Asianet Suvarna News Asianet Suvarna News

ಕನಸಿನಲ್ಲಿ ಸ್ತನಗಳು ಕಾಣಿಸಿಕೊಂಡರೇನರ್ಥ?

ಸ್ತನಗಳ ಕನಸು ಬೀಳುವುದು ಲೈಂಗಿಕ ಹಸಿವು ಇರುವವರಿಗೆ ಮಾತ್ರವಲ್ಲ. ಸ್ತನಗಳ ಕನಸಿನ ಅರ್ಥ ನಾನಾ ರೂಪದಲ್ಲಿರಬಹುದು. ಅದಕ್ಕೊಂದು ಮನಶ್ಶಾಸ್ತ್ರೀಯ ವಿವರಣೆಯೂ ಇದೆ. 
 

Psychological explanation of dreaming breasts which is not related with sex
Author
Bengaluru, First Published Sep 11, 2021, 1:15 PM IST
  • Facebook
  • Twitter
  • Whatsapp

ಸ್ತನಗಳು ನಿಮ್ಮ ಕನಸಿನಲ್ಲಿ ಬರಬಹುದು, ಅದೇನೂ ಅಪರೂಪವಲ್ಲ. ಪುರುಷರಿಗೆ ಹೇಗೆ ಚೆಲುವಾದ ಸ್ತ್ರೀಯರ ತುಂಬಿದ ಸ್ತನಗಳ ಕನಸು ಬೀಳುತ್ತದೋ ಹಾಗೇ ಸ್ತ್ರೀಯರಿಗೂ ಸುಪುಷ್ಟವಾದ ಪುರುಷರ ಸ್ತನತೊಟ್ಟಿನ ಕನಸು ಬೀಳಬಹುದು. ಅದೆಲ್ಲಕ್ಕೂ ಅರ್ಥವಿದೆ. ಹಾಗೇ ಮೊಲೆಗಳ ಕನಸು ಬೀಳುವುದು ಒಳ್ಳೆಯ ಶಕುನವೋ ಅಥವಾ ಕೆಟ್ಟ ಶಕುನವೋ ಎಂಬ ಬಗ್ಗೆಯೂ ತಿಳಿಯೋಣ. 

ಸ್ತನಗಳ ಬಗ್ಗೆ ಕನಸು ಕಾಣುವುದರ ಹಿನ್ನೆಲೆಯಲ್ಲಿ ಲೈಂಗಿಕ ಬಯಕೆಯೂ ಇರುತ್ತದೆ; ತಾಯಿಯ ಪ್ರೀತಿಯ ಬಯಕೆಯೂ ಇರುತ್ತದೆ; ಕೆಲವೊಮ್ಮೆ ಸ್ತ್ರೀ ಸ್ವಾತಂತ್ರ್ಯದ ಚಿಂತನೆಯ ಹಿನ್ನೆಲೆಯೂ ಇರುತ್ತದೆ. 

ಶುಭ ಅಥವಾ ಅಶುಭ
- ಯಾವುದೇ ಒಳ್ಳೆಯ ಕೆಲಸಕ್ಕೆ ಹೋಗುವ ಮುನ್ನ ನಿದ್ರೆಯಲ್ಲಿ ಪೂರ್ಣಕುಂಭದಂಥ ತುಂಬಿದ, ಅಲಂಕೃತವಾದ ಸ್ತನಗಳನ್ನು ಕನಸಿನಲ್ಲಿ ಕಾಣುವುದು ಶುಭ ಶಕುನ. ಅನಾರೋಗ್ಯಪೀಡಿತ ಸ್ತನಗಳನ್ನು ಕಂಡರೆ ಅಷ್ಟೇನೂ ಶುಭವಲ್ಲ. 
- ನಿಮ್ಮ ಮಗುವಿಗೆ ನೀವು ಹಾಲುಣಿಸುವ ಕನಸು ಕಂಡರೆ, ಅದು ಒಳ್ಳೆಯ ಸಂಕೇತ. ಸಂತೋಷದ ಜೀವನ, ನಿಮ್ಮ ಆಸೆಗಳನ್ನು ಈಡೇರಲಿವೆ ಮತ್ತು ನಿರಂತರ ಲಾಭವಾಗಲಿದೆ ಎಂಬುದನ್ನು ಸೂಚಿಸುತ್ತದೆ.
- ಪೂರ್ಣ ಮತ್ತು ಆಕರ್ಷಕ ಸ್ತನಗಳ ಕನಸು ಕಾಣುವುದು ಎಂದರೆ ಕನಸುಗಾರ/ಕನಸುಗಾರ್ತಿ ಉತ್ತಮ ಆರೋಗ್ಯದಲ್ಲಿದ್ದಾನೆ/ಳೆ ಮತ್ತು ಸಂತೋಷಕರ ಲೈಂಗಿಕ ಜೀವನವನ್ನು ಹೊಂದಿದ್ದಾನೆ, ಮತ್ತು ಅವನ ಆಸೆಗಳು ಈಡೇರುತ್ತವೆ ಎಂಬುದರ ಸಂಕೇತ. 
- ಸ್ತನಗಳು ತುಂಬಿಕೊಂಡಿರುವುದು ಮತ್ತು ಹಾಲು ಸುರಿಯುವುದರ ಸಂಕೇತ ನೀವು ಭೌತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಶ್ರೀಮಂತರಾಗಿದ್ದೀರಿ ಎಂದು ಸೂಚಿಸುತ್ತದೆ. 

ವೀರ್ಯಗಳ ಗುಣಮಟ್ಟ ಹೆಚ್ಚಿಸಲು ಪುರುಷರು ಮಾಡಬೇಕಾಗಿರೋದೇನು?

ಪುರುಷರಿಗೆ ಸ್ತನದ ಕನಸು ಬಿದ್ದರೆ..
- ಲೈಂಗಿಕವಾಗಿ ಚಟುವಟಿಕೆ ಹೊಂದಿರುವ ಯಾವುದೇ ಪ್ರಾಯದ ಪುರುಷನಿಗೆ ತನ್ನದೇ ಪ್ರಾಯದ ಯುವತಿಯ ಸ್ತನಗಳು ಕಂಡರೆ, ಹಿತವಾದ ಉದ್ರೇಕವಾಗಿದ್ದರೆ ಆತನಿಗೆ ಲೈಂಗಿಕ ಬಯಕೆಯಾಗಿದೆ ಎಂದರ್ಥ.
- ಯಾವುದೇ ಪ್ರಾಯದ ಪುರುಷನಿಗೆ, ತನಗಿಂತ ಹಿರಿಯಳಾದ ಮಹಿಳೆಯ ಸ್ತನಗಳು ಕನಸಿನಲ್ಲಿ ಕಂಡರೆ ಆತ ತಾಯಿಯ ಆರೈಕೆಯ ಬಲವಾದ ಆಂತರಿಕ ಬಯಕೆಯನ್ನು ಹೊಂದಿದ್ದಾನೆ ಎಂದರ್ಥ. ತನಗಿಂತ ಹೆಚ್ಚಿನ ಪ್ರಾಯದ ಹೆಣ್ಣಿನೊಂದಿಗೆ ಸಂಭೋಗ ನಡೆಸಲು ಬಯಸುತ್ತಾನೆ ಎಂದರ್ಥ.
- ಹಾಲಿನಿಂದ ತುಂಬಿದ ಅಥವಾ ತೊಟ್ಟಿನಿಂದ ಹಾಲು ಜಿನುಗುತ್ತಿರುವ ಮೊಲೆಗಳನ್ನು ನೋಡಿದರೆ ನೀವು ತಾಯಿಯ ಪ್ರೀತಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರಿ ಎಂದರ್ಥ.
- ಚಪ್ಪಟೆಯಾದ, ಗಾಯಗೊಂಡ ಸ್ತನವನ್ನು ಕಂಡರೆ ನಿಮ್ಮಲ್ಲಿರುವ ಲೈಂಗಿಕ ನಿರಾಸಕ್ತಿಯನ್ನು ಅದು ಸೂಚಿಸುತ್ತದೆ. 
- ಹಲವಾರು ಸ್ತ್ರೀಯರ ಬೆತ್ತಲೆ ಎದೆಗಳು ಕಾಣಿಸಿಕೊಂಡರೆ ನಿಮಗೆ ಲೈಂಗಿಕ ಆಯ್ಕೆಗಳು ಕಷ್ಟಕರವಾಗಿವೆ ಎಂದು, ಲೈಂಗಿಕ ಚಟುವಟಿಕೆಯ ಕೊರತೆಯನ್ನು ನೀವು ಹೊಂದಿದ್ದೀರಿ ಎಂದುಕೊಳ್ಳಬಹುದು.
- ಹೆಚ್ಚಿನ ಪುರುಷರು ಸಾಮಾನ್ಯವಾಗಿ ಆರೈಕೆ ಅಥವಾ ಪ್ರೀತಿಯನ್ನು ಪಡೆಯುವ ಬಯಕೆಯನ್ನು ಹೊರನೋಟದಲ್ಲಿ ನಿರಾಕರಿಸುತ್ತಾರೆ. ಆದರೆ ಹಾಗೆ ಅದುಮಿಟ್ಟ ಬಯಕೆಗಳು ಮಾನಸಿಕವಾಗಿ ವೃದ್ಧಿಗೊಂಡು ಕನಸಿನಲ್ಲಿ ಕಾಣಿಸಿಕೊಳ್ಳುತ್ತವೆ. ವಿಶೇಷವಾಗಿ ವ್ಯಕ್ತಿ ಒತ್ತಡದ ಸ್ಥಿತಿಯಲ್ಲಿರುವಾಗ. 

ಬಿಗಿಯಾಗಿರಲಿ ಎಂದು 24 ಗಂಟೆ ಬ್ರಾ ಧರಿಸಿದ್ದರೂ ಸ್ತನ ಸಡಿಲವಾಗುತ್ತೆ..!
 

Psychological explanation of dreaming breasts which is not related with sex

 

ಸ್ತ್ರೀಯರಿಗೆ ಸ್ತನದ ಕನಸು ಬಿದ್ದರೆ... 
- ನಿಮ್ಮ ಕನಸಿನಲ್ಲಿ ಪುರುಷರ ಸ್ತನ ಅಥವಾ ಎದೆಯ ಭಾಗ ಕಂಡರೆ ಮತ್ತು ಅದು ನಿಮ್ಮಲ್ಲಿ ಹಿತವಾದ ಉದ್ರೇಕವನ್ನು ಕೆರಳಿಸಿದರೆ, ಅದು ನಿಮ್ಮ ಲೈಂಗಿಕ ಸಂಭೋಗದ ಬಯಕೆಯನ್ನು ಸೂಚಿಸುತ್ತದೆ. 
- ನೀವು ಸ್ತನಗಳ ಕನಸು ಕಂಡರೆ, ಅದು ನಿಮ್ಮ ಲೈಂಗಿಕ ಬಯಕೆಯನ್ನು ಅಥವಾ ನೀವು ಮಗುವನ್ನು ಹೊಂದುವ ಬಯಕೆಯನ್ನು ಹೊಂದಿದ್ದೀರಿ ಎಂಬುದನ್ನು ಸೂಚಿಸುತ್ತದೆ.  
- ಸ್ತನಗಳು ಚಿಕ್ಕದಾಗುವುದು, ಕುಗ್ಗುವಿಕೆ ಅಥವಾ ಕೊಳಕಾಗುವ ಕನಸು ಕಾಣುತ್ತಿದ್ದರೆ, ಅನಾರೋಗ್ಯ ಅಥವಾ ಹೆಚ್ಚಿದ ಖರ್ಚಿನಿಂದಾಗಿ ನೀವು ತೊಂದರೆಗೀಡಾಗಬಹುದು ಮತ್ತು ಚಿಂತಿತರಾಗಬಹುದು ಎಂದು ಸೂಚಿಸುತ್ತದೆ. ನಿಮ್ಮ ಪ್ರೇಮಿಯ ನಿರ್ಗಮನದಿಂದ ನೀವು ದುಃಖಿತರಾಗಬಹುದು ಎಂದೂ ಇದರ ಅರ್ಥವಿರಬಹುದು. 
- ಸ್ತನಗಳು ಕುಗ್ಗುವ ಕನಸು ನಿಮ್ಮ ದೇಹವು ದುರ್ಬಲವಾಗಿದೆ ಎಂದು ಸೂಚಿಸುತ್ತದೆ, ನೀವು ನೆನಪಿನ ನಷ್ಟವನ್ನು ಅನುಭವಿಸಬಹುದು. ಕಲಿಕೆಯಲ್ಲಿ ಇಳಿಕೆ ಅಥವಾ ಕೆಲಸದ ದಕ್ಷತೆ ಕುಸಿಯಬಹುದು. ನೀವು ಪೌಷ್ಟಿಕಾಂಶದ ಪೂರಕಗಳಿಗೆ ಗಮನ ಕೊಡಬೇಕು. 
- ನಿಮ್ಮ ಸ್ತನಗಳು ಬದಲಾಗುತ್ತಿವೆ, ಸ್ವಲ್ಪ ಹೊತ್ತು ದೊಡ್ಡದಾಗಿರುತ್ತದೆ ಮತ್ತು ಸ್ವಲ್ಪ ಕಾಲ ಚಿಕ್ಕದಾಗಿರುತ್ತದೆ ಎಂದು ಕನಸು ಕಂಡರೆ ಜಾಗರೂಕರಾಗಿರಿ. ನೀವು ಅನಾರೋಗ್ಯಕ್ಕೆ ಒಳಗಾಗಬಹುದು ಮತ್ತು ನಿಮ್ಮ ಆರೋಗ್ಯವು ಸಂಭಾವ್ಯ ಬಿಕ್ಕಟ್ಟಿನಲ್ಲಿರಬಹುದು.
- ನಿಮ್ಮ ಕನಸಿನಲ್ಲಿ, ನೀವು ಮೂರು ಸ್ತನಗಳನ್ನು ಹೊಂದಿದ್ದೀರಿ ಎಂದು ಕಂಡರೆ, ನಿಮಗೆ 'ಮಾತೃತ್ವ' ಮತ್ತು 'ತಾಯಿಯ ಪ್ರೀತಿ'ಯ ಸಾಧ್ಯತೆ ಇಲ್ಲವೆಂದು ನೀವು ಚಿಂತಿತರಾಗಿರುವುದನ್ನು ಸೂಚಿಸುತ್ತದೆ. ವಿರುದ್ಧ ಲಿಂಗಿಗಳನ್ನು ಆಕರ್ಷಿಸಲು ಸಾಧ್ಯವಾಗುತ್ತಿಲ್ಲ ಎಂದು ನೀವು ಚಿಂತಿತರಾಗಿರಬಹುದು. ನೀವು ಪ್ರಜ್ಞಾಪೂರ್ವಕವಾಗಿ ಹೆಚ್ಚಿನ ಶಕ್ತಿಯನ್ನು ಹೊಂದಲು ಮತ್ತು ಸ್ತ್ರೀ ಪ್ರವೃತ್ತಿಯನ್ನು ಪಡೆಯಲು ಅಥವಾ ತಾಯಿಯ ಪ್ರೀತಿಯನ್ನು ಹೊಂದಲು ಬಯಸುತ್ತೀರಿ.
- ನೀವು ಅನೇಕ ಸ್ತನಗಳನ್ನು ಹೊಂದಿದ್ದೀರಿ ಎಂದು ಕನಸು ಕಾಣುತ್ತಿದ್ದರೆ ನಿಮ್ಮಲ್ಲಿ ಬಲವಾದ ತಾಯ್ತನದ ಆಸೆಗಳು ಇರುವುದನ್ನು ಸೂಚಿಸುತ್ತದೆ. ನೀವು ತಾಯಿಯ ಮನೋಭಾವದಿಂದ ಇತರ ಮಕ್ಕಳನ್ನು ಪೋಷಿಸಬಹುದು ಅಥವಾ ಸಹಾಯ ಮಾಡಬಹುದು. 
- ಕನಸಿನಲ್ಲಿ ಸ್ತನಗಳನ್ನು ಕಂಡು ನೀವು ಭಯಭೀತರಾಗಿದ್ದರೆ, ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಲು ಇದು ನಿಮಗೆ ನೆನಪಿಸುತ್ತದೆ.
- ನಿಮ್ಮ ಸ್ತನಗಳನ್ನು ಯಾರಾದರೂ ಮುಟ್ಟುವ ಕನಸು ಕಂಡರೆ, ಅದು ನಿಮ್ಮ ಲೈಂಗಿಕ ಆತಂಕವನ್ನು ಪ್ರತಿಬಿಂಬಿಸುತ್ತದೆ. ಒಂದೆಡೆ, ನಿಮ್ಮ ಹೃದಯದಲ್ಲಿ ಲೈಂಗಿಕತೆಯ ಬಗ್ಗೆ ನೀವು ಚಿಂತಿತರಾಗಿದ್ದೀರಿ. ಪುರುಷರೊಂದಿಗಿನ ನಿಮ್ಮ ಸಂವಹನವು ನಿಮಗೆ ಒತ್ತಡವನ್ನುಂಟು ಮಾಡುತ್ತಿದೆ. ನಿಮ್ಮ ನಡವಳಿಕೆಯು ತಪ್ಪುಗ್ರಹಿಕೆಯನ್ನು ಉಂಟುಮಾಡಬಹುದು ಎಂಬ ಭಯವಿದೆ ನಿಮಗೆ. ಮತ್ತೊಂದೆಡೆ, ಇದು ಪುರುಷನೊಂದಿಗೆ ಲೈಂಗಿಕತೆಯ ನಿಮ್ಮ ಆಳವಾದ ಬಯಕೆಯನ್ನೂ ಪ್ರತಿಬಿಂಬಿಸುತ್ತದೆ.

ಲೈಂಗಿಕ ಆಸಕ್ತಿ ಹೆಚ್ಚಿಸುವ ನುಗ್ಗೆ ಹೂವು ಆರೋಗ್ಯಕ್ಕೂ ಬೆಸ್ಟು

Follow Us:
Download App:
  • android
  • ios