ಮೆಗ್ನೀಷಿಯಂ ಅಂಶ ಕಡಿಮೆಯಾದರೆ ಹೃದಯ ಬಡಿತದಲ್ಲಿ ಏರುಪೇರಾಗಬಹುದು. ಇದರಿಂದ ತಲೆತಿರುಗುವಿಕೆ ಅಥವಾ ಪ್ರಜ್ಞಾಹೀನತೆ ಉಂಟಾಗಬಹುದು.

ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್‌ನಂತೆ ಮೆಗ್ನೀಷಿಯಂ ಕೂಡ ಆರೋಗ್ಯಕ್ಕೆ ಬಹಳ ಮುಖ್ಯ. ಮೆಗ್ನೀಷಿಯಂ ಕೊರತೆಯಿಂದ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಇದು ಮುಖ್ಯವಾಗಿ ಹೃದಯದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಮೆಗ್ನೀಷಿಯಂ ಹೃದಯವನ್ನು ಆರೋಗ್ಯಕರವಾಗಿ ಮತ್ತು ಬಲವಾಗಿಡಲು ಸಹಾಯ ಮಾಡುತ್ತದೆ.

ಮೆಗ್ನೀಷಿಯಂ ಅಂಶ ಕಡಿಮೆಯಾದರೆ ಹೃದಯ ಬಡಿತದಲ್ಲಿ ಏರುಪೇರಾಗಬಹುದು. ಇದು ಹೃದಯ ಬಡಿತ ಅಥವಾ ಅಸಹಜ ಹೃದಯ ಬಡಿತಕ್ಕೆ ಕಾರಣವಾಗಬಹುದು. ಕೆಲವು ಸಂದರ್ಭಗಳಲ್ಲಿ ತಲೆತಿರುಗುವಿಕೆ ಅಥವಾ ಪ್ರಜ್ಞಾಹೀನತೆ ಉಂಟಾಗಬಹುದು. ಸಾಕಷ್ಟು ಮೆಗ್ನೀಷಿಯಂ ಸಿಗದಿದ್ದಾಗ ರಕ್ತನಾಳಗಳು ಕುಗ್ಗುತ್ತವೆ. ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯದ ಮೇಲೆ ಒತ್ತಡ ಉಂಟಾಗುತ್ತದೆ. 

ಸರಿಯಾದ ಪ್ರಮಾಣದಲ್ಲಿ ಮೆಗ್ನೀಷಿಯಂ ಇಲ್ಲದಿದ್ದರೆ ಹೃದಯದ ಸ್ನಾಯು ಅಂಗಾಂಶ ದುರ್ಬಲಗೊಳ್ಳುತ್ತದೆ. ಈ ದೌರ್ಬಲ್ಯವು ಕಾರ್ಡಿಯೋಮಯೋಪತಿ ಎಂಬ ಸ್ಥಿತಿಗೆ ಕಾರಣವಾಗಬಹುದು. ಇದರಿಂದ ಹೃದಯವು ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗುವುದಿಲ್ಲ. ಇದು ಆಯಾಸ, ಉಸಿರಾಟದ ತೊಂದರೆ ಮತ್ತು ಹೃದಯ ಸ್ತಂಭನಕ್ಕೆ ಕಾರಣವಾಗಬಹುದು.

ದೊಡ್ಡವರಂತೆ ಪುಟ್ಟ 'ಮಕ್ಕಳು ತಲೆ ದಿಂಬು ಇಟ್ಟು ಮಲಗಬಹುದಾ?

ಮೆಗ್ನೀಷಿಯಂ ಕೊರತೆಯು ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ. ಆರೋಗ್ಯಕರ ರಕ್ತ ಪರಿಚಲನೆ ಕಾಪಾಡಿಕೊಳ್ಳಲು ಮತ್ತು ಅನಗತ್ಯ ಹೆಪ್ಪುಗಟ್ಟುವಿಕೆಯನ್ನು ತಪ್ಪಿಸಲು ಮೆಗ್ನೀಷಿಯಂ ಸಹಾಯ ಮಾಡುತ್ತದೆ. ಮೆಗ್ನೀಷಿಯಂ ಪ್ರಮಾಣ ಕಡಿಮೆಯಾದರೆ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಹೆಚ್ಚಾಗುತ್ತದೆ. 

ಗರ್ಭಿಣಿಯಾಗಿರೋವಾಗ ಗಂಡ-ಹೆಂಡ್ತಿ ಜಗಳವಾಡಿದ್ರೆ… ಹುಟ್ಟಲಿರುವ ಮಕ್ಕಳಲ್ಲಿ ಸಮಸ್ಯೆ ಖಚಿತ!

ಮೆಗ್ನೀಷಿಯಂ ಪಡೆಯಲು ತಿನ್ನಬೇಕಾದ ಆಹಾರಗಳು

1. ಚಿಯಾ ಬೀಜ (30 ಗ್ರಾಂ ಚಿಯಾ ಬೀಜದಲ್ಲಿ 95 ಮೈಕ್ರೋಗ್ರಾಂ ಮೆಗ್ನೀಷಿಯಂ ಇರುತ್ತದೆ)

2. ಬಾಳೆಹಣ್ಣು (ಒಂದು ಬಾಳೆಹಣ್ಣಿನಲ್ಲಿ 32 ಮೈಕ್ರೋಗ್ರಾಂ ಮೆಗ್ನೀಷಿಯಂ ಇರುತ್ತದೆ)

3. ಪಾಲಕ್ ಸೊಪ್ಪು

4. ಬಾದಾಮಿ (30 ಗ್ರಾಂ ಬಾದಾಮಿಯಿಂದ 80 ಮೈಕ್ರೋಗ್ರಾಂ ಮೆಗ್ನೀಷಿಯಂ ಸಿಗುತ್ತದೆ).

5. ನುಗ್ಗೆ ಸೊಪ್ಪು (100 ಗ್ರಾಂ ನುಗ್ಗೆ ಸೊಪ್ಪಿನಲ್ಲಿ 150 ಮೈಕ್ರೋಗ್ರಾಂ ಮೆಗ್ನೀಷಿಯಂ ಇರುತ್ತದೆ).

6. ಕುಂಬಳಕಾಯಿ ಬೀಜಗಳು 

7. ಬೆಣ್ಣೆಹಣ್ಣು