ಮಕ್ಕಳ ಆರೋಗ್ಯ (Health)ದ ಬಗ್ಗೆ ಪ್ರತಿಯೊಬ್ಬ ಪೋಷಕರೂ (Parents) ಅತಿ ಹೆಚ್ಚು ಕಾಳಜಿ (Care) ವಹಿಸುತ್ತಾರೆ. ಮಕ್ಕಳು ಸದೃಢವಾಗಿರಬೇಕೆಂದು ಚಿಕ್ಕಂದಿನಿಂದಲೇ ಅವರಿಗೆ ಉತ್ತಮ ಆಹಾರ (Food) ನೀಡಲು ಯತ್ನಿಸುತ್ತಾರೆ. ಮಕ್ಕಳ ಆರೋಗ್ಯಕ್ಕೆ, ಉತ್ತಮ ಬೆಳವಣಿಗೆಗೆ ಅತ್ಯುತ್ತಮ ಆಹಾರ ಯಾವ್ದು ನಿಮ್ಗೊತ್ತಾ ? ಇಲ್ಲಿದೆ ಮಾಹಿತಿ.

ಮಕ್ಕಳಿಗೆ ತಿನ್ನಬೇಕು ಅನಿಸಿದಾಗ ಆಹಾರ (Food) ಕೊಡಬೇಕು. ಒತ್ತಾಯ ಒಳ್ಳೆಯದಲ್ಲ. ಮಕ್ಕಳ ಬೆಳವಣಿಗೆ ಕೆಲವೊಮ್ಮೆ ಜೆನೆಟಿಕ್ ಆಗಿರುತ್ತದೆ. ತಂದೆ, ತಾಯಿ ಕುಳ್ಳಗಿದ್ದರೆ, ಸಣ್ಣವಿದ್ದರೆ ಅದು ಮಕ್ಕಳಲ್ಲಿ ಬರುತ್ತದೆ. ಹಾಗಾಗಿ ಆಹಾರ ಒಂದೇ ಪರಿಹಾರ ಅಲ್ಲ. ಮಗು ತಿಂದು ಆರೋಗ್ಯ (Health)ವಾಗಿದ್ದರೆ ಸಾಕು.

ಕೋವಿಡ್‌ (Covid)ನಂಥ ಸಾಂಕ್ರಮಿಕ ರೋಗಗಳು ಹರಡುತ್ತಿರುವ ಹೊತ್ತಿನಲ್ಲಿ ಮಕ್ಕಳ ಆರೋಗ್ಯ ಸಂರಕ್ಷಣೆ ಅತಿಮುಖ್ಯ. ಮಕ್ಕಳು (Children) ಬೆಳೆಯಬೇಕಾದರೆ ಪೌಷ್ಟಿಕ ಆಹಾರ ಅವಶ್ಯಕ. ಆಧುನಿಕ ಕಾಲದಲ್ಲಿ ಒತ್ತಡದ ಜೀವನದಲ್ಲಿ ಅನೇಕ ಬಾರಿ ತಾಯಂದಿರು ಸಿದ್ಧ ಆಹಾರವನ್ನು ಕೊಡುತ್ತಾರೆ. ಇಂತಹ ರೆಡಿ ಫುಡ್‌ಗಳು ಮಕ್ಕಳ ಹೊಟ್ಟೆ (Stomach) ತುಂಬುತ್ತದೆ ಹೊರತು ಆರೋಗ್ಯ ಕಾಪಾಡೋಲ್ಲ ಎಂಬುದನ್ನು ನಾವು ಅರಿಯಬೇಕು. ಈಗಿನ ಮಕ್ಕಳು ಬಿಸ್ಕೆಟ್, ಚಾಕೊಲೇಟ್, ಕರಿದ ಪದಾರ್ಥಗಳನ್ನು ತಿನ್ನುವುದರಿಂದ ಊಟ ಮಾಡಲು ಹಿಂಜರಿಯುತ್ತಾರೆ. ಅಲ್ಲದೇ ಕೆಲವು ಮಕ್ಕಳಿಗೆ ತಿನ್ನು, ತಿನ್ನು ಎಂದು ನಾವು ಹೇಳುತ್ತಲೇ ಇರಬೇಕಾಗುತ್ತದೆ. ಹಾಗಾಗಿ ಬೆಳೆಯುವ ಮಕ್ಕಳಲ್ಲಿ ಅನೇಕ ಕೊರತೆಗಳು ಕಾಣಬಹುದು.

Kids Food: ಆಲೂಗಡ್ಡೆ ರೆಸಿಪಿ ಮಾಡಿ ಕೊಡಿ, ಮಕ್ಳು ಬಾಯಿ ಚಪ್ಪರಿಸಿಕೊಂಡು ತಿನ್ತಾರೆ

ಕ್ಯಾಲ್ಸಿಯಂ ಕೊರತೆ, ಹಿಮೋಗ್ಲೋಬಿನ್ ಕಡಿಮೆ ಆಗಿರುವುದು ಹೀಗೆ ಅನೇಕ ತೊಂದರೆಗಳು ಕಾಣುತ್ತದೆ. ಮಕ್ಕಳ ಬೆಳವಣಿಗೆಗೆ ಬೇಕಾಗುವ ಪ್ರೊಟೀನ್ ವಿಟಮಿನ್ ಮಿನರಲ್‌ಸ್ಗಳಾದ ಐರನ್, ಜಿಂಕ್, ವಿಟಮಿನ್ ಸಿ, ವಿಟಮಿನ್ ಬಿ12 ಹಾಗೂ ಒಮೇಗಾ 3 ಫ್ಯಾಟಿ ಆಸಿಡ್ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. ಇವುಗಳು ಹೆಚ್ಚಾಗಿ ಮೀನು ಮಾಂಸ, ಮೊಟ್ಟೆ, ಧಾನ್ಯಗಳು, ಪನೀರ್, ಚೀಸ್ ಮತ್ತು ಕಡಲೆ ಕಾಯಿ ಇತರೆ ಪದಾರ್ಥಗಳಲ್ಲಿ ಸಿಗುತ್ತವೆ. ಇವು ದೇಹದ ಬೆಳವಣಿಗೆ ಜೊತೆ ಸ್ನಾಯುಗಳ ಬೆಳವಣಿಗೆಗೂ ಸಹಕಾರಿಯಾಗಿವೆ.

ಕೆಲವು ಆಹಾರಗಳು ಮಕ್ಕಳಲ್ಲಿ ಹಸಿವನ್ನು ಹೆಚ್ಚಿಸುತ್ತದೆ. ಅಲ್ಲದೆ ಪೌಷ್ಟಿಕಯುತವಾಗಿರುತ್ತವೆ. ಕಡಲೆಕಾಯಿ( ಶೇಂಗಾ) ಮಕ್ಕಳಲ್ಲಿ ಮೆಟಬೋಲಿಸಮ್ ಹೆಚ್ಚಿಸುತ್ತದೆ. ಜತೆಗೆ ಪೌಷ್ಟಿಕಯುತವಾಗಿದೆ. ಇದನ್ನು ಮಕ್ಕಳಿಗೆ ರೆಗ್ಯುಲರ್ ಆಗಿ ನೀಡಿದರೆ ಉತ್ತಮ. ಮಕ್ಕಳಿಗೆ ವಿವಿಧ ಬಗೆಯ ಬೀಜಗಳನ್ನು ನೀಡಿದರೆ ಉತ್ತಮ. ಚೀನಿಕಾಯಿ ಬೀಜ, ಬಾದಾಮಿ, ಸನ್ ಫ್ಲವರ್ ಬೀಜ, ಮೇಲೊನ್ ಬೀಜ ಹಾಗೂ ಬೆಣ್ಣೆ ಇವು ಬೆಳವಣಿಗೆಗೆ ಬಹಳ ಒಳ್ಳೆಯದು. ಜತೆಗೆ ಆರೋಗ್ಯವೂ ಉತ್ತಮವಾಗಿರುತ್ತದೆ.

Kids Food: ಮಕ್ಳು ತಿನ್ತಿಲ್ಲಾಂತ ದೂರೋದನ್ನು ಬಿಟ್ಚಿಡಿ, ಹೆಲ್ದೀ ಪಾನೀಯ ಕೊಟ್ಟು ನೋಡಿ

ಮೊಸರು ಇದು ಜೀರ್ಣಕ್ರಿಯೆಗೆ ಒಳ್ಳೆಯದು ಅಲ್ಲದೇ ಹಸಿವನ್ನು ಹೆಚ್ಚಿಸುತ್ತದೆ. ಗ್ರೀನ್ ಟಿ ಇದು ಚಿಕ್ಕ ಮಕ್ಕಳಿಗಿಂತ ದೊಡ್ಡ ಮಕ್ಕಳಿಗೆ ಒಳ್ಳೆಯದು. ಇದು ಹಸಿವನ್ನು ಹೆಚ್ಚಿಸುತ್ತದೆ. ಚ್ಯವನ ಪ್ರಾಶ ಇದು ಮಕ್ಕಳಿಂದ ಹಿಡಿದು ದೊಡ್ಡವರೂ ತೆಗೆದುಕೊಂಡರೆ ರೋಗ ನೀರೋಧಕ ಶಕ್ತಿ ಹೆಚ್ಚಿಸುತ್ತದೆ. ವಿಟಮಿನ್ ಸಿ ಇರುವ ಆಹಾರಗಳು ಮಕ್ಕಳ ಬೆಳವಣಿಗೆಯಲ್ಲಿ ಬಹಳ ಸಹಕಾರಿಯಾಗಿದೆ. ಹಸಿರು ತರಕಾರಿಗಳು, ಹಣ್ಣು, ಸೇವನೆ ಅತಿಅವಶ್ಯಕ. ಇವೆಲ್ಲ ದೇಹದ ಬೆಳವಣಿಗೆಗೆ ಬಹಳ ಮುಖ್ಯ ಎಂಬುದನ್ನು
ಅರಿತುಕೊಂಡರೆ ಒಳಿತು.

ಲೇಖಕರು: ಡಾ.ಅಶೋಕ್ ಜಿ.ಎಂ, ಮಕ್ಕಳ ವೈದ್ಯರು