Asianet Suvarna News Asianet Suvarna News

Mental Health : ಜೀವನದ ಸುಖವನ್ನೇ ಕಸಿಯುತ್ತೆ ಈ ಮಾನಸಿಕ ಸಮಸ್ಯೆ

ದೈಹಿಕ ಹಾಗೂ ಮಾನಸಿಕ ಆರೋಗ್ಯ ಎರಡೂ ಮುಖ್ಯ. ಒಂದು ಹಳಿ ತಪ್ಪಿದ್ರೂ ಜೀವನ ಬಂಡಿ ಎಳೆಯೋದು ಕಷ್ಟ. ಈಗಿನ ದಿನಗಳಲ್ಲಿ ದೈಹಿಕ ಅನಾರೋಗ್ಯದ ಜೊತೆ ಮಾನಸಿಕ ಆರೋಗ್ಯ ಕೂಡ ಹದಗೆಡುತ್ತಿದೆ. 
 

Mental Disorders Symptoms Disturb A Persons Life
Author
First Published Mar 26, 2023, 7:00 AM IST

ಮೆದುಳು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ದೈಹಿಕ ಸಮಸ್ಯೆ ಕಾಣಿಸಿಕೊಂಡ್ರೂ ಅದನ್ನು ಜಯಿಸುವ ಶಕ್ತಿ ಮೆದುಳಿಗಿರಬೇಕು. ನಮ್ಮ ಮನಸ್ಸು ಸದೃಢವಾಗಿದ್ದರೆ ಎಂಥ ಸಮಸ್ಯೆಯನ್ನು ಕೂಡ ಧೈರ್ಯವಾಗಿ ಎದುರಿಸಬಹುದು. ಮೆದುಳು, ದೇಹದ ಅಂಗಗಳ ಕಾರ್ಯಾಚರಣೆಗೆ ಬಹಳ ಮುಖ್ಯ. ಮೆದುಳು ಸರಿಯಾಗಿದ್ದರ ಮೂತ್ರಪಿಂಡ, ಯಕೃತ್ತು ಮತ್ತು ಇತರ ಅಂಗಾಗ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. 

ಮೆದುಳಿ (Brain) ನ ಆರೋಗ್ಯ (Health)  ಹದಗೆಟ್ಟಾಗ ಇತರ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಮಾನಸಿಕ (Mental) ಕಾಯಿಲೆಯ ಲಕ್ಷಣಗಳು ಸಮಯಕ್ಕೆ ಸರಿಯಾಗಿ ಪತ್ತೆಯಾಗೋದಿಲ್ಲ. ಅನೇಕ ರೋಗದ ಲಕ್ಷಣವನ್ನು ನಾವು ನಿರ್ಲಕ್ಷ್ಯ ಮಾಡ್ತೇವೆ. ಸಾಮಾನ್ಯವಾಗಿ ದೇಹಕ್ಕೆ ಗಾಯ (Injury) ವಾದ್ರೆ ವೈದ್ಯರ ಬಳಿ ಓಡುವ ಜನರು, ಮನಸ್ಸಿನಲ್ಲಿ ದೊಡ್ಡ ಏರುಪೇರಾಗ್ತಿದ್ದರೂ ವೈದ್ಯರ ಬಳಿ ಹೋಗುವುದಿಲ್ಲ. ಮಾನಸಿಕ ಸಮಸ್ಯೆ ಬಗ್ಗೆ ಬಹಿರಂಗವಾಗಿ ಹೇಳಲು ನಾಚಿಕೆ, ಭಯ ನಮಗಿರುತ್ತದೆ. 

WOMEN HEALTH: ಚೈತ್ರ ನವರಾತ್ರಿ ಸಂದರ್ಭದಲ್ಲಿ ಮಹಿಳೆಯರು ಮಾಡಿ ಈ ಪ್ರಮಾಣ

ಮಾನಸಿಕ ರೋಗ ಲಕ್ಷಣಗಳನ್ನು ಸರಿಯಾಗಿ ಪತ್ತೆ ಮಾಡಲು ನಾವು ವಿಫಲವಾದಾಗ ಒಂಟಿತನ, ತಲೆನೋವು, ಹಸಿವಿನ ನಷ್ಟ, ಏಕಾಗ್ರತೆಯ ಕೊರತೆ ಸೇರಿದಂತೆ ಅನೇಕ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ನಾವಿಂದು ಮುಖ್ಯವಾದ ಕೆಲ ಮಾನಸಿಕ ಸಮಸ್ಯೆಗಳ ಬಗ್ಗೆ ನಿಮಗೆ ಹೇಳ್ತೇವೆ. ಅದನ್ನು ನಿರ್ಲಕ್ಷ್ಯ ಮಾಡಿದ್ರೆ ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದ್ರೆ ಮಾನಸಿಕ ಹಾಗೂ ದೈಹಿಕ (Physical) ಎರಡೂ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. 

ಮಾನಸಿಕವಾಗಿ ಕಾಡುತ್ತೆ ಈ ಎಲ್ಲ ಸಮಸ್ಯೆ :
ಫೋಬಿಯಾ (Phobia) :
 ಫೋಬಿಯಾ ಒಂದು ಮಾನಸಿಕ ಅಸ್ವಸ್ಥತೆಯಾಗಿದೆ. ಈ ರೋಗದಿಂದ ಬಳಲುವ ವ್ಯಕ್ತಿ, ವಿಶೇಷ ವಸ್ತು, ಪರಿಸ್ಥಿತಿ ಅಥವಾ ಯಾವುದೇ ಚಟುವಟಿಕೆ ಬಗ್ಗೆ ಹೆದರುತ್ತಾನೆ. ಆತನಲ್ಲಿ ನಡುಕ ಶುರುವಾಗುತ್ತದೆ. ಬೆವರುತ್ತಾನೆ.  ಸುತ್ತಲೂ ನಡೆಯುತ್ತಿರುವ ಘಟನೆಗಳು ಗಂಭೀರವಾಗಿಲ್ಲದೆ ಹೋದ್ರೂ ಭಯ ಆತನನ್ನು ಆವರಿಸುತ್ತದೆ. ಫೋಬಿಯಾದಲ್ಲಿ ಅನೇಕ ವಿಧಗಳಿವೆ. ಅದನ್ನು ಆರಂಭದಲ್ಲಿಯೇ ಪತ್ತೆಮಾಡಿ ಚಿಕಿತ್ಸೆ ಪಡೆಯೋದು ಒಳ್ಳೆಯದು.  

Summer Heat: ಬಿಸಿಲಲ್ಲಿ ಹೆಚ್ಚು ಹೊತ್ತು ಮೊಬೈಲ್ ಬಳಸೋದು ಡೇಂಜರ್

ಖಿನ್ನತೆ (Depression) : ಸಂದೇಶವನ್ನು ಮನಸ್ಸಿಗೆ ತಲುಪಿಸಲು ಕೆಲಸವನ್ನು ನರಗಳು ಮಾಡುತ್ತವೆ. ಇವುಗಳಲ್ಲಿ ಪ್ರಮುಖವಾದುದು ಸೆರಾಟೋನಿನ್. ಇದು ಮನಸ್ಥಿತಿಯನ್ನು ನಿಯಂತ್ರಿಸುತ್ತದೆ. ಇದು ಮೆದುಳಿನಿಂದ ಜೀರ್ಣಾಂಗ ವ್ಯವಸ್ಥೆವರೆಗೆ ಸಂದೇಶವನ್ನು ರವಾನೆ ಮಾಡುತ್ತದೆ. ಸೆರಾಟೋನಿನ್ ಕೊರತೆಯಾದ್ರೆ ಖಿನ್ನತೆಯ ಸ್ಥಿತಿ ನಿರ್ಮಾಣವಾಗುತ್ತದೆ. ಸೆರಾಟೋನಿನ್ ಹೊರತುಪಡಿಸಿ, ಇತರ ನ್ಯೂರೋಟ್ರಾನ್ಸ್ ಮೀಟರ್ ಸಹ ಪ್ರಮುಖ ಕೆಲಸ ಮಾಡುತ್ತವೆ. ಇದರಲ್ಲಿ ಡೋಪಮೈನ್ ಕೂಡ ಒಂದು.ಇದನ್ನು ಹ್ಯಾಪಿ ಹಾರ್ಮೋನ್ ಎಂದು ಕರೆಯಲಾಗುತ್ತದೆ. ಇದರ ಕೊರತೆಯು ಖಿನ್ನತೆಯ ಸ್ಥಿತಿಯನ್ನು ಸೃಷ್ಟಿಸುತ್ತದೆ.

ಪರ್ಸನಾಲ್ಟಿ ಡಿಸಾರ್ಡರ್ (Personality Disorder) :  ಈ ಖಾಯಿಲೆಯಲ್ಲಿ ಜನರಿಗೆ ವ್ಯಕ್ತಿಯನ್ನು  ಅರ್ಥಮಾಡಿಕೊಳ್ಳುವ ಮತ್ತು ಆತನ ಜೊತೆ ಸಂಬಂಧ ಬೆಳೆಸಲು ಸಮಸ್ಯೆಯಾಗುತ್ತದೆ. ಇದ್ರಿಂದ ಸಂಬಂಧ ಹದಗೆಡುತ್ತದೆ. ಸಾರ್ವಜನಿಕ ಚಟುವಟಿಕೆಗಳು ಕಡಿಮೆಯಾಗುತ್ತವೆ. ಶಾಲೆಯಲ್ಲಿ, ಮನೆಯಲ್ಲಿ ಒಬ್ಬಂಟಿಯಾಗಿರಲು ಬಯಸ್ತಾರೆ.

ಮೂಡ್ ಡಿಸಾರ್ಡರ್ (Mood Disorder) : ಮೂಡ್ ಡಿಸಾರ್ಡರ್, ವ್ಯಕ್ತಿಯ ಭಾವನೆಯ ಮೇಲೆ ಪರಿಣಾಮ ಬೀರುತ್ತದೆ. ಈ ವ್ಯಕ್ತಿಗೆ ಒಮ್ಮೆ ದುಃಖ ಕಾಡಿದ್ರೆ ಮತ್ತೊಮ್ಮೆ ವಿಪರೀತ ಸಂತೋಷವಾಗುತ್ತದೆ. ಇನ್ನೊಮ್ಮೆ ಕೋಪಬರುತ್ತದೆ. ಅನಾವಶ್ಯಕ ಕಿರಿಕಿರಿಯಾಗುತ್ತದೆ. ಯಾವಾಗ ಏನಾಗುತ್ತೆ ಎಂಬುದು ಈ ವ್ಯಕ್ತಿಗೆ ತಿಳಿಯೋದಿಲ್ಲ. 

ಇಟಿಂಗ್ ಡಿಸಾರ್ಡರ್ (Eating Disorder): ಇಟಿಂಗ್ ಡಿಸಾರ್ಡರ್  ಒಂದು ರೀತಿಯ ಮಾನಸಿಕ ಸಮಸ್ಯೆಯಾಗಿದೆ. ಇದರಲ್ಲಿ, ಒಬ್ಬ ವ್ಯಕ್ತಿಯು ಹೆಚ್ಚು ಹಸಿವಿನಿಂದ ಬಳಲುತ್ತಾನೆ. ಎಷ್ಟು ತಿಂದ್ರೂ ಆತನ ಹಸಿವು ನಿಗೋದಿಲ್ಲ. ಈ ರೋಗದಿಂದ ಬಳಲುವ ಕೆಲವರಿಗೆ ಹಸಿವಾಗೋದಿಲ್ಲ. ಅವರು ಏನನ್ನು ತಿನ್ನಲೂ ಇಷ್ಟಪಡೋದಿಲ್ಲ. ಆಗ ಅವರಿಗೆ ತೂಕ ಇಳಿಯಲು ಶುರುವಾಗುತ್ತದೆ. ಇದ್ರಿಂದ ಮತ್ತಷ್ಟು ಸಮಸ್ಯೆ ಎದುರಾಗುತ್ತದೆ. 
 

Follow Us:
Download App:
  • android
  • ios