ನಿದ್ರೇನೇ ಬರೋಲ್ವಾ? ಹೀಗ್ ಮಾಡಿ, ಸೊಂಪಾಗಿ ನಿದ್ರಿಸಿ....
ಅಪರೂಪಕ್ಕೊಮ್ಮೆ ನಿದ್ರೆ ಇರದೆ ರಾತ್ರಿ ಕಳೆದರೆ ಚಿಂತಿಸುವ ಅಗತ್ಯವಿಲ್ಲ. ಆದರೆ ಪ್ರತೀ ರಾತ್ರಿಯೂ ನಿದ್ರೆ ಬರದೆ ಒದ್ದಾಡುತ್ತಿದ್ದೀರಾದರೆ ಇದು ಸ್ವಲ್ಪ ಗಂಭೀರ ವಿಷಯವೇ. ಕೆಲ ಜೀವನಶೈಲಿ ಬದಲಾವಣೆಯಿಂದ ನಿದ್ರೆ ಹೊಂದಲು ಸಾಧ್ಯವಾಗಬಹುದು.
ಇಲ್ಲೀವರೆಗೂ ನಿದ್ದೆ ಎಂಬುದು ನೀರು ಕುಡಿದಷ್ಟೇ ಸಲೀಸಾಗಿತ್ತು. ಆದರೆ ಈಗೀಗ ನಿದ್ದೆಗೆ ಜಾರೋದು ಕಷ್ಟದ ಟಾಸ್ಕ್ ಎಂಬಂತಾಗಿದೆ ಎನ್ನೋರು ನೀವಾದ್ರೆ ಇಲ್ಲಿವೆ ನೋಡಿ ಕೆಲ ಟೆಕ್ನಿಕ್ಸ್. ಕೇಳೋಕೆ ಬಹಳ ಸಿಂಪಲ್ ಆದರೆ, ಪ್ರಾಕ್ಟಿಕಲ್ಲಾಗಿ ಪ್ರಯೋಗಿಸಿ ನೋಡಿದಾಗ ಬಹಳ ಪರಿಣಾಮಕಾರಿ ಎನಿಸೋ ಸ್ಲೀಪ್ ಥೆರಪಿಗಳಿವು.
ಸ್ಟಿಮುಲಸ್ ಕಂಟ್ರೋಲ್
ನಿಮ್ಮ ನಿದ್ದೆಯನ್ನು ಹಾಳು ಮಾಡುತ್ತಿರುವ ಸ್ಟಿಮುಲಸ್ ದೂರ ಇಡುವುದೇ ಈ ತಂತ್ರ. ಜನರಿಗೆ ಮಲಗಲು ಹಾಸಿಗೆಗೆ ಹೋದ ಬಳಿಕ ಟಿವಿ ನೋಡುವುದು, ಪುಸ್ತಕ ಓದುವುದು, ಫೇಸ್ಬುಕ್ ಚೆಕ್ ಮಾಡುವುದು, ಮೇಲ್ ಓದುವುದು ಮುಂತಾದ ಅಭ್ಯಾಸ ಹೆಚ್ಚು. ಆದರೆ, ಈ ಕಾರಣಗಳಿಂದಲೇ ನಿದ್ದೆಗೆ ಭಂಗ ಬರುತ್ತಿರಬಹುದು. ಅದರಲ್ಲೂ ಮೊಬೈಲ್ ಫೋನ್‌ನ ರೇಡಿಯೇಶನ್, ಅದರ ಬೆಳಕು ಕಣ್ಣಿಗೆ ಹೊಡೆಯುವುದು ನಿದ್ದೆಯನ್ನು ಕೊಲ್ಲುವಲ್ಲಿ ನಂಬರ್ ಒನ್ ವಿಲನ್‌ಗಳು. ಹಾಗಾಗಿ, ಮಲಗುವ ಒಂದು ಗಂಟೆಗೂ ಮುನ್ನವೇ ಈ ಎಲ್ಲ ಹಿತಶತ್ರುಗಳಿಂದ ದೂರವಿರಿ. ಕೆಲ ದಿನಗಳು ಹೀಗೆ ಅಭ್ಯಾಸ ಮಾಡಿದರೆ ಹಾಸಿಗೆಗೆ ಹೋಗುತ್ತಿದ್ದಂತೆಯೇ ನಿದ್ರೆ ನಿಮ್ಮತ್ತ ಸುಳಿಯುತ್ತದೆ.
ಊಟ ಆದ್ಮೇಲೆ ಹೀಗ್ ಮಾಡ್ಬೇಡಿ ಅಂತ ಅಪ್ಪ ಅಮ್ಮ ಹೇಳಿದ್ದು ಸುಮ್ಮನೆಯಲ್ಲ......
4-7-8 ಉಸಿರಾಟ
ಇದು ರಕ್ತಕ್ಕೆ ಆಮ್ಲಜನಕ ಸಪ್ಲೈ ಸರಿಯಾಗುವಂತೆ ಮಾಡಿ, ರಿಲ್ಯಾಕ್ಸೇಶನ್‌ಗೆ ಕಾರಣವಾಗುತ್ತದೆ. ನೀವು ಮಾಡಬೇಕಾದ್ದಿಷ್ಟೇ... ಮಲಗುವ ಮುನ್ನ ಕಂಫರ್ಟ್ ಎನಿಸುವ ಪೊಸಿಶನ್‌ನಲ್ಲಿ ಕುಳಿತುಕೊಳ್ಳಿ. ಈಗ ಮೂಗಿನ ಮೂಲಕ ಉಸಿರನ್ನು ಎಳೆದುಕೊಂಡು ಒಂದು ಉಸಿರಿಗೆ 4ರವರೆಗೆ ಎಣಿಸಿ. ನಂತರ 7 ರವರೆಗೆ ಎಣಿಸುವವರೆಗೂ ಉಸಿರನ್ನು ಹಿಡಿದಿಟ್ಟುಕೊಳ್ಳಿ. ಈಗ ಉಸಿರನ್ನು ನಿಧಾನವಾಗಿ ಬಿಡುತ್ತಾ 8ರವರೆಗೆ ಎಣಿಸಿ. ಇದನ್ನು 8ರಿಂದ 10 ಬಾರಿ ಪುನಾರಾವರ್ತಿಸಿ. ಅಷ್ಟರಲ್ಲಿ ಮನಸ್ಸು ರಿಲ್ಯಾಕ್ಸ್ ಆಗಿರುವುದು ನಿಮ್ಮ ಗಮನಕ್ಕೇ ಬರುತ್ತದೆ. ರಿಲ್ಯಾಕ್ಸ್ ಆಗಿದ್ದಾಗ ನಿದ್ರೆ ಹೆಚ್ಚುಆಡಿಸುವುದಿಲ್ಲ.
ಮೆದುಳಿಗೆ ವಂಚಿಸಿ
ಈ ಟೆಕ್ನಿಕ್‌ನಂತೆ ನಿಮ್ಮ ಮೆದುಳಿಗೆ ಎಚ್ಚರವಾಗಿರಲು ಹೇಳಿ. ವಿಚಿತ್ರ ಅಲ್ವಾ? ನಿದ್ದೆ ಬರುತ್ತಿಲ್ಲ ಎಂದು ಚಿಂತಿಸುವವರಿಗೆ ಈ ಟೆಕ್ನಿಕ್ ಕೆಲಸ ಮಾಡುತ್ತದೆ. ಇದಕ್ಕೆ ಸ್ಲೀಪ್ ಪ್ಯಾರಡಾಕ್ಸ್ ಎನ್ನಲಾಗುತ್ತದೆ. ಈಗ ಮೆದುಳಿಗೆ ಬೇರೆ ಕೆಲಸ ಕೊಟ್ಟಿದ್ದೀರಿ. ಅದು ನೀವು ಎಚ್ಚರಾಗಿರುವಂತೆ ನೋಡಿಕೊಳ್ಳಬೇಕಿದೆ. ಈಗ ಚಿಂತೆಗೆ ಸಮಯವಿರುವುದಿಲ್ಲ. ಇದರಿಂದ ಮನಸ್ಸು ರಿಲ್ಯಾಕ್ಸ್ ಆಗಿ ನಿದ್ರೆಗೆ ಜಾರುತ್ತೀರಿ.
ದಿನಾ ಶುಂಠಿ ನೀರು ಕುಡಿದ್ರೆ ಎಷ್ಟೆಲ್ಲ ಲಾಭಗಳಿವೆ ಗೊತ್ತಾ?...
ಸ್ಲೀಪ್ ಹಿಪ್ನೋಸಿಸ್
ನೀವು ಸಲಹೆಗಳನ್ನು ಸ್ವೀಕರಿಸುವ ಮನೋವೃತ್ತಿಯವರಾದರೆ, ಸ್ಲೀಪ್ ಹಿಪ್ನೋಸಿಸ್ ಆಡಿಯೋಗಳನ್ನು ಕೇಳುತ್ತಾ ಮಲಗಿ. ಆಡಿಯೋದಲ್ಲಿ ಹೇಳಿದಂತೆಲ್ಲ ಮಾಡುತ್ತಾ ಹೋದರೆ ನಿದ್ರೆ ಖಂಡಿತಾ ಬರುತ್ತದೆ. ಈ ಟೆಕ್ನಿಕ್ ಅನುಸರಿಸುವ ಮುನ್ನ ಕೋಣೆಯಲ್ಲಿ ಶಬ್ದ, ಲೈಟ್ ಇತ್ಯಾದಿ ಡಿಸ್ಟರ್ಬೆನ್ಸ್‌ಗಳಿಲ್ಲವೆಂದು ಖಚಿತಪಡಿಸಿಕೊಳ್ಳಿ.
ಎಡಹೊಳ್ಳೆ
ಮೆನೋಪಾಸ್ ಸಂದರ್ಭದ ಹೀಟ್‌ನಿಂದಾಗಿ ನಿದ್ರೆ ಬರದಿರುವವರು ನೀವಾದರೆ ಈ ತಂತ್ರ ನಿಮಗೆ ಸಹಕಾರಿ. ಮಲಗಿದ ಬಳಿಕ ಬಲಮೂಗಿನ ಹೊಳ್ಳೆಯನ್ನು ಬೆರಳಿನಿಂದ ಒತ್ತಿ ಹಿಡಿದು ಕೇವಲ ಎಡ ಹೊಳ್ಳೆಯಿಂದ ನಿಧಾನವಾಗಿ, ಧೀರ್ಘ ಉಸಿರಾಡಬೇಕು. 5 ನಿಮಿಷ ಹೀಗೆ ಮಾಡುವುದರಿಂದ ಬಿಪಿ ನಿಯಂತ್ರಣಕ್ಕೆ ಬಂದು ಶಾಂತವಾಗುತ್ತೀರಿ. ಆಗ ನಿದ್ರೆ ನಿಮ್ಮನ್ನಾವರಿಸುತ್ತದೆ.
ಮಸಲ್ ರಿಲ್ಯಾಕ್ಸೇಶನ್
ಮಲಗಿದ ಬಳಿಕ ಕಾಲ್ಬೆರಳ ತುದಿಯಿಂದ ಆರಂಭಿಸಿ ದೇಹದ ಎಲ್ಲ ಅಂಗಕ್ಕೂ ಈ ತಂತ್ರ ತಲುಪುವಂತೆ ಮಾಡಿ. ಅಂದರೆ ಕಾಲ್ಬೆರಳ ತುದಿಗಳನ್ನು ಪೂರ್ತಿ ಟೈಟಾಗಿಸಿ, ನಿಧಾನವಾಗಿ ಸಡಿಲಗೊಳಿಸಿ. ಅಲ್ಲಿ ಟೆನ್ಷನ್ ರಿಲೀಸ್ ಆದದ್ದನ್ನು ಗಮನಿಸಿ.ಹಾಗೆಯೇ ಪಾದ, ಮೇಗಾಲು, ಗಂಟು, ತೊಡೆ, ಸೊಂಟ, ಬೆನ್ನು, ಕೈಬೆರಲುಗಳು, ಕೈ, ಭುಜ, ಮುಖ, ಕೆನ್ನೆ, ಕಣ್ಣು ಎಂದು ಎಲ್ಲ ಅಂಗಗಳನ್ನೂ ಒಂದೊಂದಾಗಿ ಒಮ್ಮೆ ಪೂರ್ತಿ ಬಿಗಿಯಾಗಿಸಿ, ನಿಧಾನವಾಗಿ ಪೂರ್ತಿ ಸಡಿಲಾಗಿಸುತ್ತಾ ಬನ್ನಿ. ಇದು ಪೂರ್ತಿಯಾಗುವ ಹೊತ್ತಿಗೆ ಇಡೀ ದೇಹ ರಿಲ್ಯಾಕ್ಸ್ ಆಗಿದ್ದು, ನಿದ್ದೆಗೆ ಜಾರಲು ಸಜ್ಜಾಗುತ್ತದೆ.