ಮುಂಬೈ(ಡಿ.  28)  ರಾಷ್ಟ್ರದ ಜನಪ್ರಿಯ ಲೈಂಗಿಕ ತಜ್ಞ, ಸ್ತ್ರೀ ರೋಗ ಸ್ಪೆಶಲಿಸ್ಟ್ ಡಾ. ಮಹೀಂದರ್ ವತ್ಸಾ (96)  ನಿಧನರಾಗಿದ್ದಾರೆ.

ಮಹೀಂದರ್ ಕುಟುಂಬದವರು ನಿಧನದ ವಾರ್ತೆಯನ್ನು ಖಚಿತ ಮಾಡಿದ್ದಾರೆ.  ಸುಮಾರು ನಲವತ್ತು ವರ್ಷ ಕಾಲ ಲೈಂಗಿಕ ಸಲಹೆಗಳನ್ನು ನೀಡುತ್ತಾ ಬಂದವರು.

ಸೆಕ್ಸ್ ಪ್ರಾಮುಖ್ಯತೆ ಏನು? ವಿಜ್ಞಾನ ಏನು ಹೇಳುತ್ತದೆ?

ಭಾರತೀಯ ಕುಟುಂಬ ಯೋಜನೆ ಸಂಘಟನೆ ಸಲಹೆಗಾರರಾಗಿಯೂ ಕೆಲಸ ಮಾಡಿದ್ದರು.  ಹಲವು ಪತ್ರಿಕೆಗಳಲ್ಲಿ ಲೈಂಗಿಕ ಶಿಕ್ಷಣ ನೀಡುವ ಅಂಕಣಗಳನ್ನು ಬರೆಯುತ್ತಾ ಬಂದಿದ್ದರು.

ಲಘು ಹಾಸ್ಯದ ಮುಖೇನವೇ ಲೈಂಗಿಕ ಸಮಸ್ಯೆಗಳಿಗೆ ಸರಳವಾಗಿ ಉತ್ತರ ನೀಡುತ್ತಿದ್ದರು.  ಅನೇಕ ಪುಸ್ತಕಗಳನ್ನು ಬರೆದಿರುವ  ವೈದ್ಯ ಇನ್ನು ನೆನಪು ಮಾತ್ರ .  ಇವರ ಜೀವನ ಆಧಾರಿಸಿ ಬಾಲಿವುಡ್ ನಲ್ಲಿ ಸಿನಿಮಾ ತಯಾರಿಯೂ ನಡೆದಿತ್ತು.