ಈಗ ಜಗತ್ತನ್ನು ನೊವೆಲ್‌ ಕೊರೊನಾ ವೈರಸ್‌ ಅಲಿಯಾಸ್‌ ಕೋವಿಡ್‌ 19 ಆಕ್ರಮಿಸಿರುವಂತೆಯೇ, 14ನೇ ಶತಮಾನದಲ್ಲಿ ಜಗತ್ತನ್ನು ಬ್ಯುಬೋನಿಕ್‌ ಪ್ಲೇಗ್‌ ಅಥವಾ ಬ್ಲ್ಯಾಕ್‌ ಪ್ಲೇಗ್‌ ಆಕ್ರಮಿಸಿತ್ತು. ಗ್ರೇಟ್ ಪ್ಲೇಗ್, ಬ್ಲ್ಯಾಕ್‌ ಡೆತ್‌ ಎಂದೆಲ್ಲ ಅದನ್ನು ಕರೆಯುತ್ತಿದ್ದರು. ಇದು ಮನುಕುಲ ಕಂಡ ಅತ್ಯಂತ ಕರಾಳ ಸಾಂಕ್ರಾಮಿಕ ರೋಗ. ಏನಿಲ್ಲ ಅಂದರೂ ಜಗತ್ತಿನಲ್ಲಿ ಸುಮಾರು 48 ಕೋಟಿ ಮಂದಿ ಈ ಪ್ಲೇಗ್‌ನಿಂದ ಮರಣ ಹೊಂದಿರಬಹುದು ಎಂಬ ಅಂದಾಜಿದೆ. ಇದು ಎಲ್ಲಿ ಹುಟ್ಟಿತು, ಹೇಗೆ ಹರಡಿತು, ಇದನ್ನು ತಡೆದಿದ್ದು ಹೇಗೆ ಎಂಬುದರ ಬಗ್ಗೆ ನಾನಾ ಕತೆಗಳಿವೆ. ಆದರೆ ಒಂದಂತೂ ಅನುಮಾನವಿಲ್ಲ. ಈ ಬ್ಲ್ಯಾಕ್‌ ಡೆತ್‌ ಹರಡಿದ ಬಗೆ ಮಾತ್ರ ಯಥಾವತ್‌ ಕೊರೊನಾ ವೈರಸ್‌ ಈಗ ಹೇಗೆ ಹರಡುತ್ತಿದೆಯೋ ಹಾಗೆ!
 

ಕ್ರಿಶ್ತಶಕ 1343ರಿಂದ 1357ರವರೆಗೆ ಇದು ದೊಡ್ಡ ಹಾವಳಿ ಎಬ್ಬಿಸಿತು. ಇದು ಹುಟ್ಟಿದ್ದು ಎಲ್ಲಿ ಎಂಬ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಆದರೆ ಮೊದಲು ಕಂಡುಬಂದದ್ದು ಮಾತ್ರ ಯುರೋಪ್‌ ಹಾಗೂ ರಷ್ಯಾಗಳ ನಡುವೆ ಇರುವ ಕ್ರಿಮಿಯಾದಲ್ಲಿ 1343ರಲ್ಲಿ. ಬಹುಶಃ ಇದು ಕೂಡ ಚೀನಾದಲ್ಲೇ ಹುಟ್ಟಿದ್ದಾಗಿರಬಹುದು ಎನ್ನಲಾಗುತ್ತದೆ. ಯಾಕೆಂದರೆ ಇದು ಆಗಮಿಸಿದ್ದು ಸಿಲ್ಕ್ ರೂಟ್‌ ಮುಖಾಂತರ. ಸಿಲ್ಕ್ ರೂಟ್‌ ಎಂದರೆ ಬರ್ಮಾದಿಂದ ಆರಂಭಿಸಿ ಚೀನಾ, ಟಿಬೆಟ್, ಪಾಕಿಸ್ತಾನ, ಅಫಘಾನಿಸ್ತಾನಗಳ ಮೂಲಕ ಹಾದು ಹೋಗಿ ಯುರೋಪನ್ನು ತಲುಪುವ ಮಹಾ ಹೆದ್ದಾರಿ. ಪ್ರಾಚೀನ ಕಾಲದ ವ್ಯಾಪಾರ ವ್ಯವಹಾರಗಳ ಓಡಾಟಗಳೆಲ್ಲ ಇದರ ಮೂಲಕವೇ ನಡೆಯುತ್ತಿದ್ದುದು. ಮೊದಲು ಇದು ಚೀನಾದ ಅಥವಾ ಬರ್ಮಾದಲ್ಲಿ ಹುಟ್ಟಿರಬಹುದು. ಅಲ್ಲಿಂದ ವ್ಯಾಪಾರಿಗಳ ಮೂಲಕ, ಸರಕು ಸಾಗಣೆಯ ಮೂಲಕ ಸಾಗಿ ಹೋಗಿ ಯುರೋಪನ್ನು ತಲುಪಿತು. ಅಲ್ಲಿಂದ ತನ್ನ ಹಾವಳಿ ಆರಂಭಿಸಿತು. ಮೊದಲು ಕಪ್ಪು ಇಲಿಗಳು ಸಾಯಲು ಆರಂಭಿಸಿದವು. ಇಲಿಗಳಿಂದ ಇದು ಮನುಷ್ಯರಿಗೆ ಹರಡಿತು. ಬ್ಯಾಕ್ಟೀರಿಯಂ ಯೆರ್ಸಿನಿಯಾ ಪೆಸ್ಟಿಸ್ ಎಂಬ ಬ್ಯಾಕ್ಟೀರಿಯಾ ಈ ರೋಗಕಾರಕವಾಗಿತ್ತು.

 

ಕಾರು ತಯಾರಿಗೆ ನಿಲ್ಲಿಸಿ ವೆಂಟಿಲೇಟರ್ ಉತ್ಪಾದನೆಗೆ ಮುಂದಾದ ಮಹೀಂದ್ರ
 

14ನೇ ಶತಮಾನದಲ್ಲಿ, ಈ ಪ್ಲೇಗ್‌ ಯುರೋಪಿನ ಸುಮಾರು 60% ಮಂದಿಯನ್ನು ಸರ್ವನಾಶ ಮಾಡಿತು ಎಂದು ಶಂಕಿಸಲಾಗಿದೆ. ಸುಮಾರು 20 ಕೋಟಿ ಮಂದಿ ಯುರೋಪಿನಲ್ಲೇ ಹತರಾದರು. ಈ ಜನಸಂಖ್ಯೆಯನ್ನು ಮರಳಿ ಗಳಿಸಲು ಯುರೋಪಿಗೆ 200 ವರ್ಷಗಳೇ ಬೇಕಾದವು. ಚೀನಾ ಹಾಗೂ ಭಾರತಗಳಲ್ಲೂ ಸಾಕಷ್ಟು ಮಂದಿ ಈ ಪ್ಲೇಗ್‌ನಿಂದ ಹತರಾದರು. ಈ ಅವಧಿಯ ಬಗ್ಗೆ ಯಾವುದೇ ಲಿಖಿತ ದಾಖಲೆಗಳೂ ಇಲ್ಲವಾದ್ದರಿಂದ ಮೃತರ ಸಂಖ್ಯೆ ಎಷ್ಟು ಎಂದು ತಿಳಿಯದು. ಆದರೆ ಈ ಪ್ಲೇಗ್‌ ಮರಳಿ 15ನೇ ಶತಮಾನದಲ್ಲಿ ಹಾಗೂ 19ನೇ ಶತಮಾನದಲ್ಲಿ ಮರಳಿ ಬಂತು. ಆಗಲೂ ಸಾವಿರಾರು ಮಂದಿ ಮೃತಪಟ್ಟರು. ಮೊದಲ ಬಾರಿ ಹಾಗೂ ನಂತರದ ಸಲಗಳಲ್ಲೂ ಈ ಪ್ಲೇಗ್‌ನ ಬಗ್ಗೆ ಅನೇಕ ತಪ್ಪು ಕಲ್ಪನೆಗಳು, ಮೂಢ ನಂಬಿಕೆಗಳು ಹರಡಿದವು. ಭಾರತದಲ್ಲಿ ಈ ಪ್ಲೇಗ್‌ನನ್ನು ಮಹಾಮಾರಿ, ಹೆಮ್ಮಾರಿ ಇತ್ಯಾದಿ ಹೆಸರುಗಳಲ್ಲಿ ಕರೆಯಲಾಯಿತು, ಈ ರೋಗವನ್ನು ವಾಸಿ ಮಾಡುವ ದೇವಿಯೊಬ್ಬಳನ್ನು ಕಲ್ಪಿಸಿ ಆಕೆಗೆ ಮಾರಿಯಮ್ಮ ಎಂದು ಹೆಸರು ಕೊಟ್ಟು ಅನೇಕ ಕಡೆ ದೇವಾಲಯಗಳನ್ನು ಕಟ್ಟಲಾಯಿತು. ಈಗ ನಾವು ಕಾಣುವ ಮಾರಿಯಮ್ಮ ದೇವಾಲಯಗಳು ಅಂದಿನ ಮಹಾಮಾರಿಯ ಫಲವೇ ಆಗಿರಬಹುದು.
 

ಯುರೋಪ್ ಮುಂತಾದ ಕಡೆಯೂ ಭಿಕ್ಷುಕರು, ಕುಷ್ಠರೋಗಿಗಳು, ಕ್ಷಯರೋಗಿಗಳು. ಯಹೂದಿಗಳು, ಯುರೋಪಿಗರಲ್ಲದ ವಿದೇಶೀಯರು ಕಂಡರೆ ಅವರನ್ನು ಹುಡುಕಿ ಹಿಡಿದು ಬಡಿದು ಕೊಲ್ಲಲಾಯಿತು. ಈ ಪ್ಲೇಗ್‌ ಅವರಿಂದಲೇ ಯಾವುದೋ ರೀತಿಯಲ್ಲಿ ಹರಡುತ್ತಿದೆ ಎಂದು ಅನೇಕರು ಭಾವಿಸಿದ್ದರು. 19ನೇ ಶತಮಾನದ ಆರಂಭದಲ್ಲಿ ಈ ಪ್ಲೇಗ್‌ಗೆ ಲಸಿಕೆ ಕಂಡುಹಿಡಿಯಲಾಯಿತು, ಅಂದಿನಿಂಧ ಹುಟ್ಟುವ ಪ್ರತಿ ಮಗುವಿಗೂ ಈ ಲಸಿಕೆ ಹಾಕಲಾಗುತ್ತಿದೆ. ಈ ರೋಗ ಭೂಮಿಯ ಮೇಲಿನಿಂದ ಅಳಿಸಿಹೋಗಿದೆ ಎಂದು ನಂಬಲಾಗಿದೆ, ಆದರೂ ಬರ್ಮಾ ಮುಂತಾದ ಕೆಲವು ಕಡೆ ಪ್ಲೇಗ್‌ ಬ್ಯಾಕ್ಟೀರಿಯಾದ ಮ್ಯುಟೇಶನ್‌ಗಳಿಂದ ಹುಟ್ಟಿಕೊಳ್ಳುವ ಕೆಲವು ರೋಗಗಳು ಕಾಣಿಸಿಕೊಂಡಿವೆ. 14ನೇ ಶತಮಾನದಲ್ಲಿ ಈ ಪ್ಲೇಗ್‌ ಬಂದುಹೋದ ನಂತರ, ಭೂಮಿಯ ಜನಸಂಖ್ಯೆ ಬಹಳ ಪ್ರಮಾಣದಲ್ಲಿ ಇಳಿದು ಹೋಗಿ, ಭೂಮಿಯ ಮೇಲಿನ ಬಿಸಿ ವಾತಾವರಣ ಕಡಿಮೆಯಾಗಿ, ಕಿರು ಐಸ್‌ಏಜ್‌ ಒಂದು ಸೃಷ್ಟಿಯಾಗಿತ್ತಂತೆ.

 

ಏಷ್ಯಾದ ಈ ರಾಷ್ಟ್ರದಲ್ಲಿ ಫಲ ಕೊಡ್ತಿದೆ ಕೊರೋನಾ ನಿಯಂತ್ರಣ ಕ್ರಮ
 

ಈ ಬ್ಲ್ಯಾಕ್‌ ಡೆತ್‌ಗೆ ಹೋಲಿಸಿದರೆ ಈ ಕೊರೊನಾ ವೈರಸ್‌ ಇನ್ನೂ ಬಚ್ಚಾ. ಯಾಕೆಂದರೆ ಈ ಕೋವಿಡ್‌ 19ನ್ನು ತಡೆಯುವ ರೀತಿಗಳು ನಮಗೆ ಗೊತ್ತಿವೆ. ಮುನ್ನೆಚ್ಚರಿಕೆ ವಹಿಸಿದರೆ ಅದನ್ನು ತಡೆಯಬಹುದು. ಆಧುನಿಕ ವೈದ್ಯಕೀಯ ಸೌಲಭ್ಯಗಳೂ ಲಭ್ಯವಿವೆ. ಹಾಗೇ ಅದ್ಕೆ ಲಸಿಕೆ ಕಂಡುಹಿಡಿಯಲಾಗುತ್ತಿದ್ದು, ಇನ್ನೊಂದೆರಡು ವರ್ಷಗಳಲ್ಲಿ ಅದು ಸೃಷ್ಟಿಯಾಗುವ ಸಂಭವ ಇದೆ. ಈಗಾಗಲೇ ಹೆಚ್ಚು ಸಾವುಗಳನ್ನು ತಡೆಗಟ್ಟುವ ಯಶಸ್ವಿ ಮಾದರಿಯನ್ನು ಚೀನಾ ತೋರಿಸಿಕೊಟ್ಟಿದೆ. ಅದೇ ಹಾದಿಯಲ್ಲಿ ನಾವು ನಡೆದರೆ ಕೊರೊನಾವನ್ನೂ ಯಶಸ್ವಿಯಾಗಿ ತಡೆಯಬಹುದು.