ನಾವು ಯಾವಾಗ ಮಾಸ್ಕ್ ಧರಿಸುವುದನ್ನು ಬಿಡಬಹುದು? ಆ ಕಾಲ ಹತ್ತಿರದಲ್ಲಿದೆಯಾ? ಎರಡೂ ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡ್ರೆ ಮಾಸ್ಕ್‌ನಿಂದ ಮುಕ್ತಿಯೇ?

ತುಂಬಾ ಮಂದಿ ಹೀಗೊಂದು ಪ್ರಶ್ನೆಯನ್ನು ಕೇಳುತ್ತಿದ್ದಾರೆ. ನಾನು ಒಂದನೇ ಡೋಸ್ ಲಸಿಕೆ ಹಾಕಿಸಿಕೊಂಡಿದ್ದೇನೆ, ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡಿದ್ದೇನೆ, ನಾನು ಇನ್ನೂ ಮಾಸ್ಕ್ ಹಾಕಿಕೊಳ್ಳಬೇಕೇ ಎಂಬ ಪ್ರಶ್ನೆ. ಈ ಸಂದೇಹಕ್ಕೆ ಉತ್ತರ ಇಲ್ಲಿದೆ.

ಮೊದಲನೇ ಡೋಸ್

ಮೊದಲ ಡೋಸ್ ಹಾಕಿಸಿಕೊಂಡವರು ಸಾರ್ವಜನಿಕ ಪ್ರದೇಶದಲ್ಲಿ ಓಡಾಡುವಾಗ ಲಸಿಕೆ ಧರಿಸಲೇ ಬೇಕು. ತೆಗೆಯುವಂತಿಲ್ಲ. ಯಾಕೆಂದರೆ ಇನ್ನೂ ನಿಮ್ಮ ದೇಹದಲ್ಲಿ ಕೋವಿಡ್‌ಗೆ ಪ್ರತಿರೋಧ ಶಕ್ತಿ ಉತ್ಪತ್ತಿ ಆಗಿರುವುದಿಲ್ಲ.

ಎರಡನೇ ಡೋಸ್

ಎರಡನೇ ಡೋಸ್ ಲಸಿಕೆ ಹಾಕಿಸಿಕೊಂಡವರೂ ಸಾರ್ವಜನಿಕ ಪ್ರದೇಶದಲ್ಲಿ ಓಡಾಡುವಾಗ, ಗುಂಪಿನಲ್ಲಿ ಇರುವಾಗ ಮಾಸ್ಕ್ ಧರಿಸಬೇಕು. ಎರಡನೇ ಡೋಸ್ ಲಸಿಕೆ ಹಾಕಿಸಿಕೊಂಡ ಎರಡು ವಾರದ ಬಳಿಕ ನಿಮ್ಮ ದೇಹದಲ್ಲಿ ಕೊರೋನಾ ವೈರಸ್‌ಗೆ ಪ್ರತಿಕಾಯಗಳು ಹುಟ್ಟಿಕೊಂಡಿರುತ್ತವೆ. ಎರಡನೇ ಡೋಸ್ ಲಸಿಕೆಯಲ್ಲಿರುವ ದುರ್ಬಲ ರೋಗಾಣು ಆರ್‌ಎನ್‌ಎಯು, ನಿಮ್ಮ ರಕ್ತದಲ್ಲಿ ಬಿಳಿ ಕಣಗಳನ್ನು ಪ್ರೇರೇಪಿಸಿ, ಅವುಗಳ ವಿರುದ್ಧ ಹೋರಾಡುವಂತೆ ಮಾಡಿ, ದೇಹವನ್ನು ಮುಂದೆ ಬರಬಲ್ಲ ಸೋಂಕಿಗೆ ತಯಾರಾಗಿಸಿ ಇಟ್ಟಿರುತ್ತದೆ. ಈ ಪ್ರತಿಕಾಯಗಳು ಉತ್ಪತ್ತಿಯಾಗಲು ಎರಡನೇ ಡೋಸ್ ತೆಗೆದುಕೊಂಡು ಎರಡು ವಾರಗಳಾದರೂ ಬೇಕು. ಅಲ್ಲಿಯವರೆಗೂ ಮಾಸ್ಕ್ ತೆಗೆಯದಿರಿ.

ನಂತರ ತೆಗೆಯಬಹುದೆ?

ನೀವು ಸಣ್ಣ ಗುಂಪುಗಳಲ್ಲಿದ್ದಾಗ ತೆಗೆಯಬಹುದು. ನಿಮ್ಮ ಸುತ್ತಮುತ್ತ ಇರುವವರೆಲ್ಲರೂ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಗ್ಯಾರಂಟಿ ಆಗಿದ್ದರೆ, ಆಗ ತೆಗೆಯಬಹುದು. ನಿಮ್ಮ ಮನೆಯಲ್ಲಿ, ನಿಮ್ಮ ಕುಟುಂಬದವರೆಲ್ಲ ವ್ಯಾಕ್ಸಿನೇಶನ್ ಮಾಡಿಸಿಕೊಂಡಿದ್ದರೆ ತೆಗೆಯಬಹುದು. ಆದರೆ ಹೊರಗೆ ಓಡಾಡುವಾಗ, ಮಾಸ್ಕ್‌ ಇಲ್ಲದೆ ಓಡಾಡುವ ಅವಕಾಶವನ್ನು ಇನ್ನೂ ನಮ್ಮ ಸರಕಾರಗಳು ನಮಗೆ ನೀಡಿಲ್ಲ. ಬಹುತೇಕ ನಮ್ಮ ಜನಸಂಖ್ಯೆ ಶೇ.80 ಜನರು ಲಸಿಕೆ ಹಾಕಿಸಿಕೊಳ್ಳುವವರೆಗೂ ಮಾಸ್ಕ್ ಧರಿಸುವ ನಿಮಯದಲ್ಲಿ ಸಡಿಲಿಕೆ ಬರಲಾರದು. ಹೀಗಾಗಿ ಹೊರಗೆ ಮಾಸ್ಕ್ ಹಾಕುವುದೇ ಉತ್ತಮ.

ಉಸಿರಾಟದ ತೊಂದರೆ ಕಾಣಿಸಿದರೆ ‘ಪ್ರೋನಿಂಗ್‌’ವ್ಯಾಯಾಮ ಮಾಡಿ! ...

ನನಗೆ ಕೋವಿಡ್ ಬಂದು ಹೋಗಿದೆ...

ನಿಮಗೆ ಈಗಾಗಲೇ ಕೋವಿಡ್ ಬಂದು ನೀವು ಗುಣಮುಖರಾಗಿದ್ದರೆ, ನಿಮ್ಮಲ್ಲಿ ಕೋವಿಡ್‌ಗೆ ಪ್ರತಿರೋಧ ಶಕ್ತಿ ಬೆಳೆದಿದೆ ಎಂದು ಅರ್ಥ. ಆದರೆ, ಒಮ್ಮೆ ಬಂದವರಿಗೆ ಮತ್ತೊಮ್ಮೆ ಕೋವಿಡ್ ಬರಬಾರದು ಎಂದೇನೂ ಇಲ್ಲ. ತುಂಬ ಮಂದಿಗೆ ಕೋವಿಡ್ ಹೀಗೆ ಅಟಕಾಯಿಸಿದೆ. ಆದ್ದರಿಂದ ಮಾಸ್ಕ್ ಸುರಕ್ಷತೆ ಇರಲಿ.

ಇಸ್ರೇಲ್‌ನಲ್ಲಿ ಮಾಸ್ಕ್ ಇಲ್ಲವಂತೆ?

ಹೌದು, ಇಸ್ರೇಲ್‌ನಲ್ಲಿ ಈಗ ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಧರಿಸದೆ ಓಡಾಡಬಹುದು. ಆದರೆ ನೀವು ಸಂಪೂರ್ಣ ವ್ಯಾಕ್ಸಿನೇಶನ್‌ ಮಾಡಿಸಿಕೊಂಡಿರಬೇಕು. ಇಲ್ಲಿ ಶೇ.೬೦ಕ್ಕೂ ಹೆಚ್ಚು ಮಂದಿ ಎರಡೂ ಡೋಸ್ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಹೀಗಾಗಿ ಇಲ್ಲಿ ಎರಡನೇ ಅಲೆಯ ಕೋವಿಡ್ ಯಾವುದೇ ಹೆಚ್ಚಿನ ಹಾವಳಿ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಇಲ್ಲಿನ ಸರಕಾರ ನಿಯಮವನ್ನು ಸಡಿಲಿಸಿದೆ. ಅಮೆರಿಕದಲ್ಲೂ ಕೂಡ ಲಸಿಕೆ ಅಭಿಯಾನ ವ್ಯಾಪಕವಾಗಿ ನಡೆಯುತ್ತಿದೆ. ಅಲ್ಲೂ ನಿಯಮವನ್ನು ಸಡಿಲಿಸುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ.

ವೈದ್ಯರ ಸಲಹೆ, ಪ್ರೋನಿಂಗ್ ಮೂಲಕ ಮನೆಯಲ್ಲೇ ಕೊರೋನಾ ಸೋಲಿಸಿದ 82ರ ವೃದ್ಧೆ ...

ಮಾಸ್ಕ್ ಮತ್ತು ಅಂತರ

ಸಾರ್ವಜನಿಕ ಪ್ರದೇಶಗಳಲ್ಲಿ ಜನಜಂಗುಳಿ ಇರುವಲ್ಲಿ ನೀವು ಓಡಾಡುತ್ತಿದ್ದರೆ, ನೀವು ಮಾಸ್ಕ್ ಧರಿಸಿದ್ದರೆ ಬೇರೊಬ್ಬ ವ್ಯಕ್ತಿಯಿಂದ ಕನಿಷ್ಠ ಐದು ಅಡಿ ದೂರದಲ್ಲಿರಬೇಕು. ನೀವು ಅಥವಾ ಎದುರಿನ ವ್ಯಕ್ತಿ ಮಾಸ್ಕ್ ಧರಿಸಿಲ್ಲದಿದ್ದರೆ ಕನಿಷ್ಠ ಆರು ಅಡಿ ದೂರದಲ್ಲಿರಿ. ಎರಡನೇ ಅಲೆಯಲ್ಲಿ ಹಬ್ಬುತ್ತಿರುವ ಮ್ಯುಟೆಂಟ್ ವೈರಸ್, ವ್ಯಕ್ತಿಯ ಕೆಮ್ಮು- ಸೀನು- ಉಗುಳಿನ ಕಣಗಳ ಮೂಲಕ ಹೊರಬಂದು ಗಾಳಿಯಲ್ಲಿ ಹಬ್ಬುತ್ತಿದೆ. ಒಮ್ಮೆ ಅದು ನೆಲಕ್ಕೆ ಬಿದ್ದ ಮೇಲೆ ಅದು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಗಾಳಿಯಲ್ಲಿರುವ ವೈರಸ್‌ಗೆ ರಭಸ ಇರುವುದಿಲ್ಲವಾದರೂ ಮಾಸ್ಕ್‌ ಧರಿಸದಿದ್ದರೆ ನಮ್ಮ ಉಸಿರಾಟದ ಮೂಲಕ ಒಳಗೆ ಹೋಗುತ್ತದೆ.

ಬಹುತೇಕ ಕೊರೋನಾ ಯುದ್ಧ ಗೆದ್ದ ಇಸ್ರೇಲ್‌! ...

ಹೀಗಾಗಿ ಮಾಸ್ಕ್ ಧಾರಣೆ ಮತ್ತು ಸಾಮಾಜಿಕ ಅಂತರಗಳು ಕೊರೊನಾ ಎದುರಿಸುವಲ್ಲಿ ಎರಡು ಪ್ರಧಾನ ಅಸ್ತ್ರಗಳು. ಮಾಸ್ಕ್ ಇದೆ ಎಂದು ಸಾಮಾಜಿಕ ಅಂತರವನ್ನು ಮರೆಯುವಂತಿಲ್ಲ. ಅಂತರ ಇದೆ ಎಂದು ಮಾಸ್ಕ್ ಅನ್ನೂ ಮರೆಯುವಂತಿಲ್ಲ.