Asianet Suvarna News Asianet Suvarna News

ಕೆಮ್ಮಿನ ಸಿರಪ್‌ ತೆಗೆದುಕೊಳ್ಳುವ ಮುನ್ನ ಇವಿಷ್ಟು ವಿಚಾರ ಗೊತ್ತಿರಲಿ

ಭಾರತೀಯ ಮೂಲದ ಕಂಪನಿ ತಯಾರಿಸಿದ ಕೆಮ್ಮಿನ ಔಷಧ ಸೇವಿಸಿ ಪಶ್ಚಿಮ ಆಫ್ರಿಕಾದ ಗ್ಯಾಂಬಿಯಾದಲ್ಲಿ 66 ಮಕ್ಕಳು ಅಸುನೀಗಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. ಹೀಗಿರುವಾಗ ಆರೋಗ್ಯ ಹದಗೆಟ್ಟಾಗ ಎಲ್ಲರೂ ಸುಲಭವಾಗಿ ತೆಗೆದುಕೊಳ್ಳುವ ಕೆಮ್ಮಿನ ಸಿರಪ್‌ಗಳ ಬಗ್ಗೆ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಇನ್ಮುಂದೆ ಔಷಧಿ ಅಥವಾ ಸಿರಪ್ ತೆಗೆದುಕೊಳ್ಳುವ ಮೊದಲು ಈ ವಿಷಯಗಳನ್ನು ನೆನಪಿನಲ್ಲಿಡಿ.

Note These Things Before Using Any Syrup Or Medicine For Cough Vin
Author
First Published Oct 15, 2022, 8:29 AM IST

ಪಶ್ಚಿಮ ಆಫ್ರಿಕಾದ ಗ್ಯಾಂಬಿಯಾ ದೇಶದಲ್ಲಿ 66 ಮಕ್ಕಳ ಸಾವು ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ. ಇಲ್ಲಿನ ಮಕ್ಕಳ ಸಾವಿಗೆ ಕಾರಣ ಭಾರತದ ಕೆಮ್ಮು ಸಿರಪ್ ಎಂದು ಹೇಳಲಾಗುತ್ತಿದೆ. ಈ ನಾಲ್ಕು ಕೆಮ್ಮು ಸಿರಪ್‌ಗಳನ್ನು ಹರಿಯಾಣ ಮೂಲದ ಪಾರ್ಮಾ ಕಂಪನಿಯಾದ ಮೈಡೆನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ  ತಯಾರಿಸಲಾಗಿದೆ ಎಂದು ತಿಳಿದುಬಂದಿದೆ. ಇದು ವಿಷಕಾರಿ ಮತ್ತು ಮಾರಣಾಂತಿಕ ಅಂಶಗಳನ್ನು ಒಳಗೊಂಡಿದೆ ಎಂದು ಡಬ್ಲುಎಚ್‌ಒ ಮಾಹಿತಿ ನೀಡಿದೆ. ಈ ಔಷಧದ ಕುರಿತಾಗಿ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಯನ್ನು ರವಾನಿಸಿದ್ದು, ಇದರಲ್ಲಿದ್ದ ವಿಷದ ಪರಿಣಾಮವಾಗಿ ಮಕ್ಕಳಲ್ಲಿ ಮೂತ್ರಪಿಂಡ ಸೋಂಕು ಕಾಣಿಸಿಕೊಂಡು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ ಎಂದು ಹೇಳಿಕೊಂಡಿದೆ. ಹೀಗಿರುವಾಗ ಕೆಮ್ಮಿನ ಸಿರಪ್‌ನಲ್ಲಿರುವ ಕೆಲವೊಂದು ರಾಸಾಯನಿಕಗಳ ಬಗ್ಗೆ ತಿಳಿದುಕೊಳ್ಳುವುದು ಅತೀ ಅಗತ್ಯವಾಗಿದೆ. 

ಔಷಧಿ ಅಥವಾ ಸಿರಪ್ ತೆಗೆದುಕೊಳ್ಳುವ ಮೊದಲು ಈ ವಿಷಯಗಳನ್ನು ನೆನಪಿನಲ್ಲಿಡಿ

- ನಿಮ್ಮ ಮಗುವಿಗೆ ಯಾವುದೇ ಪ್ರಿಸ್ಕ್ರಿಪ್ಷನ್ ಅಥವಾ ಓವರ್-ದಿ-ಕೌಂಟರ್ (OTC) ಔಷಧಿಗಳನ್ನು ನೀಡುವ ಮೊದಲು ವೈದ್ಯರನ್ನು ನೋಡಲು ಮರೆಯದಿರಿ

- ಔಷಧದ (Medicine) ಹೆಸರು ಮತ್ತು ಅದನ್ನು ಏಕೆ ನೀಡಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ

- ಔಷಧಿಯನ್ನು ಎಷ್ಟು, ಯಾವಾಗ ಮತ್ತು ಎಷ್ಟು ಸಮಯದವರೆಗೆ ನೀಡಬೇಕು ಎಂಬುದನ್ನು ತಿಳಿಯಿರಿ.

ದಿನಾ ರಾತ್ರಿ ಒಣಕೆಮ್ಮು ಕಾಟನಾ ? ಮಲಗೋ ಮುಂಚೆ ಇವಿಷ್ಟನ್ನು ಸೇವಿಸಿ ಸಾಕು

- ಔಷಧವನ್ನು ಹೇಗೆ ನೀಡಬೇಕು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. (ಕೆಲವೊಂದು ಔಷಧಿಗಳನ್ನು ನೀಡುವ ವಿಧಾನ ವಿಭಿನ್ನವಾಗಿರುತ್ತದೆ)

- ಔಷಧವನ್ನು ಆಹಾರದ (Food) ಮೊದಲು ತೆಗೆದುಕೊಳ್ಳಬೇಕೋ, ನಂತರ ತೆಗೆದುಕೊಳ್ಳಬೇಕೋ ಎಂಬ ಸೂಚನೆಗಳನ್ನು ಗಮನಿಸಿಕೊಳ್ಳಿ

- ಔಷಧವನ್ನು ಹೇಗೆ ಇಡುವುದು, ಔಷಧಿಯನ್ನು ಎಷ್ಟು ದಿನ ಸುರಕ್ಷಿತವಾಗಿ (Safe) ಇಡಬಹುದು ಎಂಬುದನ್ನು ತಿಳಿಯಿರಿ

- ಇತರ ಔಷಧಿಗಳೊಂದಿಗೆ ತೆಗೆದುಕೊಳ್ಳಬಹುದೇ ಎಂಬ ಬಗ್ಗೆ ವಿಚಾರಿಸಿಕೊಳ್ಳಿ

- ಫಾರ್ಮಾಸಿಸ್ಟ್‌ಗಳು ಕೆಲವೊಮ್ಮೆ ಅಗತ್ಯಕ್ಕಿಂತ ಹೆಚ್ಚಿನ ಔಷಧಿಗಳನ್ನು ನೀಡಬಹುದು, ಆದ್ದರಿಂದ ಔಷಧವು ಉಳಿಯುತ್ತದೆ. ಹಾಗೆಂದು

- ಉಳಿದ ಔಷಧಿಗಳನ್ನು ಎಂದಿಗೂ ಬಳಸಬೇಡಿ. ನಿಮ್ಮ ಬಳಿ ಯಾವುದೇ ದ್ರವ ಔಷಧ ಉಳಿದಿದ್ದರೆ, ಅದನ್ನು ಎಸೆಯಿರಿ.

- ಹಳೆಯ ಔಷಧವನ್ನು ಬಳಸಬೇಡಿ, ಮುಕ್ತಾಯ ದಿನಾಂಕದ (Expiry date) ಮೇಲೆ ಕಣ್ಣಿಡಿ.

- ವಯಸ್ಕರಿಗೆ ಅಥವಾ ಬೇರೆಯವರಿಗೆ ನೀಡಿದ ಔಷಧಿಗಳನ್ನು ನಿಮ್ಮ ಮಗುವಿಗೆ ಎಂದಿಗೂ ನೀಡಬೇಡಿ. ಇಬ್ಬರಿಗೆ ಒಂದೇ ಕಾಯಿಲೆ (Disease) ಇದ್ದರೂ ಅವರಿಗೆ ಬೇರೆ ಬೇರೆ ಡೋಸ್ ಬೇಕು

- ವಯಸ್ಕರಿಗೆ ಉದ್ದೇಶಿಸಿರುವ ಔಷಧಿಯನ್ನು ಮಗುವಿಗೆ ಎಂದಿಗೂ ನೀಡಬೇಡಿ. ನಿಮ್ಮ ಮಗುವಿಗೆ ಒಂದೇ ರೀತಿಯ ಪದಾರ್ಥಗಳೊಂದಿಗೆ ಎರಡು ರೀತಿಯ ಔಷಧಿಗಳನ್ನು ನೀಡುವ ಮೊದಲು ನಿಮ್ಮ ವೈದ್ಯರು (Doctors) ಅಥವಾ ಔಷಧಿಕಾರರನ್ನು ಪರಿಶೀಲಿಸಿ.

ಜೇಬಲ್ಲಿ ಜೇಷ್ಠಮಧು ಇರಲಿ, ದಾಹಕ್ಕೂ ಮದ್ದು, ಕೆಮ್ಮೂ ಆಗುತ್ತೆ ಗುಣ

ಮನೆಮದ್ದುಗಳು ಹೆಚ್ಚು ಪರಿಣಾಮಕಾರಿ
ಇವೆಲ್ಲಕ್ಕಿಂತ ಮುಖ್ಯವಾಗಿ ತಿಳಿದುಕೊಳ್ಳಬೇಕಾದ ಅಂಶವೆಂದರೆ ಜ್ವರ, ಕೆಮ್ಮಿಗೆ ಟ್ಯಾಬೆಟ್ಸ್‌, ಸಿರಪ್ ತೆಗೆದುಕೊಳ್ಳುವುದಕ್ಕಿಂತಲೂ ಮನೆ ಮದ್ದು (Home remedies) ಹೆಚ್ಚು ಪರಿಣಾಮಕಾರಿಯಾಗಿದೆ. ವೈದ್ಯರ ಪ್ರಕಾರ, ಶೀತ ಮತ್ತು ಕೆಮ್ಮಿಗೆ (Cough) ಪ್ರತಿ ಬಾರಿ ಅಥವಾ ಹೆಚ್ಚಿನ ಔಷಧಿಗಳ ಬಳಕೆಯು ದೀರ್ಘಾವಧಿಯಲ್ಲಿ ನಿಮ್ಮ ದೇಹವನ್ನು (Body) ಹಾನಿಗೊಳಿಸುತ್ತದೆ. ಸಮಸ್ಯೆಯನ್ನು ಗುಣಪಡಿಸಲು ಮನೆ ಮದ್ದು ಅತ್ಯುತ್ತಮ ಆಯ್ಕೆಯಾಗಿದೆ. ಉದಾಹರಣೆಗೆ, ಜ್ವರ ಅಥವಾ ಶೀತ ಇರುವವರು ಸಾಕಷ್ಟು ವಿಶ್ರಾಂತಿ (Rest) ಪಡೆಯಬೇಕು, ಸಾಕಷ್ಟು ದ್ರವಗಳನ್ನು ಕುಡಿಯಬೇಕು ಮತ್ತು ನೀರು, ಜ್ಯೂಸ್ ಮತ್ತು ಸೂಪ್‌ನಂತಹ ವಿವಿಧ ದ್ರವಗಳನ್ನು ಕುಡಿಯಬೇಕು.

Follow Us:
Download App:
  • android
  • ios