನೂ ಹರಡಿಕೊಳ್ಳುವ ಸಾಧ್ಯತೆ ಇರುತ್ತದೆ.  ಹಾಗಾದರೆ ಇದನ್ನು ಹೊರತುಪಡಿಸಿ ಬೇರೆ ಏನು ಮಾಡಬಹುದು? ಇದಕ್ಕೆ ಪರಿಹಾರ ನಿಮ್ಮ ಮನೆಯಲ್ಲಿಯೇ ಇದೆ.

 

Surprising home remedies for removal of blackheads
Author
Bangalore, First Published Jan 9, 2022, 12:03 PM IST

ಮೊಡವೆಗಳು (pimples), ಕಪ್ಪುಚುಕ್ಕೆಗಳು (blackheads), ಬಿಳಿ ಚುಕ್ಕೆಗಳು (whiteheads) ಮುಖವನ್ನು ಬಾಧಿಸುವ ದೊಡ್ಡ ಸಮಸ್ಯೆಗಳು.  ಮೂಗಿನ ಭಾಗದಲ್ಲಿ ಕಾಣಿಸಿಕೊಳ್ಳುವ ಕಪ್ಪು ಚುಕ್ಕಿಗಳನ್ನು ನಿವಾರಣೆ ಮಾಡುವುದು ಕಷ್ಟದ ಕೆಲಸ. ಅಂಥ ಸಮಸ್ಯೆಗೆ ಮನೆಯಲ್ಲಿಯೇ ಮಾಡಬಹುದಾದ ಪರಿಹಾರ ಇಲ್ಲಿದೆ ನೋಡಿ.

ಅಡುಗೆ ಸೋಡಾ ಮತ್ತು ನೀರು (water)
ಚರ್ಮದಲ್ಲಿರುವ ಕೊಳೆ, ಎಣ್ಣೆ ಮತ್ತು ಸತ್ತ ಜೀವಕೋಶಗಳನ್ನು(dead skin) ಹೊರ ಹಾಕುವುದಕ್ಕೆ  ಅಡುಗೆ ಸೋಡಾ ಒಂದು ಉತ್ತಮ ಪರಿಹಾರ. ಇದನ್ನು ಬಳಸುವ ಕ್ರಮ ಹೀಗಿದೆ. ಎರಡು ಚಮಚ ಅಡುಗೆ ಸೋಡಾವನ್ನು 2 ಚಮಚ ನೀರಿನೊಂದಿಗೆ ಬೆರೆಸಿ ಮತ್ತು ಕಪ್ಪು ಚುಕ್ಕಿಗಳಿರುವ ಭಾಗದ ಮೇಲೆ  ಈ ಮಿಶ್ರಣವನ್ನು ಲೇಪಿಸಿ ಚೆನ್ನಾಗಿ ಸ್ಕ್ರಬ್ ಮಾಡಿ.  ನಂತರ ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ.  ಇದಾದ ಬಳಿಕ ನೀವು ಯಾವಾಗಲೂ ಬಳಸುವ ಮಾಯಿಸ್ಚರೈಸರ್ ಕ್ರೀಮ್ ಅನ್ನು ಮುಖಕ್ಕೆ ಹಚ್ಚಿ. ವಾರದಲ್ಲಿ ಎರಡು ಅಥವಾ ಮೂರು ಬಾರಿ ಹೀಗೆ ಮಾಡುವುದರಿಂದ ನೀವೇ ಆಶ್ಚರ್ಯ ಪಡುವಂತಹ ಪರಿಣಾಮವನ್ನು ಕಾಣುತ್ತೀರಿ. 

Early Marriage : 25ರೊಳಗೆ ವಿವಾಹವಾಗುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆ!

ಬ್ರೌನ್ ಶುಗರ್ (brown sugar) ಜೇನು ಮತ್ತು ನಿಂಬೆರಸ
ಈ ಮೂರು ಪದಾರ್ಥಗಳು ಸಂಯೋಜಿಸಿ (combine) ಪರಿಣಾಮಕಾರಿಯಾದ ಫೇಸ್ ಪೀಲ್ ಆಗಬಹುದು. ಅದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ, ಒಂದು ಚಮಚ ಕಂದು ಸಕ್ಕರೆ, ಎರಡು ಚಮಚ ನಿಂಬೆರಸ ಮತ್ತು ಒಂದು ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ. ನಂತರ ಇದನ್ನು ಮುಖದ ಮೇಲೆ ವೃತ್ತಾಕಾರದಲ್ಲಿ(circular motion) ಹರಡಿ (spread),  ಇದನ್ನು ಮಾಡುವಾಗ ಜಾಗರೂಕರಾಗಿರಿ ಏಕೆಂದರೆ, ಸಕ್ಕರೆಯು ಚರ್ಮವನ್ನು ಹಾನಿಗೊಳಿಸುವ ಸಾಧ್ಯತೆ ಇರುತ್ತದೆ.  ಇದಾದ ಬಳಿಕ ಮುಖವನ್ನು ನೀವು ನಿತ್ಯ ಬಳಸುವ ಫೇಸ್ ವಾಶ್ ನಿಂದ ತೊಳೆಯಿರಿ.  ಹೀಗೆ ಮಾಡುವುದರಿಂದ ನಿಮ್ಮ ಚರ್ಮ ಮೃದುವಾಗುತ್ತದೆ.  ಬ್ಲಾಕ್ ಹೆಡ್ ಕೂಡ ತೊಲಗುತ್ತದೆ. 

Relationship Tips: ಹುಡುಗಿ ಹುಡುಗನಿಂದ ನಿಜಕ್ಕೂ ಬಯಸೋದೇನು?

ಚಹಾ ಮರದ ಎಣ್ಣೆ (tea tree oil)
ಟೀ ಟ್ರೀ ಆಯಿಲ್ ತ್ವಚೆಯ ಮೇಲೆ ನಿಜಕ್ಕೂ ಬಹಳ ಪರಿಣಾಮಕಾರಿಯಾದ ಕೆಲಸ ಮಾಡುತ್ತದೆ. ಈಗಾಗಲೇ ಅನೇಕರು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಈ ಟೀ ಟ್ರೀ ಆಯಿಲ್ ನೀವು ಯಾವುದೇ ಔಷಧಾಲಯದಲ್ಲಿ ಖರೀದಿಸಬಹುದು. ಬ್ಯಾಕ್ಟೀರಿಯಾ ತೊಲಗಿಸುವಲ್ಲಿ ಇದು ನೈಸರ್ಗಿಕವಾಗಿ ಪರಿಹಾರ ನೀಡುತ್ತದೆ. ಇದಷ್ಟೇ ಅಲ್ಲ ಕಪ್ಪು ಚುಕ್ಕೆಯನ್ನು ಕೂಡ ಇನ್ನಿಲ್ಲದಂತೆ ಮಾಡುತ್ತದೆ. ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೆ, ಒಂದು ಸಣ್ಣ ಹತ್ತಿ ಮುದ್ದೆ ಮಾಡಿಕೊಂಡು ಅದಕ್ಕೆ ಟೀ ಟ್ರೀ ಆಯಿಲ್ ಹಾಕಿ ಅದನ್ನು ಸಮಸ್ಯೆ ಇರುವ ಮುಖದ ಭಾಗದ ಮೇಲೆ ಹಚ್ಚಿ. ವಾರದಲ್ಲಿ ಆಗಾಗ ಇದನ್ನು ಬಳಸುತ್ತಾ ಇರಿ. ಇದರಿಂದಾಗುವ ಬದಲಾವಣೆಯನ್ನು ನೀವೇ ಸ್ವತಃ ನೋಡಿ.

ಗ್ರೀನ್ ಟೀ (green tea)
ಗ್ರೀನ್ ಟೀ ಕುಡಿಯುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂಬ ವಿಷಯವನ್ನು ಹೆಚ್ಚಿನ ಜನರು ಮನಗಂಡಿದ್ದಾರೆ. ಆದರೆ ಇದು ಆರೋಗ್ಯ ಮಾತ್ರವಲ್ಲ, ತ್ವಚೆಯ ರಕ್ಷಣೆಯನ್ನು ಮಾಡುತ್ತದೆ ಎಂಬ ವಿಷಯ ಹಲವಾರು ಜನರಿಗೆ ಗೊತ್ತಿರುವುದಿಲ್ಲ. ಇದನ್ನು ಬಳಸುವ ಮಾರ್ಗ ಕೂಡ ಸುಲಭ. ಗ್ರೀನ್ ಟೀ ಚೀಲವನ್ನು ತೆರೆಯಿರಿ. ಅದನ್ನು ಒಂದು ಚಮಚ ನೀರಿನೊಂದಿಗೆ ಮಿಶ್ರಣ ಮಾಡಿ. ಬಳಿಕ ಈ ಮಿಶ್ರಣವನ್ನು ಮುಖದ ಮೇಲೆ ಮೂರರಿಂದ ನಾಲ್ಕು ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಹಸಿರು ಚಹಾವು ನಿಮ್ಮ ತ್ವಚೆಯಲ್ಲಿ ಎಣ್ಣೆ ಉತ್ಪಾದನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಕಪ್ಪು ಚುಕ್ಕೆಗಳನ್ನು ಶೀಘ್ರದಲ್ಲಿ ಮಾಯವಾಗಿರುತ್ತದೆ.

Follow Us:
Download App:
  • android
  • ios