Late Night Eating : ನಿಮಗೂ ಈ ಅಭ್ಯಾಸವಿದ್ರೆ ಇಂದೇ ಎಚ್ಚೆತ್ತುಕೊಳ್ಳಿ

ಗಂಟೆ ಎಂಟಾಯ್ತು, ಊಟಕ್ಕೆ ಬನ್ನಿ ಎಂಬ ಮಾತನ್ನು ನೀವು ಹಳ್ಳಿಗಳಲ್ಲಿ ಕೇಳಿರಬಹುದು. ಮೊದಲು 6 ಗಂಟೆಗೆ ಊಟ ಮುಗಿಸುತ್ತಿದ್ದ ಜನರು ಈಗ 10 ಗಂಟೆಯಾದ್ರೂ ತಟ್ಟೆ ಮುಂದೆ ಬರುವುದಿಲ್ಲ. ಈ ತಡರಾತ್ರಿಯ ಊಟ ನಿಮ್ಮ ಆರೋಗ್ಯವನ್ನು ಸದ್ದಿಲ್ಲದೆ ಹಾಳು ಮಾಡುತ್ತದೆ ಎಂಬುದು ನಿಮಗೆ ಗೊತ್ತಾ?
 

Side Effects Of eating late at night

ಜನರ ಜೀವನ ಶೈಲಿ (Lifestyle) ಬದಲಾಗಿದೆ. ರಾತ್ರಿ (Night) 8 ಗಂಟೆ ನಂತ್ರ ಕೆಲವರ  ಕೆಲಸ (Work )ಶುರುವಾಗುತ್ತೆ. ಊಟ(Meals),ನಿದ್ರೆ (Sleep)ಗೆ ಸರಿಯಾದ ಸಮಯವಿಲ್ಲ. ನಗರ ಪ್ರದೇಶಗಳಲ್ಲಿ ರಾತ್ರಿ 11 ಗಂಟೆಯಾದ್ರೂ ಊಟ ಮಾಡುವುದಿಲ್ಲ. ಕೆಲಸದ ಕಾರಣ ಕೆಲವರು ಊಟವನ್ನು ತಡ ಮಾಡಿದ್ರೆ ಮತ್ತೆ ಕೆಲವರಿಗೆ ಇದು ಅಭ್ಯಾಸ. ಮನೆಯಲ್ಲಿದ್ದರೂ ಅವರು ಬೇಗ ಊಟ ಮುಗಿಸುವುದಿಲ್ಲ. ತಡರಾತ್ರಿ ಊಟ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದ್ರಿಂದ ಸಾಕಷ್ಟು ನಷ್ಟಗಳನ್ನು ನೀವು ಎದುರಿಸಬೇಕಾಗುತ್ತದೆ. ತಡವಾಗಿ ಆಹಾರ ಸೇವನೆ ಮಾಡುವುದ್ರಿಂದ ತೂಕ ಹೆಚ್ಚಾಗುತ್ತದೆ. ಅನೇಕರ ತೂಕ ಏರಿಕೆಗೆ ಕಾರಣ ತಡರಾತ್ರಿ ಊಟವೆಂದ್ರೆ ನಿಮಗೆ ಅಚ್ಚರಿಯಾಗಬಹುದು. ಆದ್ರೆ ಇದು ಸತ್ಯ. ರಾತ್ರಿ ಊಟದ ಸಿಂಡ್ರೋಮಾದಿಂದ ಬಳಲುವ ಜನರು ರಾತ್ರಿ ಊಟದಲ್ಲಿ ಹೆಚ್ಚು ಕಾರ್ಬೋಹೈಡ್ರೇಟ್ ಸೇವನೆ ಮಾಡ್ತಾರೆ. ಆಹಾರದಲ್ಲಿ ಕೊಬ್ಬಿನ ಅಂಶ ಹೆಚ್ಚಿರುತ್ತದೆ. ರಾತ್ರಿ ತಡವಾಗಿ ಆಹಾರ ಸೇವನೆ ಮಾಡುವುದ್ರಿಂದ ಏನೆಲ್ಲ ನಷ್ಟವಿದೆ ಎಂಬುದನ್ನು ನಾವಿಂದು ಹೇಳ್ತೀವಿ. 

ತಡರಾತ್ರಿ ಊಟದಿಂದಾಗುವ ನಷ್ಟಗಳು 

ತೂಕ ಏರಿಕೆ : ಪ್ರತಿ ದಿನ ವ್ಯಾಯಾಮ, ಡಯಟ್ ಪಾಲನೆ ಮಾಡ್ತಿರುವ ಕೆಲವರಲ್ಲಿ ತೂಕ ನಿಯಂತ್ರಣ ಸಾಧ್ಯವಾಗುವುದಿಲ್ಲ. ಅದಕ್ಕೆ ಊಟದ ಸಮಯ ಕಾರಣವಾಗುತ್ತದೆ. ರಾತ್ರಿ ತಡವಾಗಿ ಆಹಾರ ಸೇವನೆ ಮಾಡಿದ್ರೆ ತೂಕ ಹೆಚ್ಚಾಗುತ್ತದೆ. ತೂಕ ಏರಿಕೆಯಿಂದ ಅನೇಕ ಆರೋಗ್ಯ  ಸಮಸ್ಯೆಗಳು ಕಾಡಲು ಶುರುವಾಗುತ್ತವೆ. ಹಾಗಾಗಿ ರಾತ್ರಿಯ ಊಟವನ್ನು ಯಾವಾಗಲೂ ಸಮಯಕ್ಕೆ ಸರಿಯಾಗಿ ಮಾಡಬೇಕು. ನೀವು ತೂಕ ಇಳಿಸಿಕೊಳ್ಳುವ ಹಂಬಲದಲ್ಲಿದ್ದರೆ ಇಂದಿನಿಂದಲೇ ಸಮಯಕ್ಕೆ ಸರಿಯಾಗಿ ರಾತ್ರಿಯ ಊಟ ಮಾಡಿ. ಸಂಜೆ 6 ಗಂಟೆಯೊಳಗೆ ಊಟ ಮುಗಿಸುವುದು ಸೂಕ್ತವೆಂದು ತಜ್ಞರು ಹೇಳ್ತಾರೆ. ಅದು ಸಾಧ್ಯವಿಲ್ಲ ಎನ್ನುವವರು ರಾತ್ರಿ 8 ಗಂಟೆಯೊಳಗೆ ಊಟ ಮುಗಿಸಿ. ಹೀಗೆ ಮಾಡುವುದರಿಂದ ಅನೇಕ ಆರೋಗ್ಯ ಲಾಭಪಡೆಯಬಹುದು.

ಮೆದುಳಿಗೆ ಹಾನಿ : ತಡರಾತ್ರಿ ಆಹಾರ ಸೇವನೆ ಮೆದುಳಿನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಇತ್ತೀಚಿನ ದಿನಗಳಲ್ಲಿ ನಡೆದ ಹಲವು ಸಂಶೋಧನೆಗಳ ಪ್ರಕಾರ, ತಡರಾತ್ರಿಯಲ್ಲಿ ಆಹಾರ ಸೇವಿಸುವುದರಿಂದ ಅನೇಕ ಅನಾರೋಗ್ಯದ ಸಮಸ್ಯೆ ಕಾಡುತ್ತದೆ.  ಇದು ನಿಮ್ಮ ಗಮನ ಮತ್ತು ನೆನಪಿನ ಶಕ್ತಿ ಮೇಲೆ ಪ್ರಭಾವ ಬೀರುತ್ತದೆ. ನೆನಪಿನ ಶಕ್ತಿ ಸಾಮರ್ಥ್ಯ ಇದರಿಂದ ಕಡಿಮೆಯಾಗುವ ಅಪಾಯವಿದೆ.

ಆಸಿಡ್ ರಿಫ್ಲಕ್ಸ್ : ತಡರಾತ್ರಿ ಆಹಾರ ಸೇವನೆ ಮಾಡುವುದ್ರಿಂದ ಹೆಚ್ಚಿನ ಸಮಯ ಸಿಗುವುದಿಲ್ಲ. ಹಾಗಾಗಿ ಆಹಾರ ಸೇವನೆ ಮಾಡಿದ ತಕ್ಷಣ ಮಲಗುತ್ತಾರೆ. ನಿಮಗೂ ಈ ಅಭ್ಯಾಸವಿದ್ದರೆ ಎಚ್ಚರದಿಂದಿರಿ. ಹೀಗೆ ಮಾಡುವುದರಿಂದ ಹೃದಯದಲ್ಲಿ ನೋವು, ಅಸಿಡಿಟಿ, ಎದೆಯ ಮಧ್ಯದಲ್ಲಿ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

Early Death: ಈ ಲಕ್ಷಣವಿದ್ದರೆ ಅಕಾಲಿಕ ಮರಣದ ಅಪಾಯ ಇರಬಹುದು

ಜಂಕ್ ಫುಡ್ ನಿಂದ ದೂರವಿರಿ : ರಾತ್ರಿ ಆಹಾರ ಸೇವನೆ ಅನಿವಾರ್ಯ ಎನ್ನುವವರು ಎಂದಿಗೂ ಜಂಕ್ ಫುಡ್ ಸೇವನೆ ಮಾಡಬೇಡಿ.  ರಾತ್ರಿಯಲ್ಲಿ ಜಂಕ್ ಫುಡ್ ಸೇವಿಸಿದ್ರೆ ಸರಿಯಾಗಿ ಜೀರ್ಣವಾಗುವುದಿಲ್ಲ. ಒಂದು ವೇಳೆ ನೀವು ಬೇಗ ಜಂಕ್ ಫುಡ್ ಸೇವನೆ ಮಾಡಿದ್ದರೆ,ರಾತ್ರಿ ಮಲಗುವ ಸಮಯಕ್ಕೆ ಹಸಿವಾಗುತ್ತದೆ. ಇದ್ರಿಂದ ನಿದ್ರೆ ಸರಿಯಾಗುವುದಿಲ್ಲ. 

ಮಧುಮೇಹದ ಅಪಾಯ : ಇತ್ತೀಚಿಗೆ ನಡೆದ ಸಂಶೋಧನೆ ಪ್ರಕಾರ, ತಡರಾತ್ರಿ ಆಹಾರ ಸೇವನೆ ಮಾಡುವುದ್ರಿಂದ ಮಧುಮೇಹದ ಅಪಾಯ ಹೆಚ್ಚಾಗುತ್ತದೆ. ರಕ್ತದ ಮೆಲಟೋನಿನ್ ಮಟ್ಟವು 2.5 ಪಟ್ಟು ಹೆಚ್ಚಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆ.  

HEALTH TIPS: ಮೊಟ್ಟೆ V/S ಪನೀರ್, ತೂಕ ನಷ್ಟಕ್ಕೆ ಯಾವುದು ಉತ್ತಮ ?

ಬಹುಬೇಗ ಆಹಾರ ಸೇವನೆ : ತಡರಾತ್ರಿ ಆಹಾರ ಸೇವನೆ ಮಾಡಬಾರದು ಎಂಬ ಕಾರಣಕ್ಕೆ ಬಹುಬೇಗ ಆಹಾರ ಸೇವನೆ ಮಾಡುವುದು ಕೂಡ ಒಳ್ಳೆಯದಲ್ಲ. ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡಬೇಕು. ರಾತ್ರಿ ಕಡಿಮೆ ಆಹಾರ ಸೇವನೆ ಮಾಡಿದ್ರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. 

Latest Videos
Follow Us:
Download App:
  • android
  • ios