ಗುಣಲಕ್ಷಣ: ಮೊದಲಿಗೆ ಥಟ್‌ ಅಂತ ಜೋರು ಜ್ವರ ಬರುತ್ತದೆ. 101- 102 ಡಿಗ್ರಿಯಷ್ಟಿರಬಹುದು. ಅದರ ಮೊದಲೊಂದು ಸಣ್ಣ ಜ್ವರ ಬಂದು ಹೋಗಿದ್ದು, ನೀವದನ್ನು ಗಮನಿಸಿರಲಿಕ್ಕಿಲ್ಲ. ಜೋರು ಜ್ವರದ ಹಿಂದೆಯೇ, ಎದ್ದು ಓಡಾಡಲು ಸಾಧ್ಯವಿಲ್ಲದಂಥ ಅತೀವ ಸುಸ್ತು ಅಟಕಾಯಿಸಿಕೊಳ್ಳುತ್ತದೆ.

ಡೆಂಗೆಯ ಇನ್ನೊಂದು ವಿಶಿಷ್ಟಲಕ್ಷಣ ಅಂದ್ರೆ ಕಣ್ಣುಗಳ ಹಿಂದೆ ತೀರಾ ಭಾರ, ನೋವಿನ ಅನುಭವ ಆಗುವುದು. ನಂತರ ತಲೆನೋವು ಕಾಣಿಸಿಕೊಳ್ಳುತ್ತದೆ. ಮೊದಲು ಹಣೆಭಾಗದಲ್ಲಿ, ನಂತರ ತಲೆಯ ಹಿಂಭಾಗಕ್ಕೆ ಶಿಫ್ಟ್‌ ಆಗುತ್ತದೆ. ತಲೆಸಿಡಿತ ಇರಬಹುದು. ಮೂರು ನಾಲ್ಕು ದಿನಗಳಲ್ಲಿ ಮೈಮೇಲೆ ಕೆಂಪು ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಇವು ಎಲ್ಲಾದರೂ ಕಾಣಿಸಿಕೊಳ್ಳಬಹುದು. ನಂತರ ತೀವ್ರ ಹೊಟ್ಟೆನೋವು, ವಾಂತಿ ಕಾಣಿಸಿಕೊಳ್ಳುತ್ತದೆ. ಅಲ್ಲಿಗೆ ಡೆಂಗೆ ಬಿಗಡಾಯಿಸಿದೆ ಎಂದೇ ಅರ್ಥ. ಈ ಹಂತ ತಲುಪುವ ಮುನ್ನವೇ ಎಚ್ಚೆತ್ತುಕೊಂಡು ಡಾಕ್ಟರ್‌ ಬಳಿ ಹೋಗಬೇಕು.

ಜೋಕೆ! ಸೆಕ್ಸ್‌ನಿಂದಲೂ ಹರಡುತ್ತೆ ಢೆಂಘೀ!

ಮುನ್ನೆಚ್ಚರಿಕೆ: ಡೆಂಗೆ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಎಲ್ಲದಕ್ಕಿಂತ ಸೂಕ್ತ. ಇದಕ್ಕೆ ಸೊಳ್ಳೆ ಮೂಲ. ಮನೆಯಲ್ಲಿ, ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸುವುದು, ರಾತ್ರಿ ಮಾಸ್ಕಿಟೋ ರೆಪೆಲ್ಲೆಂಟ್‌ ಬಳಸುವುದು, ದೇಹಾರೋಗ್ಯ ಕಾಪಾಡಿಕೊಳ್ಳಲು ಸಾಕಷ್ಬು ಬಿಸಿನೀರು ಸೇವನೆ ಮತ್ತು ಪೌಷ್ಟಿಕ ಆಹಾರ ಇವೆಲ್ಲ ಅಗತ್ಯ.