Food for Diabetics: ಶುಗರ್ ಇದೆ ಅಂತ ಹೊಟ್ಟೆಗೆ ಕಮ್ಮಿ ಮಾಡ್ಕೋಬೇಡಿ, ಈ ಫುಡ್ ತಿನ್ನಬಹುದು ನೋಡಿ

ಧಾನ್ಯಗಳು, ಬೇಳೆಕಾಳುಗಳು ಆರೋಗ್ಯಕ್ಕೆ ಒಳ್ಳೆಯವು ಎನ್ನುವುದೇನೋ ಸರಿ. ಆದರೆ, ಮಧುಮೇಹಿಗಳಿಗೆ ಯಾವ ಧಾನ್ಯ ಉತ್ತಮ, ಯಾವುದರಲ್ಲಿ ಎಷ್ಟು ಗ್ಲೈಸೆಮಿಕ್ ಇಂಡೆಕ್ಸ್ ಇದೆ ಎಂದು ನೋಡಿಕೊಂಡು ಸೇವನೆ ಮಾಡಿ. 
 

Some dal is good for diabetes patients

ಮಧುಮೇಹಿಗಳು ದಿನನಿತ್ಯವೂ ಯೋಚಿಸಬೇಕಾದ ಬಹುಮುಖ್ಯ ವಿಚಾರವೆಂದರೆ ಆಹಾರ. ಯಾವ ರೀತಿಯ ಆಹಾರ ಸೇವಿಸಬೇಕು, ಹೇಗೆ ಆಹಾರ ಸೇವನೆ ಮಾಡಿದರೆ ಮಧುಮೇಹವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು ಎನ್ನುವುದರ ಬಗ್ಗೆ ಸಾಮಾನ್ಯವಾಗಿ ಎಲ್ಲ ಮಧುಮೇಹಿಗಳೂ ಒಂದು ವಿಚಾರವನ್ನಿಟ್ಟುಕೊಂಡೇ ಇರುತ್ತಾರೆ. ಸಕ್ಕರೆಯ ಅಂಶ ಕಡಿಮೆ ಇರುವ, ನಾರಿನಂಶ ಹೆಚ್ಚಿರುವ, ಖನಿಜ, ವಿಟಮಿನ್ ಗಳು ಹೆಚ್ಚಾಗಿರುವ, ಉತ್ತಮ ಕೊಬ್ಬಿರುವ ಆಹಾರವನ್ನು ಸೇವಿಸಬೇಕೆನ್ನುವುದು ಅವರ ಗುರಿಯಾಗಿರುತ್ತದೆ. ಆದರೆ, ಸಾಮಾನ್ಯವಾಗಿ ಸಮತೋಲಿತ ಆಹಾರ ಕಷ್ಟವಾಗುತ್ತದೆ. ಸಾಮಾನ್ಯ ದಿನಚರಿಯಲ್ಲಿ ನಾವು ಕಾರ್ಬೋಹೈಡ್ರೇಟ್ ಅಂಶ ಹೆಚ್ಚಾಗಿರುವ ಆಹಾರವನ್ನೇ ಸೇವನೆ ಮಾಡುವುದು ಕಂಡುಬರುತ್ತದೆ. ಹೀಗಾಗಿ, ಅವರು ಸ್ವಲ್ಪ ವಿಭಿನ್ನವಾಗಿ ಯೋಚಿಸಬೇಕಾಗುತ್ತದೆ. ಮಧುಮೇಹಿಗಳ ದೈನಂದಿನ ಆಹಾರದಲ್ಲಿ ಬೇಳೆ-ಕಾಳುಗಳು ಇರಬೇಕೇ ಬೇಡವೇ ಎನ್ನುವುದೊಂದು ಪ್ರಶ್ನೆ ಬಹುತೇಕ ಎಲ್ಲರನ್ನೂ ಕಾಡುತ್ತದೆ. ಬೇಳೆಕಾಳುಗಳು ಆರೋಗ್ಯಕ್ಕೆ ಒಳ್ಳೆಯವೇ. ಪ್ರೊಟೀನ್ ಸೇರಿದಂತೆ ವಿವಿಧ ರೀತಿಯ ಪೌಷ್ಟಿಕಾಂಶ ಹೊಂದಿರುವ ಬೇಳೆಕಾಳುಗಳನ್ನು ಎಲ್ಲರೂ ಸೇವಿಸಬೇಕು. ಆದರೂ ಮಧುಮೇಹಿಗಳು ತಮಗೆ ಯಾವ ಬೇಳೆಕಾಳು ಉತ್ತಮ, ಯಾವುದನ್ನು ಹೆಚ್ಚಾಗಿ ಬಳಸಬೇಕು ಎನ್ನುವುದನ್ನು ಅರಿತುಕೊಂಡರೆ ಒಳ್ಳೆಯದು. ಏಕೆಂದರೆ, ಆಹಾರದ ಕಾರಣದಿಂದಲೇ ಅವರ ದೇಹದಲ್ಲಿ ಸಾಕಷ್ಟು ವ್ಯತ್ಯಾಸಗಳು ಉಂಟಾಗಬಹುದು. ಹೀಗಾಗಿ, ಮಧುಮೇಹವನ್ನು ಗಮನದಲ್ಲಿ ಇಟ್ಟುಕೊಂಡು ಕೆಲವು ರೀತಿಯ ಬೇಳೆಕಾಳುಗಳನ್ನು ಅವರು ಆಹಾರದಲ್ಲಿ ಸೇರ್ಪಡೆ ಮಾಡಿಕೊಳ್ಳುವುದು ಉತ್ತಮ.

ಭಾರತದಲ್ಲಿ ಸಸ್ಯಾಹಾರಿಗಳ (Vegetarian) ಸಂಖ್ಯೆ ಅಧಿಕ. ಹೀಗಾಗಿ, ಇಲ್ಲಿ ಪ್ರೊಟೀನ್ (Protein) ಮೂಲಕ್ಕಾಗಿ ಧಾನ್ಯಗಳನ್ನು (Pulses) ಹೆಚ್ಚಾಗಿ ಅವಲಂಬಿಸುತ್ತೇವೆ. ಮಧುಮೇಹಿಗಳ (Diabetics) ಆಹಾರದಲ್ಲೂ ಧಾನ್ಯಗಳ ಪಾತ್ರ ಪ್ರಮುಖವಾಗಿದೆ. ಧಾನ್ಯಗಳು ಉತ್ತಮ ನಾರಿನಂಶ (Fiber), ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ (Complex Carbohydrates) ಹೊಂದಿರುತ್ತವೆ. ಇವುಗಳಲ್ಲಿರುವ ಕಾರ್ಬೋಹೈಡ್ರೇಟ್ ನಿಧಾನವಾಗಿ ಜೀರ್ಣವಾಗುವಂಥದ್ದು. ಹೀಗಾಗಿ, ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಕಾರಿ. ಇವುಗಳನ್ನು ತಿಂದ ತಕ್ಷಣ ಸಕ್ಕರೆ ಮಟ್ಟ ಹೆಚ್ಚಾಗುವುದಿಲ್ಲ. ವಿಟಮಿನ್, ಮಿನರಲ್, ಕಬ್ಬಿಣ, ಫಾಸಿಕ್ ಆಸಿಡ್, ಝಿಂಕ್ ಮುಂತಾದ ಅಂಶಗಳನ್ನು ಹೊಂದಿರುವುದರಿಂದ ಇವು ದೇಹಾರೋಗ್ಯಕ್ಕೆ ಅತ್ಯುತ್ತಮ. ಇವುಗಳಲ್ಲೇ ಕೆಲವು ಧಾನ್ಯಗಳು ಮಧುಮೇಹಿಗಳಿಗೆ ಮತ್ತಷ್ಟು ಉತ್ತಮ. 

•    ಹುರುಳಿ (Horse Gram): ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Blood Sugar Level) ನಿರ್ವಹಣೆ ಮಾಡುತ್ತದೆ. ಕೊಬ್ಬನ್ನು (Fat) ಕರಗಿಸುತ್ತದೆ ಹಾಗೂ ತೂಕ ಇಳಿಸಲು ಸಹಕಾರಿ.

ಇವಿಷ್ಟೇ ತಿಂದ್ರೆ ಸಾಕು, ಶುಗರ್ ಲೆವೆಲ್ ಬಗ್ಗೆ ತಲೆಕೆಡಿಸ್ಕೊಳ್‌ಬೇಕಾಗಿಲ್ಲ

•    ಉದ್ದು (Urad): ಇದು ದೇಹಕ್ಕೆ ಶಕ್ತಿ ನೀಡುವ ಜತೆಗೆ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಅನುಕೂಲ ಮಾಡಿಕೊಡುತ್ತದೆ. ಇಡಿಯಾಗಿ ಬಳಸಿದರೂ ಸರಿ, ಉದ್ದಿನ ಬೇಳೆಯನ್ನು ಬಳಸಿದರೂ ಸರಿ. ಇದರಲ್ಲಿರುವ ನಾರಿನ ಅಂಶವು ಕೊಬ್ಬನ್ನು ಕರಗಿಸುತ್ತದೆ.
•    ಹೆಸರುಬೇಳೆ (Moong): ಕ್ಯಾಲರಿ (Calorie) ಕಡಿಮೆ ಹೊಂದಿದ್ದು, ಅತ್ಯುತ್ತಮ ಪೌಷ್ಟಿಕಾಂಶ ಹೊಂದಿದೆ. ನಾರು, ಪ್ರೊಟೀನ್ ಮಟ್ಟ ಹೆಚ್ಚು. ಹಸಿರು ಹೆಸರುಕಾಳು ಸಹ ಒಳ್ಳೆಯದು. ಇದು ಜೀರ್ಣಶಕ್ತಿಯನ್ನೂ ಉತ್ತಮಪಡಿಸುತ್ತದೆ.
•    ಕಡಲೆಕಾಳು (Chickpea): ಪ್ರೊಟೀನ್, ನಾರು ಅಂಶಗಳು ಹೆಚ್ಚಾಗಿದ್ದು, ವಿಟಮಿನ್, ಖನಿಜಭರಿತವಾಗಿದೆ. ಇದು ಮಧುಮೇಹಿಗಳಿಗೆ ಅತ್ಯುತ್ತಮವಾದ ಬೇಳೆ. ಗ್ಲೈಸೆಮಿಕ್ ಇಂಡೆಕ್ಸ್ (Glycemic Index) ಕೂಡ ಕಡಿಮೆ ಇದ್ದು, ಇದನ್ನು ತಿಂದ ಬಳಿಕ ಸಕ್ಕರೆ ಮಟ್ಟ ಸ್ವಲ್ಪವೂ ಹೆಚ್ಚುವುದಿಲ್ಲ. ರೊಟ್ಟಿ ಮಾಡಲು ಗೋಧಿ ಹಿಟ್ಟಿನ ಜತೆ ಕಡಲೆ ಹಿಟ್ಟನ್ನು ಸಹ ಬಳಕೆ ಮಾಡಬಹುದು. 

Type 3 Diabetes ಕಾಡೋದು ಯಾವಾಗ? ಲಕ್ಷಣಗಳು ಏನಿರುತ್ತೆ?

•    ಕಿಡ್ನಿ ಬೀನ್ಸ್ (Kidney Beans): ಕೇವಲ 19ರಷ್ಟು ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಕಿಡ್ನಿ ಬೀನ್ಸ್ ನಲ್ಲಿ ನಾರಿನ ಅಂಶ ಹೇರಳ. ಇದರಲ್ಲಿರುವ ಸ್ಟಾರ್ಚ್ ಅಂಶವು ನಿಧಾನವಾಗಿ ಜೀರ್ಣಗೊಂಡು ಸಕ್ಕರೆ ಮಟ್ಟ ಹೆಚ್ಚಿಸುವುದಿಲ್ಲ. 
•    ಕಡಲೆ ಬೇಳೆ (Gram Dal): ಕೇವಲ 8 ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಕಡಲೆ ಬೇಳೆ ಮಧುಮೇಹಿಗಳಿ ಅತ್ಯುತ್ತಮ. ಫಾಲಿಕ್ ಆಸಿಡ್, ಕಬ್ಬಿಣಾಂಶ, ನಾರಿನಾಂಶ ಚೆನ್ನಾಗಿರುತ್ತದೆ. ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪಾದನೆಗೆ ಸಹಕಾರಿ. 

Latest Videos
Follow Us:
Download App:
  • android
  • ios