Monsoon Safety : ಮಳೆಗಾಲದಲ್ಲಿ ಎಚ್ಚರ ತಪ್ಪಿದ್ರೆ ಸಾವಿನ ಮನೆಗೆ ಹೋಗ್ತೀರಾ!

ಋತು ಬದಲಾದಂತೆ ನಾವು ಬದಲಾಗ್ಬೇಕು. ಆಯಾ ಕಾಲಕ್ಕೆ ತಕ್ಕಂತೆ ಜೀವನ ನಡೆಸಲು ತಯಾರಿ ನಡೆಸ್ಬೇಕು. ಮಳೆಗಾಲದಲ್ಲಿ ಮೈ ಎಲ್ಲ ಕಣ್ಣಾಗಿದ್ರೂ ಸಾಲೋದಿಲ್ಲ. ನಮ್ಮ ಸಣ್ಣದೊಂದು ತಪ್ಪು ದೊಡ್ಡ ಅಪಾಯಕ್ಕೆ ಕಾರಣವಾಗುತ್ತೆ. 
 

 Monsoon safety tips to be healthy happy and safe

ಮಳೆಗಾಲ (Rainy Season) ಶುರುವಾಗಿದೆ. ಕೆಲವೊಂದು ಕಡೆ ವಿಪರೀತ ಮಳೆಯಾಗ್ತಿದ್ದರೆ ಮತ್ತೆ ಕೆಲವು ಕಡೆ ಆಗಾಗ ವರುಣ ಬಂದು ಹೋಗ್ತಿದ್ದಾನೆ. ಬೇಸಿಗೆ (Summer) ಬಿಸಿಲ ಝಳದಿಂದ ಬೇಸತ್ತ ಜನರು ಮಳೆಗಾಲ ಬರ್ತಿದ್ದಂತೆ ಖುಷಿಯಾಗ್ತಾರೆ. ಅನೇಕರಿಗೆ ಮಳೆಗಾಲವೆಂದ್ರೆ ಇಷ್ಟ. ಮಳೆ ಬಿದ್ದಾಗ ಮಣ್ಣಿ (Soil) ನಿಂದ ಬರುವ ವಾಸನೆ, ತಂಪಾದ ವಾತಾವರಣ ಹಾಗೂ ಎಲ್ಲೆಲ್ಲೂ ಕಾಣುವ ಹಸಿರು ಪರಿಸರ ಮನಸ್ಸಿಗೆ ಮುದ ನೀಡುತ್ತದೆ. ಅನೇಕರು ಮಳೆಯಲ್ಲಿ ನೆನೆಯಲು ಇಷ್ಟಪಡ್ತಾರೆ. ಋತು ಬದಲಾದಂತೆ ಅನೇಕ ಸಮಸ್ಯೆ ಶುರುವಾಗುತ್ತದೆ. ಮಳೆಗಾಲದಲ್ಲಿ ಅನೇಕ ಅಪಘಾತಗಳು ಜನರ ಅಜಾಗರೂಕತೆ ಮತ್ತು ಕೆಲವು ಸಣ್ಣ ತಪ್ಪುಗಳಿಂದಾಗಿ ಸಂಭವಿಸುತ್ತವೆ. ಮಳೆಗಾಲದಲ್ಲಿ ಮನೆಯಿಂದ ಹೊರಗೆ ಕಾಲಿಟ್ಟರೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಕೆಲ ಜನರು ಭಾವಿಸಿದ್ದಾರೆ. ಆದರೆ ಮಾನ್ಸೂನ್‌ನಲ್ಲಿ ಮನೆಯಿಂದ ಹೊರಗೆ ಹೋಗ್ಬೇಕೆಂದೇನೂ ಇಲ್ಲ ಮನೆಯಲ್ಲಿದ್ದರೂ ಕೆಲವು ಸಮಸ್ಯೆ ಕಾಡುತ್ತದೆ. ಮಳೆಗಾಲದಲ್ಲಿ ಸುರಕ್ಷಿತವಾಗಿರಬೇಕು ಹಾಗೆ ಯಾವುದೇ ಸಮಸ್ಯೆ ಎದುರಾಗಬಾರದು ಅಂದ್ರೆ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು. ಮಾನ್ಸೂನ್ ನಲ್ಲಿ ನಮ್ಮನ್ನು ನಾವು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ನಾವಿಂದು ಹೇಳ್ತೇವೆ.  

ಮಳೆಯಲ್ಲಿ ನೆನೆಯಬೇಡಿ : ಮಳೆಯಲ್ಲಿ ನೆನೆಯಲು ಕೆಲವರು ಇಷ್ಟಪಟ್ಟರೆ ಮತ್ತೆ ಕೆಲವರು ಇಷ್ಟಪಡುವುದಿಲ್ಲ. ಆದ್ರೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದೆ ಮನೆಯಿಂದ ಹೊರಗೆ ಬಿದ್ರೆ ಮಳೆಯಲ್ಲಿ ನೆನೆಯುವುದು ಅನಿವಾರ್ಯವಾಗುತ್ತದೆ. ಇದು ಆರೋಗ್ಯವನ್ನು ಹಾಳು ಮಾಡುತ್ತದೆ. ಅಲ್ಲದೆ ರಸ್ತೆಯಲ್ಲಿ ನಿಂತಿರುವ ನೀರು ಹಾಗೂ ಕೆಸರು ನೀರಿನಿಂದಲೂ ದೂರವಿರಬೇಕಾಗುತ್ತದೆ. ಇದರಿಂದ ಅನೇಕ ವೈರಲ್ ರೋಗಗಳು ಮತ್ತು ಚರ್ಮದ ಸೋಂಕು ಕಾಣಿಸಿಕೊಳ್ಳುತ್ತದೆ.  ಮಧುಮೇಹಿಗಳು ಮಳೆಗಾಲದ ಹೊರಗೆ ಹೋಗುವುದು ಸೂಕ್ತವಲ್ಲ. ಅನಿವಾರ್ಯವಾದ್ರೆ ಮನೆ ಅಥವಾ ಕಚೇರಿ ತಲುಪಿದ ತಕ್ಷಣ ಪಾದಗಳನ್ನು ಸಾಬೂನು ಮತ್ತು ಶುದ್ಧ ನೀರಿನಿಂದ ಚೆನ್ನಾಗಿ ತೊಳೆಯಬೇಕು. ಒದ್ದೆಯಾದ ಸಾಕ್ಸ್ ಅಥವಾ ಆರ್ದ್ರ ಬೂಟುಗಳನ್ನು ಧರಿಸಬಾರದು.  

SEX EDUCATION: ಸೆಕ್ಸ್ ವೇಳೆ ಹೃದಯಾಘಾತವಾಗತ್ತೆ, ಅದಕ್ಕೆ ಮೂಲ ಕಾರಣ ಇಲ್ಲಿದೆ

ವಿದ್ಯುತ್ ತಂತಿಗಳಿಂದ ದೂರವಿರಿ :  ಮಳೆಗಾಲದಲ್ಲಿ ಹರಿಸಬೇಕಾದದ್ದು ವಿದ್ಯುತ್ ತಂತಿಗಳಿಂದ ದೂರವಿರಬೇಕು. ಜೋರು ಮಳೆಯಾದರೆ ಮನೆಯಿಂದ ಹೊರಡುವಾಗ ವಿದ್ಯುತ್ ಕಂಬಗಳ ಮೇಲೆ ಕಣ್ಣಿಡಿ. ಕೆಲವೊಮ್ಮೆ ಭಾರೀ ಮಳೆಗೆ ತಂತಿಗಳು ಮುರಿದು ರಸ್ತೆಗೆ ಬಿದ್ದಿರುತ್ತವೆ. ನಾವು ಆಕಸ್ಮಿಕವಾಗಿ ಒದ್ದೆಯಾದ ನೆಲ ಮತ್ತು ಮುರಿದ ತಂತಿಯ ಮೇಲೆ ಕಾಲನ್ನು ಇಡ್ತೇವೆ. ಇದು ಜೀವಕ್ಕೆ ಅಪಾಯಕಾರಿ. ಮನೆ ಅಕ್ಕಪಕ್ಕ ವಿದ್ಯುತ್ ತಂತಿ ಬಿದ್ದಿದ್ದರೆ ತಕ್ಷಣ ಎಚ್ಚರಿಕೆ ತೆಗೆದುಕೊಂಡು ಅದನ್ನು ಸರಿಪಡಿಸಲು ವಿದ್ಯುತ್ ಕಚೇರಿಗೆ ಕರೆ ಮಾಡಿ. ವಿದ್ಯುತ್ ತಂತಿಗಳು ಮತ್ತು ಕಂಬಗಳಿಂದಾಗುವ ಅಪಾಯಗಳ ಬಗ್ಗೆ ಮಕ್ಕಳಿಗೆ ತಿಳಿಸಿ. ಮಳೆಗಾಲದಲ್ಲಿ ನಿಮ್ಮ ವಾಹನವನ್ನು ಯಾವುದೇ ವಿದ್ಯುತ್ ತಂತಿ ಅಥವಾ ಯುಟಿಲಿಟಿ ಕಂಬಗಳ ಬಳಿ ನಿಲ್ಲಿಸಬೇಡಿ. 

ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿಡಿ :  ಮಳೆ ಬಂದಾಗ ಸೊಳ್ಳೆಗಳು, ಕಪ್ಪೆಗಳು ಅಥವಾ ಇತರ ಮಳೆ ಕೀಟಗಳು ಮನೆಗೆ ಬರಲು ಪ್ರಾರಂಭಿಸುತ್ತವೆ. ಇದಲ್ಲದೇ ಜೋರು ಮಳೆಯ ಸಂದರ್ಭದಲ್ಲಿ ಮನೆಯೊಳಗೆ ಮಳೆ ನೀರು ಕೂಡ ಬರುತ್ತದೆ. ಇದರಿಂದಾಗಿ ಮನೆ ತೇವಗೊಳ್ಳುವ ಜೊತೆಗೆ ವಾಸನೆ ಬರಲು ಶುರುವಾಗುತ್ತದೆ.  ಮಳೆ ನೀರು ಮನೆಯೊಳಗೆ ಬರದಂತೆ ತಡೆಯಲು, ಮಳೆ ಬಂದ ತಕ್ಷಣ ಕಿಟಕಿ, ಬಾಗಿಲುಗಳನ್ನು ಸರಿಯಾಗಿ ಮುಚ್ಚಬೇಕು. ಮತ್ತೊಂದೆಡೆ, ಮನೆಯಲ್ಲಿ ಯಾವುದೇ ಗೋಡೆ ಅಥವಾ ಮೇಲ್ಛಾವಣಿ ಬಿರುಕು ಬಿಟ್ಟರೆ  ಅದನ್ನು ಸರಿಪಡಿಸಬೇಕು. 

ಹೆಚ್ಚು ಹೈಟ್ ಇರೋ ಪುರುಷರನ್ನು ಕಾಡುತ್ತೆ ನರ ನೋವಿನ ಸಮಸ್ಯೆ !

ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಿ : ಮಳೆ ನೀರು ನಿಂತಿರುವುದರಿಂದ ಸೊಳ್ಳೆ, ನೊಣಗಳು ಮನೆಗೆ ನುಗ್ಗುತ್ತಿವೆ. ಇದರಿಂದ ಮಲೇರಿಯಾ, ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ ಸೇರಿದಂತೆ ಹಲವು ರೋಗಗಳು ಬರಬಹುದು. ಹಾಗಾಗಿ ಮನೆ ಬಳಿ ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.  

ಎಚ್ಚರಿಕೆಯಿಂದ ವಾಹನ ಚಲಾಯಿಸಿ : ಮಳೆಗಾಲದಲ್ಲಿ ಆತುರ ಬೇಡ. ಮಳೆ ನೀರು ಹೊಂಡದಲ್ಲಿ ನಿಂತಿರುತ್ತದೆ. ಅದು ಗೊತ್ತಾಗದೆ ವಾಹನ ಚಲಾಯಿಸಿದ್ರೆ ಅಪಾಯ ನಿಶ್ಚಿತ. ಹಾಗಾಗಿ  ದ್ವಿಚಕ್ರ ವಾಹನ ಸವಾರರು ಹೆಚ್ಚು ಜಾಗರೂಕತೆಯಿಂದ ಸವಾರಿ ಮಾಡಬೇಕು.

ಬಟ್ಟೆಗಳ ರಕ್ಷಣೆ : ಮಳೆಗಾಲದಲ್ಲಿ ಬಟ್ಟೆಗಳಿಗೆ ಫಂಗಸ್ ಕಾಣಿಸಿಕೊಳ್ಳುತ್ತದೆ. ಅದ್ರಿಂದ ಕೆಟ್ಟ ವಾಸನೆ ಬರ್ತಿರುತ್ತದೆ. ಪಿಠೋಪಕರಣಗಳಿಗೂ ಫಂಗಸ್ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಅವುಗಳನ್ನು ಸುರಕ್ಷಿತವಾಗಿಡಲು ಕ್ರಮಕೈಗೊಳ್ಳಬೇಕು. 

 

 Monsoon safety tips to be healthy happy and safe


 

Latest Videos
Follow Us:
Download App:
  • android
  • ios