Asianet Suvarna News Asianet Suvarna News

ಶೇನ್ ವಾರ್ನ್ ಪ್ರಾಣ ತೆಗೆಯಿತಾ ಅವರ Liquid Diet?

ಸ್ಪಿನ್ ಬೌಲರ್ ಶೇನ್ ವಾರ್ನ್ ಸಾಯುವುದಕ್ಕೆ ಮುನ್ನ ಎರಡು ವಾರಗಳಿಂದ ಲಿಕ್ವಿಡ್ ಡಯಟ್‌ನಲ್ಲಿ ಇದ್ದರು. ಇದೇ ಅವರ ಸಾವಿಗೆ ಕಾರಣವಾಯಿತಾ?
 

Shane Warnes extreme liquid diet one of the reasons behind his death
Author
First Published Mar 10, 2022, 6:25 PM IST

ಆಸ್ಟ್ರೇಲಿಯದ ಲೆಜೆಂಡರಿ ಕ್ರಿಕೆಟಿಗ (Cricketer), ಲೆಗ್ ಸ್ಪಿನ್‌ (Leg Spin) ನಲ್ಲಿ ಇತಿಹಾಸ ಬರೆದ ಶೇನ್ ವಾರ್ನ್ (Shane Warne) ಕೇವಲ 52 ವರ್ಷ ವಯಸ್ಸಿನಲ್ಲಿ ಕಳೆದ ವಾರ ನಿಧನರಾದರು. ಥಾಯ್ಲೆಂಡ್ (Thailand) ಪೊಲೀಸರು ನಡೆಸಿದ ಶವಪರೀಕ್ಷೆ ಪ್ರಕಾರ, ನೈಸರ್ಗಿಕ ಕಾರಣಗಳಿಂದ ಅವರು ಸತ್ತಿದ್ದಾರೆ. ಆದರೆ, ಸ್ಪಿನ್ ಮಾಸ್ಟರ್ ತೀವ್ರ ಲಿಕ್ವಿಡ್ ಡಯಟ್ (ದ್ರವ ಆಹಾರ ಮಾತ್ರ) (Liquid Diet) ಪಾಲಿಸುತ್ತಿದ್ದರು ಅಂತ ಗೊತ್ತಾಗಿದೆ. ಇದೇ ಅವರ ಸಾವಿಗೆ ಕಾರಣವಾಯಿತಾ ಎಂಬುದು ಈಗ ಹೆಲ್ತ್ ಎಕ್ಸ್‌ಪರ್ಟ್‌ಗಳ (Health Experts) ಮಧ್ಯೆ ಚರ್ಚೆಯ ವಿಷಯ. 

ಶೇನ್ ವಾರ್ನ್ ಅವರಿಗೆ ಕಳೆದ ಕೆಲ ವರ್ಷಗಳಿಂದ ಹೆಚ್ಚುತ್ತಿದ್ದ ತಮ್ಮ ದೇಹತೂಕದ ಬಗ್ಗೆ ಹೆಚ್ಚಿನ ಕಳವಳ ಇತ್ತು. ಇದಕ್ಕೆ ಅವರು ಆಹಾರ ತಜ್ಞರಿಂದ ಸಲಹೆ ಪಡೆದು ಲಿಕ್ವಿಡ್ ಡಯಟ್ ಆರಂಭಿಸಿದ್ದರು. ತಮ್ಮ ಒಂದು ಚಿತ್ರವನ್ನು ಟ್ವಿಟ್ಟರ್‌ (Twitter) ನಲ್ಲಿ ಹಂಚಿಕೊಂಡು, "ಆಪರೇಷನ್ ಷ್ರೆಡ್ ಪ್ರಾರಂಭವಾಗಿದೆ. ಜುಲೈ ವೇಳೆಗೆ ಹಲವು ವರ್ಷಗಳ ಹಿಂದಿನ ನನ್ನ ಆಕಾರಕ್ಕೆ ಮರಳಲಿದ್ದೇನೆ!" ಎಂದು ಬರೆದುಕೊಂಡಿದ್ದರು. 

ಈ ಹಿಂದೆಯೂ ಅವರು ಲಿಕ್ವಿಡ್ ಡಯಟ್ ಮಾಡಿದ್ದುಂಟು. ಆದರೆ ಈ ಬಾರಿ ಅವರು ಕೋವಿಡ್‌ (Covid 19) ನಿಂದ ಚೇತರಿಸಿಕೊಂಡಿದ್ದರು. ಹೀಗಾಗಿ ಅವರ ಇಮ್ಯುನಿಟಿ (Immunity) ದುರ್ಬಲವಾಗಿತ್ತು. ಅದೇ ಹಂತದಲ್ಲಿ ಅವರು ಲಿಕ್ವಿಡ್ ಡಯಟ್ ಕೈಗೆತ್ತಿಕೊಂಡಿದ್ದರು. ವಾರ್ನ್ ಅವರ ದೀರ್ಘಾವಧಿಯ ಮ್ಯಾನೇಜರ್ ಜೇಮ್ಸ್ ಎರ್ಸ್ಕಿನ್ ಅವರು, ಶೇನ್ ತೂಕ ಇಳಿಸಿಕೊಳ್ಳಲು ಮತ್ತು ಸಂಪೂರ್ಣ ಫಿಟ್ನೆಸ್ (Fitness) ಅನ್ನು ಮರಳಿ ಪಡೆಯಲು ಬಯಸುತ್ತಿರುವ ಕಾರಣ ಡಯಟ್ ಮಾಡುತ್ತಿದ್ದಾರೆ ಎಂದು ಹೇಳಿದ್ದರು. ಸಾವಿನ ಸಮಯದಲ್ಲಿ ಶೇನ್ ಥಾಯ್ಲೆಂಡ್ ಪ್ರವಾಸದಲ್ಲಿದ್ದರು. ಥಾಯ್ಲೆಂಡ್‌ನ ವಿಲ್ಲಾ (Villa) ದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದರು. 

World Kidney Day 2022: ನಿಮ್ಮ ಕಿಡ್ನಿಗಳನ್ನು ಹ್ಯಾಪಿಯಾಗಿಡುವುದು ಹೇಗೆ?

ಲಿಕ್ವಿಡ್ ಡಯಟ್ ಯಾವುದು?
ಶೇನ್ ವಾರ್ನ್ ಅವರ ಮ್ಯಾನೇಜರ್ ಪ್ರಕಾರ, ಅವರು 14 ದಿನಗಳ ದ್ರವ ಆಹಾರದಲ್ಲಿದ್ದರು. ಅದು ಕೇವಲ ದ್ರವಗಳನ್ನು ಒಳಗೊಂಡಿತ್ತು ಮತ್ತು ಯಾವುದೇ ಘನ ಆಹಾರವಿರಲಿಲ್ಲ. ಅವರು ನಿಧನ ಹೊಂದಿದ ವಾರ ವಾರ್ನ್ ವಿಪರೀತ ಬೆವರುತ್ತಿದ್ದರು.

ಕೇವಲ ದ್ರವ ಆಹಾರಗಳ ಗುರಿ ಎಂದರೆ, ದೇಹದಲ್ಲಿ ಮತ್ತೆ ಕ್ಯಾಲೊರಿ (Calorie) ಸೇರದಂತೆ ತಡೆಗಟ್ಟುವುದು. ಕೇವಲ ವಿಟಮಿನ್‌ (Vitamins) ನಂಥ ಪೋಷಕಾಂಶಗಳು ದೇಹಕ್ಕೆ ಸೇರುವಂತೆ ಹಾಗೂ ಅನಗತ್ಯ ಕಾರ್ಬೋ (Carbohydrates) ಇತ್ಯಾದಿಗಳು ದೇಹಕ್ಕೆ ಹೋಗದಂತೆ ಈ ಡಯಟ್ ನೋಡಿಕೊಳ್ಳುತ್ತದೆ. ಅಂದರೆ ಒಂದು ಹಂತದ ಕ್ಯಾಲೋರಿ ಕೊರತೆಯನ್ನು ಉಂಟುಮಾಡುತ್ತದೆ. ಈ ಡಯಟ್ ಅನ್ನು ಅವರು ೧೪ ದಿನಗಳಿಂದ ನಡೆಸುತ್ತಿದ್ದರು. 

ಹೆಚ್ಚಾಗಿ ಜ್ಯೂಸ್ (Juice), ಕಪ್ಪು ಮತ್ತು ಹಸಿರು ರಸ, ಕೆಲವೊಮ್ಮೆ ಬೆಣ್ಣೆ ಮತ್ತು ಲಸಾಂಜ ಸೇರಿಸಿದ ಬಿಳಿ ಬನ್‌ಗಳನ್ನು ತೆಗೆದುಕೊಳ್ಳುತ್ತಿದ್ದರು. ಶೇನ್ ತಮ್ಮ ಜೀವನದ ಬಹುಪಾಲು ಧೂಮಪಾನ (Smoking) ಮಾಡಿದ್ದರು. ಆದರೆ ಲಿಕ್ವಿಡ್ ಡಯಟ್‌ನ ಸಂದರ್ಭದಲ್ಲಿ ಅದನ್ನು ಬಿಟ್ಟಿದ್ದರೋ ಇಲ್ಲವೋ ತಿಳಿಯದು. ಶೇನ್ ಹಲವು ವರ್ಷಗಳಿಂದ ತೂಕದ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದರು. ಆದರೆ ಬಾಡಿ ವೇಯ್ಟ್ (Body Weight) ಕಡಿಮೆ ಮಾಡುವ ಸಪ್ಲಿಮೆಂಟ್ಸ್ ತೆಗೆದುಕೊಳ್ಳಲು ಒಪ್ಪುತ್ತಿರಲಿಲ್ಲ. 

Health Alert: ಆರೋಗ್ಯದಲ್ಲಿ ಈ ರೀತಿ ಏರುಪೇರಾದ್ರೆ ಖಂಡಿತಾ ನಿರ್ಲಕ್ಷಿಸಬೇಡಿ!

ದ್ರವ ಆಹಾರದ ಪರಿಣಾಮ
ದ್ರವ ಆಹಾರಗಳು ಹೆಚ್ಚಾಗಿ ಖನಿಜಗಳು (Minerals) ಮತ್ತು ವಿಟಮಿನ್‌ಗಳನ್ನು ಸಮೃದ್ಧಗೊಳಿಸುವ, ಪ್ರೋಟೀನ್‌ (Protiene) ಗಳು ಮತ್ತು ಕೊಬ್ಬನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಜ್ಯೂಸ್‌ಗಳನ್ನು ಒಳಗೊಂಡಿರುತ್ತವೆ. ಇದರಲ್ಲಿ ಫೈಬರ್ ಕೂಡ ಇರುವುದಿಲ್ಲ. ಇದನ್ನು ವಾರದಲ್ಲಿ ಒಂದು ಅಥವಾ ಎರಡು ದಿನ ಆಚರಿಸಿದರೆ ಸಾಕು ಎಂದು ತಜ್ಞರು ಹೇಳುತ್ತಾರೆ. ಯಾಕೆಂದರೆ ದೇಹಕ್ಕೆ ಕೊಬ್ಬು, ಪ್ರೊಟೀನ್ ಸೇರಿದಂತೆ ಎಲ್ಲಾ ಪೋಷಕಾಂಶಗಳ ಸಮತೋಲನ ಬೇಕು. ಸಮತೋಲನ ಇಲ್ಲದ ಆಹಾರವು ದೀರ್ಘಾವಧಿಯಲ್ಲಿ ಪರಿಣಾಮಕಾರಿಯಾಗುವುದಿಲ್ಲ. ಮಿತಿಮೀರಿದ ಒಂದೇ ಬಗೆಯ ಡಯಟ್ ರಕ್ತಹೀನತೆಗೆ ಕಾರಣವಾಗಬಹುದು, ಸ್ನಾಯುವಿನ ಗಟ್ಟಿತನವನ್ನು ಕಡಿಮೆ ಮಾಡುತ್ತದೆ ಮತ್ತು ಒಳಅಂಗಗಳು ಸಾಮಾನ್ಯಕ್ಕಿಂತ ಹೆಚ್ಚು ಕೆಲಸ ಮಾಡಲು ಒತ್ತಾಯಿಸುತ್ತದೆ.

Mysore Queen Trishika: ಮೈಸೂರು ಮಹಾರಾಣಿ ತ್ರಿಶಿಕಾ ಲೈಫ್‌ಸ್ಟೈಲ್‌ ಹೇಗಿದೆ?

ಲಿಕ್ವಿಡ್ ಡಯಟ್‌ಗೆ ಅನೇಕ ಅಡ್ಡಪರಿಣಾಮಗಳಿವೆ. ತಲೆನೋವು, ತಲೆತಿರುಗುವಿಕೆ, ತೀವ್ರ ಆಯಾಸ, ಅತಿಸಾರ ಅಥವಾ ಮಲಬದ್ಧತೆ (piles) ಇತ್ಯಾದಿ. ಆರೋಗ್ಯ ತಜ್ಞರು ಇದರ ಬದಲಾಗಿ ಸಾಕಷ್ಟು ಹಣ್ಣುಗಳು (Fruits), ತರಕಾರಿಗಳು (Vegetables), ಧಾನ್ಯಗಳು, ಬೀನ್ಸ್, ಬೀಜಗಳನ್ನು ಒಳಗೊಂಡಂತೆ ವೈವಿಧ್ಯಮಯ ಮತ್ತು ಸಮತೋಲಿತ ಆಹಾರವನ್ನು ಶಿಫಾರಸು ಮಾಡುತ್ತಾರೆ. ಜೊತೆಗೆ ದಿನವಿಡೀ ಸಕ್ರಿಯವಾಗಿರಲು ಸೂಚಿಸುತ್ತಾರೆ. 
ಕಳೆದ ವರ್ಷ ಶೇನ್ ಕೋವಿಡ್ ಪೀಡಿತರಾಗಿದ್ದರು. ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಕಳೆದ ವರ್ಷ ಆಗಸ್ಟ್‌ನಲ್ಲಿ ಅವರಿಗೆ ಎರಡನೇ ಬಾರಿ ಲಸಿಕೆ ಹಾಕಲಾಗಿತ್ತು

Follow Us:
Download App:
  • android
  • ios