Asianet Suvarna News Asianet Suvarna News

'ರಾಜ್ಯಗಳಿಗೆ 34.5 ಲಕ್ಷ ರೆಮಿಡಿಸಿವಿರ್ ನೀಡಲಾಗಿದೆ, ಉತ್ಪಾದನೆ ಹೆಚ್ಚಿದೆ'

ಕೋವಿಡ್ ಚಿಕಿತ್ಸೆಯ ಔಷಧಗಳು  ಮತ್ತು ಇತರ ಅಗತ್ಯ ಔಷಧಗಳ ಲಭ್ಯತೆಯನ್ನು ಪರಿಶೀಲಿಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರು/  ರೆಮಿಡಿಸಿವಿರ್‌ ಸಾಮರ್ಥ್ಯ ಹೆಚ್ಚಳ/ ಎಲ್ಲರಿಗೂನ ಲಸಿಕೆ ನೀಡಿಕೆ ಗುರಿ

States allocated 34.5 lakh vials of Remdesivir so far says Sadananda Gowda mah
Author
Bengaluru, First Published May 5, 2021, 11:47 PM IST

ಬೆಂಗಳೂರು(ಮೇ  05)  ಮೇ 3ರಿಂದ ಮೇ 9ರವರೆಗೆ 16.5 ಲಕ್ಷ ರೆಮ್‌ಡೆಸಿವಿರ್‌  ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದ ಗೌಡ ತಿಳಿಸಿದ್ದಾರೆ.

ಕೇಂದ್ರ ಸಚಿವರಾದ ಸದಾನಂದ ಗೌಡ ಅವರ ಅಧ್ಯಕ್ಷತೆಯಲ್ಲಿ ಕೋವಿಡ್ ಚಿಕಿತ್ಸೆಗೆ ಬಳಸುವ ಔಷಧ ಮತ್ತು ಇತರ ಅಗತ್ಯ ಔಷಧಗಳ ಲಭ್ಯತೆಯನ್ನು ಪರಿಶೀಲಿಸಲು ಸಭೆ ನಡೆಯಿತು. ಸಭೆಯಲ್ಲಿ ಕಾರ್ಯದರ್ಶಿಗಳಾದ (ಔಷಧ) ಶ್ರೀಮತಿ ಎಸ್. ಅಪರ್ಣಾ, ಡಿಸಿಜಿಐ ಡಾ.  ವಿ.ಜಿ. ಸೋಮನಿ, ʻಎನ್‌ಪಿಪಿಎʼ ಅಧ್ಯಕ್ಷೆ ಶುಭ್ರಾ ಸಿಂಗ್, ಜಂಟಿ ಕಾರ್ಯದರ್ಶಿ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ) ಡಾ. ಮನ್‌ದೀಪ್ ಕುಮಾರ್ ಭಂಡಾರಿ, ಜಂಟಿ ಕಾರ್ಯದರ್ಶಿ (ಔಷಧ)  ವಿನೋದ್ ಕೊತ್ವಾಲ್, ಎನ್‌ಪಿಪಿಎ ಸದಸ್ಯ ಕಾರ್ಯದರ್ಶಿ ಹಾಗೂ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಒಂದು ತಿಂಗಳ ಹಿಂದೆ ಮಾಸಿಕ 38 ಲಕ್ಷ ಸೀಸೆಗಳಷ್ಟಿದ್ದ ರೆಮ್‌ಡೆಸಿವಿರ್‌ ಉತ್ಪಾದನೆಯನ್ನು ಮಾಸಿಕ 1.03 ಕೋಟಿ ಸೀಸೆಗಳಿಗೆ ಹೆಚ್ಚಿಸಿರುವ ಎಲ್ಲಾ ಏಳು ಔಷಧ ಉತ್ಪಾದನಾ ಸಂಸ್ಥೆಗಳ ಪ್ರಯತ್ನಗಳ ಬಗ್ಗೆ ಸಭೆಯಲ್ಲಿ ಸದಾನಂದ ಗೌಡ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಮೇ 3ರಿಂದ ಮೇ 9ರ ನಡುವಿನ ಅವಧಿಯಲ್ಲಿ ರೆಮ್‌ಡೆಸಿವಿರ್‌ನ 16.5 ಲಕ್ಷ ಸೀಸೆಗಳನ್ನು ಎಲ್ಲಾ ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಅವರು ಹೇಳಿದರು.

ಬಹರೇನ್ ನಿಂದ ಬಂದಿಳಿದ ಆಮ್ಲಜನಕ

ಏಪ್ರಿಲ್ 21ರಿಂದ ಇಲ್ಲಿಯವರೆಗೆ ಒಟ್ಟು 34.5 ಲಕ್ಷ ಸೀಸೆಗಳನ್ನು ಹಂಚಿಕೆ ಮಾಡಲಾಗಿದೆ. ರಾಜ್ಯಗಳಿಗೆ ಹಂಚಿಕೆಯು ಕ್ರಿಯಾತ್ಮಕ ಪ್ರಕ್ರಿಯೆಯಾಗಿದ್ದು,  ಮುಂಬರುವ ವಾರಗಳಲ್ಲಿ ಪೂರೈಕೆಯನ್ನು ಮತ್ತಷ್ಟು ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದರು.

ಕೋವಿಡ್ ಚಿಕಿತ್ಸೆಗೆ ಬಳಸುವ ಔಷಧಗಳು ಮತ್ತು ಇತರ ಅಗತ್ಯ ಔಷಧಗಳ ಲಭ್ಯತೆಯನ್ನು ಅಲ್ಪಾವಧಿಯಲ್ಲಿ ಹೆಚ್ಚಿಸಲು ಔಷಧ ಕಂಪನಿಗಳು ಮತ್ತು ಔಷಧ ಇಲಾಖೆ, ಎನ್‌ಪಿಪಿಎ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ʻಸಿಡಿಎಸ್‌ಸಿಒʼದ ಅಧಿಕಾರಿಗಳ ನಡುವಿನ ನಿಕಟ ಸಹಕಾರ ಮತ್ತು ಅವರ ಸಂಘಟಿತ ಪ್ರಯತ್ನಗಳನ್ನು ಸದಾನಂದ ಗೌಡ ಅವರು ಶ್ಲಾಘಿಸಿದರು. ಸರಕಾರ ಮತ್ತು ಖಾಸಗಿ ವಲಯದ ನಡುವಿನ ಇಂತಹ ನಿಕಟ ಸಹಯೋಗದ ಈಗಿನ ತುರ್ತು ಅಗತ್ಯ ಎಂದು ಅವರು ಹೇಳಿದರು.

"

 

Follow Us:
Download App:
  • android
  • ios