ಮಲೇರಿಯಾ (Malaria) ಚಿಕಿತ್ಸೆಗೆ ನೀಡುವ ಔಷಧಗಳು ಶ್ವಾಸಕೋಶದ ಸಮಸ್ಯೆ (Respiratory Disease)ಗಳಿಗೆ ಪರಿಣಾಮಕಾರಿಯಾಗಬಲ್ಲವು. ಸಂಶೋಧಕರು ಇತ್ತೀಚಿಗೆ ಇದನ್ನು ಪತ್ತೆ ಮಾಡಿದ್ದಾರೆ. ಹೆಚ್ಚು ಔಷಧ (Medicine) ಲಭ್ಯವಿಲ್ಲದ ಶ್ವಾಸಕೋಶದ ಸೋಂಕು ರೋಗಕ್ಕೆ ಇದು ಹೊಸ ದಿಕ್ಕು ನೀಡಬಲ್ಲದು. 

ಶ್ವಾಸಕೋಶದ (Lungs) ಸಮಸ್ಯೆಗಳು, ಸೋಂಕುಗಳು (Infection) ಇತ್ತೀಚಿನ ದಿನಗಳಲ್ಲಿ ಅತ್ಯಂತ ಸಾಮಾನ್ಯವಾಗಿದ್ದು, ಎಲ್ಲರನ್ನೂ ಬಾಧಿಸುತ್ತಿವೆ. ಶ್ವಾಸಕೋಶದ ಸೋಂಕುಗಳಿಗೆ ನಿರ್ದಿಷ್ಟ ಔಷಧಗಳನ್ನು ಕಂಡುಹಿಡಿಯಲು ನಿರಂತರವಾಗಿ ತಜ್ಞರು ಶ್ರಮಿಸುತ್ತಲೇ ಇದ್ದಾರೆ. 
ಸಂಶೋಧಕರ ಪ್ರಕಾರ, ಪರಿಸರದಲ್ಲಿನ ಕೊರತೆ ಅಥವಾ ಬೆದರಿಕೆ(Threat)ಗಳಿಗೆ ನಮ್ಮ ದೇಹದ ಬ್ಯಾಕ್ಟೀರಿಯಾಗಳು (Bacteria) ಸ್ಪಂದಿಸುತ್ತಿರುತ್ತವೆ. ಆಕ್ಸಿಜನ್ (Oxigen) ಕೊರತೆ, ಕೆಲವು ರೀತಿಯ ಒತ್ತಡಗಳು, ಆಸಿಡಿಕ್ ಪಿಎಚ್ ಮಟ್ಟ ಮುಂತಾದವುಗಳ ವಿರುದ್ಧ ನಿರಂತರವಾಗಿ ಸೆಣಸುತ್ತಿರುತ್ತವೆ. ನಮ್ಮ ದೇಹ (Body) ನೈಸರ್ಗಿಕವಾಗಿ ರೋಗಗಳ ವಿರುದ್ಧ ಹೋರಾಟ ನಡೆಸುವ ವಿಧಾನವೇ ಹೀಗೆ.

ಇದೇ ಮಾದರಿಯಲ್ಲಿ ಶ್ವಾಸಕೋಶದ ಸೋಂಕುಗಳ ವಿರುದ್ಧವೂ ಹೋರಾಟ ನಡೆಸುತ್ತವೆ. ಆದರೆ, ಇದಕ್ಕೆ ಪರಿಣಾಮಕಾರಿಯಾದ ಚಿಕಿತ್ಸೆಯ ಅಗತ್ಯವಿರುತ್ತದೆ. ಇದೀಗ, ಶ್ವಾಸಕೋಶದ ಸೋಂಕುಗಳಿಗೆ ಹೆಚ್ಚು ಪರಿಣಾಮ ಬೀರುವಂತಹ ಔಷಧವನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. 

ಮಲೇರಿಯಾಕ್ಕೆ ಕಾರಣವಾಗುವ ಸೊಳ್ಳೆಗಳನ್ನು ಗುರುತಿಸುವುದು ಈಗ ಸುಲಭ !

ಅದೆಂದರೆ, ಮಲೇರಿಯಾಕ್ಕೆ (Malaria) ನೀಡುವ ಔಷಧ. ಕ್ಷಯ (Tuberculosis) ರೋಗಕ್ಕೆ ಸಮನಾದ ಆದರೆ, ಕ್ಷಯವಲ್ಲದ ಶ್ವಾಸಕೋಶದ ಸೋಂಕಿಗೆ ಮಲೇರಿಯಾಕ್ಕೆ ನೀಡುವ ಔಷಧಗಳು ಅತ್ಯಂತ ಪರಿಣಾಮಕಾರಿಯಾಗಿವೆ ಎನ್ನುವುದನ್ನು ಅಮೆರಿಕದ ಕೊಲರಾಡೋ ವಿಶ್ವವಿದ್ಯಾಲಯದ ತಜ್ಞರು ಗುರುತಿಸಿದ್ದಾರೆ. “ಸೈನ್ಸ್ ಆಫ್ ಟ್ರಾನ್ಸ್ ಲೇಷನಲ್ ಮೆಡಿಸಿನ್’(Science of Translational Medicine) ಎನ್ನುವ ನಿಯತಕಾಲಿಕದಲ್ಲಿ ಈ ಕುರಿತು ಅಧ್ಯಯನ ವರದಿ ಪ್ರಕಟವಾಗಿದೆ. ನಾನ್ ಟ್ಯೂಬರ್ ಕ್ಯುಲೊಸ್ ಮೈಕೋಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಟ ನಡೆಸುವಲ್ಲಿ ಈ ಅಧ್ಯಯನ ಹೆಚ್ಚು ಬೆಳಕು ಚೆಲ್ಲಿದೆ. ಅಲ್ಲದೆ, ಇದರ ಚಿಕಿತ್ಸೆಗೆ ಹೊಸದೊಂದು ಬೆಳವಣಿಗೆಗೆ ಕಾರಣವಾಗಿದೆ. 

ಶ್ವಾಸಕೋಶದ ಸೋಂಕು ಹೆಚ್ಚಳ
ಇಂದು ವಿಶ್ವಾದ್ಯಂತ ಶ್ವಾಸಕೋಶದ ಸೋಂಕು ಅತಿ ಸಾಮಾನ್ಯವಾಗಿದೆ. ಬದಲಾದ ವಾತಾವರಣದಿಂದಾಗಿ ಜನರ ರೋಗ ನಿರೋಧಕ ಶಕ್ತಿ ಕುಸಿದಿದೆ ಅಥವಾ ದುರ್ಬಲಗೊಂಡಿದೆ. ಹೀಗಾಗಿ, ಕ್ಷಯಕ್ಕಿಂತಲೂ ಶ್ವಾಸಕೋಶದ ಸೋಂಕೇ ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತಿದೆ. 
“ಪ್ರಸ್ತುತ, ನಾನ್ ಟ್ಯೂಬರ್ ಕ್ಯುಲೊಸ್ ಮೈಕೋಬ್ಯಾಕ್ಟೀರಿಯಾ ಸೋಂಕಿಗೆ ಕೆಲವೇ ಕೆಲವು ಆಂಟಿಬಯಾಟಿಕ್ ಔಷಧಗಳು ಲಭ್ಯ ಇವೆ. ಅದರಲ್ಲೂ ಕೆಲವು ರೋಗಿಗಳು ಈ ಔಷಧಕ್ಕೂ ಸಹ ಪ್ರತಿಕ್ರಿಯೆ ನೀಡುವುದಿಲ್ಲ. ಅಂದರೆ, ಸೋಂಕನ್ನು ನಿಯಂತ್ರಿಸಲು ಅವು ಪ್ರಯೋಜನಕ್ಕೆ ಬರುತ್ತಿಲ್ಲ’ ಎನ್ನುತ್ತಾರೆ ಮೈಕ್ರೋಬಯಾಲಜಿ, ಇಮ್ಯೂನೋಲಜಿ ಹಾಗೂ ಪೆಥಾಲಜಿಯ ಪ್ರಾಧ್ಯಾಪಕ ಮೇರಿ ಜಾಕ್ಸನ್ (Mary Jackson). ಇವರು ಈ ವರದಿಯ ಪ್ರಮುಖ ಲೇಖಕರಲ್ಲಿ ಒಬ್ಬರಾಗಿದ್ದಾರೆ. 

ಜೀವಕ್ಕೆ ಮಾರಕವಾಗುವ ಮಲೇರಿಯಾ ಸಮಸ್ಯೆ ಕಾಡಬಹುದು.. ಸೊಳ್ಳೆಗಳಿಂದ ದೂರವಿರಿ...

ಮಲೇರಿಯಾ ನಿರೋಧಕ ಔಷಧಗಳ ಪರಿಣಾಮದ ಕುರಿತು ಈಗಾಗಲೇ ಕ್ಲಿನಿಕಲ್ ಪ್ರಯೋಗಗಳು ಸಹ ನಡೆದಿದ್ದು, ಯಶಸ್ವಿಯಾಗಿವೆ. ಅದರ ಪ್ರಕಾರ, ತಕ್ಷಣದ ಪರಿಣಾಮ ಬೀರುವಲ್ಲಿ ಈ ಔಷಧಗಳು ಹೆಚ್ಚು ಪರಿಣಾಮಕಾರಿಯಾಗಿವೆ. ಮೈಕೋಬ್ಯಾಕ್ಟೀರಿಯಮ್ ವಿರುದ್ಧ ಕೆಲವು ಔಷಧಗಳು ಉತ್ತಮ ಮಟ್ಟದಲ್ಲಿ ಕೆಲಸ ಮಾಡುತ್ತವೆ. ಆದರೆ, ಕೆಲವು ಔಷಧಗಳು ವಿಷಕಾರಿಯಾಗುತ್ತವೆ ಹಾಗೂ ಅಡ್ಡ ತೊಂದರೆಗಳಿಗೆ ಕಾರಣವಾಗುತ್ತವೆ ಎಂದು ಜಾಕ್ಸನ್ ಹೇಳಿದ್ದಾರೆ. 

ಈ ಔಷಧಗಳಿಂದ ಉಸಿರಾಟಕ್ಕೆ ಸಂಬಂಧಿಸಿದ ಬ್ಯಾಕ್ಟೀರಿಯಂ (Bacterium) ಅಂದರೆ ಬ್ಯಾಕ್ಟೀರಿಯಾಗಳ ಗುಂಪು ತಮ್ಮದೇ ಆದ ರೀತಿಯ ಜೈವಿಕಪರದೆಗಳಂತಹ ರಚನೆ ಮಾಡಿಕೊಳ್ಳಲು ಹಾಗೂ ರೋಗಕಾರಕಗಳ ಸಂಖ್ಯೆ ದ್ವಿಗುಣಗೊಳ್ಳಲು ಸಾಧ್ಯವಾಗದ ನಿಶ್ಚಲ ಸ್ಥಿತಿಗೆ ಬರುತ್ತವೆ. ಮೊದಲು ಇಲಿಗಳ ಮೇಲೆ ನಡೆದ ಪ್ರಯೋಗದಲ್ಲಿ ಎರಡು ಆಂಟಿಮಲೇರಿಯಾ ಔಷಧಗಳಿಂದ ದೇಹದ ಬ್ಯಾಕ್ಟೀರಿಯಾಗಳು ಒತ್ತಡಕ್ಕೆ ಒಳಗಾಗಿದ್ದವು. ಅಂದರೆ, ನೈಸರ್ಗಿಕವಾಗಿ ರೋಗ ನಿರೋಧಕ ಶಕ್ತಿಯೂ ಜಾಗೃತವಾಗಿತ್ತು. 

ಮಲೇರಿಯಾ ಆಂಟಿಬಯಾಟಿಕ್ಸ್ (Antibiotics) ಮೂಲಕ ಶ್ವಾಸಕೋಶದಲ್ಲಿ ಬ್ಯಾಕ್ಟೀರಿಯಾ ಸಂಖ್ಯೆಯನ್ನು ಹೆಚ್ಚಿಸಬಹುದು ಹಾಗೂ ರೋಗದ ವಿರುದ್ಧ ಹೋರಾಡುವಂತೆ ಮಾಡಬಹುದು ಎಂದಿದ್ದಾರೆ ವೈದ್ಯರು.ಈ ನೂತನ ಸಂಶೋಧನೆಯು ಶ್ವಾಸಕೋಶದ ಸೋಂಕುಗಳ ಹೊಸ ರೀತಿಯ ಚಿಕಿತ್ಸಾ ವಿಧಾನಕ್ಕೂ ನಾಂದಿಯಾಗಬಲ್ಲವು ಎನ್ನಲಾಗಿದೆ.