Asianet Suvarna News Asianet Suvarna News

Health Secrets: 93ನೇ ವಯಸ್ಸಿನಲ್ಲೂ ಜಿಮ್ ಮಾಡೋ ಈ ಅಜ್ಜನ ಫಿಟ್ನೆಸ್ ಗುಟ್ಟೇನು?

ವಯಸ್ಸು ಅರವತ್ತು ದಾಟುತ್ತಿದ್ದಂತೆ ಎಲ್ಲ ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳೋರೆ ಹೆಚ್ಚು. ಆದ್ರೆ ಅದಕ್ಕೆ ಅಪವಾದ ಎನ್ನುವ ಜನರೂ ನಮ್ಮಲ್ಲಿದ್ದಾರೆ. ಅವರಿಗೆ ವಯಸ್ಸು ಕೇವಲ ಲೆಕ್ಕವಷ್ಟೆ. ಅದ್ರಲ್ಲಿ ಈ ಅಜ್ಜ ಕೂಡ ಒಂದು. 
 

Ninety Three Year Old Man Workout Routine Reveals Four Secrets Of His Long Life roo
Author
First Published Jan 27, 2024, 2:59 PM IST

ಯಾವುದೇ ಜಿಮ್ ಗೆ ಹೋಗಿ, ನಿಮಗೆ ಯಂಗ್ ಹುಡುಗ – ಹುಡುಗಿಯರು ಕಾಣಸಿಗ್ತಾರೆ. ಐವತ್ತು ವರ್ಷ ಮೇಲ್ಪಟ್ಟ ಜನರು ಜಿಮ್ ನಲ್ಲಿ ಸಿಗೋದು ಬಹಳ ಅಪರೂಪ. ನೀವು ವೃದ್ಧರು ಪಾರ್ಕ್ ನಲ್ಲಿ ವಾಕಿಂಗ್ ಮಾಡೋವಾಗ ನೋಡಿರ್ತೀರಿ. ಆದ್ರೆ ಜಿಮ್ ನಲ್ಲಿ, ಏರೋಬಿಕ್ಸ್ ನಲ್ಲಿ ನೋಡಿರೋದಿಲ್ಲ. ಇದಕ್ಕೆ ಕಾರಣವೂ ಇದೆ. ವಯಸ್ಸಾದಂತೆ ಶಕ್ತಿ ಕುಂದುತ್ತದೆ. ಇಂಥ ವರ್ಕ್ ಔಟ್ ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಬಹುತೇಕರು ಈ ಪ್ರಯತ್ನಕ್ಕೆ ಕೈ ಹಾಕೋದಿಲ್ಲ. ಆದ್ರೆ ಈ ವರ್ಕ್ ಔಟ್ ಗಳಿಗೂ ವಯಸ್ಸು ಅಡ್ಡ ಬರೋದಿಲ್ಲ. ನೀವು ಮೊದಲಿನಿಂದಲೂ ಜಿಮ್ ನಲ್ಲಿ ಬೆವರು ಇಳಿಸ್ತಿದ್ದರೆ, ಆಹಾರದ ಮೇಲೆ ನಿಮಗೆ ನಿಯಂತ್ರಣವಿದ್ದರೆ ನಿಮ್ಮ ವಯಸ್ಸು ತೊಂಭತ್ತರ ಗಡಿ ದಾಟಿದ್ದರೂ ಜಿಮ್ ಗೆ ಹೋಗ್ಬಹುದು ಎಂಬುದನ್ನು ಈ ಅಜ್ಜ ತೋರಿಸಿದ್ದಾರೆ. 

ತನ್ನ ಆರೋಗ್ಯದ ಗುಟ್ಟನ್ನು ಬಿಚ್ಚಿಟ್ಟ 93 ವರ್ಷದ ಅಜ್ಜ : ಐರ್ಲೆಂಡ್  (Ireland ) ನಿವಾಸಿಯಾಗಿರುವ ರಿಚರ್ಡ್ ಮೋರ್ಗನ್ (Richard Morgan) ಎಂಬ ವ್ಯಕ್ತಿಗೆ ಈಗ 93 ವರ್ಷ ವಯಸ್ಸು. ಈ ವಯಸ್ಸಿನಲ್ಲೂ 50-60 ವರ್ಷದವರು ಇರುವಷ್ಟು ಫಿಟ್ (Fit) ಆಗಿದ್ದಾರೆ. ಬದುಕಿನ ಇಳಿ ವಯಸ್ಸಿನಲ್ಲಿ ಇಷ್ಟು ಫಿಟ್ ಆಗಿರುವ ಇವರ ಆರೋಗ್ಯದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲಾಯ್ತು. ಮೂಲತಃ ಕ್ರೀಡಾಪಟುವಾಗಿರುವ ಇವರ ಉತ್ತಮ ಆರೋಗ್ಯದ ಕುರಿತಾದ ವರದಿ ಜರ್ನಲ್ ಆಫ್ ಅಪ್ಲೈಡ್ ಫಿಸಿಯಾಲಜಿಯಲ್ಲಿ ಪ್ರಕಟವಾಗಿದೆ. ಈ ವರದಿಯಲ್ಲಿ ರಿಚರ್ಡ್ ಮೊರ್ಗನ್ ಅವರ ತರಬೇತಿ, ಆಹಾರ ಹಾಗೂ ಆರೋಗ್ಯದ ಕುರಿತಾದ ಮಾಹಿತಿ ಇದೆ.

ಈ 5 ತರಕಾರಿ ಹೆಚ್ಚು ಸೇವಿಸಿದ್ರೆ ಹೃದಯ ನಾಳ ಬ್ಲಾಕೇಜ್ ತಪ್ಪಿಸ್ಬೋದು

ರಿಚರ್ಡ್ ಅವರು ಇಂಡೋರ್ ರೋಯಿಂಗ್ ನಲ್ಲಿ ನಾಲ್ಕು ಬಾರಿ ವರ್ಲ್ಡ್ ಚಾಂಪಿಯನ್ ಆಗಿದ್ದಾರೆ. ಇದರ ಜೊತೆಗೆ ಅವರು ಬೇಕರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ರಿಚರ್ಡ್ ಅವರು ತಮ್ಮ ಆರೋಗ್ಯದ ಬಗ್ಗೆ ಐರಿಶ್ ಎಕ್ಸಾಮಿನರ್ ಜೊತೆ ಮಾತನಾಡಿದರು. ರಿಚರ್ಡ್ ಅವರು,  ನಾನು 70ರ ದಶಕದಿಂದಲೂ ನಿಯಮಿತವಾಗಿ ವ್ಯಾಯಾಮ ಮಾಡುತ್ತಲೇ ಇದ್ದೇನೆ. ಇದರಿಂದ ಬಹಳ ಸಂತೋಷ ಸಿಗುತ್ತದೆ ಎಂದಿದ್ದಾರೆ. ಇವರನ್ನು ನೋಡಿದರೆ ನಮಗೆ ಸಮಯವನ್ನು ನಿಲ್ಲಿಸಲು ಆಗದೇ ಇದ್ದರೂ ವಯಸ್ಸಾದಂತೆ ಕುಂದುವ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು ಎಂಬುದು ಸ್ಪಷ್ಟವಾಗುತ್ತದೆ.

ರಿಚರ್ಡ್ ಮೋರ್ಗನ್ ಅವರ ದಿನಚರಿಯೇ ಅವರ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅವರು ತಮ್ಮ ವ್ಯಾಯಾಮದ ದಿನಚರಿಯ ಕುರಿತು 4 ರಹಸ್ಯವನ್ನು ಹೇಳಿದ್ದಾರೆ. ರಿಚರ್ಡ್ ಅವರು, ಮೊದಲನೆಯದಾಗಿ ನಾನು ಪ್ರತಿನಿತ್ಯ 40 ನಿಮಿಷಗಳ ಕಾಲ ವ್ಯಾಯಾಮ ಮಾಡುತ್ತೇನೆ. ಆ 40 ನಿಮಿಷ ಸಂಪೂರ್ಣ ಸ್ಥಿರತೆ ಹಾಗೂ ಸಮರ್ಪಣಾ ಭಾವದಿಂದ ವ್ಯಾಯಾಮ ಮಾಡುತ್ತೇನೆ. ವ್ಯಾಯಾಮಕ್ಕೆ ಸ್ಥಿರತೆ ಬಹಳ ಮುಖ್ಯ. ಎರಡನೆಯದಾಗಿ ಪರ್ಯಾಯ ತರಬೇತಿಯ ಅವಶ್ಯಕತೆ ಹೆಚ್ಚಿರುತ್ತದೆ. ಮೂರನೆಯದು ವೇಟ್ ಟ್ರೇನಿಂಗ್. ಇದರಿಂದ ಸ್ನಾಯು ಬಲಗೊಳ್ಳುತ್ತದೆ ಮತ್ತು ಮಾನಸಿಕ ಆರೋಗ್ಯವೂ ಸುಧಾರಿಸುತ್ತದೆ. ನಾಲ್ಕನೆಯದಾಗಿ ಪ್ರೋಟೀನ್ ಯುಕ್ತ ಆಹಾರ ಸೇವಿಸಬೇಕು ಎಂದು ರಿಚರ್ಡ್ ಹೇಳಿದ್ದಾರೆ. ಇದರ ಹೊರತಾಗಿ ಇವರು ಮಾಡು ಪ್ರತಿಶತ 70 ರಷ್ಟು ವ್ಯಾಯಾಮ ಬಹಳ ಸುಲಭವಾಗಿದೆ. ಪ್ರತಿಶತ 20 ರಷ್ಟು ಸ್ವಲ್ಪ ಕಷ್ಟಕರವಾಗಿದೆ ಹಾಗೂ ಪ್ರತಿಶತ 10 ರಷ್ಟು ವ್ಯಾಯಾಮಕ್ಕೆ ಹೆಚ್ಚಿನ ಪ್ರಯತ್ನದ ಅಗತ್ಯವಿದೆ.

Health Tips: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಮಾತ್ರೆ ಬದಲು ಒಂದೇ ಒಂದು ಚಮಚ ಇದನ್ನು ಸೇವಿಸಿ

ರಿಚರ್ಡ್ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದ ಶೋಧನಾಕಾರರು, ಅವರ ನಿಯಮಿತ ವ್ಯಾಯಾಮದಿಂದ ಅವರ ಉಸಿರಾಟ (Beathing) ಹಾಗೂ ಹೃದಯದ ಆರೋಗ್ಯಕ್ಕೆ (Heart Health) ವಿಶೇಷ ಪ್ರಯೋಜನವಾಗಿದೆ. ಪ್ರೋಟೀನ್ (Protein) ಆಹಾರ ಸೇವನೆಯಿಂದ ಅವರ ಸ್ನಾಯುಗಳು (Muscles ಬಲಿಷ್ಠವಾಗಿವೆ ಎಂದು ಹೇಳಿದ್ದಾರೆ.

Follow Us:
Download App:
  • android
  • ios