ಜೀವಕ್ಕೆ ಮಾರಕವಾಗುವ ಮಲೇರಿಯಾ ಸಮಸ್ಯೆ ಕಾಡಬಹುದು.. ಸೊಳ್ಳೆಗಳಿಂದ ದೂರವಿರಿ...

First Published Apr 27, 2021, 5:04 PM IST

ಮಲೇರಿಯಾ ಜ್ವರವು ಸೊಳ್ಳೆಗಳಿಂದ ಉಂಟಾಗುವ ಒಂದು ರೀತಿಯ ಸಾಂಕ್ರಾಮಿಕ ರೋಗವಾಗಿದೆ, ಇದು ಹೆಣ್ಣು ಅನೋಫಿಲಿಸ್ ಸೊಳ್ಳೆಯ ಕಡಿತದಿಂದ ಉಂಟಾಗುತ್ತದೆ. ಮಲೇರಿಯಾ ಜೀವವನ್ನೆ ತೆಗೆಯುವ ಗುಣವನ್ನು ಸಹ ಹೊಂದಿದೆ. ಇದನ್ನು ನೆಗ್ನೆಟ್ ಮಾಡುವಂತಿಲ್ಲ.  ಈ ಹೆಣ್ಣು ಸೊಳ್ಳೆಯು ವೈದ್ಯಕೀಯ ಪರಿಭಾಷೆಯಲ್ಲಿ ಪ್ಲಾಸ್ಮೋಡಿಯಂ ಎಂದು ಕರೆಯಲ್ಪಡುವ ಒಂದು ನಿರ್ದಿಷ್ಟ ರೀತಿಯ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ. ಮಲೇರಿಯಾ ಹರಡುವ ಈ ಹೆಣ್ಣು ಸೊಳ್ಳೆಯಲ್ಲಿ 5 ಜಾತಿಯ ಬ್ಯಾಕ್ಟೀರಿಯಾಗಳಿವೆ ಎಂದು ಈ ರೋಗದಿಂದ ಬಳಲುತ್ತಿರುವ ಜನರಿಗೆ ತಿಳಿದಿಲ್ಲ.