Side Effects of Wine: ಒಂದು ಪೆಗ್ ವೈನ್ ಕುಡಿದರೆ ಆರೋಗ್ಯಕ್ಕೆ ಎಷ್ಟು ಹಾನಿಯಿದೆ ಗೊತ್ತಾ ?
ವಿಸ್ಕಿ, ಬ್ರಾಂಡಿ ಮೊದಲಾದ ಅಲ್ಕೋಹಾಲ್ (Alcohol) ಆರೋಗ್ಯಕ್ಕೆ ಹಾನಿ ಎಂದು ಹೇಳುವ ಅದೆಷ್ಟೋ ಮಂದಿ ಅದರ ಬದಲು ವೈನ್ (Wine) ಅನ್ನು ಕುಡಿಯುತ್ತಾರೆ. ಆದರೆ ವೈನ್ ಕುಡಿಯುವುದರಿಂದಲೂ ಆರೋಗ್ಯ (Health) ಕ್ಕೆ ಹಾನಿಯಿದೆ ಅನ್ನೋದು ನಿಮಗೆ ಗೊತ್ತಾ..?
ಅಲ್ಕೋಹಾಲ್ ಹಲವರ ವೀಕ್‌ನೆಸ್. ಆರೋಗ್ಯದ ಬಗ್ಗೆ ಸ್ಪಲ್ಪ ಕಾಳಜಿ ವಹಿಸುವವರು ವಿಸ್ಕಿ, ಬ್ರಾಂಡಿ ಬೇಡ ಅಂತ ವೈನ್ ಗ್ಲಾಸ್ ಹಿಡಿಯುತ್ತಾರೆ. ದಿನದ ಕೊನೆಯಲ್ಲಿ ಒಂದು ಗ್ಲಾಸ್ ವೈನ್ ಇದ್ರೆ ಸಾಕಪ್ಪಾ ಎನ್ನುವವರು ಹಲವರು. ವೈನ್ ಇನ್ಸ್ಟಿಟ್ಯೂಟ್ ಪ್ರಕಾರ ವಯಸ್ಕರು ವರ್ಷಕ್ಕೆ ಸುಮಾರು 2.95 ಗ್ಯಾಲನ್ ವೈನ್ ಕುಡಿಯುತ್ತಾರೆ ಎಂದು ತಿಳಿದುಬಂದಿದೆ. ಆದ್ರೆ ಹಣ್ಣಿನಿಂದಲೇ ಮಾಡ್ತಾರೆ, ಹೆಚ್ಚು ಅಲ್ಕೋಹಾಲ್ ಕಂಟೆಂಟ್ ಇರಲ್ಲ ಎಂದೆಲ್ಲಾ ಹೇಳುವ ವೈನ್‌ನಲ್ಲೂ ಹಲವು ಹಾನಿಕರ ಅಂಶಗಳಿವೆ.
ವೈನ್ ಕುಡಿಯುವುದರಿಂದ ಆರೋಗ್ಯಕ್ಕೆ ಹಾನಿ
ಅಧ್ಯಯನಗಳ ಪ್ರಕಾರ, ಬೇರೆ ರೀತಿಯ ಅಲ್ಕೋಹಾಲ್‌ಗಳಿಗೆ ಹೋಲಿಸಿದರೆ ರೆಡ್ ವೈನ್‌ನಲ್ಲಿ ಆರೋಗ್ಯಕ್ಕೆ ಹಿತಕರವಾದ ಹಲವು ಪ್ರಯೋಜನಗಳಿವೆ ಎಂದು ತಿಳಿದುಬಂದಿದೆ. ಇದಕ್ಕೆ ಕಾರಣ ಇದರಲ್ಲಿರುವ ಫಾಲಿಫಿನಾಲ್, ಆಂಟಿ ಆಕ್ಸಿಡೆಂಟ್ ಮೊದಲಾದ ಅಂಶಗಳು. ಇವು ದೇಹದಲ್ಲಿ ಉಂಟಾಗುವ ಉತ್ಕರ್ಷಣಾ ಶೀಲ ಒತ್ತಡವನ್ನು ಕಡಿಮೆ ಮಾಡಿ ಉತ್ತಮ ಆರೋಗ್ಯಕ್ಕೆ ನೆರವಾಗುತ್ತದೆ. ವೈನ್ ಕುಡಿಯುವುದು ಆಲ್ಝೈಮರ್ ಕಾಯಿಲೆಯಿಂದ ರಕ್ಷಿಸುತ್ತದೆ, ರೆಡ್ ವೈನ್ ಸೇವನೆ ಮಧುಮೇಹದ ಸಮಸ್ಯೆಯನ್ನು ನಿವಾರಿಸುತ್ತದೆ, ದೇಹದಲ್ಲಿ ಉಂಟಾಗುವ ಉರಿಯೂತವನ್ನು ಶಮನಗೊಳಿಸುತ್ತದೆ, ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಇಷ್ಟೆಲ್ಲಾ ಪ್ರಯೋಜನಗಳಿರುವ ಹಾಗೆಯೇ ವೈನ್ ಸೇವನೆಯಿಂದ ಅಡ್ಡಪರಿಣಾಮಗಳೂ ಇವೆ.
ವೈನ್ ಕಿಕ್ ಏರಿಸೋದು ಮಾತ್ರವಲ್ಲ ಬ್ಯೂಟಿಗೂ ಬೆಸ್ಟ್
ಹೃದಯ ಸಂಬಂಧಿತ ಸಮಸ್ಯೆ ಹೆಚ್ಚಾಗುತ್ತದೆ
ಕೆಂಪು ವೈನ್ (Wine), ವ್ಯಕ್ತಿಯ ಹೃದಯ ರಕ್ತನಾಳದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ವಿಶೇಷವಾಗಿ ರಕ್ತದೊತ್ತಡ ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ, ನಿಯಮಿತ ವೈನ್ ಸೇವನೆಯು ಕೆಲವೊಮ್ಮೆ ಅನಿಯಮಿತ ಹೃದಯ ಬಡಿತ ಸೇರಿದಂತೆ ಸೇರಿದಂತೆ ಹೃದಯ (Heart attack)ಕ್ಕೆ ಗಂಭೀರವಾದ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ತಜ್ಞರು ಹೇಳುತ್ತಾರೆ.
ಸ್ತನ ಕ್ಯಾನ್ಸರ್ ಅಪಾಯ ಹೆಚ್ಚಾಗಬಹುದು
ಮಧ್ಯಮ ಮದ್ಯಪಾನವು ಸ್ತನ ಕ್ಯಾನ್ಸರ್ (Cancer) ಅಪಾಯವನ್ನು ಕಡಿಮೆ ಮಾಡುವ ಬದಲು ಅದನ್ನು ಹೆಚ್ಚಿಸುತ್ತದೆ. ಅನ್ನಲ್ಸ್ ಆಫ್ ಎಪಿಡೆಮಿಯಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ದಿನವೊಂದಕ್ಕೆ ಒಂದರಿಂದ ಎರಡು ಗ್ಲಾಸ್ ವೈನ್ ಸೇವನೆ, ಸ್ತನ ಕ್ಯಾನ್ಸರ್ ಅಪಾಯವನ್ನು 30%ರಿಂದ 50 ಶೇಕಡಾ ವರೆಗೆ ಹೆಚ್ಚಿಸಬಹುದು.
ಕೊಡಗಿನ ಹೋಂಮೇಡ್ ವೈನ್‌ಗೆ ಹೆಚ್ಚಿದ ಡಿಮ್ಯಾಂಡ್..!
ಅನ್ನನಾಳದ ಕ್ಯಾನ್ಸರ್ ಸಮಸ್ಯೆ ಕಾಣಿಸಿಕೊಳ್ಳಬಹುದು
ನಾಲಿಗೆ ಮತ್ತು ಅನ್ನನಾಳದ ಕ್ಯಾನ್ಸರ್ ವೈನ್ ಕುಡಿಯುವುದರೊಂದಿಗೆ ಹೆಚ್ಚಿನ ಸಂಬಂಧವನ್ನು ಹೊಂದಿದೆ. ಅಧ್ಯಯನವೊಂದರ ಪ್ರಕಾರ, ದಿನಕ್ಕೆ ಒಂದು ಲೋಟ ವೈನ್ ಅಥವಾ ಅಲ್ಕೋಹಾಲ್ ಭರಿತವಾದ ಪಾನೀಯವನ್ನು ಕುಡಿಯುವುದು ಅನ್ನನಾಳದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು.
ಶಾಂತ ರೀತಿಯಲ್ಲಿ ನಿದ್ರೆ ಮಾಡುವುದು ಸಾಧ್ಯವಿಲ್ಲ
ಸಂಜೆ ಒಂದು ಲೋಟ ವೈನ್ ಕುಡಿಯುವುದು ನಿಮಗೆ ಚೆನ್ನಾಗಿ ನಿದ್ದೆ (Sleep) ಬರುವಂತೆ ಮಾಡುತ್ತದೆ. ಆದರೆ ಹೀಗೆ ವೈನ್ ಕುಡಿಯುವುದರಿಂದ ನೀವು ನಿರೀಕ್ಷಿಸದಿರುವ ಇನ್ನೊಂದು ಅಡ್ಡ ಪರಿಣಾಮವಿದೆ. ವೈನ್ ಅನ್ನು ಸೇವಿಸಿದ ನಂತರ ನೀವು ಶಾಂತ ರೀತಿಯ ನಿದ್ರೆಯನ್ನು ಪಡುವುದು ಸಾಧ್ಯವಿಲ್ಲ. ಅಲ್ಕೋಹಾಲ್ ಕುಡಿಯುವುದು ರಾಪಿಡ್ ಐ ಮೂವ್ ಮೆಂಟ್ ನಿದ್ರೆಯನ್ನು ಕಡಿಮೆ ಮಾಡುತ್ತದೆ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ನಿದ್ರೆಯ ಅಗತ್ಯ ಭಾಗವಾಗಿದೆ. ವೈನ್ ಕುಡಿದ ಬಳಿಕ ನೀವು ಸಾಕಷ್ಟು ಗಂಟೆಗಳ ಕಾಲ ಮಲಗಿದ್ದರೂ ಎಚ್ಚರಗೊಂಡಾಗ ದಣಿದ ಅನುಭವವಾಗುತ್ತದೆ. ದೇಹದಲ್ಲಿ ಚೈತನ್ಯವಿಲ್ಲದ ಅನುಭವವಾಗುತ್ತದೆ.
ಮುಖದಲ್ಲಿ ಗುಳ್ಳೆಗಳ ಸಮಸ್ಯೆ ಕಾಣಿಸಿಕೊಳ್ಳುತ್ತದೆ
ನಿಮ್ಮ ಚರ್ಮ (Skin)ವನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿಡಲು ಬಯಸುವಿರಾ. ಹಾಗಿದ್ರೆ ನೀವು ಖಂಡಿತವಾಗಿಯೂ ವೈನ್ ಗ್ಲಾಸ್ ಅನ್ನು ದೂರವಿಡಬೇಕು. ವೈನ್ ಕುಡಿಯುವವರಲ್ಲಿ ಕೆನ್ನೆಗಳಲ್ಲಿ ರಕ್ತನಾಳಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವುದು ಅಧ್ಯಯನಗಳಿಂದ ತಿಳಿದುಬಂದಿದೆ. ಹೆಚ್ಚು ವೈನ್ ಕುಡಿಯುವವರಲ್ಲಿ ಮುಖದಲ್ಲಿ ಗುಳ್ಳೆಗಳು ಬರುವ ರೊಸಾಸಿಯಾ ಎಂಬ ಸಮಸ್ಯೆ ಕಾಣಿಸಿಕೊಳ್ಳುತ್ತದೆ.