Asianet Suvarna News Asianet Suvarna News

ಬಾಣಂತನದಲ್ಲಿ ಉದರೋ ಕೂದಲು: ಮದ್ದಿಲ್ಲಿದೆ...

ಮಗುವಿಗೆ ಜನ್ಮ ನೀಡಿದ ತಾಯಿಗೆ ಕೂದಲು ಉದುರುವ ಸಮಸ್ಯೆ ಕಾಡುವುದು ಸಹಜ. ಅಲ್ಲಲ್ಲಿ ಬೊಕ್ಕ ತಲೆಯಾದಂತೆ ಆಗುವುದೂ ಇದೆ. ಅದಕ್ಕೆ ಈ ಸಿಂಪಲ್ ಮನೆ ಮದ್ದು ದಿವ್ಯೌಷಧಿ ಆಗಬಲ್ಲದು...

Reason for hair loss during pregnancy
Author
Bengaluru, First Published Mar 8, 2019, 3:46 PM IST

ಮಗು ಜನಿಸಿದ ನಂತರ ಸಾಮಾನ್ಯವಾಗಿ ಅಮ್ಮನ ಕೂದಲು ಉದರಲು ಆರಂಭವಾಗುತ್ತದೆ. ಕೆಲವರಿಗೆ ಸ್ವಲ್ಪ ಕೂದಲು ಉದುರಿದರೆ, ಇನ್ನು ಕೆಲವರಿಗೆ ಹೆಚ್ಚಿನ ಪ್ರಮಾಣದ ಕೂದಲು ಉದುರುತ್ತದೆ. ಈ ಸಮಸ್ಯೆ ನಿವಾರಣೆಗೆ ಇಲ್ಲಿದೆ ಪರಿಹಾರ... 

ಮೊಟ್ಟೆ ಬಿಳಿ ಭಾಗ: ಆಲಿವ್ ಎಣ್ಣೆಗೆ ಮೊಟ್ಟೆ ಬಿಳಿ ಭಾಗವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ, ಕೂದಲಿಗೆ ಹಚ್ಚಿ. ಇದರಿಂದ ಕೂದಲು ಸಾಫ್ಟ್ ಆಗುತ್ತದೆ. ಜೊತೆಗೆ ಕೂದಲು ಉದರುವುದೂ ಕಡಿಮೆಯಾಗುತ್ತದೆ. 

ಮೆಂತೆ: ಮೆಂತೆ ಹಲವು ವಿಧಗಳಲ್ಲಿ ಕೂದಲ ಬೆಳವಣಿಗೆಗೆ ಸಹಕರಿಸುತ್ತದೆ. ಅದಕ್ಕಾಗಿ ಮೆಂತೆಯನ್ನು ರಾತ್ರಿ ನೀರಲ್ಲಿ ನೆನೆಸಿಡಿ. ಈ ನೀರನ್ನು ಬೆಳಗ್ಗೆ ಎದ್ದು ಕೂದಲಿಗೆ ಹಚ್ಚಿ, ಎರಡು ಗಂಟೆ ನಂತರ ತಲೆ ಸ್ನಾನ ಮಾಡಿ. ಇದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. ಜೊತೆಗೆ ಕೂದಲಿಗೆ ಯಾವುದೇ ಸಮಸ್ಯೆಯೂ ಕಾಡುವುದಿಲ್ಲ. 

ಮೊಸರು : ಮೊಸರನ್ನು ಕೂದಲಿನ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಇದರಿಂದ ತಲೆಹೊಟ್ಟೂ ನಿವಾರಣೆಯಾಗುತ್ತದೆ. ಕೂದಲು ಉದುರುವುದು ನಿಲ್ಲುತ್ತದೆ. 

ಕಾಯಿ ಹಾಲು : ತೆಂಗಿನ ಕಾಯಿಯನ್ನು ಮಿಕ್ಸಿ ಮಾಡಿ ಅದರ ಹಾಲು ತೆಗೆದು ಕೂದಲಿನ ಬುಡಕ್ಕೆ ಹಚ್ಚಿ, ಮಸಾಜ್ ಮಾಡಿ. ಇದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ. 

Follow Us:
Download App:
  • android
  • ios