ಮುಖದ ಮೇಲಿರುವ ಮಚ್ಚೆ ಕೇವಲ ಮಚ್ಚೆಯಾಗಿರದೆ ಕ್ಯಾನ್ಸರ್ ಸೂಚಕವೂ ಆಗಿರಬಹುದು. ಇಂಥದ್ದೊಂದು ಅನುಭವ ಹಂಚಿಕೊಂಡಿರುವ ಆಂಡ್ರಿಯಾ ಮೋಸರ್ ಎಂಬಾಕೆಯ ಸೋಷಿಯಲ್ ಮೀಡಿಯಾ ಪೋಸ್ಟ್ ಇತ್ತೀಚೆಗೆ ಸಾಕಷ್ಟು ಸುದ್ದಿ ಮಾಡಿದೆ.  

ಬೇಸಿಗೆ ಇರಲಿ, ಚಳಿಗಾಲವಿರಲಿ, ಮಳೆಯಿರಲಿ. ಮುಖಕ್ಕೆ (Face) ಯಾವುದೋ ಒಂದು ಕ್ರೀಮ್ ಬಳಿದು, ಸಿಕ್ಕ ಸಿಕ್ಕ ಸಾಬೂನು, ಶಾಂಪೂಗಳನ್ನು ಬಳಕೆ ಮಾಡುತ್ತ ಮುಖದ ಅಂದ (Beauty) ಹಾಗೂ ಚರ್ಮದ (Skin) ಆರೋಗ್ಯದ ಬಗ್ಗೆ ಗಮನ ನೀಡದಿರುವವರಿದ್ದಾರೆ. ಚರ್ಮದಲ್ಲಾಗುವ ಏರಿಳಿತದ ಬಗ್ಗೆ ಸ್ವಲ್ಪವೂ ತಲೆಕೆಡಿಸಿಕೊಳ್ಳದೆ ನಿರ್ಲಕ್ಷ ವಹಿಸುವವರಿದ್ದಾರೆ. ಆದರೆ, ಇದರಿಂದ ಅಪಾಯವಾಗಬಹುದು. 
ಸಾಮಾನ್ಯವಾಗಿ, ದೇಹದ ಒಳಗೆ ಏನಾದರೂ ಸಮಸ್ಯೆ ಇದ್ದರೆ ಅದು ಚರ್ಮದ ಮೇಲೆ ಒಂದಲ್ಲ ಒಂದು ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಜನರು ಇಂತಹ ಲಕ್ಷಣಗಳನ್ನು ಇಗ್ನೋರ್ (Ignore) ಮಾಡುತ್ತಾರೆ. ಇವುಗಳ ಕುರಿತು ಗಮನ ನೀಡುವುದರಿಂದ ಮುಂದೆ ಸಂಭವಿಸಬಹುದಾದ ಭಾರೀ ಅನಾಹುತವನ್ನು ತಪ್ಪಿಸಬಹುದು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. 

ತುಟಿ ಮೇಲ್ಭಾಗ ಬ್ಯೂಟಿ ಸ್ಪಾಟ್ (Beauty Spot)
ತುಟಿಯ (Lip) ಮೇಲ್ಭಾಗದಲ್ಲಿ ಮಚ್ಚೆ(Fleck)ಯಿದ್ದರೆ ಮುಖಕ್ಕೆ ಒಂದು ರೀತಿಯ ಆಕರ್ಷಣೆ ಬರುತ್ತದೆ. ಮುಖದ ಕೆಲವು ಭಾಗದಲ್ಲಿರುವ ಮಚ್ಚೆ(Scar)ಯಿಂದ ಮಹಿಳೆಯರು ಹೆಚ್ಚು ರೋಮ್ಯಾಂಟಿಕ್ ಆಗಿಯೂ ಸೆಕ್ಸಿಯಾಗಿಯೂ ಕಾಣುತ್ತಾರೆ ಎನ್ನುವುದನ್ನು ಕೆಲವು ಅಧ್ಯಯನಗಳು ಹೇಳುತ್ತವೆ. ಇಂತಹ ಮಚ್ಚೆಯನ್ನು ಬ್ಯೂಟಿ ಸ್ಪಾಟ್ ಎಂದೂ ಹೇಳುತ್ತೇವೆ. ಹಾಗೆಯೇ, 49 ವರ್ಷದ ಆಂಡ್ರಿಯಾ ಮೋಸರ್ (Andria Moser) ಎನ್ನುವ ಈ ಮಹಿಳೆಗೂ ತುಟಿಯ ಮೇಲ್ಭಾಗದಲ್ಲಿ ಮಚ್ಚೆಯಿತ್ತು. ಇದನ್ನಾಕೆ ಬ್ಯೂಟಿ ಸ್ಪಾಟ್ ಎಂದೇ ಭಾವಿಸಿದ್ದರು. ಆದರೆ, ಕ್ರಮೇಣ ಈ ಮಚ್ಚೆಯ ಬಣ್ಣ (Color) ಹಾಗೂ ಗಾತ್ರ (Size) ಬದಲಾಗುತ್ತ ಬಂದಿತ್ತು. ಆಕೆ ಅಂದುಕೊಂಡಂತೆ ಕಂದುಬಣ್ಣದ ಈ ಮಚ್ಚೆ ನಿಜಕ್ಕೂ ಬ್ಯೂಟಿ ಸ್ಪಾಟ್ ಆಗಿರಲಿಲ್ಲ. 

ಕ್ಯಾನ್ಸರ್ ಚಿಕಿತ್ಸೆ ಗೊತ್ತಿರಲಿ ಒಂದಿಷ್ಟು

ಮಚ್ಚೆಯಲ್ಲಿ ಕ್ಯಾನ್ಸರ್ (Cancer)
2020ರಲ್ಲಿ ಆಂಡ್ರಿಯಾ ಮೋಸರ್ ಒಮ್ಮೆ ಮುಖವನ್ನು ಗಮನಿಸುತ್ತಿರುವಾಗ ತುಟಿಯ ಮೇಲ್ಭಾಗದ ಮಚ್ಚೆ ಕಂದುಬಣ್ಣದಲ್ಲಿ ಮಿರುಗುತ್ತಿದ್ದುದು ಕಂಡುಬಂತು. ಆಕೆ ಸೀದಾ ವೈದ್ಯರ ಬಳಿ ಹೋದಾಗ, ಅವರು ಇದೊಂದು ಸಾಮಾನ್ಯ ಮಚ್ಚೆ. ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದುಬಿಟ್ಟರು. ಸ್ವಲ್ಪ ದಿನಗಳ ಕಾಲ ನೆಮ್ಮದಿಯಿಂದ ಆಂಡ್ರಿಯಾ, ಇನ್ ಸ್ಟಾಗ್ರಾಮ್ ನೋಡುತ್ತಿರುವಾಗ ಯಾರೋ ಮಾಡಿದ್ದ ಪೋಸ್ಟ್ ಒಂದನ್ನು ನೋಡಿ ವಾರ್ಷಿಕ ಚರ್ಮದ ತಪಾಸಣೆಗೆ ಹೋದರು. ಅಲ್ಲಿ, ಬಯಾಪ್ಸಿ (Biopsy) ಮಾಡಿದಾಗ ಆಕೆಗೆ ಶಾಕ್ (Shock) ಕಾದಿತ್ತು. ಈ ಕಂದು ಬಣ್ಣದ ಮಚ್ಚೆ ಕ್ಯಾನ್ಸರ್ ಗೂ ಮುನ್ನ ಕಂಡುಬರುವ ಮಚ್ಚೆಯಾಗಿತ್ತು. 

2020ರ ಮಾರ್ಚ್ ನಲ್ಲಿ ತುಟಿಯ ಮೇಲಿದ್ದ ಆ ಮಚ್ಚೆಯನ್ನು ವೈದ್ಯರು ತೆಗೆದುಹಾಕಿದರು. ಆಂಡ್ರಿಯಾ ಈಗ ಖುಷಿಯಾಗಿದ್ದಾರೆ. “ಅದೃಷ್ಟವಶಾತ್ ಪರೀಕ್ಷೆ ಮಾಡಿಸಿಕೊಂಡೆ, ಚೆನ್ನಾಗಿರುವ ವೈದ್ಯರೂ ದೊರಕಿ ಚರ್ಮದ ಕ್ಯಾನ್ಸರ್ ಬರುವುದಕ್ಕೂ ಮುನ್ನವೇ ಬಚಾವಾದೆ’ ಎಂದು ಹೇಳಿಕೊಂಡಿದ್ದಾರೆ. 

ಮಹಿಳೆಯರನ್ನು ಕಾಡೋ ಸ್ತನ ಕ್ಯಾನ್ಸರ್

ಮಚ್ಚೆ ಬದಲಾದಾಗ..
ಹುಟ್ಟಿನಿಂದಲೂ ದೇಹದ ಕೆಲವು ಭಾಗದಲ್ಲಿ ಮಚ್ಚೆಗಳಿರುವುದು ಸಹಜ. ಬೆಳವಣಿಗೆಯ ಹಂತದಲ್ಲೂ ಮಚ್ಚೆಗಳು ಉದ್ಭವಿಸುತ್ತವೆ. ಸಾಮಾನ್ಯವಾಗಿ, ಮುಖದ ಮೇಲೆ ಇರುವ ಮಚ್ಚೆ ಕಪ್ಪಗೆ ಇಲ್ಲವೇ ಕಂದುಬಣ್ಣದಲ್ಲಿರುತ್ತದೆ. ಆದರೆ, ಮಚ್ಚೆಯ ಬಣ್ಣ, ಗಾತ್ರ ಹಾಗೂ ಆಕಾರ (Shape) ಒಂದೇ ರೀತಿಯಲ್ಲಿರುತ್ತದೆ. ಬದಲಾಗುವುದಿಲ್ಲ. ಒಂದೊಮ್ಮೆ ಮಚ್ಚೆಯ ಬಣ್ಣ, ಗಾತ್ರದಲ್ಲಿ ವ್ಯತ್ಯಾಸ ಕಂಡುಬಂದರೆ ಚರ್ಮದ ಕ್ಯಾನ್ಸರ್ ಕಂಡುಬರುವ ಸಾಧ್ಯತೆ ಅಧಿಕವಾಗಿರುತ್ತದೆ. 

“ಆರೋಗ್ಯಪೂರ್ಣವಾಗಿದ್ದ ನನಗೆ ಚರ್ಮದ ಕ್ಯಾನ್ಸರ್ ಉಂಟಾಗುವ ಕಲ್ಪನೆಯೂ ಇರಲಿಲ್ಲ. 2009ರಿಂದಲೇ ಈ ಮಚ್ಚೆಯಲ್ಲಿ ಚಿಕ್ಕ ವ್ಯತ್ಯಾಸ ಕಂಡುಬರಲು ಆರಂಭವಾಗಿತ್ತು. ಆಗ ಗಮನ ನೀಡಿರಲಿಲ್ಲ’ ಎಂದು ಆಂಡ್ರಿಯಾ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ. ತಾವು ಎಂದಿಗೂ ಚರ್ಮದ ಬಗ್ಗೆ ಕಾಳಜಿ ವಹಿಸಿರಲಿಲ್ಲ. ಆದರೆ, ಆತಂಕಕಾರಿ ಅಧ್ಯಾಯವನ್ನು ಎದುರಿಸಿದ್ದೇನೆ. ಜನರೂ ಇದನ್ನು ನೋಡಿ ಎಚ್ಚರ ವಹಿಸಬೇಕೆಂದು ತಮ್ಮ ಕಥೆಯನ್ನು ಎಲ್ಲೆಡೆ ಹಂಚಿಕೊಂಡಿರುವುದಾಗಿ ಹೇಳುತ್ತಾರೆ. ಹೀಗಾಗಿ, ಚರ್ಮದ ಮೇಲೆ ಏನೇ ವ್ಯತ್ಯಾಸವಾದರೂ ಸೂಕ್ತ ಪರೀಕ್ಷೆ (Test) ಮಾಡಿಸಿಕೊಳ್ಳುವುದು ಅತ್ಯಂತ ಅಗತ್ಯ.