ಜಿಮ್ ಬಿಡಿ, ಮನೆ ಕೆಲಸ ಮಾಡಿ.. ಗೊತ್ತಿಲ್ಲದೆ ಬರ್ನ್ ಆಗುತ್ತೆ ಕ್ಯಾಲೋರಿ!
ಮನೆ ಕ್ಲೀನಿಂಗ್ ಬೋರ್ ಅನ್ನೋರು, ಮನೆಯಲ್ಲೇ ಕ್ಯಾಲೋರಿ ಬರ್ನ್ ಮಾಡಿಕೊಳ್ಳಬೇಕು ಅನ್ನೋರಿಗೆ ಒಂದು ಗುಟ್ಟಿನ ವಿಷ್ಯವಿದೆ. ವ್ಯಾಯಾಮ, ಜಿಮ್, ಯೋಗ ಎಲ್ಲ ಬಿಟ್ಟು ನಿತ್ಯ ಒಂದಿಷ್ಟು ಸಮಯ ಈ ಕೆಲಸ ಮಾಡಿ. ಇದ್ರಿಂದ ಎರಡು ಲಾಭವಿದೆ.
ಜಿಮ್ ಗೆ ಹೋಗ್ತಿರೋ ನಿಮ್ಮನ್ನು ನೋಡಿ ನಿಮ್ಮ ಪಾಲಕರು, ಮನೆ ಕೆಲಸ ಮಾಡು, ಎಲ್ಲ ಬೊಜ್ಜು ಇಳಿಯುತ್ತೆ ಅಂತಾ ನಿಮಗೆ ಸಲಹೆ ನೀಡಿರಬಹುದು. ಮನೆ ಕೆಲಸಕ್ಕೆ ಆಳನ್ನು ನೇಮಿಸಿಕೊಂಡು ಜಿಮ್ ಗೆ ಹೋಗಿ ಹಣ ಖರ್ಚು ಮಾಡಿದ್ರೂ ಅನೇಕರ ಬೊಜ್ಜು ಕರಗೋದಿಲ್ಲ. ಅಂಥವರು ಮನೆಯಲ್ಲಿ ಹಿರಿಯರು ಹೇಳಿದ ಮಾತನ್ನು ಸರಿಯಾಗಿ ಆಲಿಸಿ, ಅದನ್ನು ಪಾಲಿಸಿದ್ರೆ ಬೊಜ್ಜನ್ನು ಕರಗಿಸಿಕೊಳ್ಳಬಹುದು.
ನಿಮ್ಮ ತೂಕ (Weight) ಇಳಿಯಬೇಕು ಅಂದ್ರೆ ಕೊಬ್ಬು (Fat) ಕರಗಬೇಕು. ಕೊಬ್ಬು ಕರಗಬೇಕು ಅಂದ್ರೆ ದೇಹ ದಣಿಯಬೇಕು. ಅದನ್ನು ನೀವು ಮನೆ ಕೆಲಸದ ಮೂಲಕವೂ ಮಾಡ್ಬಹುದು ಎನ್ನುತ್ತದೆ ಹೊಸ ಅಧ್ಯಯನ. ಈ ಅಧ್ಯಯನದಲ್ಲಿ ಯಾವೆಲ್ಲ ಮನೆ ಕೆಲಸ ಮಾಡಿ ನೀವು ಬೊಜ್ಜನ್ನು ಕರಗಿಸಿಕೊಳ್ಳಬಹುದು ಎಂಬುದನ್ನು ಹೇಳಲಾಗಿದೆ. ನಾವಿಂದು ಅದ್ರ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
ಕೊಲೆಸ್ಟ್ರಾಲ್ ಕಡಿಮೆ ಮಾಡ್ಕೊಳ್ಳೋಕೆ ಲೈಫ್‌ಸ್ಟೈಲ್‌ನಲ್ಲಿ ಈ ಚೇಂಜಸ್ ಮಾಡ್ಕೊಳ್ಳಿ ಸಾಕು
ಅಧ್ಯಯನ (Study) ದಲ್ಲಿ ಏನಿದೆ? : ಹೋಮ್ ಕ್ಲೀನಿಂಗ್ ಸೇವಾ ಕಂಪನಿ ಹೋಮ್‌ಗ್ಲೋ ಅಧ್ಯಯನ ಒಂದನ್ನು ನಡೆಸಿದೆ. ಮನೆ ಕೆಲಸ ಮಾಡೋದ್ರಿಂದ ಕ್ಯಾಲೋರಿ ಬರ್ನ್ ಆಗುತ್ತೆ ಎಂದು ಈ ಅಧ್ಯಯನದಲ್ಲಿ ಹೇಳಲಾಗಿದೆ. ಐದು ಮನೆಗಳನ್ನು ಸ್ವಚ್ಛಗೊಳಿಸಲು 10 ವೃತ್ತಿಪರ ಕ್ಲೀನರ್ ಗಳಿಗೆ ಫಿಟ್‌ಬಿಟ್‌ಗಳನ್ನು ಧರಿಸುವಂತೆ ಹೇಳಿತ್ತು. ನಂತ್ರ ಪ್ರತಿಯೊಂದು ಕೊಠಡಿ ಕ್ಲೀನ್ ಮಾಡುವಂತೆ ಸಲಹೆ ನೀಡಿತ್ತು. ಕೋಣೆ ಕ್ಲೀನ್ ಮಾಡಿದ ವೇಳೆ ಎಷ್ಟು ಕ್ಯಾಲೋರಿ ಬರ್ನ್ ಆಯ್ತು ಎನ್ನುವ ಬಗ್ಗೆ ಅಧ್ಯಯನ ನಡೆಸಲಾಗಿದೆ.
ನೆ ಕ್ಲೀನಿಂಗ್ ವೇಳೆ ಎಷ್ಟು ಕ್ಯಾಲೋರಿ ಬರ್ನ್ ಆಯ್ತು? : ವೃತ್ತಿಪರ ಕ್ಲೀನರ್‌ಗಳು ಒಂದು ಬೆಡ್ ರೂಮ್ ಮನೆಯನ್ನು ಸ್ವಚ್ಛಗೊಳಿಸುವ ಕೆಲಸವನ್ನು ಮಾಡಿದಾಗ ಸರಾಸರಿ 830 ಕ್ಯಾಲೊರಿಯನ್ನು ಅವರು ಬರ್ನ್ ಮಾಡಿದ್ದರು. ವ್ಯಾಯಾಮದ ವಿಷ್ಯಕ್ಕೆ ಬಂದ್ರೆ ನೀವು ಒಂದೂವರೆ ಗಂಟೆಗೂ ಹೆಚ್ಚು ಕಾಲ ತೀವ್ರವಾದ ತಾಲೀಮು ಮಾಡಿದಲ್ಲಿ 830 ಕ್ಯಾಲೋರಿ ಬರ್ನ್ ಮಾಡಲು ಸಾಧ್ಯವಾಗುತ್ತದೆ. ಇನ್ನು ಮೂರು ಬೆಡ್ ರೂಮಿನ ಮನೆಯನ್ನು ಸ್ವಚ್ಛಗೊಳಿಸಿದಾಗ ವೃತ್ತಿಪರ ಕ್ಲೀನರ್ 1,311 ಕ್ಯಾಲೊರಿ ಬರ್ನ್ ಮಾಡಿದ್ದರು.
Health Tips: ಮಿದುಳಿಗೂ ಫ್ಲಾಸಿಂಗಾ? ಬೇಡವಾದ ವಿಚಾರ ತೆಗೆದು ಹಾಕೋ ರೀತಿ ಇದು
ಅಡುಗೆ ಮನೆ ಕ್ಲೀನಿಂಗ್ ವೇಳೆ ಬರ್ನ್ ಆದ ಕ್ಯಾಲೋರಿ ಎಷ್ಟು? : ಅಧ್ಯಯನದಲ್ಲಿ ಅಡುಗೆ ಮನೆಯನ್ನು ಸ್ವಚ್ಛಗೊಳಿಸಿದ ನಂತ್ರ ಎಷ್ಟು ಕ್ಯಾಲೋರಿ ಬರ್ನ್ ಆಯ್ತು ಎನ್ನುವ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗಿದೆ. ಅಡುಗೆ ಮನೆ ಕ್ಲೀನ್ ಮಾಡಿದಾಗ ವೃತ್ತಿಪರ ಕ್ಲೀನರ್ ಗಳು ಸರಾಸರಿ 276 ರಷ್ಟು ಕ್ಯಾಲೋರಿ ಬರ್ನ್ ಮಾಡಿದ್ದರು. ಅಂದ್ರೆ ಬರೀ ಅಡುಗೆ ಮನೆ ಕ್ಲೀನ್ ಮಾಡೋದ್ರಿಂದಲೂ ನೀವು ಹೆಚ್ಚು ಕ್ಯಾಲೋರಿ ಬರ್ನ್ ಮಾಡಬಹುದು. ನೀವು 40 ನಿಮಿಷ ಜಾಗಿಂಗ್ ಮಾಡಿದ್ರೆ ಇಷ್ಟು ಕ್ಯಾಲೋರಿ ಬರ್ನ್ ಮಾಡಬಹುದು ಎನ್ನುತ್ತಾರೆ ತಜ್ಞರು.
ಮನೆ ಅಥವಾ ಅಡುಗೆ ಮನೆ ಕ್ಲೀನಿಂಗ್ : ನೀವು ಕ್ಯಾಲೋರಿ ಬರ್ನ್ ಮಾಡಿ ತೂಕ ಇಳಿಸಿಕೊಳ್ಳಲು ಮುಂದಾಗಿದ್ದರೆ ಮನೆ ಕೆಲಸವನ್ನು ನೀವೇ ಮಾಡಿ. ನೆಲವನ್ನು ಬಟ್ಟೆಯಲ್ಲಿ ಬಗ್ಗಿ ಕ್ಲೀನ್ ಮಾಡಿದ್ರೆ ಅಥವಾ ಪೊರಕೆ ಹಿಡಿದು ಮನೆಯನ್ನು ಸ್ವಚ್ಛಗೊಳಿಸಿದ್ರೆ ಇದ್ರಿಂದ ಸಾಕಷ್ಟು ವ್ಯಾಯಾಮವಾಗುತ್ತದೆ. ನೀವು ಬಟ್ಟೆ ತೊಳೆಯೋದು, ಪಾತ್ರೆ ತೊಳೆಯೋ ದೊಡ್ಡ ಕೆಲಸದಿಂದ ಮಾತ್ರವಲ್ಲ ಗ್ಯಾಸ್ ಸ್ಟೌವ್ ಕ್ಲೀನಿಂಗ್ ಸೇರಿದಂತೆ ಸಣ್ಣಪುಟ್ಟ ಕೆಲಸದಿಂದಲೂ ಸಾಕಷ್ಟು ಕ್ಯಾಲೋರಿ ಬರ್ನ್ ಮಾಡಬಹುದು ಎಂದು ಅಧ್ಯಯನ ಹೇಳುತ್ತದೆ. ಸಿಂಕ್ ಕ್ಲೀನಿಂಗ್, ಟಾಯ್ಲೆಟ್, ಬಾತ್ ರೂಮ್ ಕ್ಲೀನಿಂಗ್ ಸೇರಿದಂತೆ ಮನೆಯ ಮೂಲೆ ಮೂಲೆಯನ್ನು ನೀವು ಸ್ವಚ್ಛಗೊಳಿಸುತ್ತಿದ್ದರೆ ಕೆಲವೇ ದಿನಗಳಲ್ಲಿ ಪರಿಣಾಮ ನೋಡ್ಬಹುದು.