ಮುಖವು ಸುಂದರವಾಗಿ, ಮೃದುವಾಗಿ ಮತ್ತು ಹೊಳೆಯುವಂತೆ ಇರಲು ಅನೇಕ ಜನರು ವಿವಿಧ ಪ್ರಯತ್ನಗಳನ್ನು ಮಾಡುತ್ತಾರೆ. ದುಬಾರಿ ಕ್ರೀಮ್‌ಗಳನ್ನು ಬಳಸುತ್ತಾರೆ. ಆದರೆ ಸ್ನಾನ ಮಾಡುವ ಮೊದಲು ಈ ಸಲಹೆಗಳನ್ನು ಪಾಲಿಸಿದರೆ ಸಾಕು. ಯಾವುದೇ ಕ್ರೀಮ್‌ಗಳಿಲ್ಲದೆ ಮುಖವು ಸುಂದರವಾಗಿ ಬದಲಾಗುತ್ತದೆ! ಅವು ಯಾವುವು ತಿಳಿಯಿರಿ.

ನಿಮ್ಮ ಮುಖದ ತ್ವೆಚೆಯನ್ನ ಮೃದುವಾಗಿ ಮತ್ತು ತೇವಾಂಶದಿಂದ ಇರಿಸಿಕೊಳ್ಳಲು ನೀವು ದುಬಾರಿ ಸ್ಕಿನ್ ಕೇರ್ ಕ್ರೀಮ್‌ಗಳನ್ನು ಹಚ್ಚುವ ಅಗತ್ಯವಿಲ್ಲ. ಈ ಕೆಳಗಿನ ಸಲಹೆಗಳನ್ನು ಪಾಲಿಸುವ ಮೂಲಕ ಚರ್ಮಕ್ಕೆ ಪ್ರಯೋಜನಕಾರಿಯಾಗುವುದರ ಜೊತೆಗೆ, ಕೆಲವು ನೈಸರ್ಗಿಕವಾಗಿ ದೊರೆಯುವ ಪದಾರ್ಥಗಳನ್ನು ಬಳಸುವ ಮೂಲಕ ನಿಮ್ಮ ಚರ್ಮವನ್ನು ಆರೋಗ್ಯಕರವಾಗಿಡಬಹುದು.

Add Asianetnews Kannada as a Preferred SourcegooglePreferred

ಕೆಲವು ಜನರಿಗೆ ವಿಶೇಷವಾಗಿ ಸ್ನಾನದ ನಂತರ ಅವರ ಚರ್ಮವು ಒಣಗುತ್ತದೆ ಮತ್ತು ನಿರ್ಜೀವವಾಗುತ್ತದೆ. ಅಂತಹ ಜನರು ಕೆಲವು ಮನೆ ಮದ್ದುಗಳನ್ನು ಬಳಸುವ ಮೂಲಕ ತಮ್ಮ ಮುಖವನ್ನು ನೈಸರ್ಗಿಕವಾಗಿ ತೇವಾಂಶದಿಂದ ಇರಿಸಿಕೊಳ್ಳಬಹುದು. ಆ ಸಲಹೆಗಳನ್ನು ನೋಡೋಣ. 

ಇದನ್ನೂ ಓದಿ: Women's health tips: ಹೆರಿಗೆ ನಂತರ ಕೂದಲು ಉದುರುವಿಕೆ ತಡೆಯಲು ಈ ಟಿಪ್ಸ್ ಫಾಲೋ ಮಾಡಿ, ಫಲಿತಾಂಶ ಖಚಿತ!

ಮುಖಕ್ಕೆ ಜೇನುತುಪ್ಪ ಹಚ್ಚಿದ್ರೆ ಏನಾಗುತ್ತೆ?
ಜೇನುತುಪ್ಪವು ನಿಮ್ಮ ಚರ್ಮವನ್ನು ನೈಸರ್ಗಿಕವಾಗಿ ಹೈಡ್ರೀಕರಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಚರ್ಮಕ್ಕೆ ಪರಿಣಾಮಕಾರಿಯಾಗಿ ಹೊಳಪನ್ನು ತರುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇವು ಚರ್ಮವನ್ನು ಡೀಪ್ ಆಗಿ ಹೈಡ್ರೇಟ್ ಮಾಡುತ್ತವೆ. ಸ್ನಾನ ಮಾಡುವ ಮೊದಲು, ನಿಮ್ಮ ಕೈಗಳಿಗೆ ಕೆಲವು ಹನಿಗಳನ್ನು ಹಚ್ಚಿ ಮಸಾಜ್ ಮಾಡಿ. ಇದು ನಿಮ್ಮ ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ..

ನಿಂಬೆ ರಸ
ನಿಂಬೆ ರಸವು ಚರ್ಮಕ್ಕೆ ತುಂಬಾ ಸಹಾಯಕವಾಗಿದೆ. ಇದರ ವಿಟಮಿನ್ ಸಿ ಗುಣಗಳು ಚರ್ಮವನ್ನು ಬಿಗಿಗೊಳಿಸಲು ಸಹಾಯ ಮಾಡುತ್ತದೆ. ನೀವು ಮಾಡಬೇಕಾಗಿರುವುದು ಇಷ್ಟೇ, ನಿಂಬೆ ರಸವನ್ನು ನಿಮ್ಮ ಮುಖಕ್ಕೆ 5 ರಿಂದ 10 ನಿಮಿಷಗಳ ಕಾಲ ಹಚ್ಚಿ ನಂತರ ಶುದ್ಧ ನೀರಿನಿಂದ ತೊಳೆಯಿರಿ. ಇದು ಚರ್ಮವನ್ನು ಬಿಗಿಗೊಳಿಸುತ್ತದೆ.

ಆಲಿವ್ ಎಣ್ಣೆ
ಸ್ನಾನ ಮಾಡುವ ಮೊದಲು ಮುಖಕ್ಕೆ ಆಲಿವ್ ಎಣ್ಣೆಯನ್ನು ಹಚ್ಚುವುದರಿಂದ ಚರ್ಮ ಮೃದು ಮತ್ತು ಕಾಂತಿಯುತವಾಗುತ್ತದೆ. ಇದು ಚರ್ಮದಲ್ಲಿನ ವಯಸ್ಸಾದ ಲಕ್ಷಣಗಳನ್ನು ಸಹ ಕಡಿಮೆ ಮಾಡುತ್ತದೆ. ಆದಾಗ್ಯೂ, ನಿಮ್ಮ ಚರ್ಮವು ಸೂಕ್ಷ್ಮ ಅಥವಾ ಎಣ್ಣೆಯುಕ್ತವಾಗಿದ್ದರೆ, ಈ ಎಣ್ಣೆಯನ್ನು ಬಳಸಬೇಡಿ. 

ಟೊಮೆಟೊ ರಸ

ನೀವು ಟೊಮೆಟೊ ರಸವನ್ನು ನಿಮ್ಮ ಚರ್ಮಕ್ಕೆ ಹಚ್ಚಬಹುದು. ಇದು ಹಾನಿಕಾರಕ ಸೂರ್ಯನ ಕಿರಣಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ, ಚರ್ಮಕ್ಕೆ ತಾಜಾತನ ಮತ್ತು ದೃಢತೆಯನ್ನು ನೀಡುತ್ತದೆ. ಇದು ಕಲೆಗಳನ್ನು ತೆಗೆದುಹಾಕಲು ಸಹ ಉಪಯುಕ್ತವಾಗಿದೆ.

ಇದನ್ನೂ ಓದಿ: ನಿಮ್ಮ ಕಂಕುಳಲ್ಲಿ ಬೆವರು ವಾಸನೆಗೆ ಮುಜುಗರ ಅನುಭವಿಸ್ತಿದ್ದೀರಾ? ಚಿಂತೆ ಬೇಡ, ಈ ಸೂಪರ್ ಟಿಪ್ಸ್ ಫಾಲೋ ಮಾಡಿ!

ಕಡಲೆ ಹಿಟ್ಟು

ಇದು ಪೂರ್ವಜರಿಂದಲೂ ಬಳಕೆಯಲ್ಲಿದೆ. ಹಿಂದಿನ ದಿನಗಳಲ್ಲಿ ಸಾಬೂನು, ಶಾಂಪೂಗಳಿಗೆ ಪರ್ಯಾಯವಾಗಿ ಕಡಲೆಹಿಟ್ಟು ಹಚ್ಚಿ ತಲೆ ಸ್ನಾನ ಮಾಡುತ್ತಿದ್ದರು ಎಂಬುದು ಗೊತ್ತೆ? ಸ್ನಾನ ಮಾಡುವ ಮೊದಲು ಕಡಲೆಹಿಟ್ಟು ಮತ್ತು ಅರಿಶಿನದ ಫೇಸ್ ಪ್ಯಾಕ್ ಅನ್ನು ಹಚ್ಚುವುದರಿಂದ ನಿಮ್ಮ ಚರ್ಮವು ಚೆನ್ನಾಗಿ ಎಫ್ಫೋಲಿಯೇಟ್ ಆಗುತ್ತದೆ. ಅರಿಶಿನವು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಇವು ಚರ್ಮವನ್ನು ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.